Laxmii Movie Review: ಕಾತರದಿಂದ ಕಾದಿದ್ದ ಪ್ರೇಕ್ಷಕರ ಕುತೂಹಲಕ್ಕೆ ತಣ್ಣೀರೆರಚಿದ ಅಕ್ಷಯ್​ ಕುಮಾರ್​ ಅಭಿನಯದ ಲಕ್ಷ್ಮಿ ಸಿನಿಮಾ

Akshay Kumar: ಅಕ್ಷಯ್​ ಅವರ ವಿಭಿನ್ನ ಲುಕ್​ ಬಿಟ್ಟಿರೆ, ಲಕ್ಷ್ಮಿ ಸಿನಿಮಾದಲ್ಲಿ ಬೇರೇನೂ ಇಲ್ಲ ಎನ್ನುತ್ತಿದ್ದಾರೆ ಪ್ರೇಕ್ಷಕರು. ಅಷ್ಟೇ ಅಲ್ಲ ಚಿತ್ರದಲ್ಲಿ ನೋಡುವಂತಹ ವಿಷಯವೇ ಇಲ್ಲ. ಲಕ್ಷ್ಮಿ ಬಾಂಬ್​ ಟುಸ್​ ಪಟಾಕಿ ಎಂದೆಲ್ಲ ವ್ಯಂಗ್ಯ ಮಾಡುತ್ತಿದ್ದಾರೆ.

ಲಕ್ಷ್ಮಿ ಸಿನಿಮಾದಲ್ಲಿ ಅಕ್ಷಯ್ ಕುಮಾರ್​

ಲಕ್ಷ್ಮಿ ಸಿನಿಮಾದಲ್ಲಿ ಅಕ್ಷಯ್ ಕುಮಾರ್​

  • Share this:
ತಮಿಳು ನಟ ಹಾಗೂ ನಿರ್ದೇಶಕ ರಾಘವ ಲಾರೆನ್ಸ್​ ನಿರ್ದೇಶನದ ಸಿನಿಮಾ ಲಕ್ಷ್ಮಿ ಕಡೆಗೂ ಒಟಿಟಿ ಮೂಲಕ ರಿಲೀಸ್​ ಆಗಿದೆ. ರಿಲೀಸ್​ಗೂ ಮೊದಲೇ ಅಕ್ಷಯ್​ ಅವರ ಈ ಸಿನಿಮಾ ಸಖತ್​ ಸದ್ದು ಮಾಡಿತ್ತು. ದುಬೈನಲ್ಲಿ ಶೂಟ್​ ಮಾಡಿರುವ ಬುರ್ಜ್​ ಖಲೀಫಾ ಹಾಡಿನ ರಿಲೀಸ್​ ಸಮಯದಲ್ಲೂ ಅಕ್ಷಯ್ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಕೆರಳುವಂತೆ ಹೇಳಿಕೊಂಡಿದ್ದರು. ಸಿನಿಮಾ ಪ್ರಚಾರ ಕಾರ್ಯದಲ್ಲಿ ಯಾವುದೇ ಕೊರತೆಯಾಗಿರಲಿಲ್ಲ. ಇದರಿಂದಾಗಿ ಪ್ರೇಕ್ಷಕರಲ್ಲಿ ಲಕ್ಷ್ಮಿ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಕಿಯಾರಾ ಅಡ್ವಾನಿ, ಅಕ್ಷಯ್​ ಕುಮಾರ್ ಅವರಿಗೆ ನಾಯಕಿಯಾಗಿ​ ಅಭಿನಯಿಸಿದ್ದು, ಈ ಜೋಡಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಪೋಸ್ಟರ್​, ಟೀಸರ್​, ಹಾಡುಗಳ ಮೂಲಕ ಕುತೂಹಲ ಹೆಚ್ಚಿಸಿದ್ದ ಈ ಚಿತ್ರ ರಿಲೀಸ್​ ಆದ ನಂತರ ಸಿನಿಪ್ರಿಯರ ಮನಸ್ಸು ಕದಿಯುವಲ್ಲಿ ಸಂಪೂರ್ಣವಾಗಿ ಸೋತಿದೆ.

2011ರಲ್ಲಿ ತಮಿಳಲ್ಲಿ ರಿಲೀಸ್​ ಆಗಿದ್ದ ಕಾಂಚನಾ ಚಿತ್ರದ ಹಿಂದಿ ರಿಮೇಕ್​ ಇದಾಗಿದೆ. ಈ ಚಿತ್ರವನ್ನು ತಮಿಳಿನಲ್ಲಿ ನೋಡಿದ್ದವರು, ಹಿಂದಿಗಿಂತ ಅದೇ ಪರವಾಗಿಲ್ಲ ಎನ್ನುತ್ತಿದ್ದಾರೆ. ತಮ್ಮ ಲುಕ್​ಗಳಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದ್ದ ಅಕ್ಷಯ್​ ಈಗ, ತಮ್ಮ ಅಭಿನಯದ ಮೂಲಕ ಮೋಡಿ ಮಾಡುವಲ್ಲಿ ಸೋತಿದ್ದಾರೆ.



ಈ ಚಿತ್ರ ನೋಡಿದವರು, ಅಕ್ಷಯ್​ ಅವರ ವಿಭಿನ್ನ ಲುಕ್​ ಬಿಟ್ಟಿರೆ, ಸಿನಿಮಾದಲ್ಲಿ ಬೇರೇನೂ ಇಲ್ಲ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ ಚಿತ್ರದಲ್ಲಿ ನೋಡುವಂತಹ ವಿಷಯವೇ ಇಲ್ಲ. ಲಕ್ಷ್ಮಿ ಬಾಂಬ್​ ಟುಸ್​ ಪಟಾಕಿ ಎಂದೆಲ್ಲ ವ್ಯಂಗ್ಯ ಮಾಡುತ್ತಿದ್ದಾರೆ.



ಇನ್ನೂ ಕೆಲವರು ಈ ಸಿನಿಮಾದಲ್ಲಿ ಅಕ್ಷಯ್​ ಅಗತ್ಯಕ್ಕಿಂತ ಹೆಚ್ಚಾಗಿ ಅಭಿನಯಿಸಿದ್ದಾರೆ. ಸಿನಿಮಾ ನೋಡುವುದು ಹಾಗೂ ಸಮಯ ವ್ಯರ್ಥ ಮಾಡುವುದು ಒಂದೇ ಎನ್ನುತ್ತಿದ್ದಾರೆ.





ಇನ್ನೂ ಕೆಲವರು ಈ ಚಿತ್ರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಯಾಗುವ ಸಾಕಷ್ಟು ವಿಷಯಗಳಿವೆ. ಈ ಸಿನಿಮಾವನ್ನು




ಸಿನಿಮಾ ವ್ಯವಹಾರಗಳ ವಿಶ್ಲೇಷಕ ತರನ್ ಆರ್ದಶ್​ ಸಹ ಲಕ್ಷ್ಮಿ ಸಿನಿಮಾದ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಅವರೂ ಸಹ ಇದು ನಿರಾಶೆ ಮೂಡಿಸುವ ಚಿತ್ರ ಎಂದಿದ್ದಾರೆ.



ಇನ್ನು ಅಕ್ಷಯ್​ ಕುಮಾರ್ ಅಭಿಮಾನಿಗಳು ಮಾತ್ರ ಎಂದಿನಂತೆ ಈ ಸಿನಿಮಾ ತುಂಬಾ ಚೆನ್ನಾಗಿದೆ. ಅಕ್ಕಿ ಅಭಿನಯ ನಿಜಕ್ಕೂ ವಿಭಿನ್ನವಾಗಿದೆ ಎಂದು ಕೊಂಡಾಡುತ್ತಿದ್ದಾರೆ. ಇದರಿಂದಾಗಿ ಈಗ ಟ್ವಿಟರ್​ನಲ್ಲಿ ಅಕ್ಕಿ ಅಭಿಮಾನಿಗಳು ಹಾಗೂ ಇತರೆ ಟ್ವೀಟಿಗರ ನಡುವೆ ಟ್ವೀಟ್​ ವಾರ್​ ಆರಂಭವಾಗಿದೆ.
Published by:Anitha E
First published: