ಲಾಕ್ಡೌನ್ (Lockdown) ಸಮಯದಿಂದ ಹೆಚ್ಚು ಹೆಸರುವಾಸಿಯಾಗಿರುವ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್ಸ್ಟಾರ್, ZEE5 ನಂತಹ OTT ಪ್ಲಾಟ್ಫಾರ್ಮ್ಗಳಲ್ಲಿ ಸಿನಿಮಾ ವೀಕ್ಷಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷದಿಂದ ಈ ಒಟಿಟಿ (OTT) ವೇದಿಕೆಗಳ ಆಧಾರಿತ ಮನರಂಜನೆ ಎಲ್ಲರ ಗಮನ ಸೆಳೆಯುತ್ತಿದೆ. ಪ್ರೇಕ್ಷಕರು ಸಹ ಸಿನಿಮಾ ಮಂದಿರಗಳಿಗೆ (Theater) ಹೋಗದೆ ಅನೇಕ ಚಿತ್ರಗಳನ್ನು ತಮ್ಮ ಮನೆಯಲ್ಲಿ ಕುಳಿತು ಈ ಒಟಿಟಿ ಮಾಧ್ಯಮಗಳಲ್ಲಿಯೇ ನೋಡಿ ಆನಂದಿಸುತ್ತಿದ್ದಾರೆ. ಒಟಿಟಿ ಬಂದ ಮೇಲೆ ಸಿನಿಮಾ ನೋಡುವವರ ಸಂಖ್ಯೆ ಸಹ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.ಈ ವಾರ ಯಾವ್ಯಾವ ಸಿನಿಮಾಗಳನ್ನು ಬಿಟ್ಟಿದ್ದಾರೆ ಅಂತ ಚೆಕ್ ಮಾಡುತ್ತಲೇ ಇರುತ್ತಾರೆ, ನಿಮ್ಮ ಕೆಲಸವನ್ನು ಸುಲಭ ಮಾಡಲು ನಾವು ಈ ವಾರ ಯಾವ ಚಿತ್ರಗಳು OTT ನಲ್ಲಿ ಪ್ರೀಮಿಯರ್ ಆಗುತ್ತಿವೆ ಎಂಬ ವಿವರ ಹೊತ್ತು ತಂದಿದ್ದೇವೆ.
ಈ ವಾರ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್ಸ್ಟಾರ್, ZEE5 ಮತ್ತು ಇತರ OTT ಪ್ಲಾಟ್ಫಾರ್ಮ್ಗಳಲ್ಲಿ ಪ್ರೀಮಿಯರ್ ಆಗುತ್ತಿರುವ ಚಿತ್ರಗಳ ಪಟ್ಟಿ ಹೀಗಿದೆ.
1) ಆದವಳು ಮೀಕು ಜೋಹಾರ್ಲು
ತಿರುಮಲ ಕಿಶೋರ್ ಬರೆದು ನಿರ್ದೇಶಿಸಿದ 2022ರ ತೆಲುಗು ಭಾಷೆಯ ರೋಮ್ಯಾಂಟಿಕ್ ಹಾಸ್ಯ-ನಾಟಕ ಚಲನಚಿತ್ರವಾಗಿದೆ. ಶರ್ವಾನಂದ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಆದವಳು ಮೀಕು ಜೋಹಾರ್ಲು ಒಂದು ಕ್ಲೀನ್ ಫ್ಯಾಮಿಲಿ ಎಂಟರ್ಟೈನರ್ ಎಂದು ಪ್ರಚಾರಗೊಂಡರೂ ಪ್ರೇಕ್ಷಕರನ್ನು ಥಿಯೇಟರ್ಗಳಿಗೆ ಎಳೆಯಲು ಸಾಧ್ಯವಾಗಲಿಲ್ಲ. ಚಿತ್ರ ಈಗ ಏಪ್ರಿಲ್ 14 ರಂದು ಸೋನಿ ಲೈವ್ನಲ್ಲಿ ಬರಲಿದೆ.
2) ಜೇಮ್ಸ್
ಜೇಮ್ಸ್ ಕನ್ನಡದ ದಿವಂಗತ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ. ಅಪ್ಪು ಹುಟ್ಟಿದ ದಿನವಾದ ಮಾರ್ಚ್ 17ರಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ಕನ್ನಡ ಪ್ರೇಕ್ಷಕರು ತಮ್ಮ ನೆಚ್ಚಿನ ಸೂಪರ್ಸ್ಟಾರ್ಗೆ ಗೌರವ ಸಲ್ಲಿಸುವ ಮೂಲಕ ಚಿತ್ರವನ್ನು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಿಸಿದ್ದಾರೆ.
ಇದನ್ನೂ ಓದಿ: 'ನಮ್ಮಮ್ಮ ಸೂಪರ್ ಸ್ಟಾರ್' ಮುಗೀತಿದ್ದಂತೆ ಕೂದಲಿಗೆ ಕತ್ತರಿ ಹಾಕಿದ ಅನುಪಮಾ! 'ಅಕ್ಕ' ಇದ್ಯಾಕಕ್ಕಾ ಅಂತ ಕೇಳ್ತಿದ್ದಾರೆ ಫ್ಯಾನ್ಸ್
ಭರ್ಜರಿ, ಬಹದ್ದೂರ್, ಭರಾಟೆ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕರ ಸಾಲಿಗೆ ಸೇರಿದ್ದ ಚೇತನ್ ಕುಮಾರ್, ಜೇಮ್ಸ್ ಸಿನಿಮಾವನ್ನು ನಿರ್ದೇಶಿಸಿದ್ದರು. ಚಿತ್ರದಲ್ಲಿ ಪ್ರಿಯಾ ಆನಂದ್, ಪುನೀತ್ ರಾಜ್ ಕುಮಾರ್ಗೆ ನಾಯಕಿಯಾಗಿ ನಟಿಸಿದ್ದಾರೆ. ಸೇನೆ, ಸ್ನೇಹಿತರನ್ನು ಒಳಗೊಂಡ ಫ್ಯಾಮಿಲಿ ಕುಳಿತು ನೋಡಬಹುದಾದ ಆ್ಯಕ್ಷನ್ ಥ್ರಿಲ್ಲರ್ ಜೇಮ್ಸ್ ಸಿನಿಮಾ ಏಪ್ರಿಲ್ 15 ರಂದು ಸೋನಿ ಲೈವ್ಗೆ ಎಂಟ್ರಿ ಕೊಡಲಿದೆ. ಥಿಯೇಟರ್ನಲ್ಲಿ ಭಾರಿ ಸದ್ದು ಮಾಡಿದ ಜೇಮ್ಸ್ ಒಟಿಟಿಯಲ್ಲೂ ಯಶಸ್ಸು ಕಾಣುವ ಬಗ್ಗೆ ಯಾವುದೇ ಸಂದೇಹ ಇಲ್ಲ.
3) ಗಾಳಿವಾನ
ಈ ZEE5 ಮೂಲ ವೆಬ್ ಸರಣಿಯನ್ನು ತಿಮ್ಮರಸು ಖ್ಯಾತಿಯ ಶರಣ್ ಕೊಪ್ಪಿಸೆಟ್ಟಿ ನಿರ್ದೇಶಿಸಿದ್ದಾರೆ.ಸಾಯಿಕುಮಾರ್, ರಾಧಿಕಾ ಶರತ್ಕುಮಾರ್, ಚಾಂದಿನಿ ಚೌಧರಿ ಮತ್ತು ಚೈತನ್ಯ ಕೃಷ್ಣ, ಆಶ್ರಿತಾ ವೇಮುಗಂಟಿ, ನಂದಿನಿ ರೈ, ತಗುಬೋಟು ರಮೇಶ್, ಶರಣ್ಯ ಪ್ರದೀಪ್ ಮತ್ತು ಇತರರನ್ನು ಒಳಗೊಂಡ ತಾರಾಗಣವನ್ನು ಹೊಂದಿದೆ. ಇದು ಏಪ್ರಿಲ್ 14 ರಂದು ZEE5 ನಲ್ಲಿ ಪ್ರೀಮಿಯರ್ ಆಗಲಿದೆ. ಶ್ರೀಚರಣ್ ಪಕಾಲ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸುಜಾತಾ ಸಿದ್ಧಾರ್ಥ್ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ ದಿಯಾ ಬೆಡಗಿ - ಪಾತ್ರದ ಬಗ್ಗೆ ನಟಿ ಹೀಗೆಂದಿದ್ದೇಕೆ?
4) ದಿ ಬ್ಲಡಿ ಮೇರಿ
ಇದು ಆಹಾ ಮೂಲ ಡ್ರಾಮಾ ಥ್ರಿಲ್ಲರ್ ಆಗಿದೆ ಮತ್ತು ಇದು ಏಪ್ರಿಲ್ 15 ರಿಂದ ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮಿಂಗ್ಗೆ ಲಭ್ಯವಿರುತ್ತದೆ. ಚಿತ್ರದಲ್ಲಿ ಟಿಕ್ ಟಿಕ್ ಟಿಕ್, ಚಿತ್ರಲಹರಿ , ಬ್ರೋಚೆವರೆವರುರಾ ಸಿನಿಮಾಗೆ ಹೆಸರುವಾಸಿಯಾದ ನಿವೇತಾ ಪೇತುರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕಾರ್ತಿಕೇಯ ಮತ್ತು ನಾಗ ಚೈತನ್ಯ ಅವರ ಪ್ರೇಮಂ ಮುಂತಾದ ಹಿಟ್ ಸಿನಿಮಾಗಳನ್ನು ಮಾಡಿರುವ ಚಂದೂ ಮೊಂಡೇಟಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಾಲ ಭೈರವ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ