• Home
  • »
  • News
  • »
  • entertainment
  • »
  • Bollywood: ಬಾಲಿವುಡ್​ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಸಾಲು ಸಾಲು ಚಿತ್ರಗಳು - ಇಲ್ಲಿದೆ ಲಿಸ್ಟ್

Bollywood: ಬಾಲಿವುಡ್​ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಸಾಲು ಸಾಲು ಚಿತ್ರಗಳು - ಇಲ್ಲಿದೆ ಲಿಸ್ಟ್

ಆಯುಷ್ಮಾನ್ ಖುರಾನ್

ಆಯುಷ್ಮಾನ್ ಖುರಾನ್

Upcoming Films: ಕಳೆದ ವರ್ಷ ನವೆಂಬರ್‌ನಲ್ಲಿ ಕಾರ್ತಿಕ್ ಆರ್ಯನ್ ಕೊರಿಯಾ ಥ್ರಿಲ್ಲರ್ ದಿ ಟೆರರ್ ಲೈವ್ (2013) ನ ರಿಮೇಕ್ ಧಮಾಕಾವನ್ನು ಚಿತ್ರದಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದ್ದರು.  ಕಾರ್ತಿಕ್ ಇದರಲ್ಲಿ ಪತ್ರಕರ್ತನ ಪಾತ್ರವನ್ನು ನಿರ್ವಹಿಸಿದ್ದು, ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಮುಂದೆ ಓದಿ ...
  • Share this:

ಕೊರೊನಾ ವೈರಸ್(Coronavirus) ಚಿತ್ರೋದ್ಯಮದ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಆದರು ಕೂಡ, ಚಿತ್ರರಂಗ ಕೆಲಸವನ್ನು ನಿಲ್ಲಿಸಿಲ್ಲ.  ವೈರಸ್ ಭಯದ ಹೊರತಾಗಿಯೂ ಚಿತ್ರತಂಡ ಮತ್ತು ಸಿಬ್ಬಂದಿ ಚಿತ್ರೀಕರಣ ಮುಂದುವರಿಸಿದ್ದಾರೆ. ಈಗಾಗಲೆ ಚಿತ್ರೀಕರಣ ಮುಗಿದಿರುವ ಚಿತ್ರಗಳನ್ನು ಸೂಕ್ತ ಸಮಯದಲ್ಲಿ ಬಿಡುಗಡೆಗೆ ತಯಾರಿ ನಡೆಸಿದ್ದಾರೆ.  ಕೊರೊನಾ ಸಮಯದಲ್ಲಿ ಘೋಷಿಸಲ್ಪಟ್ಟ ಬಾಲಿವುಡ್ (Bollywood) ಚಲನಚಿತ್ರಗಳಲ್ಲಿ ಯಾವುದು ಚಿತ್ರೀಕರಣವನ್ನು ಸಹ ಪೂರ್ಣಗೊಳಿಸಿವೆ  ಎಂಬುದು ಇಲ್ಲಿದೆ.  


ಧಮಾಕಾ


ಕಳೆದ ವರ್ಷ ನವೆಂಬರ್‌ನಲ್ಲಿ ಕಾರ್ತಿಕ್ ಆರ್ಯನ್ ಕೊರಿಯಾ ಥ್ರಿಲ್ಲರ್ ದಿ ಟೆರರ್ ಲೈವ್ (2013) ನ ರಿಮೇಕ್ ಧಮಾಕಾವನ್ನು ಚಿತ್ರದಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದ್ದರು.  ಕಾರ್ತಿಕ್ ಇದರಲ್ಲಿ ಪತ್ರಕರ್ತನ ಪಾತ್ರವನ್ನು ನಿರ್ವಹಿಸಿದ್ದು, ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.  ಈ ಚಿತ್ರ ವಿಶೇಷತೆ ಎಂದರೆ ಕೊರೊನಾ ಸಮಯದಲ್ಲಿ ಒಂದು ತಿಂಗಳೊಳಗೆ ಬಯೋ-ಬಬಲ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದು, ಅದರ OTT ಪ್ರೀಮಿಯರ್‌ಗಾಗಿ ಕಾಯುತ್ತಿದ್ದಾರೆ.


ಡಾರ್ಲಿಂಗ್ಸ್


ಆಲಿಯಾ ಭಟ್ ತನ್ನ ನಿರ್ಮಾಣ ಸಂಸ್ಥೆಯಾದ ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ಸ್ ಅನ್ನು ಮಾರ್ಚ್ 2021 ರಲ್ಲಿ ಆರಂಭಿಸಿದ್ದರು ಮತ್ತು ಅವರ ಬ್ಯಾನರ್ ಅಡಿಯಲ್ಲಿ ಮೊದಲ ಚಲನಚಿತ್ರವನ್ನು ಸಹ  ಪ್ರಾರಂಭ ಮಾಡಲಾಗಿತ್ತು. ಶೆರ್ಫಾಲಿ ಶಾ, ಆಲಿಯಾ, ವಿಜಯ್ ವರ್ಮಾ ಮತ್ತು ರೋಷನ್ ಮ್ಯಾಥ್ಯೂ ನಟನೆಯ ಈ ಡಾರ್ಲಿಂಗ್ಸ್  ಚಿತ್ರವನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಇತ್ತೀಚೆಗೆ ಚಿತ್ರೀಕರಣ ಮುಗಿದಿದ್ದು, ಚಿತ್ರವು ಶೀಘ್ರದಲ್ಲೇ ಪೋಸ್ಟ್ ಪ್ರೊಡಕ್ಷನ್ ಆಗಿ, ಬಿಡುಗಡೆಯಾಗಲಿದೆ.


ಬ್ಲರ್​


ಈ ವರ್ಷದ ಆರಂಭದಲ್ಲಿ, ತಾಪ್ಸಿ ಪನ್ನು ತನ್ನ ನಿರ್ಮಾಣ ಸಂಸ್ಥೆ ಔಟ್ ಸೈಡರ್ ಫಿಲ್ಮ್ಸ್ ಪ್ರಾರಂಭಿಸಿದ್ದಾರೆ. ಈ ಬ್ಯಾನರ್ ಅಡಿಯಲ್ಲಿ  ಮೊದಲ ಚಿತ್ರ ಈ ಬ್ಲರ್ . ಇದು ಸ್ಪ್ಯಾನಿಷ್ ಚಲನಚಿತ್ರ ಜೂಲಿಯಾ ಐಸ್ ನ ರೀಮೇಕ್  ಚಿತ್ರವಾಗಿದೆ. ಈ ಫಿಲ್ಮ್  ಇತ್ತೀಚಿನವರೆಗೂ ನೈನಿತಾಲ್ ನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಇತ್ತೀಚೆಗಷ್ಟೇ  ಚಿತ್ರೀಕರಣವನ್ನು ಪೂರ್ಣಗೊಳಿಸಿದೆ ಮತ್ತು ಪೋಸ್ಟ್ ಪ್ರೊಡಕ್ಷನ್ ಗೆ ಸಿದ್ಧವಾಗಿದೆ.


ಇದನ್ನೂ ಓದಿ: ಇಂಡಿಯನ್ ಐಡಲ್ 12 ಸ್ಪರ್ಧೆಗಳಿಗೆ ಹೃತ್ತಿಕ್ ರೋಷನ್ ಕುಟುಂಬದಿಂದ ಚಿನ್ನದ ಸರ ಉಡುಗೊರೆ


ಚಂಡೀಗಢ್ ಕರೆ ಆಶಿಕಿ


ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆಯುಷ್ಮಾನ್ ಖುರಾನಾ ಮತ್ತು ವಾಣಿ ಕಪೂರ್ ಅಭಿನಯದ ಚಂಡೀಗರ್ ಕರೇ ಆಶಿಕಿ ಚಿತ್ರವನ್ನು ನಿರ್ದೇಶಕ ಅಭಿಷೇಕ್ ಕಪೂರ್ ಘೋಷಿಸಿದ್ದರು. ತಂಡವು ಚಂಡೀಗಢ್​ದಲ್ಲಿ ಸುಮಾರು 48 ದಿನಗಳಲ್ಲಿ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗಾಗಿ ಸೂಕ್ತ ಸಮಯವನ್ನು ಕಾಯುತ್ತಿದೆ.


ಅನೆಕ್


ಆಯುಷ್ಮಾನ್ ಖುರಾನಾ ಅವರ ಮುಂಬರುವ ಚಿತ್ರ  ಅನೆಕ್‌ನಿಂದ  ಅವರ ಪಾತ್ರ ಜೋಶುವಾ ಲುಕ್ ಬಿಡುಗಡೆಗೊಂಡು ಹೆಚ್ಚು ವೈರಲ್ ಆಗಿತ್ತು. ಇದೀಗ ನಿರ್ದೇಶಕ ಅನುಭವ ಸಿನ್ಹಾ ಚಿತ್ರ ಚಿತ್ರೀಕರಣ ಪುರ್ಣಗೊಳಿಸಿದ್ದಾರೆ. ಇದು ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಅನೀಕ್ ಬಿಡುಗಡೆಗೆ ಸಮಯ ಕಾಯುತ್ತಿದ್ದಾರೆ.


ದೊಬಾರ


ನಟಿ ತಾಪ್ಸಿ ಪನ್ನು  ನಟಿಸಿರುವ ಅನುರಾಗ್ ಕಶ್ಯಪ್ ಅವರ ನಿರ್ದೇಶನದ ದೊಬಾರ ಚಿತ್ರವನ್ನು ಈ ವರ್ಷದ ಆರಂಭದಲ್ಲಿ ಮಾರ್ಚ್‌ನಲ್ಲಿ ಘೋಷಣೆ ಮಾಡಲಾಗಿತ್ತು. 23 ದಿನಗಳಲ್ಲಿ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದ್ದು, ಈಗ ಬಿಡುಗಡೆಗೆ ಕಾಯುತ್ತಿದೆ.


ಗುಡ್ ಲಕ್ ಜೆರ್ರಿ


ಜಾನ್ವಿ ಕಪೂರ್ ಅಭಿನಯದ ಗುಡ್ ಲಕ್ ಜೆರ್ರಿ ಈ ವರ್ಷದ ಜನವರಿಯಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ಘೋಷಿಸಲಾಗಿತ್ತು. ಮಾರ್ಚ್ ವೇಳೆಗೆ, ಇದು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು,  ಪೋಸ್ಟ್-ಪ್ರೊಡಕ್ಷನ್  ಕೆಲಸವು ಮುಗಿದಿದ್ದು ಈಗ, ಬಿಡುಗಡೆಗೆ ಸಿದ್ಧವಾಗಿದೆ.


ಸರ್ಕಸ್


ಬ್ಲಾಕ್ ಬಸ್ಟರ್ ಹಿಟ್ ಸಿಂಬಾ ನಂತರ, ರಣವೀರ್ ಸಿಂಗ್ ಮತ್ತು ರೋಹಿತ್ ಶೆಟ್ಟಿ  ಮತ್ತೊಮ್ಮೆ ಜೋಡಿಯಾಗಿದ್ದು, ಸರ್ಕಸ್  ಚಿತ್ರ ಘೋಷಣೆ  ಮಾಡಿದ್ದಾರೆ. ಪೂಜಾ ಹೆಗ್ಡೆ, ಜಾನಿ ಲಿವರ್, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ವರುಣ್ ಶರ್ಮಾ ನಟಿಸಿರುವ ಈ ಚಿತ್ರ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದೆ.


ಬಧಾಯಿ ದೊ


ಬಧಾಯಿ ಹೋ (2018) ನ ಮುಂದುವರಿದ ಭಾಗವಾದ ಬಧಾಯಿ ದೊವನ್ನು ಅಕ್ಟೋಬರ್ 2020 ರಲ್ಲಿ ರಾಜಕುಮ್ಮರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಘೋಷಿಸಿದ್ದರು. ಚಲನಚಿತ್ರದ ಚಿತ್ರೀಕರಣವನ್ನು ಜನವರಿ 2021 ರಲ್ಲಿ ಪ್ರಾರಂಭ ಮಾಡಲಾಗಿತ್ತು ಮತ್ತು ಮಾರ್ಚ್‌ನಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ.


ಇದನ್ನೂ ಓದಿ: Raj Kundra-Shamita Shetty ಗೈರಿನಲ್ಲಿ ಮಕ್ಕಳ ಜತೆ ಗಣಪತಿ ಹಬ್ಬ ಆಚರಿಸಿದ Shilpa Shetty


ಭೇಡಿಯ


ಅಮರ್ ಕೌಶಿಕ್ ನಿರ್ದೇಶನದ ವರುಣ್ ಧವನ್ ಮತ್ತು ಕೃತಿ ಸನೋನ್ ಅಭಿನಯದ ಹಾಸ್ಯ ಚಿತ್ರ  ಭೇಡಿಯಾ, ಕೊರೊನಾ ಹೊರತಾಗಿಯೂ, ತಂಡವು ಅರುಣಾಚಲ ಪ್ರದೇಶದಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಅದು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

Published by:Sandhya M
First published: