• Home
  • »
  • News
  • »
  • entertainment
  • »
  • Puneeth Rajkumar: ಸೂರ್ಯನೊಬ್ಬ-ಚಂದ್ರನೊಬ್ಬ ರಾಜನೂ ಒಬ್ಬ! ಹೊಸಪೇಟೆಯಲ್ಲಿ ಪುನೀತ್ ಪ್ರತಿಮೆ ಅನಾವರಣ

Puneeth Rajkumar: ಸೂರ್ಯನೊಬ್ಬ-ಚಂದ್ರನೊಬ್ಬ ರಾಜನೂ ಒಬ್ಬ! ಹೊಸಪೇಟೆಯಲ್ಲಿ ಪುನೀತ್ ಪ್ರತಿಮೆ ಅನಾವರಣ

ಪುನೀತ್ ಪ್ರತಿಮೆ ಅನಾವರಣ

ಪುನೀತ್ ಪ್ರತಿಮೆ ಅನಾವರಣ

Power Star Puneeth Rajkumar: ಅಪ್ಪುಗೆ ಅಭಿಮಾನಿಗಳು ಎಂದರೆ ಪ್ರಾಣ, ಅದರಲ್ಲೂ ಅವರು ಹೊಸಪೇಟೆಯ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿದ್ದರಂತೆ. ಇಲ್ಲಿ ಅಭಿಮಾನಿಗಳು ಅವರ ಪ್ರತಿಮೆ ನಿರ್ಮಿಸಿದ್ದಾರೆ. ಅದರಲ್ಲೂ ಬರೋಬ್ಬರಿ 7.4 ಅಡಿ ಎತ್ತರದ ಪ್ರತಿಮೆ ಇದಾಗಿದೆ.

  • Share this:

ಸೂರ್ಯನೊಬ್ಬ, ಚಂದ್ರನೊಬ್ಬ ಕರುನಾಡಿಗೆ (Karnataka) ರಾಜನೂ ಒಬ್ಬ ಎಂದರೆ ತಪ್ಪಲ್ಲ. ಪುನೀತ್ ರಾಜ್​ಕುಮಾರ್, (Puneeth Rajkumar)  ಕರುನಾಡ ಆರಾಧ್ಯ ದೈವ. ಅವರಿಲ್ಲದೇ ಸುಮಾರು 7 ತಿಂಗಳು ಕಳೆದಿದೆ ಎಂಬುದನ್ನ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಲ್ಲ ಎಂದು ತಿಳಿದ ಕ್ಷಣದಿಂದ ಅಭಿಮಾನಿಗಳ (Fans)  ನೋವು ಹೇಳತೀರದು. ಅಂದಿನಿಂದ ಇಂದಿನವರೆಗೆ ಅವರನ್ನು ಆರಾಧಿಸದ ದಿನವಿಲ್ಲ. ಕರ್ನಾಟಕದ ಪ್ರತಿ ಮೂಲೆಯಲ್ಲಿ ಅವರನ್ನು ಪ್ರತಿದಿನ ನೆನೆಯಲಾಗುತ್ತದೆ. ಅವರೊಬ್ಬ ಅಮರ ಚೇತನ ಎನ್ನಬಹುದು. ಬದುಕಿದ್ದಾಗ ಅಪಾರ ಜನರಿಗೆ ಸಹಾಯ ಮಾಡಿದ ಪುನೀತ್ ಹೆಸರಲ್ಲಿ ಇಂದಿಗೂ ಅಭಿಮಾನಿಗಳು ಒಂದಿಲ್ಲೊಂದು ಸಾಮಾಜಿಕ ಕಾರ್ಯವನ್ನು (Social Work)  ಮಾಡುತ್ತಾರೆ. ಅವರ ಹೆಸರನ್ನು ರಸ್ತೆಗಳಿಗೆ (Road) ಇಡಲಾಗುತ್ತದೆ. ಅವರ ಸಮಾಧಿ ಬಳಿ ದಿನಕ್ಕೆ ಸಾವಿರಕ್ಕೂ ಹೆಚ್ಚು ಜನ ಬಂದು ಹೋಗುತ್ತಾರೆ. ಇದೀಗ ರಾಜ್ಯದಲ್ಲಿ ಪ್ರತಿಮೆ (Statue)  ನಿರ್ಮಾಣವಾಗಿದ್ದು, ಅಭಿಮಾನಿಗಳು ಹಬ್ಬವನ್ನೇ ಆಚರಿಸಿದ್ದಾರೆ.


ಹೌದು, ವಿಜಯ ನಗರದ ಹೊಸಪೇಟೆಯಲ್ಲಿ ಪುನೀತ್ ರಾಜ್​ಕುಮಾರ್ ಅವರ ಪ್ರತಿಮೆ ಅನಾವರಣವಾಗಿದ್ದು,  ನೆಚ್ಚಿನ ನಾಯಕನ ಮೂರ್ತಿ ನೋಡಿ ಅಭಿಮಾನಿಗಳ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಈ ಮೊದಲೇ ಹೊಸಪೇಟೆಯಲ್ಲಿ ಅಪ್ಪು ಪ್ರತಿಮೆ ನಿರ್ಮಾಣ ಮಾಡಲು ಸಜ್ಜಾಗಿತ್ತು, ಇದೀಗ ಅದು ಅನಾವರಣವಾಗಿದ್ದು, ಕಾರ್ಯಕ್ರಮದಲ್ಲಿ ಅಪ್ಪು ಸಹೋದರ ರಾಘವೇಂದ್ರ ರಾಜ್​ಕುಮಾರ ಹಾಗೂ ಅವರ ಪತ್ನಿ ಸೇರಿದಂತೆ ನಟ ಅಜಯ್ ರಾವ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್​ ಸಹ ಭಾಗವಹಿಸಿದ್ದರು.



ಹೊಸಪೇಟೆಯಲ್ಲಿ 7 ಅಡಿ ಎತ್ತರದ ಪ್ರತಿಮೆ ಅನಾವರಣ


ಅಪ್ಪುಗೆ ಅಭಿಮಾನಿಗಳು ಎಂದರೆ ಪ್ರಾಣ, ಅದರಲ್ಲೂ ಅವರು ಹೊಸಪೇಟೆಯ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿದ್ದರಂತೆ. ಇಲ್ಲಿ ಅಭಿಮಾನಿಗಳು ಅವರ ಪ್ರತಿಮೆ ನಿರ್ಮಿಸಿದ್ದಾರೆ. ಅದರಲ್ಲೂ ಬರೋಬ್ಬರಿ 7.4 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ಕರುನಾಡಿಗೆ ಹೆಮ್ಮೆಯ ವಿಚಾರ ಎನ್ನಬಹುದು. ಈ ಅಭೂತಪೂರ್ವ ಕ್ಷಣಕ್ಕೆ ಸಾವಿರಾರು ಅಪ್ಪು ಅಭಿಮಾನಿಗಳು ಸಾಕ್ಷಿಯಾಗಿದ್ದು, ಹಬ್ಬವಿತ್ತು ಎನ್ನುವ ರೀತಿ ಆಚರಣೆ ಮಾಡಲಾಗಿದೆ.


ಇದನ್ನೂ ಓದಿ: ಮತ್ತೆಂದೂ 'ಶಿವ'ನ ಅವತಾರ ತಾಳಲ್ವಂತೆ ರಾಜ್ ಬಿ ಶೆಟ್ಟಿ, ಈ ಸಲ ಇನ್ನೊಂದು ಡಿಫರೆಂಟ್ ಅವತಾರಕ್ಕೆ ಸಜ್ಜು


ಇನ್ನು ಪುನೀತ್ ರಾಜಕುಮಾರ್ ಅಕಾಲ ಮರಣ ಹೊಂದಿದ ಬಳಿಕ ಪ್ರತಿನಿತ್ಯ ರಾಜ್ಯದ ಒಂದಲ್ಲಾ ಒಂದು ಹಳ್ಳಿ ಗ್ರಾಮಗಳಲ್ಲಿ ಅವರ ಹೆಸರಲ್ಲಿ ಪುಣ್ಯ ಕಾರ್ಯಗಳು ನಡೆಯುತ್ತದೆ. ಅದೆಷ್ಟೋ ಜನರು ಪ್ರತಿನಿತ್ಯ ಪುನೀತ್ ಹೆಸರು ಹೇಳಿಕೊಂಡು ಹಸಿದವರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಅಲ್ಲದೇ ಹಲವಾರು ರಸ್ತೆಗಳಿಗೆ ಪುನೀತ್ ಹೆಸರನ್ನು ಸಹ ಇಡಲಾಗಿದೆ.


ಎಲ್ಲೆಲ್ಲೂ ಅಪ್ಪು ನೆನಪು


ಇನ್ನು ಬೆಂಗಳೂರಿನಲ್ಲಿ ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್​ ಹೆಸರು ಇಡುವಂತೆ ಅಭಿಮಾನಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಬಿಬಿಎಂಪಿ ಸ್ಪಂದಿಸಿ, ರಸ್ತೆಗೆ ಪುನೀತ್ ರಾಜ್​ಕುಮಾರ್ ರಸ್ತೆ ಎಂದು ಹೆಸರಿಟ್ಟಿದೆ.


ಇದನ್ನೂ ಓದಿ: ಯಶೋಮಾರ್ಗ ಮೂಲಕ ಕಲ್ಯಾಣಿ ಜೀರ್ಣೊದ್ಧಾರ, ಯಶ್​ ಕಾರ್ಯಕ್ಕೆ ಶಿವಮೊಗ್ಗ ಮಂದಿ ಖುಷ್


ಹಾಗೆಯೇ ಅಭಿಮಾನಿಯೊಬ್ಬರು ಪುನೀತ್ ಅವರ ಪ್ರೀತಿಗಾಗಿ ಮನೆಯಂಗಳದಲ್ಲಿ ಸಾವಿರಾರು ರೂಪಾಯಿ ಹಣ ಖರ್ಚುಮಾಡಿ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಿದ್ದಾರೆ. ಕೂಡ್ಲಿಗಿ ತಾಲೂಕಿನ ಸಿದ್ದಾಪುರದ ವಡ್ಡರಹಟ್ಟಿಯಲ್ಲಿ ಆರ್.ಟಿ. ನಾಗರಾಜ ಮತ್ತು ಅವರ ಪತ್ನಿ ಮಲ್ಲಮ್ಮ ಅವರ ಅಭಿಮಾನಕ್ಕೆ ಪುನೀತ್ ರಾಜಕುಮಾರ್ ಅವರು ಪುತ್ಥಳಿ ಸಾಕ್ಷಿಯಾಗಿ ಅನೇಕರ ಗಮನ ಸೆಳೆದಿದೆ.

Published by:Sandhya M
First published: