Uday Kiran: ದುರಂತ ನಾಯಕ ಉದಯ್​ ಕಿರಣ್ ಮೊದಲ ಸಿನಿಮಾಗೆ ಪಡೆದಿದ್ದ ಸಂಭಾವನೆ ಇಷ್ಟಂತೆ..!

Uday Kiran: ಟಾಲಿವುಡ್​ನಲ್ಲಿ ಯಾವುದೇ ಬೆಂಬಲ ಹಾಗೂ ಸಹಾಯವಿಲ್ಲದೆ ತಮ್ಮ ಶ್ರಮದಿಂದ ಸ್ಟಾರ್​ ಪಟ್ಟಕ್ಕೇರಿದ ನಟ ಉದಯ್​ ಕಿರಣ್​. ರಾಮೋಜಿ ರಾವ್​ ನಿರ್ಮಾಣದ ತೇಜ ನಿರ್ದೇಶನದ ಸಿನಿಮಾ ಚಿತ್ರಂ ದ ಪಿಕ್ಚರ್​ ಮೂಲಕ ನಾಯಕನಾಗಿ ತೆಲುಗು ಪ್ರೇಕ್ಷಕರಿಗೆ ಪರಿಚಿತರಾದವರು ಉದಯ್​ ಕಿರಣ್​.

ಉದಯ್ ಕಿರಣ್​

ಉದಯ್ ಕಿರಣ್​

  • Share this:
ಟಾಲಿವುಡ್​ನ ದುರಂತ ನಾಯಕ ಎಂದೇ ಕರೆಯಲ್ಪಡುವ ನಟ ಉದಯ್ ಕಿರಣ್​. ಒಂದು ಕಾಲದಲ್ಲಿ ಸೂಪರ್ ಸ್ಟಾರ್ ಆಗಿದ್ದ ಉದಯ್​ ಕಡೆಗೆ ಸಿನಿಮಾ ಅವಕಾಶಗಳು ಸಿಗದೆ ನಾಲ್ಕು ಗೋಡೆಗಳ ನಡುವೆ ಇರುವಂತಾಯಿತು. ಕಡೆಗೊಂದು ದಿನ ಜೀವನವೇ ಸಾಕಾಗಿ ಆತ್ಮಹತ್ಯೆ ಮಾಡಿಕೊಂಡರು ಉದಯ್​ ಕಿರಣ್​.

ಟಾಲಿವುಡ್​ನಲ್ಲಿ ಯಾವುದೇ ಬೆಂಬಲ ಹಾಗೂ ಸಹಾಯವಿಲ್ಲದೆ ತಮ್ಮ ಶ್ರಮದಿಂದ ಸ್ಟಾರ್​ ಪಟ್ಟಕ್ಕೇರಿದ ನಟ ಉದಯ್​ ಕಿರಣ್​. ರಾಮೋಜಿ ರಾವ್​ ನಿರ್ಮಾಣದ ತೇಜ ನಿರ್ದೇಶನದ ಸಿನಿಮಾ 'ಚಿತ್ರಂ ದ ಪಿಕ್ಚರ್​' ಮೂಲಕ ನಾಯಕನಾಗಿ ತೆಲುಗು ಪ್ರೇಕ್ಷಕರಿಗೆ ಪರಿಚಿತರಾದವರು ಉದಯ್​ ಕಿರಣ್​.

Late Uday Kiran was paid eleven thousand for his first movie Chitram 
ಉದಯ್ ಕಿರಣ್​


ಆ ಸಿನಿಮಾದಲ್ಲಿನ ಪಾತ್ರಕ್ಕಾಗಿ ಉದಯ್​ 15 ಕೆ.ಜಿ. ತೂಕ ಇಳಿಸಿಕೊಳ್ಳಬೇಕಾಗಿತ್ತಂತೆ. ಆಡಿಷನ್​ಗೆ ಬಂದಿದ್ದ ಉದಯ್​ಗೆ ನಿರ್ದೇಶಕ ತೇಜ ಈ ಟಾಸ್ಕ್​ ಕೊಟ್ಟಿದ್ದರಂತೆ. ಆ ಸಿನಿಮಾದಲ್ಲಿ ಅವರು ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸಬೇಕಿತ್ತು. ಅದಕ್ಕೆ ತಕ್ಕಂತೆ ಕಾಣಿಸುವ ಸಲುವಾಗಿ ಅವರಿಗೆ ತೂಕ ಕಡಿಮೆ ಮಾಡಿಕೊಳ್ಳಲು ಹೇಳಲಾಗಿತ್ತು.

ಇದನ್ನೂ ಓದಿ: ಸಲೂನ್​ಗೆ ಹೋಗಿ ಟೀಕೆಗೊಳಗಾದ ನಟಿ ಪ್ರಣೀತಾ ಸುಭಾಷ್​

ಒಂದು ವೇಳೆ ತೂಕ ಇಳಿಸಿಕೊಳ್ಳಲು ಆಗದಿದ್ದರೆ ಸಿನಿಮಾದಲ್ಲಿ ಅವಕಾಶ ಇಲ್ಲ ಎಂದಿದ್ದರಂತೆ. ಹಗಲಿರುಳು ವ್ಯಾಯಾಮ ಮಾಡುತ್ತಾ ಬೆವರಿಳಿಸಿ ನಿರ್ದೇಶಕರು ಹೇಳಿದಂತೆ ತಯಾರಾಗಿ ಈ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರಂತೆ ಉದಯ್​. ಈ ಬಗ್ಗೆ ನಿರ್ದೇಶಕ ತೇಜ ಬಹಳ ಹಿಂದೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.

ಇಷ್ಟು ಕಷ್ಟಪಟ್ಟು ಅವಕಾಶ ಗಿಟ್ಟಿಸಿಕೊಂಡ ಉದಯ್​ ಅವರು ನಟಿಸಿದ್ದ 'ಚಿತ್ರಂ' ಸಿನಿಮಾ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಿತ್ತು. 2000ದಲ್ಲಿ ತೆರೆ ಕಂಡಿದ್ದ ಈ ಸಿನಿಮಾದ ಬಜೆಟ್​ ಕೇವಲ 30 ಲಕ್ಷವಾಗಿತ್ತಂತೆ. 30 ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿತ್ತಂತೆ.

ಈ ಚಿತ್ರತಂಡದಲ್ಲಿದ್ದವರಲ್ಲಿ ಬಹುತೇಕ ಮಂದಿ ಹೊರಬರೇ ಆಗಿದ್ದರು. ಆಗ ನಿರ್ದೇಶಕ ತೇಜ, ನಾಯಕ ಉದಯ್​ ಕಿರಣ್​ ಹಾಗೂ ನಾಯಕಿ ರೀಮಾ ಸೇನ್​ ಅವರಿಗೆ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಕ್ಕೆ ರಾಮೋಜಿ ರಾವ್​ ಅವರು 11 ಸಾವಿರ ರೂಪಾಯಿ ಹಣ ನೀಡಿದ್ದರಂತೆ.

ಇದಾದ ನಂತರ 'ಶ್ರೀರಾಮ್'​, 'ನುವ್ವುನೇನು', 'ಮನಸಂತಾ ನುವ್ವೆ', 'ನೀಸ್ನೇಹಂ', 'ಕಲಸುಕೋವಾಲನಿ' ಹೀಗೆ ಹಿಟ್​ ಸಿನಿಮಾಗಳನ್ನು ಕೊಟ್ಟವರು ಉದಯ್​. 11 ಸಾವಿರದಿಂದ ಆರಂಭವಾಗಿ ಕೋಟಿ ಕೋಟಿ ಗಳಿಸುವಷ್ಟು ಬೆಳೆದರು.

ಇದನ್ನೂ ಓದಿ: 96 ಕೆ.ಜಿ.ಯಿಂದ ಬಳುಕುವ ಬಳ್ಳಿಯಂತಾದ ಸಾರಾ ಅಲಿ ಖಾನ್​ರ ಫಿಟ್ನೆಸ್ ಜರ್ನಿ ವಿಡಿಯೋ ಇಲ್ಲಿದೆ..!

ಆಗಲೇ ಚಿರಂಜೀವಿ ಅವರ ದೊಡ್ಡ ಮಗಳೊಂದಿಗೆ ಉದಯ್​ ಅವರ ಜೊತೆ ಮದುವೆ ಮಾತುಕತೆ ಆರಂಭವಾಗಿತ್ತು. ಆದರೆ ಕಾರಣಾಂತರಗಳಿಂದ ನಿಶ್ಚಿಯವಾಗಿದ್ದ ಮದುವೆ ನಡೆಯಲಿಲ್ಲ. ಆಗಿನಿಂದ ಉದಯ್​ಗೆ ಅವಕಾಶಗಳ ಕೊರತೆ ಎದುರಾಗಿತ್ತು.

Late Uday Kiran was paid eleven thousand for his first movie Chitram 
ಉದಯ್​ ಕುಮಾರ್​ ಹಾಗೂ ನಿರ್ದೇಶಕ ತೇಜ


ಇಲ್ಲಿಂದಲೇ ಅವರ ಕೆಟ್ಟ ಸಮಯ ಆರಂಭವಾಗಿ ಅವರು ಮತ್ತೆ ಮೊದಲಿನ ಸ್ಥಿತಿಗೆ ಬರಲೇ ಇಲ್ಲ. 2014ರಲ್ಲಿ ಸಿನಿಮಾ ಅವಕಾಶಗಳು ಇಲ್ಲದ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡರು. ಅವರ ಸಾವಿಗೆ ವೈಯಕ್ತಿಕ ಸಮಸ್ಯೆಗಳೂ ಒಂದು ಕಾರಣ ಎನ್ನಲಾಗುತ್ತದೆ.

Suhana Khan: ಅಮ್ಮನೊಂದಿಗೆ ಬಾಲ್ಕನಿಯಲ್ಲಿ ಕುಳಿತು ಮಳೆಯನ್ನು ಎಂಜಾಯ್​ ಮಾಡಿದ ಸುಹಾನಾ ಖಾನ್​..!

First published: