Liger Movie: ಲೈಗರ್​ಗಿಂತ ಪೊಗರು ಬೆಟರ್ ಎಂದ ನೆಟ್ಟಿಗರು! ಸಿನಿಪ್ರಿಯರಿಗೆ ನಿರಾಸೆ

ಕೆಲವರು ಟ್ವೀಟ್ ಮಾಡಿ ಲೈಗರ್ ಸಿನಿಮಾಗಿಂತ ಪೊಗರು ಸಿನಿಮಾವೇ ಸೂಪರ್ ಆಗಿದೆ ಎಂದು ಹೇಳಿದ್ದಾರೆ. ಇನ್ನೂ ಅನೇಕ ರೀತಿಯ ಟ್ವೀಟ್​ಗಳು ವೈರಲ್ ಆಗಿದ್ದು ಲೈಗರ್ ಸಿನಿಮಾ ಮಾತ್ರ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ ಜನ.

ಲೈಗರ್

ಲೈಗರ್

  • Share this:
ಬಹುನಿರೀಕ್ಷಿತ ಲೈಗರ್ (Liger) ಸಿನಿಮಾ (Movie) ಬಿಡುಗಡೆಯಾಗಿದೆ. ಸೌತ್ ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಅಭಿನಯದ ಮೊದಲ ಬಾಲಿವುಡ್  (Bollywood)ಸಿನಿಮಾ ನೋಡಲು ಟಾಲಿವುಡ್ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಕಾತುರವಾಗಿತ್ತು. ಆದರೆ ಸಿನಿಮಾ ನಿರೀಕ್ಷಿತ ಮಟ್ಟಿಗೆ ಸದ್ದು ಮಾಡಲೇಇಲ್ಲ. ಅನನ್ಯಾ ಪಾಂಡೆ (Ananya Pandey) ನಾಯಕಿ ನಟಿಯಾಗಿ ಅಭಿನಯಿಸಿದ ಸಿನಿಮಾ ನೀರಸ ಪ್ರತಿಕ್ರಿಯೆ ಪಡೆಯಿತು. ಜೋಡಿ ನೋಡೋಕೆ ಚೆನ್ನಾಗಿದ್ದರೂ ಸಿನಿಮಾ ಚೆನ್ನಾಗಿ ಬಂದಿಲ್ಲ ಎನ್ನವುದು ಸಿನಿಪಗ್ರಿಯರ ಅಭಿಪ್ರಾಯ. ಈಗ ಸಿನಿಮಾ ಬಗ್ಗೆ ಟ್ವಿಟರ್​ನಲ್ಲಿ ವಿಭಿನ್ನವಾದ ಕಮೆಂಟ್​ಗಳು ಬರುತ್ತಿವೆ. ಹೊರ ಇಂಡಸ್ಟ್ರಿಗಳನ್ನು ಬಿಟ್ಟು ಮಾತನಾಡುವುದಾದರೂ ಸ್ವತಃ ಟಾಲಿವುಡ್ ಮಂದಿಯೇ ಈ ಸಿನಿಮಾವನ್ನು ಇಷ್ಟಪಟ್ಟಿಲ್ಲ.

ಸ್ಯಾಂಡಲ್​ವುಡ್ ಮಂದಿಯೂ ಸಿನಿಮಾ ಬಗ್ಗೆ ಕುತೂಹಲ ಹೊಂದಿದ್ದರು. ರಶ್ಮಿಕಾ ಜೊತೆ ಹಲವು ಸಿನಿಮಾ ಮಾಡಿರುವ ವಿಜಯ್ ದೇವರಕೊಂಡ ಹೆಸರು ಈಗ ಕರ್ನಾಟಕದಲ್ಲಿಯೂ ಪರಿಚಿತ. ಆದರೆ ಸಿನಿಮಾ ನೋಡಿದ ಮಂದಿ ಲೈಗರ್​ಗಿಂತ ಪೊಗರು ಬೆಟರ್ ಎಂದು ಹೇಳುತ್ತಿದ್ದಾರೆ.

ಟ್ವಿಟರ್​​ನಲ್ಲಿ ಪ್ರತಿಕ್ರಿಯೆ

ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ಚಿತ್ರ ಲಿಗರ್ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದ್ದು ಟ್ವಿಟರ್ ಸಾಮಾಜಿಕ ಮಾಧ್ಯಮದಲ್ಲಿ ಲೈಗರ್ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಬಹಳಷ್ಟು ಜನರು ರಿವ್ಯೂಗಳನ್ನು ನೋಡಿಯೇ ಸಿನಿಮಾ ವೀಕ್ಷಣೆಗೆ ಹಿಂದೇಟು ಹಾಕುತ್ತಿದ್ದಾರೆ.

ಲಿಗರ್, ವಿಜಯ್ ದೇವರಕೊಂಡ ಅವರ ಅತ್ಯಂತ ಮಹತ್ವದ ನಿರ್ಮಾಣ ಮತ್ತು ಅವರ ಮೊದಲ ಪ್ಯಾನ್-ಇಂಡಿಯಾ ಪ್ರಯತ್ನದ ಸಿನಿಮಾಗೆ ಪುರಿ ಜಗನ್ನಾಥ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಬಿಡುಗಡೆ ನಂತರ ಚಿತ್ರವು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.

ಇದನ್ನೂ ಓದಿ: Vijay Deverakonda: ದೇವರಕೊಂಡ ಅಲ್ಲ ಅನಕೊಂಡ, ವಿಜಯ್ ದುರಹಂಕಾರಿ ಎಂದ ಥಿಯೇಟರ್ ಮಾಲೀಕ

ಈಗಾಗಲೇ ಸಿನಿಮಾ ಮಂದಿರಗಳಲ್ಲಿ ಲೈಗರ್ ಸಿನಿಮಾ ವೀಕ್ಷಿಸಿದ ನೆಟಿಜನ್‌ಗಳು ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಟ್ವೀಟ್ ಮಾಡುತ್ತಿದ್ದಾರೆ. ಟ್ವಿಟರ್‌ನಲ್ಲಿ ತೀವ್ರವಾಗಿ ಲೈಗರ್ ವಿಮರ್ಶೆಗಳನ್ನು ಟೈಪ್ ಮಾಡಲಾಗಿದೆ. ಕೆಲವು ಅಭಿಮಾನಿಗಳು ಚಿತ್ರವನ್ನು ಶ್ಲಾಘಿಸಿದರೆ, ಕೆಲವರು ಪುರಿ ಜಗನ್ನಾಥ್ ನಿರ್ದೇಶನವನ್ನು ದುರಂತ ಎಂದು ಕರೆದಿದ್ದಾರೆ. ಈಗಾಗಲೇ ನೆಟ್ಟಿಗರು ಸಿನಿಮಾವನ್ನು ಫ್ಲಾಪ್ ಎಂದು ಹೇಳುತ್ತಿದ್ದಾರೆ.

ಲೈಗರ್​ಗಿಂತ ಪೊಗರು ಬೆಟರ್ ಎಂದ ಜನ

ಕೆಲವರು ಟ್ವೀಟ್ ಮಾಡಿ ಲೈಗರ್ ಸಿನಿಮಾಗಿಂತ ಪೊಗರು ಸಿನಿಮಾವೇ ಸೂಪರ್ ಆಗಿದೆ ಎಂದು ಹೇಳಿದ್ದಾರೆ. ಇನ್ನೂ ಅನೇಕ ರೀತಿಯ ಟ್ವೀಟ್​ಗಳು ವೈರಲ್ ಆಗಿದ್ದು ಲೈಗರ್ ಸಿನಿಮಾ ಮಾತ್ರ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ ಜನ.ಟಾರ್ಚರ್ ಕೊಟ್ಟಿದ್ದೀರಾ. ಟಿಕೆಟ್ ಹಣ ವಾಪಸ್ ಕೊಡಿ

ಇನ್ನೂ ಕೆಲವರು ಸಿನಿಮಾ ಬಗ್ಗೆ ಕಮೆಂಟ್ ಮಾಡಿ, ಪುರಿ ಜಗನ್ನಾಥ ಅವರೇ ಸೋಂಬೇರಿಯಾಗಬೇಡಿ. ನಿಮ್ಮನ್ನು ನಂಬಿ ಕೋಟಿ ಕೋಟಿ ಬಂಡವಾಳ ಹೂಡಲಾಗುತ್ತದೆ. ಮುಂದಿನ ಸಲ ಚಂದದ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಶೂಟಿಂಗ್​ಗೆ ಹೋಗಿ. ಈ ಟಾರ್ಚರ್ ಸಿನಿಮಾ ನೋಡಿದ ಟಿಕೆಟ್ ಹಣ ನಮಗೆ ವಾಪಸ್ ಬೇಕು ಎಂದು @itisprashanth ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Vijay Deverakonda: ವಿಜಯ್ ದೇವರಕೊಂಡ ಸಡನ್ ಎಂಗೇಜ್ಮೆಂಟ್, ಅನನ್ಯಾ ಅಲ್ಲ, ರಶ್ಮಿಕಾ ಅಲ್ಲ! ಮತ್ತ್ಯಾರು?

ಬಾಲಿವುಡ್ ಬಹಿಷ್ಕರಿಸುವ ಕರೆಗಳ ಮಧ್ಯೆ ಈಗ ಟಾಲಿವುಡ್ ನಟನೂ ಟ್ರೋಲ್ ಆಗಿದ್ದಾರೆ. ವಿಜಯ್ ದೇವರಕೊಂಡ ದುರಹಂಕಾರಿ ಎಂದು ಥಿಯೇಟರ್ ಮಾಲೀಕ ಆರೋಪಿಸಿದ್ದಾರೆ.
ಗೈಟಿ ಗ್ಯಾಲಕ್ಸಿ ಮತ್ತು ಮರಾಠ ಮಂದಿರ ಸಿನಿಮಾದ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ದೇಸಾಯಿ ವಿಜಯ್ ಅವರನ್ನು ಟೀಕಿಸಿದ್ದಾರೆ. ಅಷ್ಟೇ ಅಲ್ಲ, ನಟನನ್ನು ದುರಹಂಕಾರಿ ಎಂದು ಕರೆದಿದ್ದಾರೆ. ಮಿಸ್ಟರ್ ನೀವು 'ದೇವರಕೊಂಡ' ಅಲ್ಲ 'ಅನಕೊಂಡ'. ಮತ್ತು ಈಗ ನೀವು ಅನಕೊಂಡದಂತೆ ಮಾತನಾಡುತ್ತಿದ್ದೀರಿ ಎಂದಿದ್ದಾರೆ.
Published by:Divya D
First published: