ಲಂಕೆಯಲ್ಲಿ ಲಂಕೇಶ್ವರನಾದ ಲೂಸ್​ ಮಾದ: ಮಾಡರ್ನ್​ ರಾಮಾಯಣದಲ್ಲಿ ಯೋಗಿ..!

ಇದೇ ಮೊದಲ ಬಾರಿಗೆ ನಟ ಲೂಸ್​ ಮಾದ ಪೌರಾಣಿಕ ಕತೆಯಾಧಾರಿತ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ನಟನಾಗಿ ಪ್ರಯೋಗಾತ್ಮಕ ಪಾತ್ರಗಳಿಗೂ ಮಹತ್ವ ನೀಡುವ ಯೋಗಿ ಈ ಬಾರಿ ಲಂಕೆಯ ಲಂಕೇಶ್ವರನಾಗಿ ಕಾಣಿಸಿಕೊಳ್ಳಲಿದ್ದಾರೆ.

Anitha E | news18
Updated:February 11, 2019, 2:04 PM IST
ಲಂಕೆಯಲ್ಲಿ ಲಂಕೇಶ್ವರನಾದ ಲೂಸ್​ ಮಾದ: ಮಾಡರ್ನ್​ ರಾಮಾಯಣದಲ್ಲಿ ಯೋಗಿ..!
ಲಂಕೆ ಸಿನಿಮಾದಲ್ಲಿ ಲೂಸ್​ ಮಾದ ಯೋಗಿ ಹಾಗೂ ಕಾವ್ಯಾ ಶೆಟ್ಟಿ
Anitha E | news18
Updated: February 11, 2019, 2:04 PM IST
ವಿಭಿನ್ನ ಪಾತ್ರಗಳಿಂದ ಈಗಾಗಲೇ ಪ್ರೇಕ್ಷಕರನ್ನು ರಂಜಿಸುತ್ತಿರುವ ಲೂಸ್​ ಮಾದ ಯೋಗಿ, ಈಗ ಪೌರಾಣಿಕ ಕತೆಯಾಧಾರಿತ ಪಾತ್ರವೊಂದಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೆ ಯೋಗಿ ಅಭಿನಯದ 'ಲಂಬೋದರ' ಸಿನಿಮಾ ತೆರೆಕಂಡು ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ: Yajamana Movie: ಟ್ರೆಂಡಿಂಗ್​ನಲ್ಲಿ ಪ್ರಥಮ ಸ್ಥಾನದಲ್ಲಿದೆ 'ಯಜಮಾನ'ನ ಆನೆ..!

ನವ ನಿರ್ದೇಶಕ ರಾಮ್ ಪ್ರಸಾದ್ ಅವರ ರಾಮಾಯಣ ಆಧಾರಿತ 'ಲಂಕೆ' ಚಿತ್ರದಲ್ಲಿ ಲೂಸ್​ ಮಾದ ಯೋಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದ್ದು, ಇದರಲ್ಲಿ ಯೋಗಿ, ಸಂಚಾರಿ ವಿಜಯ್, ಕಾವ್ಯಾ ಶೆಟ್ಟಿ ಮತ್ತು ಕ್ರಿಷಿ ತಪಂದಾ ನಟಿಸುತ್ತಿದ್ದಾರೆ.

'ಇದೊಂದು ಪೌರಾಣಿಕ ಚಿತ್ರ. ರಾಮಾಯಣದಲ್ಲಿ ರಾವಣನೇ ಸಿನಿಮಾದ ಕಥಾವಸ್ತು. ಇದರಲ್ಲಿ ಪ್ರಮುಖವಾಗಿ ರಾವಣನ ಬಗ್ಗೆಯೇ ಹೇಳುವ ಪ್ರಯತ್ನ ಮಾಡಲಾಗುತ್ತದೆ' ಎಂದಿದ್ದಾರೆ ನಟಿ ಕಾವ್ಯಾ ಶೆಟ್ಟಿ.

ನಿರ್ದೇಶಕ ರಾಮ್​ ಮಾತನಾಡಿದ್ದು, 'ಇದೊಂದು ಮಾಡರ್ನ್​ ರಾಮಾಯಣ. ಈ ಸಿನಿಮಾದ ಮೂಲಕ ಹೊಸ ವಿಚಾರಗಳನ್ನು ಹೇಳಲು ಹೊರಟ್ಟಿದ್ದೇವೆ' ಎಂದಿದ್ದಾರೆ.

ಇದನ್ನೂ ಓದಿ: ವಿವಾಹದ ನಂತರ ಸಲಿಂಗಿಯಾದ ನಟ ರಣವೀರ್​ ಸಿಂಗ್​..!

ಪಟೇಲ್ ಶ್ರೀನಿವಾಸ್ ನಿರ್ಮಾಣದ  ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸುತ್ತಿದ್ದು, ರಮೇಶ್ ಬಾಬು ಛಾಯಾಗ್ರಹಣ ಮಾಡಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಬೆಂಗಳೂರು ಹಾಗೂ ಶೃಂಗೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

 

ನಿಕ್​-ಪ್ರಿಯಾಂಕಾ ಅರಿಶಿಣ ಶಾಸ್ತ್ರದಲ್ಲಿ ವರನ ಅಂಗಿಗೆ ಕೈ ಹಾಕಿದ ಹುಡುಗಿ ಯಾರು..?

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...