Vijay Devarakonda: ಹಿಂದಿ ಸಿನಿಮಾದಲ್ಲಿ ನಾನು ಬಯಸಿದ ಪಾತ್ರ ಸಿಕ್ಕಿದೆ, ತನ್ನ ಮೊದಲ ಬಾಲಿವುಡ್​ ಚಿತ್ರದ ಬಗ್ಗೆ ಅರ್ಜುನ್ ರೆಡ್ಡಿ ಮಾತು....

Bollywood: “ನಾನು ಒಟಿಟಿ ಪ್ಲಾಟ್‌ಫಾರ್ಮ್ ಅನ್ನು ತುಂಬಾ ಗೌರವಿಸುತ್ತೇನೆ. ಆದರೆ ‘ಲಿಗರ್’ ಚಿತ್ರ ಮಾತ್ರ ಡಿಜಿಟಲ್ ಡೊಮೇನ್ ಗೆ ಅಲ್ಲ. ‘ಲಿಗರ್’ ಚಿತ್ರದಲ್ಲಿ ನಾನು ಮಾಡಿದ ಸಾಹಸಮಯ ದೃಶ್ಯಗಳನ್ನು ನೋಡಿದಾಗ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನಾನು ತಿಳಿಯಲು ಬಯಸುತ್ತೇನೆ" ಎಂದು ವಿಜಯ್ ಹೇಳಿದ್ದಾರೆ

ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ

  • Share this:

ಕಳೆದ ಕೆಲವು ವರ್ಷಗಳಿಂದ ತೆಲುಗು ಚಿತ್ರೋದ್ಯಮದಲ್ಲಿ ತಮ್ಮ ವಿಭಿನ್ನ ಕಥೆಯುಳ್ಳಂತಹ ಚಲನ ಚಿತ್ರಗಳಲ್ಲಿ ನಟಿಸುವುದರ ಮೂಲಕ ಸೂಪರ್ ಸ್ಟಾರ್ ಎನಿಸಿಕೊಂಡ ನಟರ ಸಾಲಿನಲ್ಲಿ ವಿಜಯ್ ದೇವರಕೊಂಡ(Vijay Devarakonda) ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ.ತೆಲುಗು ಸಿನೆಮಾ(Tollywood) ರಂಗದಲ್ಲಿ ತಮ್ಮ ಛಾಪು ಮೂಡಿಸಿದ ವಿಜಯ್, ಈಗ ಬಾಲಿವುಡ್‌ನಲ್ಲಿ (Bollywood)ಕೂಡ ತಮ್ಮ ಪ್ರತಿಭೆಯನ್ನು ಪರೀಕ್ಷಿಸಲು ಹೊರಟಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ.


2017 ರಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಅರ್ಜುನ್ ರೆಡ್ಡಿ ತೆಲುಗು ಚಿತ್ರದೊಂದಿಗೆ ರಾತ್ರೋರಾತ್ರಿ ಸೆನ್ಸೇಷನ್ ಆದ ದಕ್ಷಿಣದ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.ಹಿಂದಿ ಚಲನಚಿತ್ರೋದ್ಯಮದ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ಬಂಡವಾಳ ಹೂಡಲ್ಪಟ್ಟ ಅವರ ಚೊಚ್ಚಲ ಚಲನಚಿತ್ರ ‘ಲಿಗರ್’ ಆಗಿದ್ದು, ಅದರಲ್ಲಿ ವಿಜಯ್ ಎಂಎಂಎ ತಜ್ಞನ ಪಾತ್ರವನ್ನು ಮಾಡುತ್ತಿದ್ದಾರೆ.ಇದು ರೊಮ್ಯಾಂಟಿಕ್​ ಹಾಗೂ ಕ್ರೀಡಾ ಕಥಾಹಂದರ ಹೊಂದಿರುವ ಸಿನಿಮಾ ಆಗಿದೆ. ಇದಕ್ಕೆ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದಾರೆ.


"ಇದು ಹಿಂದಿಯಲ್ಲಿ ಒಂದು ಆ್ಯಕ್ಷನ್ ಚಿತ್ರವಾಗಿದ್ದು, ನಾನು ಬಾಲಿವುಡ್ ಗೆ ಪ್ರವೇಶಿಸಿದ್ದೇನೆ ಎಂದರೆ ನಾನು ತೆಲುಗು ಚಿತ್ರದಲ್ಲಿ ಏನನ್ನು ಮಾಡಲು ಸಾಧ್ಯವಾಗಿಲ್ಲವೋ, ಅದನ್ನು ಬಾಲಿವುಡ್ ಚಿತ್ರಗಳಲ್ಲಿ ಮಾಡಲು ಬಯಸುತ್ತೇನೆ. ‘ಲಿಗರ್’ ಹಿಂದಿ ಸಿನೆಮಾದಲ್ಲಿ ನಾನು ಬಯಸಿದ ಪಾತ್ರ ಸಿಕ್ಕಿದ್ದು, ಈ ಚಿತ್ರ ನನಗೆ ಬಾಲಿವುಡ್‌ಗೆ ಪ್ರವೇಶಿಸುವ ಅವಕಾಶ ನೀಡಿದೆ" ಎಂದು ವಿಜಯ್ ಬಹಳ ಉತ್ಸಾಹದಿಂದ ತಮ್ಮ ಚೊಚ್ಚಲ ಹಿಂದಿ ಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಬಿಗ್​ಬಾಸ್ ಸ್ಪರ್ಧಿಯಾಗಿರುವ ತಂಗಿಗೆ ಮತ ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ Shilpa Shetty!

ತೆಲುಗು ನಟ ವಿಜಯ್ ‘ಲಿಗರ್’ ನಲ್ಲಿ ಕೆಲವು ಹೆಚ್ಚಿನ ಆ್ಯಕ್ಷನ್ ದೃಶ್ಯಗಳನ್ನು ಮಾಡಲಿದ್ದಾರೆ. ಪರದೆಯ ಮೇಲೆ ಮಾಡಿದಂತಹ ಆ್ಯಕ್ಷನ್ ದೃಶ್ಯಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ವಿಜಯ್ ಅವರು "ಇಂತಹ ಆ್ಯಕ್ಷನ್ ಸನ್ನಿವೇಶಗಳನ್ನು ನಾನು ಯಾವುದೇ ಚಿತ್ರದಲ್ಲಿ ಮಾಡಿಲ್ಲ. ನಾನು ಯಾವಾಗಲೂ ನನಗೆ ಸಾಧ್ಯವಾದಷ್ಟು ನೀಡಲು ಬಯಸುತ್ತೇನೆ. ನಾನು ಈ ‘ಲಿಗರ್’ ಚಿತ್ರದಲ್ಲಿ ಸಹ ಆ್ಯಕ್ಷನ್ ದೃಶ್ಯಗಳನ್ನು ನಾನು ತುಂಬಾ ಚೆನ್ನಾಗಿಯೇ ಮಾಡಿದ್ದೇನೆ ಎಂದು ನನಗೆ ಅನ್ನಿಸುತ್ತದೆ” ಎಂದು ಹೇಳಿದರು.


‘ಲಿಗರ್’ ಚಿತ್ರವನ್ನು ಪ್ರೇಕ್ಷಕರು ದೊಡ್ಡ ಪರದೆಯ ಮೇಲೆ ನೋಡಿದರೆ ಅವರಿಗೆ ಆನಂದ ಸಿಗುತ್ತದೆ, ಏಕೆಂದರೆ ಅದರಲ್ಲಿ ಅನೇಕ ಆ್ಯಕ್ಷನ್ ದೃಶ್ಯಗಳಿವೆ ಎಂದು ಹೇಳಿದ ವಿಜಯ್ ಅವರು ಚಿತ್ರವು ಒಟಿಟಿ ಯಲ್ಲಿ ಬಿಡುಗಡೆಯಾಗುವಂತಹ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.


“ನಾನು ಒಟಿಟಿ ಪ್ಲಾಟ್‌ಫಾರ್ಮ್ ಅನ್ನು ತುಂಬಾ ಗೌರವಿಸುತ್ತೇನೆ. ಆದರೆ ‘ಲಿಗರ್’ ಚಿತ್ರ ಮಾತ್ರ ಡಿಜಿಟಲ್ ಡೊಮೇನ್ ಗೆ ಅಲ್ಲ. ‘ಲಿಗರ್’ ಚಿತ್ರದಲ್ಲಿ ನಾನು ಮಾಡಿದ ಸಾಹಸಮಯ ದೃಶ್ಯಗಳನ್ನು ನೋಡಿದಾಗ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನಾನು ತಿಳಿಯಲು ಬಯಸುತ್ತೇನೆ" ಎಂದು ವಿಜಯ್ ಹೇಳಿದ್ದಾರೆ.ತೆಲುಗು ಸಿನೆಮಾದಲ್ಲಿ ರಂಗದಲ್ಲಿ ತುಂಬಾನೇ ಜನಪ್ರಿಯತೆಯನ್ನು ಗಳಿಸಿದ ವಿಜಯ್ ಈಗ ಹಿಂದಿ ಚಿತ್ರೋದ್ಯಮದಲ್ಲಿ ಇವರ ನಟನೆ ಯಾವ ರೀತಿಯಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ: Aamir Khan ಕುರಿತಾಗಿ ನಾಗ ಚೈತನ್ಯ ಹೀಗೆ ಹೇಳಿಕೆ ಕೊಟ್ಟಿದ್ದೇಕೆ ಗೊತ್ತಾ..?

ಬಾಲಿವುಡ್ ಹಂಗಾಮಾ ಮಾಡಿರುವ ವರದಿಯ ಪ್ರಕಾರ, ನಟ ವಿಜಯ ದೇವರಕೊಂಡ ಅವರು ಎರಡು ಸಿನಿಮಾಗಳಿಗೆ ಸಹಿ ಮಾಡಿದ್ದು, ಇವರ ಒಂದು ಸಿನಿಮಾದಲ್ಲಿ ಕತ್ರಿನಾ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಮಿರ್ಚಿ, ಶ್ರೀಮಂತುಡು, ಜನತಾ ಗ್ಯಾರೇಜ್ ಮತ್ತು ಭರತ್‌ ಆನೆ ನೇನು ಎಂಬ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಕೊರಟಾಲ ಶಿವ ಜೊತೆ ವಿಜಯ ದೇವರಕೊಂಡ ಕೆಲಸ ಮಾಡುತ್ತಿದ್ದಾರೆ. ಮತ್ತೊಂದು ಸಿನಿಮಾವನ್ನು ಶಿವಾ ನಿರ್ವಾಣ ಅವರ ಜೊತೆ ಮಾಡುತ್ತಿದ್ದಾರೆ ಎಂದು ಹೇಳಿದೆ.
Published by:Sandhya M
First published: