Salman Khan: ಸಲ್ಮಾನ್ ಖಾನ್​ಗೆ ಗ್ಯಾಂಗ್‍ಸ್ಟರ್ ಲಾರೆನ್ಸ್ ಬಿಷ್ಣೋಯ್‌ನಿಂದ ಬೆದರಿಕೆ! ಕಾರಣ ಏನು ಗೊತ್ತಾ?

ಪಂಜಾಬಿ ಗಾಯಕ ಸಿದ್ದು ಮೂಸೆವಾಲ ಅವರ ಹತ್ಯೆಯ ಪ್ರಕರಣದಲ್ಲಿ , ಪ್ರಮುಖ ಆರೋಪಿ ಎಂದು ಪರಿಗಣಿಸಲ್ಪಟ್ಟಿರುವ ಗ್ಯಾಂಗ್‍ಸ್ಟರ್ ಲಾರೆನ್ಸ್ ಬಿಷ್ಟೋಯ್ ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೂ ಬೆದರಿಕೆ ಹಾಕಿದ್ದಾನೆ. ಸಲ್ಮಾನ್ ಖಾನ್ ಕ್ಷಮೆ ಯಾಚಿಸುವವರೆಗೆ ತನ್ನ ಸಮುದಾಯವು ಅವರನ್ನು ಕ್ಷಮಿಸುವುದಿಲ್ಲ ಎಂದು ಲಾರೆನ್ಸ್ ಹೇಳಿದ್ದಾನೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

  • Share this:
ಪಂಜಾಬಿ ಗಾಯಕ ಸಿದ್ದು ಮೂಸೆವಾಲ ಅವರ ಹತ್ಯೆಯ ಪ್ರಕರಣದಲ್ಲಿ , ಪ್ರಮುಖ ಆರೋಪಿ ಎಂದು ಪರಿಗಣಿಸಲ್ಪಟ್ಟಿರುವ ಗ್ಯಾಂಗ್‍ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರಿಗೂ ಬೆದರಿಕೆ ಹಾಕಿದ್ದಾನೆ. ಸಲ್ಮಾನ್ ಖಾನ್ ಕ್ಷಮೆ ಯಾಚಿಸುವವರೆಗೆ ತನ್ನ ಸಮುದಾಯವು ಅವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾನೆ ಲಾರೆನ್ಸ್. “ಬಿಷ್ಣೋಯ್ ತನ್ನ ಎಲ್ಲಾ ವಿಚಾರಣೆಗಳ ಸಂದರ್ಭದಲ್ಲಿ, ಕೃಷ್ಣ ಮೃಗವನ್ನು (Blackbuck) ಹತ್ಯೆ ಮಾಡಿದ್ದಕ್ಕಾಗಿ , ಸಲ್ಮಾನ್ ಖಾನ್ ಕ್ಷಮೆ ಕೇಳುವವರೆಗೂ ತನ್ನ ಸಮುದಾಯ ಆತನನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ಬಿಷ್ಣೋಯ್ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾನೆ” ಎಂದು ಪೊಲೀಸ್ ಉಪ ಆಯುಕ್ತ (Deputy Commissioner of Police) (ವಿಶೇಷ ಸೆಲ್) ಪ್ರಮೋದ್ ಕುಶ್ವಾ ಹಾ ಹೇಳಿದ್ದಾರೆ.

ಈ ಪ್ರಕರಣದಲ್ಲಿ ನ್ಯಾಯಾಲಯ ಖುಲಾಸೆಗೊಳಿಸುವುದು ಅಥವಾ ಶಿಕ್ಷೆ ನೀಡುವುದನ್ನು, ತಮ್ಮ ಕಡೆಯವರು ಅಂತಿಮ ನಿರ್ಧಾರ ಎಂದು ಪರಿಗಣಿಸುವುದಿಲ್ಲ, ಏಕೆಂದರೆ, ತಮ್ಮ ಸಮುದಾಯದವರ ಪಾಲಿಗೆ ಕೃಷ್ಣಮೃಗ ಪವಿತ್ರ ಪ್ರಾಣಿಯಾಗಿದೆ ಎಂದು ಬಿಷ್ಣೋಯ್ ಹೇಳಿದ್ದನ್ನು , ವಿಶೇಷ ಆಯುಕ್ತ ( ವಿಶೇಷ ಸೆಲ್) ಹೆಚ್‍ಜಿಎಸ್ ಧಲೀವಾಲ್ ಅವರು ಉಲ್ಲೇಖಿಸಿದ್ದಾರೆ.

ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಮ್ ಖಾನ್ ಅವರಿಗೆ ಕೊಲೆ ಬೆದರಿಕೆ ಪತ್ರ
ಕಳೆದ ತಿಂಗಳು, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಮ್ ಖಾನ್ ಅವರಿಗೆ, ಕೊಲೆ ಬೆದರಿಕೆಯನ್ನು ಹೊಂದಿದ್ದ ಅನಾಮಧೇಯ ಪತ್ರವೊಂದು ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ, ಆ ಅನಾಮಧೇಯ ವ್ಯಕ್ತಿಯ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ ಮತ್ತು ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಭದ್ರತಾ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಈ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್‍ನ ಹೆಸರು ಪ್ರಮುಖ ಶಂಕಿತನಾಗಿ ಹೊರಹೊಮ್ಮಿದಾಗ , ತನಗೂ ಆ ಅನಾಮಧೇಯ ಪತ್ರಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದ್ದಾನೆ.

ಇದನ್ನೂ ಓದಿ:   Kiccha Sudeep: ಮುಂದುವರೆದ ಕಿಚ್ಚನ ಸಮಾಜಮುಖಿ ಕಾರ್ಯ, ಈ ಬಾರಿ ಮಾಡಿರೋ ಸಹಾಯ ನೋಡಿದ್ರೆ ನಿಮಗೂ ಸ್ಫೂರ್ತಿ ಬರುತ್ತೆ!

ಕೃಷ್ಣ ಮೃಗದ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ
ಲಾರೆನ್ಸ್ ಬಿಷ್ಣೋಯ್‍ಗೆ , ನಟ ಸಲ್ಮಾನ್ ಖಾನ್ ಮೇಲೆ ಇರುವ ಕೋಪ ಇಂದು ನಿನ್ನೆಯದಲ್ಲ, ಬಹಳ ಹಿಂದಿನದ್ದು. 2018ರಲ್ಲಿ ಕೃಷ್ಣ ಮೃಗದ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಒಡ್ಡಿದ ಕಾರಣಕ್ಕಾಗಿ ಲಾರೆನ್ಸ್ ಬಿಷ್ಣೋಯ್‍ನ ಸಹವರ್ತಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿತ್ತು. ಬಿಷ್ಣೋಯ್‍ ಸಮುದಾಯದವರಲ್ಲಿ , ಕೃಷ್ಣ ಮೃಗಗಳು ತಮ್ಮ ಆಧ್ಯಾತ್ಮಿಕ ನಾಯಕ ಭಗವಾನ್ ಜಂಬೇಶ್ವರನ ಪುನರ್ಜನ್ಮ ಎಂಬ ನಂಬಿಕೆ ಇದೆ. ಅವರು ಕೃಷ್ಣ ಮೃಗವನ್ನು ಜಾಂಬಾಜಿ ಎಂದು ಕೂಡ ಕರೆಯುತ್ತಾರೆ.

ಸಲ್ಮಾನ್ ಖಾನ್ ಅವರ ಮುಂಬರುವ ಸಿನೆಮಾಗಳು
ಪ್ರಸ್ತುತ ನಟ ಸಲ್ಮಾನ್ ಖಾನ್ ಅವರು ತಮ್ಮ ಮುಂದಿನ ಚಿತ್ರ ಟೈಗರ್ 3 ಯ ಚಿತ್ರೀಕರಣದಲ್ಲಿ ವ್ಯಸ್ಥರಾಗಿದ್ದಾರೆ. ಕತ್ರೀನಾ ಕೈಫ್ ಈ ಚಿತ್ರದ ನಾಯಕಿ. ಮುಂದಿನ ವರ್ಷ ಏಪ್ರಿಲ್‍ನಲ್ಲಿ ಈ ಸಿನಿಮಾ ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ. ಸಲ್ಮಾನ್ ಖಾನ್ ಅಭಿನಯದ ಕಭೀ ಈದ್ ಕಭಿ ದಿವಾಲಿ ಸಿನಿಮಾದ ಚಿತ್ರೀಕರಣ ಕೂಡ ನಡೆಯುತ್ತಿದೆ. ಈ ಚಿತ್ರದಲ್ಲಿ ಅವರ ಜೊತೆ ಪೂಜಾ ಹೆಗ್ಡೆ ಮತ್ತು ಶೆಹನಾಜ್ ಗಿಲ್ ನಟಿಸಿದ್ದಾರೆ. ಈ ವರ್ಷಾಂತ್ಯದ ವೇಳೆಗೆ ಸಲ್ಮಾನ್ ಖಾನ್ ಅವರ ನೋ ಎಂಟ್ರಿ  2 ಸಿನಿಮಾ ಕೂಡ ತೆರೆ ಕಾಣುವ ನಿರೀಕ್ಷೆ ಇದೆ.

ಇದನ್ನೂ ಓದಿ: Controversy: ವಿವಾದದಲ್ಲಿ ಸಿಲುಕಿದ ರಾಜಮೌಳಿ ತಂದೆ! ನೆಹರು ಬಗ್ಗೆ ಹೀಗೆ ಹೇಳಿದ್ದರಂತೆ ವಿಜಯೇಂದ್ರ ಪ್ರಸಾದ್​

ತಾನು ನಾಯಕರಾಗಿರುವ ಚಿತ್ರಗಳು ಮಾತ್ರವಲ್ಲದೆ, ಇತರ ನಾಯಕರ ಚಿತ್ರಗಳಲ್ಲೂ ಕಾಣಿಸಿಕೊಳ್ಳಲ್ಲಿದ್ದಾರೆ ಸಲ್ಮಾನ್. ಅವರು ದಕ್ಷಿಣ ಭಾರತದ ಖ್ಯಾತ ನಾಯಕ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಗಾಢ್‍ಫಾದರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಆದಿತ್ಯ ಚೋಪ್ರಾ ಅವರ , ದೊಡ್ಡ ಮಟ್ಟದ ಸಿನಿಮಾವೊಂದರಲ್ಲಿ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರು ಜೊತೆಯಾಗಿ ನಟಿಸಲಿದ್ದಾರೆ ಎಂಬುವುದು ಇತ್ತೀಚೆಗೆ ವರದಿಯಾಗಿದೆ. ಆದರೂ ಈ ಕುರಿತು ಮೂವರಿಂದಲೂ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿಲ್ಲ.
Published by:Ashwini Prabhu
First published: