ಡೈನೋಸಾರ್ ಆದ್ರು ವಿರಾಟ್​ ಕೊಹ್ಲಿ; ಅನುಷ್ಕಾಶರ್ಮಾಗೆ ಬಂತು ಲೀಗಲ್ ನೋಟಿಸ್!

ಲಾಕ್​ಡೌನ್​ನಿಂದ ಬೋರ್ ಆಗಿರುವ ಸೆಲೆಬ್ರಿಟಿಗಳು ಮನರಂಜನೆಗಾಗಿ ಏನೇನೋ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಅದರಿಂದ ಕ್ರಿಕೆಟಿ ವಿರಾಟ್ ಕೊಹ್ಲಿ ಕೂಡ ಹೊರತಾಗಿಲ್ಲ.

ವಿರುಷ್ಕಾ

ವಿರುಷ್ಕಾ

  • Share this:
ಬಾಲಿವುಡ್ ಸುಂದರಿ ಅನುಷ್ಕಾ ಶರ್ಮಾ ನಟನೆಯ ಜತೆಗೆ ನಿರ್ಮಾಣಕ್ಕೂ ಇಳಿದಿದ್ದಾರೆ. ಈಗಾಗಲೇ ಎನ್ಎಚ್ 10, ಪರಿ, ಫಿಲ್ಲೌರಿ ಎಂಬಿತ್ಯಾದಿ ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಅದರ ಜತೆಗೆ ಇತ್ತೀಚೆಗಷ್ಟೇ ಡಿಜಿಟಲ್​ ಫ್ಲಾಟ್​ಫಾರ್ಮ್​ಗೂ ಲಗ್ಗೆ ಹಾಕಿರುವ ಅನುಷ್ಕಾ, ಪಾತಾಳ್​ ಲೋಕ್ ಎಂಬ ವೆಬ್​ ಸೀರೀಸ್ ನಿರ್ಮಿಸಿದ್ದಾರೆ. ಈ ವೆಬ್​ ಸೀರಿಸ್​ಗೆ ಸಂಬಂಧಿಸಿ ಅನುಷ್ಕಾಗೆ ನೋಟಿಸ್ ಒಂದು ಬಂದಿದೆ.

ಇತ್ತೀಚೆಗಷ್ಟೇ ರಿಲೀಸ್ ಆದ ಈ ವೆಬ್​ ಸೀರಿಸ್​ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲಂತೂ ನೇಪಾಳಿ ಹಾಗೂ ಗೂರ್ಖ ಸಮುದಾಯವನ್ನು ಕೆಟ್ಟ ರೀತಿಯಲ್ಲಿ ಚಿತ್ರಸಲಾಗಿದ್ದು, ಜಾತಿನಿಂದನೆ ಮಾಡಲಾಗಿದೆ ಎಂದು ಲೀಗಲ್ ನೋಟೀಸ್ ನೀಡಲಾಗಿದೆ. ವೆಬ್​ ಸೀರಿಸ್​ನಲ್ಲಿ ನೇಪಾಳಿ ಪಾತ್ರಧಾರಿಯ ವಿಚಾರಣೆ ಮಾಡುವಾಗ ಮಹಿಳಾ ಪೊಲೀಸ್ ಪೇದೆಯೊಬ್ಬರು ಅಶ್ಲೀಲ ಪದ ಉಪಯೋಗಿಸುವ ಡೈಲಾಗ್ ಇದ್ದು, ಅದನ್ನು ಕತ್ತರಿಸಬೇಕು, ಸಬ್ ಟೈಟಲ್ನಿಂದಲೂ ಆ ಪದನ್ನು ತೆಗೆಯಬೇಕು ಎಂದು ವೀರೇನ್ ಶ್ರೀ ಗುರುಂಗ್ ಎಂಬ ವಕೀಲರು ಅನುಷ್ಕಾ ಶರ್ಮಾಗೆ ಲೀಗಲ್  ನೋಟೀಸ್ ಕಳುಹಿಸಿದ್ದಾರೆ. ಅದರ ಜತೆಗೆ ಇದೇ ಸೀನ್ ವಿರುದ್ಧ ಭಾರತೀಯ ಗೂರ್ಖಾ ಯುವ ಪರಿಸಂಘದವರರು ಆನ್​ಲೈನ್ ಸಹಿ ಹೋರಾಟವನ್ನೂ ಪ್ರಾರಂಭಿಸಿದ್ದಾರೆ.ಡೈನೋಸಾರ್ ಕೊಹ್ಲಿ ಇದ್ದಾರೆ ಎಚ್ಚರಿಕೆ!

ಇನ್ನು ಲಾಕ್​ಡೌನ್​ನಿಂದ ಬೋರ್ ಆಗಿರುವ ಸೆಲೆಬ್ರಿಟಿಗಳು ಮನರಂಜನೆಗಾಗಿ ಏನೇನೋ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಅದರಿಂದ ಕ್ರಿಕೆಟಿ ವಿರಾಟ್ ಕೊಹ್ಲಿ ಕೂಡ ಹೊರತಾಗಿಲ್ಲ. ಡೈನೋಸಾರ್​ನಂತೆ ನಡೆದುಕೊಂಡು ಬಂದು ಅರಚುವ ಪತಿ ವಿರಾಟ್ ಕೊಹ್ಲಿಯ ವಿಡಿಯೋವನ್ನು ಪತ್ನಿ ಅನುಷ್ಕಾ ಶರ್ಮಾ ಶೇರ್ ಮಾಡಿದ್ದು, ಟ್ವಿಟರ್ನಲ್ಲಿ ಸಖತ್ ವೈರಲ್ ಆಗಿದೆ. ಆ ವಿಡಿಯೋಗೆ ಕಮೆಂಟ್ ಮಾಡಿರುವ ನಾಗ್ಪುರ ನಗರ ಪೊಲೀಸರ ಅಧಿಕೃತ ಅಕೌಂಟ್, ಮಹಾರಾಷ್ಟ್ರ ಅರಣ್ಯ ಇಲಾಖೆಯ ರಕ್ಷಣಾ ಸಿಬ್ಬಂದಿಯನ್ನು ಕಳುಹಿಸಬೇಕಾ ಎಂದಿದ್ದಾರೆ. ಸದ್ಯ ವಿರಾಟ್, ಅನುಷ್ಕಾ ದಂಪತಿ ಹಾಗೂ ನಾಗಪುರ ಪೊಲೀಸರ ಹಾಸ್ಯಪ್ರಜ್ಞೆಯನ್ನು ನೋಡಿ ಟ್ವೀಟಿಗರು ಫುಲ್ ದಿಲ್ ಖುಷ್ ಆಗಿದ್ದಾರೆ.

First published: