Vijay Deverakonda: ನಟ ವಿಜಯ್​ಗೆ ಹೆಣ್ಮಕ್ಕಳನ್ನು ಕಂಡ್ರೆ ತುಂಬಾ ಭಯವಂತೆ!

ವಿಜಯ್‌ ದೇವರಕೊಂಡ ತಮ್ಮ ಪ್ಯಾನ್-ಇಂಡಿಯಾ ಸಿನಿಮಾ ಲೈಗರ್‌ನ ಹಿಂದಿ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಈ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ವಿಜಯ್‌ ಅವರು ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರೊಂದಿಗೆ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿರುವುದು ಟ್ರೇಲರ್‌ನಿಂದ ತಿಳಿಯುತ್ತಿದೆ. ವಿಜಯ್‌ ದೇವರಕೊಂಡ ಅವರು ಬಾಲಿವುಡ್‌ ಸಿನಿಮಾ ನಟ-ನಟಿಯರ ಇಂಟ್ರೆಸ್ಟಿಂಗ್‌ ಕಥೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ವಿಜಯ್‌ ದೇವರಕೊಂಡ ಅವರ ರ್‍ಯಾಪಿಡ್‌ ಫೈರ್‌ ರೌಂಡನಲ್ಲಿ ಏನೆಲ್ಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂಬುದರ ಬಗ್ಗೆ ನಾವಿಂದು ಇಲ್ಲಿ ತಿಳಿಯೋಣ.

ವಿಜಯ್‌ ದೇವರಕೊಂಡ

ವಿಜಯ್‌ ದೇವರಕೊಂಡ

  • Share this:
ದಕ್ಷಿಣ ಭಾರತದ ಮತ್ತೊಬ್ಬ ಸುಪ್ರಸಿದ್ದ ನಟ ಬಾಲಿವುಡ್ (Bollywood) ಅಂಗಳಕ್ಕೆ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ಸೌತ್ ಸಿನಿ ಇಂಡಸ್ಟ್ರಿಯ ಅನೇಕ ನಟ ನಟಿಯರು ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದರಂತೆ ಇದೀಗ ತೆಲುಗಿನ ಜನಪ್ರಿಯ ನಟ ವಿಜಯ್ ದೇವರಕೊಂಡ (Vijay Deverakonda) ಕೂಡ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿದ್ದಾರೆ. ಅದೂ ಕೂಡ ತಮ್ಮ ಬಹುದಿನಗಳ ನೆಚ್ಚಿನ ಪಾತ್ರದಲ್ಲಿ ಅಭಿನಯಿಸಿದಕ್ಕಾಗಿ ನಟ ವಿಜಯ್ ದೇವರ ಕೊಂಡ ಅವರು ಫುಲ್ ಖುಷ್ ಆಗಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ನಿರ್ದೇಶನದಲ್ಲಿ ಮೂಡಿಬಂದ ಅರ್ಜುನ್ ರೆಡ್ಡಿ (Arjun Reddy) ಸಿನಿಮಾದ ಯಶಸ್ಸು ವಿಜಯ್ ದೇವರಕೊಂಡ ಅವರಿಗೆ ಅಪಾರ ಜನಪ್ರಿಯತೆಯ ಜೊತೆಗೆ ಅಪಾರ ಅಭಿಮಾನಿ (Fans) ಬಳಗ ಸೃಷ್ಟಿಯಾಗಲು ಕಾರಣವಾಯಿತು.

ಟಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ
ಈ ಸಿನಿಮಾದ ಯಶಸ್ಸಿನ ನಂತರ ಕೌಟುಂಬಿಕ ಪ್ರಧಾನ ಚಿತ್ರವಾದ 'ಗೀತಾ ಗೋವಿಂದಂ' ಚಿತ್ರದ ಮೂಲಕ ಕೂಡ ಸಿನಿ ಪ್ರೇಕ್ಷಕರಿಗೆ ಮತ್ತಷ್ಟು ಇಷ್ಟವಾದ ವಿಜಯ್ ದೇವರಕೊಂಡಗೆ ಫೀಮೆಲ್ ಫ್ಯಾನ್ಸ್ ಫಾಲೋವರ್ಸ್ ಕೂಡ ಹೆಚ್ಚಾಯಿತು.

ಹೀಗೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳ ಮೂಲಕ ತೆಲುಗು ಚಿತ್ರರಂಗದಲ್ಲಿ ತನ್ನದೇಯಾದ ಅಭಿಮಾನ ಬಳಗ ಬೆಳೆಸಿಕೊಂಡ ವಿಜಯ್ ದೇವರಕೊಂಡ ಇದೀಗ ಟಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿ ಬೆಳೆದಿದ್ದಾರೆ. ಇದೀಗ ಹಿಂದಿ ಚಿತ್ರದಲ್ಲಿಯೂ ಕೂಡ ನಟಿಸುತ್ತಿದ್ದಾರೆ.

ಮೊದಲ ಬಾರಿಗೆ ಖಡಕ್ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡ ವಿಜಯ್ 
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಲೈಗರ್' ಎಂಬ ಆಕ್ಷನ್ ಓರಿಯೆಂಟೆಡ್ ಸಿನಿಮಾದಲ್ಲಿ ವಿಜಯ್ ನಟಿಸಿದ್ದಾರೆ. ಇದರಲ್ಲಿ ಭರ್ಜರಿ ಆಕ್ಷನ್ ಸನ್ನಿವೇಶಗಳಿವೆ. ಇದೇ ಮೊದಲ ಬಾರಿಗೆ ನಟ ವಿಜಯ್ ದೇವರಕೊಂಡ ಹೆಚ್ಚು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಇದುವರೆಗೆ ಲವರ್ ಬಾಯ್, ಮನೆ ಹುಡುಗ ಚಾಕ್ಲೆಟ್ ಹೀರೋ ಆಗಿ ಕಾಣಿಸಿಕೊಂಡಿರುವ ವಿಜಯ್ ದೇವರಕೊಂಡ ಮೊಟ್ಟ ಮೊದಲ ಬಾರಿಗೆ ಖಡಕ್ ಆಕ್ಷನ್ ಹೀರೋ ಆಗಿ ಅಭಿನಯಿಸಿದ್ದಾರೆ.

ಸಂದರ್ಶನದಲ್ಲಿ ಏನೇನೆಲ್ಲಾ ಹೇಳಿದ್ದಾರೆ ನೋಡಿ ಈ ನಟ
ಇದೀಗ ವಿಜಯ್‌ ದೇವರಕೊಂಡ ತಮ್ಮ ಪ್ಯಾನ್-ಇಂಡಿಯಾ ಸಿನಿಮಾ ಲೈಗರ್‌ನ ಹಿಂದಿ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಈ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ವಿಜಯ್‌ ಅವರು ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರೊಂದಿಗೆ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿರುವುದು ಟ್ರೇಲರ್‌ನಿಂದ ತಿಳಿಯುತ್ತಿದೆ. ವಿಜಯ್‌ ದೇವರಕೊಂಡ ಅವರು ಬಾಲಿವುಡ್‌ ಸಿನಿಮಾ ನಟ-ನಟಿಯರ ಇಂಟ್ರೆಸ್ಟಿಂಗ್‌ ಕಥೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ವಿಜಯ್‌ ದೇವರಕೊಂಡ ಅವರ ರ್‍ಯಾಪಿಡ್‌ ಫೈರ್‌ ರೌಂಡನಲ್ಲಿ ಏನೆಲ್ಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂಬುದರ ಬಗ್ಗೆ ನಾವಿಂದು ಇಲ್ಲಿ ತಿಳಿಯೋಣ.

ಇದನ್ನೂ ಓದಿ: Liger Movie Review: ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ! ಏನಂತಿದ್ದಾರೆ ನೆಟ್ಟಿಗರು?

ಮಹಿಳೆಯರನ್ನು ನೋಡಿದ್ರೆ ಭಯ ಅಂತೆ!
ವಿಜಯ್‌ ದೇವರಕೊಂಡ ನೀಡಿರುವ ಎಕ್ಸ್‌ಕ್ಲ್ಯೂಸಿವ್‌ ಸಂದರ್ಶನದಲ್ಲಿ ತಮ್ಮ ಕೆಲವು ವೈಯಕ್ತಿಕ ವಿಷಯಗಳನ್ನು ಅತ್ಯಂತ ಇಂಟ್ರೆಸ್ಟಿಂಗ್‌ ಆಗಿ ಹಂಚಿಕೊಂಡಿದ್ದಾರೆ. ಹೀಗೆ ಸಂದರ್ಶನದಲ್ಲಿ ಮಾತನಾಡುತ್ತಿರುವಾಗ ಅವರು “ನಾನು 18 ವರ್ಷ ವಯಸ್ಸಿನವರೆಗೂ ಮಹಿಳೆಯರನ್ನು ನೋಡಿದರೆ ಸಾಕು ಹೆದರಿ ಕುಳಿತುಕೊಂಡು ಬಿಡುತ್ತಿದ್ದೆ. ನಾನು ಸಿನಿಮಾಗೆ ಬರುವುದಕ್ಕೂ ಮುಂಚೆ ಯಾವ ಮಹಿಳೆಯರ ಹತ್ತಿರನೂ ಕೂಡ ಮಾತನಾಡಿಲ್ಲ. ನನಗೆ ಮಹಿಳೆಯರ ಹತ್ತಿರ ಮಾತನಾಡಲು ತುಂಬಾ ಭಯವಾಗುತ್ತಿತ್ತು” ಎಂದು ಬಾಲಿವುಡ್‌ ಸಂದರ್ಶಕರ ಕೇಳಿದ ಎರಡು ಸತ್ಯಗಳು ಮತ್ತು ಒಂದು ಸುಳ್ಳು ಹೇಳಿ ಎಂದಾಗ ಈ ಇಂಟ್ರೆಸ್ಟಿಂಗ್‌ ಕಥೆಯನ್ನು ಹೇಳಿದ್ದಾರೆ.

ಭಯ ಪಡಲು ಕಾರಣ ಇಷ್ಟೇ 
ವಿಜಯ್‌ ದೇವರಕೊಂಡ ಅವರು ತಮ್ಮ ಮಾತನ್ನು ಮುಂದುವರಿಸುತ್ತಾ “ನನಗೆ ಇಲ್ಲಿಯವರೆಗೂ ಒಬ್ಬರೇ ಒಬ್ಬ ಮಹಿಳೆಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಅಥವಾ ಸಂಭಾಷಣೆ ನಡೆಸಲು ನನಗೆ ಧೈರ್ಯವೇ ಬಂದಿಲ್ಲ. ಏನೋ ಸಿನಿಮಾ ವೃತ್ತಿ ಎಂದು ಈಗ ಸ್ವಲ್ಪ ಸ್ವಲ್ಪ ಮಾತನಾಡುತ್ತೇನೆ. ಇದೇ ಸತ್ಯ. ಇದನ್ನು ನೀವು ಯಾವುದೋ ಕಾಯಿಲೆ ಎಂದು ಭಾವಿಸಬೇಡಿ. ನಾನು ಹುಡುಗರ ಬೋರ್ಡಿಂಗ್ ಶಾಲೆಯಲ್ಲಿ ಓದಿ ಮತ್ತು ಬೆಳೆದ ಕಾರಣ, ಮಹಿಳೆಯರೇ ಬೇರೆ ಜಾತಿಯವರು ಎಂದು ಚಿಕ್ಕ ವಯಸ್ಸಿನಿಂದ ಭಾವಿಸಿದ್ದೆ.

ಈಗ ಆ ಮನಸ್ಥಿತಿ ಸ್ವಲ್ಪ ದೂರವಾಗಿದೆ. ಆದರೆ ಅದರ ಆಚೆಗೂ ಮಹಿಳೆಯರು ನೋಡಲು ಎಷ್ಟು ಸುಂದರವಾಗಿರುತ್ತಾರೆ. ಆ ಕಾರಣವೂ ಕೂಡ ನನಗೆ ಮಹಿಳೆಯರನ್ನು ಮಾತನಾಡಿಸಲು ಸ್ವಲ್ಪ ಕಷ್ಟ ಎನಿಸುತ್ತದೆ” ಎಂದು ನಗುತ್ತಾ ಹೇಳಿದರು.

ಲೈಗರ್ ಸಿನೆಮಾದಲ್ಲಿ ವಿಜಯ್ ಅವರ ಪಾತ್ರ 
ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧ ನಟ ವಿಜಯ್ ದೇವರಕೊಂಡ ಅವರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಡುವ ಅಂಡರ್‌ಡಾಗ್ ಬಾಕ್ಸರ್ ಪಾತ್ರವನ್ನು ಲೈಗರ್ ಸಿನಿಮಾದಲ್ಲಿ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅಮೆರಿಕದ ಮಾಜಿ ವೃತ್ತಿಪರ ಬಾಕ್ಸರ್ ಮೈಕ್ ಟೈಸನ್ ಅವರ ವಿಶೇಷ ಅತಿಥಿ ಪಾತ್ರ ಇರುವುದರಿಂದ ಈ ಸಿನಿಮಾ ಅಂತರಾಷ್ಟ್ರೀಯ ಖ್ಯಾತಿ ಪಡೆಯುವದರಲ್ಲಿ ಸಂಶಯವಿಲ್ಲ ಎಂದು ಹೇಳಬಹುದು. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಒಟ್ಟು 5 ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವು ಆಗಸ್ಟ್ 25, 2022 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ತೆರೆ ಕಂಡಿದೆ.

ಲೈಗರ್‌ ಸಿನಿಮಾದ ಬಗ್ಗೆ ಒಂದಿಷ್ಟು ಮಾಹಿತಿ
ಪ್ಯಾನ್ ಸಿನಿಮಾಗಳ ಸಾಲಿನಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿರುವ ಮತ್ತೊಂದು ಸಿನಿಮಾ ಎಂದರೆ ಅದು ಲೈಗರ್. ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ತೆರೆಗೆ ಬಂದಿರುವ ಪ್ಯಾನ್ ಇಂಡಿಯಾ ಸಿನಿಮಾ.

ಇದನ್ನೂ ಓದಿ:  Allu Arjun: ಚಿರಂಜೀವಿ ಹಾಗೂ ಅಲ್ಲು ಅರ್ಜುನ್ ಫ್ಯಾಮಿಲಿ ನಡುವೆ ನಡೀತಿದ್ಯಾ ಕೋಲ್ಡ್​ ವಾರ್!? ಅಲ್ಲು ಅರವಿಂದ್ ಹೇಳಿದ್ದೇನು?

ಸಿನಿಮಾ ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ, ಸಿನಿಮಾದ ಪ್ರಚಾರವನ್ನು ಸಿನಿಮಾ ತಂಡ ದೊಡ್ಡ ಮಟ್ಟದಲ್ಲಿ ಮಾಡಿತ್ತು. ಪ್ರಚಾರದ ಭಾಗವಾಗಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಮತ್ತು ಇಡೀ ಚಿತ್ರತಂಡ ಭಾರತದಾದ್ಯಂತ ಸುತ್ತುತ್ತಿದೆ.

ಲೈಗರ್‌ ಸಿನಿಮಾಕ್ಕೆ ಆಕ್ಷೆಪಣೆ ಮಾಡಿದ್ದ ಸೆನ್ಸಾರ್‌ ಮಂಡಳಿ
ಇನ್ನು ಲೈಗರ್ ಸಿನಿಮಾದ ರನ್‌ಟೈಮ್ ಮತ್ತು ಸೆನ್ಸಾರ್ ಬಗ್ಗೆಯೂ ಮಾಹಿತಿ ಹೊರ ಬಿದ್ದಿದೆ. 'ಲೈಗರ್' ಸಿನಿಮಾ ಸೆನ್ಸಾರ್‌ಗೆ ಹೋದಾಗ, ಸಿನಿಮಾದಲ್ಲಿರುವ ಅಶ್ಲೀಲ ಭಾಷೆ ಕಂಡು ಸೆನ್ಸಾರ್ ಮಂಡಳಿ ದಂಗಾಗಿ ಹೋಗಿದೆಯಂತೆ. ಹಾಗಾಗಿ ಬದಲಾವಣೆಗೆ ಸೂಚಿಸಿತ್ತಂತೆ.

ವಿಜಯ್ ದೇವರಕೊಂಡ ನಟನೆಯ, ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಇಂದು ಆಗಸ್ಟ್ 25ಕ್ಕೆ ತೆರೆಗೆ ಬಂದಿದೆ. ಸಿನಿಮಾ ರಿಲೀಸ್‌ಗೂ ಮುನ್ನ ಸೆನ್ಸಾರ್ ಮುಗಿಸಬೇಕು. ಲೈಗರ್ ಸಿನಿಮಾ ಕೂಡ ಸೆನ್ಸಾರ್ ಮಂಡಳಿ ಮುಂದೆ ಪ್ರದರ್ಶನ ಕಂಡಿದೆ. ಈ ಚಿತ್ರದಲ್ಲಿನ ಡೈಲಾಗ್‌ಗಳನ್ನ ನೋಡಿ ಸೆನ್ಸಾರ್ ಮಂಡಳಿ ಶಾಕ್ ಆಗಿದೆಯಂತೆ. ಹಾಗಾಗಿ ಹಲವು ಡೈಲಾಗ್‌ಗಳನ್ನು ಕಿತ್ತು ಹಾಕಲು ಸೂಚನೆ ನೀಡಿದೆ. ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಆದರೆ ಹಲವಾರು ಆಕ್ಷೇಪಣೆಗಳು ಚಿತ್ರಕ್ಕೆ ಎದುರಾಗಿದೆ. ಡೈಲಾಗ್‌ಗಳಲ್ಲಿ ಅಶ್ಲೀಲ ಭಾಷೆಯನ್ನು ಬಳಸಲಾಗಿದೆ. ಅದರಲ್ಲಿ ಕೆಲವು ಪದಗಳನ್ನು ತೆಗೆದು ಹಾಕಲು ಸೂಚಿಸಿದರೆ ಇನ್ನು ಕೆಲವು ಪದಗಳನ್ನು ಮ್ಯೂಟ್ ಮಾಡಲು ಸೂಚಿಸಲಾಗಿದೆ.

ಸದ್ಯ ಲೈಗರ್ ಚಿತ್ರದ ರನ್ ಟೈಮ್ ಎಷ್ಟು ಎನ್ನುವ ಬಗ್ಗೆಯೂ ಮಾಹಿತಿ ಹೊರ ಬಂದಿದೆ. ಲೈಗರ್ ಸಿನಿಮಾದ ಒಟ್ಟಾರೆ ಅವಧಿ 2 ಗಂಟೆ 20 ನಿಮಿಷ 20 ಸೆಕೆಂಡು. ಹಾಗಾಗಿ ಸಿನಿಮಾ ಹೆಚ್ಚು ಲ್ಯಾಗ್ ಇರುವುದಿಲ್ಲ ಎನ್ನಬಹುದು. ಈಗಾಗಲೇ ಸಿನಿಮಾದ ತುಣುಕುಗಳು ಚಿತ್ರದ ಮೇಲೆ ಎಲ್ಲಿಲ್ಲದ ಕ್ರೇಜ್ ಹುಟ್ಟು ಹಾಕಿವೆ. ವಿಜಯ್ ಅಭಿಮಾನಿಗಳು ಸಿನಿಮಾ ನೋಡಲು ಕಾತರರಾಗಿದ್ದಾರೆ.

ಈಗಾಗಲೇ ಅಮೆರಿಕದಲ್ಲಿ ಬಿಡುಗಡೆಯಾದ ಪ್ರೀಮಿಯರ್‌ ಪ್ರದರ್ಶನದಲ್ಲಿ ಉತ್ತಮ ಗಳಿಕೆ ಕಾಣುತ್ತಿರುವ ಲೈಗರ್‌ ಸಿನಿಮಾ
ಟಾಲಿವುಡ್ ನ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ದೂರದ ಅಮೆರಿಕದಲ್ಲಿ ಪ್ರೀಮಿಯರ್‌ ಪ್ರದರ್ಶನಗಳಿಂದಲೇ ದೊಡ್ಡ ಮೊತ್ತದ ಗಳಿಕೆಯನ್ನು ಕಂಡಿದೆ. ಈ ಸಿನಿಮಾ ಇಂದು ಗುರುವಾರ (ಆಗಸ್ಟ್ 25) ವಿಶ್ವಾದ್ಯಂತ ಬಿಡುಗಡೆಯಾದಾಗ, ಪ್ರೀಮಿಯರ್ ಶೋಗಳನ್ನು ಒಂದು ದಿನ ಮೊದಲೇ ಅಮೆರಿಕದಲ್ಲಿ ಬಿಡುಗಡೆ ಮಾಡಲಾಗಿತ್ತು.

ಲೈಗರ್ ಬಾಕ್ಸ್ ಆಫೀಸ್ ಕಲೆಕ್ಷನ್ಸ್ ಅದ್ಭುತವಾಗಿದೆ. ವಿಶ್ವಾದ್ಯಂತ ಮೊದಲ ದಿನದ ಕಲೆಕ್ಷನ್ ಇನ್ನೂ ನಿಮಗೆ ಗೊತ್ತಿಲ್ಲದಿದ್ದರೂ ಲೈಗರ್ ಯುಎಸ್ ಪ್ರೀಮಿಯರ್‌ಗಳ ಮೂಲಕ ಒಳ್ಳೆ ಕಲೆಕ್ಷನ್ ಮಾಡಿದೆ. ಲೈಗರ್ ಪ್ರೀಮಿಯರ್ ಶೋಗಳ ಮೂಲಕ ಅಮೆರಿಕದಲ್ಲಿ 3.5 ಲಕ್ಷ ಡಾಲರ್ ಸಂಗ್ರಹಿಸಿರೋದು ವಿಶೇಷ. ಚಿತ್ರದ ಅಧಿಕೃತ ಸಾಗರೋತ್ತರ ವಿತರಕರಾದ ಸರಿಗಮ ಸಿನಿಮಾಸ್ ಈ ವಿಷಯವನ್ನು ಟ್ವಿಟರ್ ಮೂಲಕ ಬಹಿರಂಗಪಡಿಸಿದೆ.

ಇದನ್ನೂ ಓದಿ:  Bollywood Actors: ಬಾಲಿವುಡ್​ನಲ್ಲಿ ಯಶಸ್ಸು ಕಾಣಲು ಹೆಸರನ್ನೇ ಬದಲಾಯಿಸಿಕೊಂಡ ನಟರಿವರು, ನಂತರ ಕುದುರಿದ್ದು ಅದೃಷ್ಟ!

ಲೈಗರ್ ಪ್ರೀಮಿಯರ್‌ ಶೋಗಳಿಂದಲೇ ಒಟ್ಟು 3.5 ಲಕ್ಷ + ಡಾಲರ್‌ಗಳನ್ನು ಕಲೆಕ್ಷನ್‌ ಮಾಡಿದೆ. ಸಂಗ್ರಹಣೆಗಳು ಇನ್ನೂ ಹೆಚ್ಚುತ್ತಿವೆ ಎಂದು ಕಂಪನಿಯು ಟ್ವೀಟ್ ಮಾಡಿದೆ.
Published by:Ashwini Prabhu
First published: