Laxmmi Bomb Trailer: ರಿಲೀಸ್​ ಆಯ್ತು ಅಕ್ಷಯ್​ ಕುಮಾರ್​ ಅಭಿನಯದ ಲಕ್ಷ್ಮಿ ಬಾಂಬ್​ ಟ್ರೇಲರ್​

ಕಾಮಿಡಿ ಹಾರರ್​ ಕಥೆ ಹೊಂದಿರುವ ಈ ಸಿನಿಮಾದಲ್ಲಿ ನಾಯಕನಿಗೆ ದೆವ್ವಗಳ ಬಗ್ಗೆ ನಂಬಿಕೆ ಇರುವುದಿಲ್ಲ. ನಂತರ ಕಿಯಾರಾ ಅವರ ಮನೆಗೆ ಬರುವ ಅಕ್ಷಯ್​ ಅಲ್ಲಿ ದೆವ್ವಗಳ ಕಾಟವನ್ನು ಅನುಭವಿಷುತ್ತಾರೆ. ಇದನ್ನು ಟ್ರೇಲರ್​ನಲ್ಲಿ ಸಖತ್ ಕಾಮಿಡಿಯಾಗಿ ತೋರಿಸಲಾಗಿದೆ.

ಅಕ್ಷಯ್​ ಕುಮಾರ್​

ಅಕ್ಷಯ್​ ಕುಮಾರ್​

  • Share this:
ದಕ್ಷಿಣ ಭಾರತದ ನಿರ್ದೇಶಕ ಲಾರೆನ್ಸ್​ ಆ್ಯಕ್ಷನ್​ ಕಟ್​ ಹೇಳಿರುವ ಲಕ್ಷ್ಮಿ ಬಾಂಬ್​ ಇನ್ನೇನು ಒಟಿಟಿ ಮೂಲಕ ರಿಲೀಸ್​ ಆಗಲಿದೆ. ಅಕ್ಷಯ್​ ಕುಮಾರ್ ಹಾಗೂ ಕಿಯಾರಾ ನಟಿಸಿರುವ ಈ ಸಿನಿಮಾ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಕಾರಣ ಅಕ್ಷಯ್ ಕುಮಾರ್​ ಈ ಸಿನಿಮಾದಲ್ಲಿ ಬಹಳ ವಿಭಿನ್ನವಾದ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಸೀರೆಯುಟ್ಟು, ಬಳೆತೊಟ್ಟು ಸಖತ್ ಕಾಮಿಡಿ ಸಹ ಮಾಡಿದ್ದಾರೆ. ಅಕ್ಷಯ್​ ಕುಮಾರ್​ ಅವರ ಈ ಹೊಸ ರೂಪವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗಲೇ ಅಕ್ಷಯ್​ ತಮ್ಮ ಸಿನಿಮಾದ ಟ್ರೇಲರ್​ ರಿಲೀಸ್​ ಮಾಡಿದ್ದಾರೆ. ಅದನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಅಕ್ಷಯ್​ ಕುಮಾರ್​ ಅವರ ಲಕ್ಷ್ಮಿ ಬಾಂಬ್​ ಟ್ರೇಲರ್​ ನೋಡಿದ ಅಭಿಮಾನಿಗಳು  ಭಯ ಪಡುತ್ತಾ ನಗುತ್ತಿದ್ದಾರೆ. ಇದೊಂದು ಕೌಟುಂಬಿಕ ಕಾಮಿಡಿ ಹಾರರ್​ ಸಿನಿಮಾ ಆಗಿದೆ. 

ಕಾಮಿಡಿ ಹಾರರ್​ ಕಥೆ ಹೊಂದಿರುವ ಈ ಸಿನಿಮಾದಲ್ಲಿ ನಾಯಕನಿಗೆ ದೆವ್ವಗಳ ಬಗ್ಗೆ ನಂಬಿಕೆ ಇರುವುದಿಲ್ಲ. ನಂತರ ಕಿಯಾರಾ ಅವರ ಮನೆಗೆ ಬರುವ ಅಕ್ಷಯ್​ ಅಲ್ಲಿ ದೆವ್ವಗಳ ಕಾಟವನ್ನು ಅನುಭವಿಷುತ್ತಾರೆ. ಇದನ್ನು ಟ್ರೇಲರ್​ನಲ್ಲಿ ಸಖತ್ ಕಾಮಿಡಿಯಾಗಿ ತೋರಿಸಲಾಗಿದೆ.




ಲಕ್ಷ್ಮಿ ಬಾಂಬ್​ ದೀಪಾವಳಿ ಸಮಯಕ್ಕೆ ಅಂದರೆ ನವೆಂಬರ್ 9ಕ್ಕೆ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ರಿಲೀಸ್ ಆಗಲಿದೆ. ಇನ್ನು ಇದನ್ನು ಒಟಿಟಿ ಮೂಲಕ ರಿಲೀಸ್​ ಮಾಡಲು 125 ಕೋಟಿಗೆ ಡಿಸ್ನಿ ಹಾಟ್​ಸ್ಟಾರ್​ಗೆ ಮಾರಿದ್ದಾರೆ ಎನ್ನಲಾಗುತ್ತಿದೆ.






ಕೊರೋನಾ ಲಾಕ್​ಡೌನ್​ಗೆ ಮೊದಲು ಈ ಸಿನಿಮಾವನ್ನು ಬೆಳ್ಳಿ ಪರದೆಯ ಮೇಲೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಆರೂವರೆ ತಿಂಗಳ ಕಾಲ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದರಿಂದ ಈ ಸಿನಿಮಾವನ್ನುಡಿಜಿಟಲ್​ ವೇದಿಕೆಯಲ್ಲೇ ರಿಲೀಸ್​ ಮಾಡಲು ನಿರ್ಮಾಕಪರು ನಿರ್ಧರಿಸಿದರು.
Published by:Anitha E
First published: