ಅಪ್ಪನಂತೆಯೇ ಅಭಿಮಾನಿಗಳನ್ನು ದೇವರಂತೆ ಕಾಣುವ ಪುನೀತ್​!

news18
Updated:July 9, 2018, 3:28 PM IST
ಅಪ್ಪನಂತೆಯೇ ಅಭಿಮಾನಿಗಳನ್ನು ದೇವರಂತೆ ಕಾಣುವ ಪುನೀತ್​!
news18
Updated: July 9, 2018, 3:28 PM IST
ನ್ಯೂಸ್​ 18 ಕನ್ನಡ 

ಕನ್ನಡಿಗರ ಕಣ್ಮಣಿ ಡಾ.ರಾಜ್‍ಕುಮಾರ್ ಅಭಿಮಾನಿಗಳನ್ನ ದೇವರು ಅಂತ ಕರೆದರು. ಡಾ.ರಾಜ್ ಅವರ ವ್ಯಕ್ತಿತ್ವವನ್ನೇ ಮೈಗೂಡಿಸಿಕೊಂಡಿರುವ ಅವರ ಮಕ್ಕಳು ಸಹ, ಅಭಿಮಾನಿಗಳನ್ನ ದೇವರಂತೆಯೇ ಕಾಣುತ್ತಾರೆ. ಈಗ ಅದಕ್ಕೆ ಪುರಾವೆ ನೀಡುವಂತಹ ಇನ್ನೊಂದು ವಿಷಯವನ್ನ ನಿಮಗಾಗಿ ಹೊತ್ತು ತಂದಿದ್ದೇವೆ. ಅದು ಏನಂತಿರಾ? ಇಲ್ಲಿದೆ ನೋಡಿ ಆ ಕುರಿತ ವರದಿ.

ದೊಡ್ಮನೆ ಹುಡುಗ ಪುನೀತ್ ರಾಜ್‍ಕುಮಾರ್​ಗೆ ಅಭಿಮಾನಿಗಳೆಂದರೆ ಅದೇನೋ ಅಕ್ಕರೆ ಹಾಗೂ ಆತ್ಮೀಯತೆ. ಯಾರಾದರೂ ನಿಮ್ಮ ಅಭಿಮಾನಿ ಅಂತ ಹೇಳಿಕೊಂಡು ಅವರ ಬಳಿ ಹೋದರೆ ಸಾಕು, ನಿಜವಾಗಿಯೂ ಇಷ್ಟು ಸರಳ-ವಿರಳ ನಟ ಇನ್ನೆಲ್ಲೂ ನೋಡಿಯೇ ಇಲ್ಲ ಎನ್ನುವಷ್ಟು ಆತ್ಮೀಯವಾಗಿ ನಡೆದುಕೊಳ್ಳುತ್ತಾರೆ. ಇವರ ಅಭಿಮಾನಿಯಾಗಿದ್ದಕ್ಕೂ ಸಾರ್ಥಕ ಅಂತ ಅವರ ಅಭಿಮಾನಿಗಳಿಗೆ ಅನಿಸುತ್ತದೆ. ಇದನ್ನ ಎಷ್ಟೋ ಬಾರಿ ನಾವೇ ಕ್ಯಾಮೆರಾದಲ್ಲಿ ಸೆರೆ ಹಿಡಿದಿದು ತೋರಿಸಿದ್ದೆವೆ.

ಈಗ ಮತೊಮ್ಮೆ ಪುನೀತ್ ತಮ್ಮ ಸರಳತೆಯನ್ನ ಹಾಗೂ ಅಭಿಮಾನಿಗಳ ಮೇಲಿನ ಅಕ್ಕರೆಯನ್ನ ಸಾದರಪಡಿಸುವಂತಹ ಘಟನೆ ನಡೆದಿದೆ. ಅದು ಏನಂದರೆ, ಪುನೀತ್ ರಾಜ್‍ಕುಮಾರ್ ಕಾರಿನಲ್ಲಿ ಪ್ರಯಾಣ ಮಾಡುವಾಗ, ಅಭಿಮಾನಿಯೊಬ್ಬರು ಅವರನ್ನು ನೋಡಿದ್ದಾನೆ. ಕೂಡಲೇ ಅವರನ್ನ ಓವರ್​ಟೇಕ್​ ಮಾಡಿ, ಒಂದು ಸೆಲ್ಫಿ ತೆಗೆದುಕೊಳ್ಳಬೇಕೆಂದು ಆರು ಕಿ.ಮೀ ಹಿಂಬಾಲಿಸಿದ್ದಾರೆ. ಇದನ್ನ ಕನ್ನಡಿಯಲ್ಲಿ ಗಮನಿಸಿದಂತಹ ಪುನೀತ್ ತಕ್ಷಣ ಗಾಡಿ ನಿಲ್ಲಿಸಿದ್ದಾರೆ. ಅಭಿಮಾನಿಯನ್ನ ಹತ್ತಿರಕ್ಕೆ ಕರೆದು, 'ಪ್ರಾಣ ಮುಖ್ಯ ನಾನು ಮತ್ತೆ ಸಿಗುತ್ತೇನೆ ಅಂತ ಬುದ್ಧಿವಾದ ಹೇಳಿ, ಏನು ಸೆಲ್ಫಿ ಬೇಕಾ ತಗೊಳಿ ಅಂತ ಅಕ್ಕರೆಯಿಂದಲೇ ಅಭಿಮಾನಿ ಜೊತೆ ಗೂಡಿ ಮುಖವೊಡ್ಡಿದ್ದಾರೆ'.

ಇದನ್ನ ಸ್ವತಃ ಪುನೀತ್ ಅಭಿಮಾನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪುನೀತ್ ರಾಜ್‍ಕುಮಾರ್ ಚಲಿಸುತ್ತಿದ್ದ ಕಾರನ್ನು ಸುಮಾರು ಆರು ಕಿ.ಮೀ. ಹಿಂಬಾಲಿಸಿದೆ. ನನ್ನನ್ನ ಕನ್ನಡಿಯಲ್ಲಿ ನೋಡಿದ ಪುನೀತ್, ಕಾರನ್ನ ರಸ್ತೆ ಬದಿಗೆ ನಿಲ್ಲಿಸಿ. ಮೊದಲು ಪ್ರಾಣ ಮುಖ್ಯ. ನಾನು ಮತ್ತೆ ಸಿಗುತ್ತೇನೆ. ಏನೂ ಸೆಲ್ಫಿ ಬೇಕಾ ? ತಗೊಳ್ಳಿ ಎಂದು ಬುದ್ಧಿವಾದವನ್ನ ಹೇಳಿ ಫೋಟೋ ತೆಗೆಸಿಕೊಂಡರು. ಪುನೀತ್ ಅವರ ಸರಳತೆ, ಸೌಜನ್ಯತೆ ಕಂಡು ನಾನು ನಿಜಕ್ಕೂ ಮೂಕನಾದೆ.


Loading...

ಪವರ್​ಸ್ಟಾರ್​ ಪುನೀತ್ ಜೊತೆ ಕಳೆದ ಮರೆಯಲಾಗದ ಸುಮಧುರ ಸುಂದರ ಕ್ಷಣಗಳು ಎಂಬ ಅಡಿಬರಹದಲ್ಲಿ `ಕೀರ್ತಿ ರಾಜಹುಲಿ' ಎಂಬ ಅಭಿಮಾನಿ ಬರೆದುಕೊಂಡಿದ್ದಾರೆ. ಒಟ್ಟಾರೆ ಅಭಿಮಾನಿಗಳನ್ನ ಗಳಿಸೋದಕ್ಕಿಂತ ಅವರನ್ನ, ಆಧರಿಸಿ, ಪ್ರೀತಿಸಿ, ಆ ಅಭಿಮಾನವನ್ನ ಕೊನೆವರೆಗೂ ಉಳಿಸಿಕೊಳ್ಳುವುದರಲ್ಲಿ ಅಪ್ಪಾಜಿಯಂತೆ ಅಪ್ಪು ಕೂಡ ಗ್ರೇಟ್ ಅನ್ನಬಹುದು.

 
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ