Lindsay Lohan: ಇನ್ಸ್ಟಾಗ್ರಾಂನಲ್ಲಿ ತನ್ನದೇ ನಗ್ನ ಸೆಲ್ಫಿ ಪೋಸ್ಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ನಟಿ..!
Lindsay Lohan: ಇನ್ಸ್ಟಾಗ್ರಾಂನಲ್ಲಿ ತನ್ನದೇ ನಗ್ನ ಸೆಲ್ಫಿ ಪೋಸ್ಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ನಟಿ..!
ಸಾಂದರ್ಭಿಕ ಚಿತ್ರ
Lindsay Lohan's Nude Selfie: ಈಕೆ ಖ್ಯಾತ ನಟಿ, ಗಾಯಕಿ, ನಿರ್ಮಾಪಕಿಯೂ ಹೌದು. ಇವರು 33ನೇ ಹುಟ್ಟುಹಬ್ಬವನ್ನು ತಮ್ಮದೇ ನಗ್ನ ಸೆಲ್ಫಿ ಹಾಗೂ ಬೋಲ್ಡ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳೋದು ಸಹಜ. ಆದರೆ ಇಲ್ಲೊಬ್ಬ ನಟಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಹಾಲಿವುಡ್ ನಟಿ, ಗಾಯಕಿ, ನಿರ್ಮಾಪಕಿಯಾಗಿರುವ ಲಿಂಡ್ಸೆ ಲೊಹನ್ ತಮ್ಮ 33ನೇ ಹುಟ್ಟುಹಬ್ಬವನ್ನು ಬಹಳ ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದಂದು ತಮ್ಮದೇ ನಗ್ನ ಸೆಲ್ಫಿ ಹಾಗೂ ಬೋಲ್ಡ್ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ.
ಹುಟ್ಟುಹಬ್ಬಕ್ಕೆ ನಗ್ನರಾಗಿ ಸೆಲ್ಫಿ ತೆಗೆದುಕೊಂಡ ನಟಿ ಲಿಂಡ್ಸೆ ಲೊಹನ್
ಜುಲೈ 2ರಂದು ಮೀನ್ ಗರ್ಲ್ಸ್ ಸಿನಿಮಾದ ನಟಿ ಲಿಂಡ್ಸೆ ಲೊಹನ್ ಅವರ ಹುಟ್ಟುಹಬ್ಬ ಆಗಿದ್ದು, ಅಂದು ಬರ್ತ್ ಡೇಗೆ ಕೇವಲ 2 ನಿಮಿಷಗಳಿರುವಾಗ ತಮ್ ನಗ್ನ ಸೆಲ್ಫಿಯನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಹುಟ್ಟುಹಬ್ಬದಂದು ಲಿಂಡ್ಸೆ ರಾತ್ರಿ ಡಿನ್ನರ್ಗೆ ಹೋಗಿದ್ದು, ಅಲ್ಲಿ ಊಟ ಮುಗಿಸಿದ ನಂತರ ವಿಡಿಯೋ ಪೋಸ್ಟ್ ಮಾಡಿದ್ದು, ಅದು ಅವರು ಮತ್ತೆ ಸಂಗೀತ ಕ್ಷೇತ್ರಕ್ಕೆ ರೀಎಂಟ್ರಿ ಕೊಡುವ ಸೂಚನೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಲಿಂಡ್ಸೆ ಅಭಿನಯಕ್ಕೆ ದೂರವಾಗಿ ಗ್ರೀಸ್ನಲ್ಲಿ ತಮ್ಮದೇ ಆದ ವ್ಯವಹಾರ ಆರಂಭಿಸಿದ್ದರು. ಆದರೆ ಕಳೆದ ತಿಂಗಳು ಮತ್ತೆ ಬಣ್ಣದ ಲೋಕಕ್ಕೆ ಬರುವುದಾಗಿ ಹೇಳಿಕೆ ನೀಡಿದ್ದರು.