Charmme Kaur: ಲೈಗರ್ ಸೋಲಿನ ಬಗ್ಗೆ ನಿರ್ಮಾಪಕಿ ಮಾತು; ಖಿನ್ನತೆಗೆ ಒಳಗಾಗಿದ್ದಾರಾ ಚಾರ್ಮಿ, ಪುರಿ ಜಗನ್ನಾಥ್!?

ಲೈಗರ್​ ಚಿತ್ರ ಪಾನ್​ ಇಂಡಿಯಾ ಸಿನಿಮಾ ಆಗಿ ಭಾರೀ ಸಕ್ಸಸ್​ ಕಾಣುತ್ತದೆ ಅನ್ನೋ ನಿರೀಕ್ಷೆಯನ್ನು ಇಟ್ಟುಕೊಂಡಿದ್ರು. ಆದ್ರೆ ಎಲ್ಲಾ ಆಸೆ, ಕನಸುಗಳು ನಿರಾಸೆಯುಂಟು ಮಾಡಿದೆ. ನಿರ್ಮಾಪಕಿ ಚಾರ್ಮಿ ಕೌರ್ ಬಾಲಿವುಡ್‌ನಲ್ಲಿನ ಬಾಕ್ಸ್ ಆಫೀಸ್ ವೈಫಲ್ಯಗಳ ಬಗ್ಗೆ ಮಾತನಾಡಿದ್ದಾರೆ.

ಪೂರಿ ಜಗನ್ನಾಥ್​, ವಿಜಯ್ ದೇವರಕೊಂಡ, ಚಾರ್ಮಿ

ಪೂರಿ ಜಗನ್ನಾಥ್​, ವಿಜಯ್ ದೇವರಕೊಂಡ, ಚಾರ್ಮಿ

  • Share this:
ಟಾಲಿವುಡ್​ನ ಬಹು ನಿರೀಕ್ಷಿತ ಚಿತ್ರ ಲೈಗರ್​ ಚಿತ್ರ ಬಾಕ್ಸ್​ ಆಫೀಸ್​ (Box Office) ಕಲೆಕ್ಷನ್​​ನಲ್ಲಿ ಮಕಾಡೆ ಮಲಗಿದೆ. ವಿಜಯ್​ ದೇವರಕೊಂಡ ಅಭಿನಯದ ಲೈಗರ್ (Liger)​ ಚಿತ್ರ ಪಾನ್​ ಇಂಡಿಯಾ ಸಿನಿಮಾ ಆಗಿ ಭಾರೀ ಸಕ್ಸಸ್​ ಕಾಣುತ್ತದೆ ಅನ್ನೋ ನಿರೀಕ್ಷೆಯನ್ನು ಇಟ್ಟುಕೊಂಡಿದ್ರು. ಆದ್ರೆ ಎಲ್ಲಾ ಆಸೆ, ಕನಸುಗಳು ನಿರಾಸೆಯುಂಟು ಮಾಡಿದೆ. ನಿರ್ಮಾಪಕಿ ಚಾರ್ಮಿ ಕೌರ್ (Charmme Kaur) ಬಾಲಿವುಡ್‌ನಲ್ಲಿನ ಬಾಕ್ಸ್ ಆಫೀಸ್ ವೈಫಲ್ಯಗಳ ಬಗ್ಗೆ ಮಾತನಾಡಿದ್ದಾರೆ. ಈ ಸಮಯ ನಮಗೆ ಭಯಾನಕ ಪರಿಸ್ಥಿತಿಯಾಗಿದೆ. ಇದ್ರಿಂದ ಡಿಪ್ರೆಷನ್​ಗೆ ಒಳಗಾಗೋ ಸ್ಥಿತಿ ಎದುರಾಗಿದೆ ಎಂದು ಚಾರ್ಮಿ ಹೇಳಿಕೊಂಡಿದ್ದಾರೆ. ಲೈಗರ್​ ಸಿನಿಮಾ ನಟಿ ಚಾರ್ಮಿ ಪತಿ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ (Puri Jagannath) ಅವರ ಚಿತ್ರವಾಗಿದೆ.

ಬಾಕ್ಸ್​ ಆಫೀಸ್​ನಲ್ಲಿ ಕಳಪೆ ಪ್ರದರ್ಶನ

ಚಾರ್ಮಿ ಲೈಗರ್ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದರು ಕಳೆದ ವಾರ ಬಿಡುಗಡೆಯಾದಾಗ ಲೈಗರ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ನೀರಸ ಪ್ರತಿಕ್ರಿಯೆಯನ್ನು ಪಡೆಯಿತು. ಹಿಂದಿಯಲ್ಲೂ ಕಳೆದ ವಾರ ಬಿಡುಗಡೆಯಾಗಿದ್ದ ಈ ಚಿತ್ರ ಶುಕ್ರವಾರ ಕೇವಲ 4.50 ಕೋಟಿ (ಹಿಂದಿ ಆವೃತ್ತಿ) ಕನೆಕ್ಷನ್​ ಆಗಿದೆ.



ನಿರ್ಮಾಪಕಿ ಚಾರ್ಮಿ ಕೌರ್​ ಪ್ರತಿಕ್ರಿಯೆ

ಓಟಿಟಿಗಳ ಬಗ್ಗೆ ಮಾತಾಡಿ ಚಾರ್ಮಿ, ಜನರು ಮನೆಯಲ್ಲಿಯೇ ಕುಳಿತುಕೊಳ್ಳುವ ಮೂಲಕ ಒಂದೇ ಕ್ಲಿಕ್‌ನಲ್ಲಿ ಚಿತ್ರ ನೋಡಲು ಬಯಸುತ್ತಿದ್ದಾರೆ. ಇಡೀ ಕುಟುಂಬವು ಟಿವಿಯಲ್ಲಿ ಅತಿ ದೊಡ್ಡ ಬಜೆಟ್ ಚಲನಚಿತ್ರ ನೋಡಬಹುದು. ಹೀಗಾಗಿ ಜನರು ಥಿಯೇಟರ್‌ಗಳಿಗೆ ಬರುವುದಿಲ್ಲ ಎಂದು ಚಾರ್ಮ್ ಫ್ರೀ ಪ್ರೆಸ್ ಜರ್ನಲ್‌ಗೆ ತಿಳಿಸಿದರು.

ಚಾರ್ಮಿ ಕಲ್ಪನೆ ತಪ್ಪು ಅನ್ನುತ್ತಿದೆ ಬಾಲಿವುಡ್​

ಆದ್ರೆ ಇದು ತಪ್ಪು ಕಲ್ಪನೆ ಎಂದು ಬಾಲಿವುಡ್​ ಮಂದಿ ಹೇಳ್ತಿದ್ದಾರೆ. ಆಗಸ್ಟ್ ನಲ್ಲಿ ಮೂರು ತೆಲುಗು ಚಿತ್ರಗಳು ರಿಲೀಸ್ ಆಗಿದೆ. ಬಿಂಬಿಸಾರ, ಸೀತಾ ರಾಮಂ, ಮತ್ತು ಕಾರ್ತಿಕೇಯ 2 ಉತ್ತಮ ಪ್ರದರ್ಶನ ಕಾಣುತ್ತಿವೆ. ಇದು ರೂ 150 ರಿಂದ 170 ಕೋಟಿ ಗಳಿಸಿತು. ಹೀಗಾಗಿ ಜನರ ಥಿಯೇಟರ್​​ಗೆ ಬರಲ್ಲ ಅನ್ನೋದು ಸುಳ್ಳು ಎಂದು ಬಾಲಿವುಡ್​ ಮಂದಿ ಹೇಳಿದ್ದಾರೆ.

ಲೈಗರ್ ಚಿತ್ರ ಬಿಡುಗಡೆಗೆ ತಡವಾಗಿದ್ದು ಯಾಕೆ?

ಲೈಗರ್ ಚಿತ್ರ ಬಿಡುಗಡೆಯಲ್ಲಿನ ಬಹು ವಿಳಂಬ ಕೂಡ ಚಿತ್ರದ ಮೇಲೆ ಪರಿಣಾಮ ಬೀರಿದಿಯಾ ಅನ್ನೋ ಪ್ರಶ್ನೆಗೆ ಮಾತಾಡಿದ ಚಾರ್ಮಿ, ನಾವು 2020ರ ಜನವರಿಯಲ್ಲಿ ಲಿಗರ್‌ನ ಮಾತುಕತೆ ಆರಂಭಿಸಿದೆವು, ಬಳಿಕ ನಾವು ಕರಣ್ ಜೋಹರ್ ಅವರನ್ನು 2019ರಲ್ಲಿ ಭೇಟಿಯಾದೆವು. ಬಳಿಕ ನಾವು ಮೂರು ವರ್ಷಗಳ ಕಾಲ ರಿಲೀಸ್ ತಡೆಹಿಡಿದಿದ್ದೇವೆ. ಏಕೆಂದರೆ ಲೈಗರ್ ಥಿಯೇಟ್ರಿಕಲ್ ಬಿಡುಗಡೆಯಾಗಬೇಕು ಅನ್ನೋದು ನಮ್ಮ ಆಸೆಯಾಗಿತ್ತು. ಮೊದಲ ಮತ್ತು 2ನೇ ಲಾಕ್‌ಡೌನ್‌ಗಳು, 3ನೇ ವೇವ್​ ಕೊರೊನಾದಿಂದ ಚಿತ್ರ ರಿಲೀಸ್​​ ತಡವಾಯ್ತು ಎಂದು ಚಾರ್ಮಿ ಹೇಳಿದ್ದಾರೆ.

ವಿಮರ್ಶಕರಿಂದ ಟೀಕೆ

ರೌಡಿ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್ ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಚಿತ್ರ ಲೈಗರ್, ಚಿತ್ರದಲ್ಲಿ ಬಾಲಿವುಡ್ ಬೆಡಗಿ ಅನನ್ಯಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಒಳ್ಳೆಯ ನಿರೀಕ್ಷೆಗಳ ನಡುವೆ ಚಿತ್ರ ಆಗಸ್ಟ್ 25 ರಂದು ಬಿಡುಗಡೆಯಾಗಿದೆ

ಇದನ್ನೂ ಓದಿ: Liger Movie: ಲೈಗರ್ ಸಿನಿಮಾಗಾಗಿ ವಿಜಯ್, ಅನನ್ಯಾ ಪಡೆದ ಸಂಭಾವನೆ ಎಷ್ಟು ಗೊತ್ತಾ?



Published by:Pavana HS
First published: