‘ಆನೆ ಗುಂಪಿನಲ್ಲಿದ್ದರೆ ಏನೂ ಮಾಡಲ್ಲ, ಒಂಟಿ ಸಲಗವೇ ಅಪಾಯ’; ಸಿದ್ದರಾಮಯ್ಯ ಹೀಗೆ ಹೇಳಿದ್ದೇಕೆ ಗೊತ್ತಾ?

ದುನಿಯಾ ವಿಜಯ್ ನಟಿಸಿ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘ಸಲಗ’ ಚಿತ್ರದ ಮುಹೂರ್ತ ಇಂದು ನೆರವೇರಿದೆ. ಈ ವೇಳೆ ಸಿದ್ದರಾಮಯ್ಯ ಚಿತ್ರಕ್ಕೆ ಕ್ಲ್ಯಾಪ್​ ಮಾಡಿ, ಶುಭಕೋರಿದರು.

Rajesh Duggumane | news18
Updated:June 6, 2019, 3:56 PM IST
‘ಆನೆ ಗುಂಪಿನಲ್ಲಿದ್ದರೆ ಏನೂ ಮಾಡಲ್ಲ, ಒಂಟಿ ಸಲಗವೇ ಅಪಾಯ’; ಸಿದ್ದರಾಮಯ್ಯ ಹೀಗೆ ಹೇಳಿದ್ದೇಕೆ ಗೊತ್ತಾ?
ಸಿದ್ದರಾಮಯ್ಯ
  • News18
  • Last Updated: June 6, 2019, 3:56 PM IST
  • Share this:
ಬೆಂಗಳೂರು (ಜೂ 6): ‘ಆನೆ ನಡೇದಿದ್ದೇ ದಾರಿ. ಆನೆಗಳು ಗುಂಪಿನಲ್ಲಿದ್ದರೆ ಏನು ಅಪಾಯವಿಲ್ಲ. ಆದರೆ ಒಂಟಿ ಸಲಗವೇ ಡೇಂಜರ್​’- ಹೀಗೊಂದು ಮಾತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಯಿಯಿಂದ ಉದುರಿತ್ತು! ಯಾವುದೋ ಅತೃಪ್ತ ಶಾಸಕರನ್ನು ಉದ್ದೇಶಿಸಿ ಸಿದ್ದರಾಮಯ್ಯ ಈ ಮಾತನ್ನು ಹೇಳಿಲ್ಲ. ಅವರು ಹೀಗೆ ಹೇಳಲು ಕಾರಣ, ‘ಸಲಗ’ ಸಿನಿಮಾ!

ದುನಿಯಾ ವಿಜಯ್ ನಟಿಸಿ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘ಸಲಗ’ ಚಿತ್ರದ ಮುಹೂರ್ತ ಇಂದು ನೆರವೇರಿದೆ. ಈ ಚಿತ್ರಕ್ಕೆ ಅತಿಥಿಯಾಗಿ ಕಿಚ್ಚ ಸುದೀಪ್, ಸಂಸದ ಡಿಕೆ ಸುರೇಶ್, ರಾಘವೇಂದ್ರ ರಾಜಕುಮಾರ್, ನಟ ಧನಂಜಯ್ ಸೇರಿ ಹಲವರು ಪಾಲ್ಗೊಂಡಿದ್ದರು. ಈ ವೇಳೆ ಸಿದ್ದರಾಮಯ್ಯ ಚಿತ್ರಕ್ಕೆ ಕ್ಲ್ಯಾಪ್​ ಮಾಡಿ, ಶುಭಕೋರಿದರು.

“ಇವತ್ತು ‘ಸಲಗ’ ಹೆಸರಿನ ಕನ್ನಡ ಸಿನಿಮಾ ಪ್ರಾರಂಭವಾಗಿದೆ. ಈ ಹಿಂದೆ ‘ಟಗರು’ ಸಿನಿಮಾ ಯಶಸ್ವಿ ಕಂಡಿತ್ತು. ಈಗ ‘ಸಲಗಕ್ಕೆ’ ನನ್ನಿಂದ ಕ್ಲ್ಯಾಪ್​ ಮಾಡಿಸಿದ್ದಾರೆ,” ಎಂದಿದ್ದಾರೆ ಅವರು.

ಪ್ರತಿ ಸಿನಿಮಾದ ಯಶಸ್ಸು ನಿರ್ದೇಶಕನ ಮೇಲೆ ನಿಂತಿದೆ ಎನ್ನುವ ಮಾತನ್ನು ಸಿದ್ದರಾಮಯ್ಯ ಕೂಡ ಒಪ್ಪಿದ್ದಾರೆ. “ಪ್ರತಿ ಸಿನಿಮಾದ ಯಶಸ್ಸು ಯಶಸ್ಸು‌ನಿರ್ದೇಶಕನ ಮೇಲೆ ಅವಲಂಬಿತವಾಗಿರುತ್ತದೆ. ಜನರ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಬೇಕು. ದುನಿಯಾ ವಿಜಿ ಈಗ ನಟನಾಗಿ ಯಶಸ್ವಿ ಕಂಡ ಮೇಲೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅವರಿಗೆ ಯಶಸ್ಸು ಸಿಗಲಿ,” ಎಂದು ಹಾರೈಸಿದರು ಸಿದ್ದರಾಮಯ್ಯ.

ಇದನ್ನೂ ಓದಿ: 'ದಲಿತರ ಮೇಲೆ ಕಾಳಜಿ ಇದ್ದರೆ ಖರ್ಗೆ ಅವರನ್ನು ಸಿಎಂ ಮಾಡಿ ತೋರಿಸಿ'; ಸಿದ್ದರಾಮಯ್ಯ ಟ್ವೀಟ್​​ಗೆ ರಾಜ್ಯ ಬಿಜೆಪಿ ತಿರುಗೇಟು

ಇನ್ನು ಸಿನಿಮಾ ಹೇಗಿರಬೇಕು ಎನ್ನುವ ಬಗ್ಗೆ ಒಂದಷ್ಟು ಟಿಪ್ಸ್​ ನೀಡಿದ್ದಾರೆ ಸಿದ್ದರಾಮಯ್ಯ. “ಇತ್ತೀಚೆಗೆ ಸಿನಿಮಾಗಳಲ್ಲಿ ಮಸಾಲೆ ಅಂಶ ಜಾಸ್ತಿ ಆಗುತ್ತಿದೆ. ಸಿನಿಮಾ ನೀತಿ, ಧಾರ್ಮಿಕ ವಿಚಾರ, ಒಂದೊಳ್ಳೆಯ ಸಂದೇಶ ಸಾರುವುದರ ಜೊತೆಗೆ ಮನೋರಂಜನೆಯನ್ನೂ ನೀಡಬೇಕು. ಸಿನಿಮಾ ಬದುಕಿನ ಮೌಲ್ಯಗಳು, ಸಾಮಾಜಿಕ ಮೌಲ್ಯಗಳನ್ನು ಹೇಳಬೇಕು,” ಎಂಬುದು ಅವರ ಅಭಿಪ್ರಾಯ.

‘ಸಲಗ’ದ ಕಥೆ ಗೊತ್ತಿದೆಯೇ ಎನ್ನುವ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಅವರು, “ನನಗೆ ಸಿನಿಮಾ ಕಥೆ ಹೇಳಿಲ್ಲ. ಅದನ್ನು ಗೌಪ್ಯವಾಗಿ ಇಟ್ಟಿದ್ದಾರೆ. ಒಂಟಿ ಸಲಗ ಯಾವಾಗಲೂ ಅಪಾಯ. ಈ ‘ಸಲಗ’ ಪರೋಪಕಾರಿ ಆಗಿರ್ಲಿ ಎಂದು ಆಶಿಸುತ್ತೇನೆ,” ಎಂದರು.ರಾಜ್ಯ ಸಚಿವ ಸಂಪುಟ ಸಭೆ ವಿಸ್ತರಣೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, “ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಿ,” ಎಂದು ಸಿದ್ದರಾಮಯ್ಯ ಜಾರಿಕೊಂಡರು.

ಇದನ್ನೂ ಓದಿ: ನಾನೇ ಮುಖ್ಯಮಂತ್ರಿ ಅಂತಿದ್ರಲ್ಲ, ಇಳಿದು ಬಾ... ಕೆಳಗೆ ಇಳಿದು ಬಾ..! ಸಿದ್ದರಾಮಯ್ಯ ಲೇವಡಿ ಮಾಡಿದ ರೋಷನ್​ ಬೇಗ್​

(ವರದಿ: ಹರ್ಷವರ್ಧನ್​ ಬ್ಯಾಡನೂರು)

First published:June 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ