Chiranjeevi Sarja: ಚಿರು ಹುಟ್ಟುಹಬ್ಬಕ್ಕೆ ಕ್ಷತ್ರಿಯ ಚಿತ್ರದ ಟೀಸರ್‌; ಸರ್ಜಾ ಕುಟುಂಬಕ್ಕೆ ಗಿಫ್ಟ್​ ನೀಡೋಕೆ ರೆಡಿ ಆದ ಚಿತ್ರತಂಡ

ಮಾರ್ಚ್‌ 16ರಿಂದ ಥಿಯೇಟರ್‌ಗಳು ಬಂದ್‌ ಆದ ಕಾರಣ, ಮಾರ್ಚ್‌ 12 ರಂದು ರಿಲೀಸ್‌ ಆದ ಶಿವಾರ್ಜುನ ಸಿನಿಮಾಗೆ ದೊಡ್ಡ ಹೊಡೆತ ಬಿದ್ದಿತ್ತು. ಈಗ ಬರೋಬ್ಬರಿ 7  ತಿಂಗಳ ನಂತರ ಶಿವಾರ್ಜುನ ಮತ್ತೆ ರೀ-ರಿಲೀಸ್‌ ಆಗುತ್ತಿದೆ.

news18-kannada
Updated:October 13, 2020, 10:58 AM IST
Chiranjeevi Sarja: ಚಿರು ಹುಟ್ಟುಹಬ್ಬಕ್ಕೆ ಕ್ಷತ್ರಿಯ ಚಿತ್ರದ ಟೀಸರ್‌; ಸರ್ಜಾ ಕುಟುಂಬಕ್ಕೆ ಗಿಫ್ಟ್​ ನೀಡೋಕೆ ರೆಡಿ ಆದ ಚಿತ್ರತಂಡ
Chiranjeevi Sarja
  • Share this:
ಸ್ಯಾಂಡಲ್‌ವುಡ್‌ ಯುವ ಸಾಮ್ರಾಟ್‌ ಚಿರು ಸರ್ಜಾ ಇವತ್ತು ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಒಬ್ಬ ಉತ್ತಮ ನಟನಾಗಿ, ಅತ್ಯುತ್ತಮ ವ್ಯಕ್ತಿತ್ವಗಳಿಂದ ಎಲ್ಲ ಅಭಿಮಾನಿಗಳ ಮನದಲ್ಲೂ ಚಿರಂಜೀವಿಯಾಗಿದ್ದಾರೆ. ಚಿರು ಸರ್ಜಾ ಅಕಾಲಿಕ ನಿಧನದಿಂದಾಗಗಿ ಅವರು ನಟಿಸಿದ್ದ, ನಟಿಸುತ್ತಿದ್ದ ಹಾಗೂ ನಟಿಸಬೇಕಿದ್ದ ಹಲವು ಸಿನಿಮಾಗಳು ಸಂಕಷ್ಟಕ್ಕೆ ಸಿಲುಕಿದ್ದವು. ಒಂದೆಡೆ ನಾಯಕನ ಅಗಲಿಕೆ ಮತ್ತೊಂದೆಡೆ ಕೊರೊನಾ ಲಾಕ್‌ಡೌನ್‌ಗಳಿಂದ ಮುಂದೇನು ಎಂಬ ಗೊಂದಲದಲ್ಲಿದ್ದವು. ಆದರೆ ಈಗ ಅಕ್ಟೋಬರ್‌ ೧೫ರಿಂದ ಸಿನಿಮಾ ರಿಲೀಸ್‌ಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಒಂದೊಂದಾಗಿ ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿವೆ.

ಹೌದು, ಮಾರ್ಚ್‌ 16ರಿಂದ ಥಿಯೇಟರ್‌ಗಳು ಬಂದ್‌ ಆದ ಕಾರಣ, ಮಾರ್ಚ್‌ 12 ರಂದು ರಿಲೀಸ್‌ ಆದ ಶಿವಾರ್ಜುನ ಸಿನಿಮಾಗೆ ದೊಡ್ಡ ಹೊಡೆತ ಬಿದ್ದಿತ್ತು. ಈಗ ಬರೋಬ್ಬರಿ 7  ತಿಂಗಳ ನಂತರ ಶಿವಾರ್ಜುನ ಮತ್ತೆ ರೀ-ರಿಲೀಸ್‌ ಆಗುತ್ತಿದೆ. ಅದರ ಬೆನ್ನಲ್ಲೇ ಚಿರು ಸರ್ಜಾ ನಾಯಕನಾಗಿದ್ದ ಮತ್ತೊಂದು ಸಿನಿಮಾ ಕ್ಷತ್ರಿಯ ಕೂಡ ತೆರೆಗೆ ಅಪ್ಪಳಿಸಲು ರೆಡಿಯಾಗುತ್ತಿದೆ.

ಅನಿಲ್‌ ಮಂಡ್ಯ ನಿರ್ದೇಶನದ, ಶ್ರೀ ಮೂಕಾಂಬಿಕಾ ಕಂಬೈನ್ಸ್‌ ಬ್ಯಾನರ್‌ನಲ್ಲಿ ಎ. ವೆಂಕಟೇಶ್‌ ನಿರ್ಮಿಸಿರುವ ಸಿನಿಮಾ ಕ್ಷತ್ರಿಯ. ಈಗಾಗಲೇ ಚಿತ್ರದ ಶೇಕಡಾ ೯೦ರಷ್ಟು ಶೂಟಿಂಗ್‌ ಕಂಪ್ಲೀಟ್‌ ಆಗಿದ್ದು, ಕೊರೊನಾ ಲಾಕ್‌ಡೌನ್‌ ಇಲ್ಲದಿದ್ದರೆ ಈಗಾಗಲೇ ರಿಲೀಸ್‌ ಆಗಬೇಕಿತ್ತು. ಆದರೆ ಲಾಕ್‌ಡೌನ್‌ನಿಂದ ತಡವಾಗಿರುವ ಕಾರಣ, ಇದೇ ತಿಂಗಳಂತ್ಯಕ್ಕೆ ಕೊನೆಯ ಶೆಡ್ಯೂಲ್‌ ಶೂಟಿಂಗ್‌ ಪ್ಲ್ಯಾನ್‌ ಮಾಡಿಕೊಂಡಿದೆ ಕ್ಷತ್ರಿಯ ಟೀಂ. ಆದರೆ ಅದಕ್ಕೂ ಮೊದಲು ಅಕ್ಟೋಬರ್‌ ೧೭ರ ಚಿರು ಸರ್ಜಾ ಅವರ ಹುಟ್ಟುಹಬ್ಬದಂದು ಚಿತ್ರತಂಡ ಟೀಸರ್‌ ರಿಲೀಸ್‌ಗೆ ರೆಡಿಯಾಗುತ್ತಿದೆ.ಸಮಾಜದ ಒಳಿತಿಗಾಗಿ ಹೋರಾಡುವ ಒಬ್ಬ ಆಧುನಿಕ ಕ್ಷತ್ರಿಯನ ಪಾತ್ರದಲ್ಲಿ ಚಿರು ಸರ್ಜಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಫಸ್ಟ್‌ ಹಾಫ್‌ನಲ್ಲಿ ಸೆಂಟಿಮೆಂಟ್‌ ಕಥಾವಸ್ತುವಿದ್ದು, ಸೆಕೆಂಡ್‌ ಹಾಫ್‌ನಲ್ಲಿ ಪಕ್ಕಾ ಕಮರ್ಷಿಯಲ್‌ಆಗಿ ಮಾಸ್‌ ಎಲಿಮೆಂಟ್‌ಗಳಿಂದ ಕೂಡಿರಲಿದೆ ಎಂಬುದು ಚಿತ್ರತಂಡದವರ ಮಾತು. ಹೆಸರಾಂತ ನಿರ್ದೇಶಕ ಪಿ. ವಾಸು, ದಿನಕರ್‌ ತೂಗುದೀಪ, ತರುಣ್‌ ಸುಧೀರ್‌, ಮುಂಗಾರು ಮಳೆ ಕೃಷ್ಣ ಮತ್ತು ಸಂತೋಷ್‌ ಆನಂದರಾಮ್‌ ಅವರಿಗೆ ಸಹ ನಿರ್ದೇಶಕರಾಗಿದ್ದ ಅನಿಲ್‌ ಮಂಡ್ಯ ಕಳೆದ ೨೦ ವರ್ಷಗಳಿಂದ ಹಲವಾರು ಸಿನಿಮಾಗಳಲ್ಲಿ, ನಾನಾ ವಿಭಾಗಗಳಲ್ಲಿ, ಹತ್ತಾರು ನಾಯಕ ನಟರ ಜತೆ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಅವರಿಗಿದು ಚೊಚ್ಚಲ ನಿರ್ದೇಶನದ ಸಿನಿಮಾ.ಚಿರಂಜೀವಿ ಸರ್ಜಾ ಅವರಿಗೆ ಸಂಜನಾ ಆನಂದ್‌ ನಾಯಕಿಯಾಗಿದ್ದು, ಸುಧಾರಾಣಿ, ದೇವರಾಜ್‌, ಅಬ್ರಾರ್‌, ಶ್ರೀನಾಥ್‌, ಸಾಧು ಕೋಕಿಲಾ, ಅಚ್ಯುತ್‌ ಕುಮಾರ್‌, ಭಜರಂಗಿ ಚೇತನ್‌, ಹೊನ್ನವಳ್ಳಿ ಕೃಷ್ಣ ಪ್ರಮುಖ ತಾರಾಗಣದಲ್ಲಿದ್ದಾರೆ. ಭರ್ಜರಿ ಚೇತನ್‌ ಕುಮಾರ್‌ ಡೈಲಾಗ್ಸ್‌, ರವಿ.ವಿ ಛಾಯಾಗ್ರಹಣ, ಕೆ,ಎಂ. ಪ್ರಕಾಶ್‌ ಸಂಕಲನ, ಕೆ. ರವಿವರ್ಮಾ ಸಾಹಸ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಧರ್ಮವಿಶ್‌ ಸಂಗೀತ ನೀಡಿದ್ದಾರೆ.
Published by: Rajesh Duggumane
First published: October 13, 2020, 10:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading