Sandalwood: ಲೂಸ್​ ಮಾದ ಈಗ `ಕಿರಿಕ್ ಶಂಕರ್​’.. ಇವ್ನ್​ ತಂಟೆಗೆ ಮಾತ್ರ ಹೋಗ್ಬೇಡಿ ಗುರೂ!

ಇತ್ತೀಚೆಗೆ ಲೂಸ್ ಮಾದ ಅಭಿನಯದ ‘ಒಂಬತ್ತನೇ ದಿಕ್ಕು’ ಸಿನಿಮಾ ಕೂಡ ರಿಲೀಸ್ ಆಗಿತ್ತು.ಇದೀಗ ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿರುವ ‘ಕಿರಿಕ್ ಶಂಕರ್’(Kirik Shankar) ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನೂತನ ಪ್ರತಿಭೆ ಅದ್ವಿಕ ಈ ಚಿತ್ರದ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ.

ಕಿರಿಕ್​ ಶಂಕರ್​ ಚಿತ್ರತಂಡ

ಕಿರಿಕ್​ ಶಂಕರ್​ ಚಿತ್ರತಂಡ

  • Share this:
ಲೂಸ್​ ಮಾದ ಯೋಗಿ (Loose Mada Yogi) ತಮ್ಮ ಸೆಕೆಂಡ್ ಇನ್ನಿಂಗ್ಸ್(Second Innings) ಆರಂಭಿಸಿದ್ದಾರೆ ಅಂದರೆ ತಪ್ಪಲ್ಲ. ಲಾಕ್​ ಡೌನ್(Lockdown)​ ಲಿಫ್ಟ್​ ಆದ ಬಳಿಕ ಇವರ ಅಭಿನಯದ ಸಿನಿಮಾ ಲಂಕೆ(Lanke) ಮೊದಲು ರಿಲೀಸ್ ಆಗಿತ್ತು. ಈ ಸಿನಿಮಾ ಇತ್ತೀಚೆಗೆ 175 ದಿನಗಳನ್ನು ಸಹ ಪೂರೈಸಿದೆ. ಇತ್ತೀಚೆಗೆ ಲೂಸ್ ಮಾದ ಅಭಿನಯದ ‘ಒಂಬತ್ತನೇ ದಿಕ್ಕು’ ಸಿನಿಮಾ ಕೂಡ ರಿಲೀಸ್ ಆಗಿತ್ತು.ಇದೀಗ ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿರುವ ‘ಕಿರಿಕ್ ಶಂಕರ್’(Kirik Shankar) ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನೂತನ ಪ್ರತಿಭೆ ಅದ್ವಿಕ ಈ ಚಿತ್ರದ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಎಂ.ಎನ್.ಕುಮಾರ್(M.N. Kumar) ಈ ಚಿತ್ರವನ್ನು ನಿರ್ಮಿಸಿದ್ದು, ಆರ್ ಅನಂತರಾಜು ನಿರ್ದೇಶನ ಮಾಡಿದ್ದಾರೆ. ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.

ಏಪ್ರಿಲ್​ನಲ್ಲಿ ಜನರ ಮುಂದೆ ‘ಕಿರಿಕ್​ ಶಂಕರ್​’  ಎಂಟ್ರಿ!

ತುಂಬಾ ದಿನಗಳ ನಂತರ ನಮ್ಮ ಭೇಟಿಯಾಗುತ್ತಿದೆ. ಕೊರೋನಾ ಕಾರ್ಮೋಡ ಕಳೆದು ಸಂಭ್ರಮದ ವಾತಾವರಣ ಮರಳಿ ಬಂದಿದೆ. ಇದೇ ಏಪ್ರಿಲ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರತಂಡಕ್ಕೆ ಧನ್ಯವಾದ ಎಂದು ಎಂ.ಎನ್.ಕುಮಾರ್ ಹೇಳಿದ್ದಾರೆ. ಇದೊಂದು ನಗರದ ಹೊರವಲಯದಲ್ಲಿ ನಡೆಯುವ ಕಥೆ. ನಾಯಕನಿಗೆ ಇಬ್ಬರು ತಂಗಿಯರು. ತುಂಬು ಕುಟುಂಬ. ಸಂಸಾರದ ಜವಾಬ್ದಾರಿ ಹೆಗಲ ಮೇಲಿದ್ದರೂ, ಯಾವುದಕ್ಕೂ ತಲೆ ಕೆಡಸಿಕೊಳ್ಳದಾತ. ಆತನ ಜೀವನದಲ್ಲಿ ನಾಯಕಿಯ ಆಗಮನವಾಗುತ್ತಿದಂತೆ ಏನೆಲ್ಲಾ ಆಗುತ್ತದೆ ಎಂಬುದೆ ಕಥಾಸಾರಾಂಶ.

ಕಥೆಯೆ ಈ ಸಿನಿಮಾದ ನಾಯಕನಂತೆ!

ಕಥೆ ಎಲ್ಲರಿಗೂ ಹಿಡಿಸಿದರೆ ಆ ಕ್ರೆಡಿಟ್ ಯೋಗೀಶ್ ಹುಣಸೂರು ಅವರಿಗೆ ಹೋಗಬೇಕು. ಅವರೆ ಈ ಚಿತ್ರದ ಕಥೆಗಾರರು. ತಾಂತ್ರಿಕವರ್ಗದವರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಅನಂತರಾಜು.

ಇದನ್ನೂ ಓದಿ: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ `ಜೇಮ್ಸ್’, ಕನ್ನಡಕ್ಕೆ ಇವ್ರೇ ರಾಯಭಾರಿ-ಫ್ಯಾನ್ಸ್​ಗೆ ಅಪ್ಪುನೇ ಗಾಡ್​!

ಪಕ್ಕಾ ಕಮರ್ಷಿಯಲ್​ ಸಿನಿಮಾ ಎಂದ ಲೂಸ್ ಮಾದ!

‘ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಅವಕಾಶ ನೀಡಿದ ಎಂ.ಎನ್ ಕುಮಾರ್ ಅವರಿಗೆ ಧನ್ಯವಾದ. ಅನಂತರಾಜು ಅವರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ. ಪ್ರತಿಯೊಂದು ಸಿನಿಮಾದಲ್ಲೂ ಕಲಿಯುವುದು ಇರತ್ತೆ. ಈ ಚಿತ್ರದಲ್ಲೂ ಸಾಕಷ್ಟು ಕಲಿತ್ತಿದ್ದೇನೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ’ ಎಂದು  ಲೂಸ್ ಮಾದ ಯೋಗಿ ಹೇಳಿದ್ದಾರೆ.

ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ ನಟಿ ಅದ್ವಿಕ!

ನಾನು ರಂಗಭೂಮಿ ಕಲಾವಿದೆ ನಿರ್ದೇಶಕ ಗಿರಿರಾಜ್ ಅವರು ನನ್ನ ಗುರುಗಳು. ಅವರ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದೇನೆ. ಹಿರಿತೆರೆಯಲ್ಲಿ ಇದು ನನ್ನ ಮೊದಲ ಚಿತ್ರ. ಪಾತ್ರ ತುಂಬಾ ಚೆನ್ನಾಗಿದೆ. ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ವಂದನೆಗಳನ್ನು ಸಲ್ಲಿಸಿದರು ನಾಯಕಿ‌ ಅದ್ವಿಕ.

ಇದನ್ನೂ ಓದಿ: ಅವ್ವಾ ಕೇಳೇ.. ತಿಳಿ ನೀಲಿ ಆಗಸದಿ ಎಲ್ಲಿರುವೆ ಹೇಳೇ.. ತಾಯಿಯ ಬಗ್ಗೆ Neenasam Sathish ಹಾಡು

ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ವೀರ ಸಮರ್ಥ್ ಮಾತನಾಡಿದರು.
ಅದ್ವಿಕರಿಗೆ ಅಭಿನಯ ತರಭೇತಿ ನೀಡಿದ ನಿರ್ದೇಶಕ ಗಿರಿರಾಜ್ ಅತಿಥಿಯಾಗಿ ಆಗಮಿಸಿ ಶುಭಕೋರಿದರು. ಕಥೆ, ಚಿತ್ರಕಥೆ, ಸಂಭಾಷಣೆ ಬರೆದರುವ ಯೋಗೀಶ್ ಹುಣಸೂರು ಹಾಗೂ ಅಭಿನಯಿಸಿರುವ ರಿತೇಶ್ ಅನುಭವದ ಮಾತುಗಳಾಡಿದರು. ಆನಂದ್ ಆಡಿಯೋ ಶ್ಯಾಮ್ ಹಾಗೂ ಗೀತರಚನೆಕಾರ ಕಿನ್ನಾಳ್ ರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತೆಲುಗಿಗೆ ರೀಮೆಕ್​ ಆಗ್ತಿದೆ ‘ಲಂಕೆ’

ಕನ್ನಡದಲ್ಲಿ ತೆರೆಕಂಡು ಹಿಟ್​ ಎನಿಸಿಕೊಂಡಿದ್ದ ‘ಲಂಕೆ’ ಸಿನಿಮಾ ಈಗ ತೆಲುಗಿಗೆ ರೀಮೆಕ್ ಆಗುತ್ತಿದೆ. ಈ ವಿಚಾರವನ್ನು ಲಂಕೆ ಸಿನಿಮಾದ ನಿರ್ದೇಶಕರೇ ತಿಳಿಸಿದ್ದಾರೆ. ಇನ್ನೂ ಲಂಕೆ ಚಿತ್ರ 175 ದಿನಗಳನ್ನು ಪೂರೈಸಿದ ಸಂಭ್ರಮಾಚರಣೆಯನ್ನು ಶೀಘ್ರದಲ್ಲೇ ಚಿತ್ರತಂಡ ಮಾಡಲಿದೆ.
Published by:Vasudeva M
First published: