ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ನಮ್ಮನಗಲಿ ಮೂರು ತಿಂಗಳು ಕಳೆದಿವೆ. ಆದರೆ ಅಪ್ಪು ನೆನಪು ಮಾತ್ರ ಅವರನ್ನು ಪ್ರೀತಿಸುವ ಹೃದಯಗಳಲ್ಲಿ ಇನ್ನು ಜೀವಂತವಾಗಿದೆ. ಪ್ರತಿದಿನ ಅಪ್ಪು ನೆನೆಪಲ್ಲೆ ದೊಡ್ಮನೆ ಅಭಿಮಾನಿಗಳು ಕಾಲ ದೂಡುತಿದ್ದಾರೆ. ಅಪ್ಪು ಕಳೆದು ಕೊಂಡ ನೋವು ಅವರ ಕುಟುಂಬಕ್ಕೆ ಮಾತ್ರವಲ್ಲ ಅವರ ಒಡನಾಟದಲ್ಲಿದ್ದ ಸಿನಿಮಾ ನಟನಟಿಯರು ಕೂಡ ಪವರ್ ಸ್ಟಾರ್ (Power Star)ನ ಮಿಸ್ ಮಾಡಿಕೊಳ್ತಿದ್ದಾರೆ. ಅದರಲ್ಲೂ ಅವರ ಜೊತೆ ಕೆಲಸ ಮಾಡಿದವರಂತು ಅಪ್ಪು ಇಲ್ಲದ ನೋವನ್ನು ಇಂದೂ ಮರೆತಿಲ್ಲ ಅದಕ್ಕೆಸಾಕ್ಷಿ ಪುನೀತ್ ರಾಜ್ ಕುಮಾರ್ ಜೊತೆ ಎರಡು ಚಿತ್ರಗಳಲ್ಲಿ ನಟಿಸಿದ್ದ ನಾಯಕ ನಟ ಲೂಸ್ ಮಾದ (Losse Mada) ಖ್ಯಾತಿಯ ಯೋಗಿಶ್ (Yogish). ಲೂಸ್ ಮಾದ ಯೋಗಿಗೆ ಅಪ್ಪು ಜೊತೆ ತುಂಬಾ ಒಡನಾಟ ಇತ್ತು. ಅದರೆ ಯೋಗಿ ಯಾವತ್ತು ನಾನೊಬ್ಬ ಸ್ಟಾರ್ ಅನ್ನೋರೀತಿ ಅಪ್ಪು ಜೊತೆ ಇರಲಿಲ್ಲ. ತನಗೂ ಸ್ಟಾರ್ ಪಟ್ಟ ಸಿಕ್ಕಿದರು, ತಾನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಅಂತ ಸಾಕಷ್ಟು ವೇದಿಕೆಗಳಲ್ಲಿ ಹೇಳಿದ್ದಾರೆ. ಈಗ ಪವರ್ ಸ್ಟಾರ್ ಇಲ್ಲದ ನೋವಿನಲ್ಲೂ ನಾನು ಇನ್ನು ಅಪ್ಪು ಅಭಿಮಾನಿ ಎಂದು ತೋರಿಸಿದ್ದಾರೆ.
ಅಪ್ಪು ಅಭಿಮಾನಿಯಾಗಿ ಸಿನಿಮಾ ನೋಡಿದ ಲೂಸ್ ಮಾದ!
ಹೌದು ಲೂಸ್ ಮಾದ ಯೋಗಿ ಅಭಿನಯದ " ಒಂಬತ್ತನೇ ದಿಕ್ಕು" ನಿನ್ನೆ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿದೆ. ನೆಚ್ಚಿನ ನಟನ ಸಿನಿಮಾ ಕಣ್ತುಂಬಿಕೊಳ್ಳಲು ನೂರಾರು ಯೋಗಿ ಅಭಿಮಾನಿಗಳು ಕೆಜಿ ರಸ್ತೆಯ ಅನುಪಮ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಯೋಗಿ ಕೂಡ ಅನುಪಮ ಚಿತ್ರಮಂದಿರಲ್ಲೇ ಅಭಿಮಾನಿಗಳ ಜೊತೆ ಕೂತು ಸಿನಿಮಾ ವಿಕ್ಷೀಸಿದ್ದಾರೆ. ಅದರೆ ಯೋಗಿ ತಾನು ಹೀರೋ ಆಗಿ ಮಿಂಚಿದ್ದ ಚಿತ್ರವನ್ನು ಲೂಸ್ ಮಾದ ಯೋಗಿಯಾಗಿ ನೋಡಿಲ್ಲ. ಬದಲಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಯೋಗಿಶ್ ಆಗಿ ತನ್ನ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ.
ಇದನ್ನು ಓದಿ: ಒಂದೇ ಒಂದು ಬ್ಯಾಗ್ನಲ್ಲಿದೆ ಚಿತ್ರದ ರಹಸ್ಯ, ಒಂಬತ್ತನೇ ದಿಕ್ಕಿನಲ್ಲಿ ಸಿಕ್ಕಿದೇನು ಗೊತ್ತಾ?
ಅಪ್ಪು ಫೋಟೋ ಇರುವ ಟಿ ಶರ್ಟ್ ಧರಿಸಿದ್ದ ಯೋಗಿ!
ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಲು ಬಂದಿದ್ದ ಯೋಗಿ ಪ್ರೀತಿಯ ಅಪ್ಪು ಅಣ್ಣನ ಪೋಟೋ ಇರುವ ಶರ್ಟ್ ಧರಿಸಿ ಬಂದು ಸಿನಿಮಾ ನೋಡಿದ್ದಾರೆ. ಅಷ್ಟೇ ಅಲ್ಲ ಅಪ್ಪು ಪೋಟೋ ಕೆಳಗೆ ಪವರ್ ಸ್ಟಾರ್ ಮೈ ಹೀರೋ ಅಪ್ಪು ಎಂಬ ಟ್ಯಾಗ್ ಲೈನ್ ಇದ್ದಿದ್ದು ಗಮನ ಸೆಳೆದಿದೆ. ಇನ್ನು ಈ ಶರ್ಟ್ ಅನ್ನು ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಪ್ರೀತಿಯಿಂದ ತಂದುಕೊಟ್ಟಿದ್ದಾರೆ. ಅಭಿಮಾನಿ ತಂದು ಕೊಟ್ಟ ಆ ಶರ್ಟ್ ಅನ್ನೆ ಧರಿಸಿ ಯೋಗಿ ಅಭಿಮಾನಿಗಳ ಮಧ್ಯೆ ಕೂತು ಸಿನಿಮಾ ನೋಡುವ ಮೂಲಕ ಅಪ್ಪು ಮೇಲಿನ ಅಭಿಮಾನ ಎಂಥಾದ್ದು ಎಂದು ಕರುನಾಡಿಗೆ ತೋರಿಸಿದ್ದಾರೆ.
ಇದನ್ನು ಓದಿ: `ರಾಜರತ್ನ’ ಮರೆಯಾಗಿ ಕಳೆದೇ ಹೋಯ್ತು 3 ತಿಂಗಳು, ಅಭಿಮಾನಿಗಳಿಗೆ 500 ಸಸಿ ವಿತರಿಸಿದ ದೊಡ್ಮನೆ!
‘ಒಂಬತ್ತನೇ ದಿಕ್ಕಿ’ಗೆ ಉತ್ತಮ ಪ್ರತಿಕ್ರಿಯೆ!
ಅಲ್ಲದೆ ತಾನೊಬ್ಬ ಸ್ಟಾರ್ ಆಗಿದ್ರು ಮತ್ತೋಬ್ಬ ಸ್ಟಾರ್ ಪೋಟೋ ಇರುವ ಶರ್ಟ್ ಧರಿಸಿ ಅಪ್ಪುಗೆ ಗೌರವ ಕೊಟ್ಟಿದ್ದಾರೆ.. ಜೊತೆಗೆ ಸರಳತೆ ತೋರಿದ್ದಾರೆ.. ಇನ್ನು ಯೋಗಿಯ ಈ ಅಭಿಮಾನಕ್ಕೆ ದೊಡ್ಮನೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನೂ ಯೋಗಿ ಅಭಿನಯದ ಒಂಬತ್ತನೇ ದಿಕ್ಕು ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದಾ ತಮ್ಮ ಥ್ರಿಲ್ಲರ್ ಕಥೆಗಳಿಂದ ಮೋಡಿ ಮಾಡುವ ದಯಾಳ್ ಪದ್ಮನಾಭ್ ಇಲ್ಲೂ ಕೂಡ ಅದನ್ನೇ ಮಾಡಿ ಜನರ ಮನಸ್ಸು ಗೆದ್ದಿದ್ದಾರೆ.
(ವರದಿ: ಸತೀಶ್) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ