ಮಾಲಿವುಡ್​ನಲ್ಲಿ ಮತ್ತೆ ಶುರುವಾದ 'ಜಲ್ಲಿಕಟ್ಟು'

news18
Updated:July 22, 2018, 10:45 PM IST
ಮಾಲಿವುಡ್​ನಲ್ಲಿ ಮತ್ತೆ ಶುರುವಾದ 'ಜಲ್ಲಿಕಟ್ಟು'
news18
Updated: July 22, 2018, 10:45 PM IST
-ನ್ಯೂಸ್ 18 ಕನ್ನಡ

'ಅಂಗಮಾಲಿ ಡೈರೀಸ್' ಎಂಬ ಹೊಸಬರ ಚಿತ್ರದೊಂದಿಗೆ ಮಾಲಿವುಡ್​ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದ್ದ ನಿರ್ದೇಶಕ ಲಿಜೊ ಜೋಸ್ ಪೆಲ್ಲಿಸ್ಸೇರಿ ಈಗ ಮತ್ತೊಂದು ರಗಡ್ ಚಿತ್ರಕ್ಕೆ ಕೈ ಹಾಕಿದ್ದಾರೆ. ಅಂಗಮಾಲಿಯಲ್ಲಿ ಲೋಕಲ್ ರೌಡಿಸಂ ತೋರಿಸಿದ್ದ ಲಿಜೊ ಈ ಬಾರಿ ಸೀದಾ ಮೈದಾನಕ್ಕಿಳಿದಿದ್ದಾರೆ. ಹೌದು 'ಜಲ್ಲಿಕಟ್ಟು' ಎಂಬ ಶೀರ್ಷಿಕೆಯಡಿಯಲ್ಲಿ ಹೊಸ ಕಾಳಗಕ್ಕೆ ಲಿಜೊ ಮುಂದಾಗಿದ್ದಾರೆ.

ಕೆಸರಿನಿಂದ ವಿನ್ಯಾಸಗೊಳಿಸುವಂತಿರುವ ಚಿತ್ರದ ಪೋಸ್ಟರನ್ನು ಬಿಡುಗಡೆಗೊಳಿಸಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ಆರಂಭಿಸಲಿದೆ. 'ಅಂಗಮಾಲಿ ಡೈರೀಸ್' ಚಿತ್ರಕ್ಕೆ ಕಥೆ ಚಿತ್ರಕಥೆ ರಚಿಸಿದ್ದ ಹರೀಶ್ ಮತ್ತು ಜಯಕುಮಾರ್ ಜೋಡಿ 'ಜಲ್ಲಿಕಟ್ಟು'ನಲ್ಲೂ ಒಂದಾಗಿದ್ದು, 2017ರ ಬಾಕ್ಸಾಫೀಸ್ ಮ್ಯಾಜಿಕನ್ನು ಪುನರಾವರ್ತಿಸುವ ಇರಾದೆಯಲ್ಲಿದ್ದಾರೆ.


ಈ ಹೊಸ ಸಿನಿಮಾದಲ್ಲಿ ಅಂಗಮಾಲಿ ಖ್ಯಾತಿಯ ಆ್ಯಂಟನಿ ವರ್ಗೀಸ್ ಮತ್ತು 'ಕಮ್ಮಟ್ಟಿಪಾಡಂ'ನ ವಿನಾಯಕನ್ ಜೊತೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಇಬ್ಬರು ನಟರು ಲಿಜೊ ಜೋಸ್ ಪೆಲ್ಲಿಸ್ಸೇರಿ ನಿರ್ದೇಶನದ ಸಿನಿಮಾಗಳಲ್ಲಿ ಈಗಾಗಲೇ ಅಭಿನಯಿಸಿದ್ದಾರೆ. ಆದರೆ ಈ ಚಿತ್ರದ ಕಥೆಯ ಬಗ್ಗೆಯಾಗಲಿ, ತಾರಾಗಣದ ಕುರಿತಾಗಲಿ ಚಿತ್ರತಂಡ ಯಾವುದೇ ಮಾಹಿತಿಯನ್ನು ಇನ್ನೂ ಬಹಿರಂಗ ಪಡಿಸಿಲ್ಲ.

'ಜಲ್ಲಿಕಟ್ಟು' ಎಂಬುದು ತಮಿಳುನಾಡಿನ ಸಾಂಪ್ರಾದಾಯಿಕ ಕ್ರೀಡೆಯಾಗಿದ್ದು, ಅಲ್ಲಿನ ಕಥೆಯನ್ನು ಕೇರಳದ ನೆಟಿವಿಟಿಗೆ ತಕ್ಕಂತೆ ಯಾವ ರೀತಿಯಾಗಿ ನಿರ್ದೇಶಕರು ತೋರಿಸಲಿದ್ದಾರೆ ಎಂಬುದು ಮಾಲಿವುಡ್​ ಸಿನಿಪ್ರಿಯರಲ್ಲಿ ಆಸಕ್ತಿ ಮೂಡಿಸಿದೆ.
First published:July 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ