Puneeth Rajkumar: 4 ವರ್ಷದ ಹಿಂದಿನ ಪುನೀತ್ ಟ್ವೀಟ್​ ವೈರಲ್, ಇದು ನಿಜವಾಗಬಾರದಿತ್ತೇ ಎಂದು ಅಭಿಮಾನಿಗಳ ಕಣ್ಣೀರು

Appu Tweet viral: ಈ ವೈರಲ್ ಟ್ವೀಟ್​ ಮತ್ತೆ ಅಭಿಮಾನಿಗಳನ್ನು ನೋವಿನಲ್ಲಿ ಮುಳುಗಿಸಿದ್ದು, ಅಕ್ಟೋಬರ್ 29ರಂದು ಬಂದಿದ್ದರೆ ಅದಕ್ಕಿಂತ ಸಂತೋಷದ ವಿಚಾರ ಬೇರೆ ಇರುತ್ತಿರಲಿಲ್ಲ ಎಂದು ನೋವಿನಲ್ಲಿ ಹೇಳುತ್ತಿದ್ದಾರೆ.

ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್

  • Share this:
ಪುನೀತ್ ರಾಜ್​ಕುಮಾರ್, (Puneeth Rajkumar)  ಕರುನಾಡ ಆರಾಧ್ಯ ದೈವ. ಅವರಿಲ್ಲದೇ ಸುಮಾರು 7 ತಿಂಗಳು ಕಳೆದಿದೆ ಎಂಬುದನ್ನ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಲ್ಲ ಎಂದು ತಿಳಿದ ಕ್ಷಣದಿಂದ ಅಭಿಮಾನಿಗಳ (Fans)  ನೋವು ಹೇಳತೀರದು. ಅಂದಿನಿಂದ ಇಂದಿನವರೆಗೆ ಅವರನ್ನು ಆರಾಧಿಸದ ದಿನವಿಲ್ಲ. ಕರ್ನಾಟಕದ ಪ್ರತಿ ಮೂಲೆಯಲ್ಲಿ ಅವರನ್ನು ಪ್ರತಿದಿನ ನೆನೆಯಲಾಗುತ್ತದೆ. ಅವರೊಬ್ಬ ಅಮರ ಚೇತನ ಎನ್ನಬಹುದು. ದಿನಕ್ಕೆ ಒಮ್ಮೆಯಾದರೂ ಅಭಿಮಾನಿಗಳು ಯಾವುದಾದರೂ ಕಾರಣಕ್ಕೆ ಅವರನ್ನು ನೆನಪಿಸಿಕೊಳ್ಳುತ್ತಾರೆ. ಇದೀಗ ಅವರು ನಾಲ್ಕು ವರ್ಷದ ಹಿಂದೆ ಇದೇ ದಿನ ಅಂದರೆ ಜೂನ್ 7ರಂದು ಅಪ್ಪು ಮಾಡಿದ್ದ ಟ್ವೀಟ್​ (Tweet) ಮತ್ತೆ ವೈರಲ್ ಆಗಿದ್ದು, ಅಭಿಮಾನಿಗಳು ಇದು ನಿಜವಾಗಬಾರದೇ ಎಂದು ಕಣ್ಣೀರು ಹಾಕುತ್ತಿದ್ದಾರೆ.

ಅಕ್ಟೋಬರ್ 29ರಂದು ಈ ಟ್ವೀಟ್​​ ಬರಬಾರದಿತ್ತೇ ಎಂದು ಅಭಿಮಾನಿಗಳ ಕಂಬನಿ

ಹೌದು, ನಾಲ್ಕು ವರ್ಷಗಳ ಹಿಂದೆ 2018 ಜೂನ್ 7 ರಂದು ಅಪ್ಪು ಅವರ ಕಾರು ಅಪಘಾತವಾಗಿತ್ತು, ಇದು ಅಭಿಮಾನಿಗಳ ಚಿಂತೆಗೆ ಕಾರಣವಾಗಿತ್ತು. ಅಪ್ಪು ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕಗೊಂಡಿದ್ರು, ಆ ಸಮಯದಲ್ಲಿ ಅಪ್ಪು ಒಂದು ಟ್ವೀಟ್​ ಮಾಡಿದ್ದರು. ಆ ಟ್ವೀಟ್​ನಲ್ಲಿ ಆರಾಮಾಗಿದ್ದೀನಿ, ಡೋಂಟ್​ ವರಿ, ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ಬರೆದಿದ್ದರು. ಇದೀಗ ಆ ಟ್ವೀಟ್​ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕಳೆದ ಅಕ್ಟೋಬರ್ 29ರಂದು ಈ ಟ್ವೀಟ್​ ಬಂದಿದ್ದರೆ ಚೆನ್ನಾಗಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.2021ರ ಅಕ್ಟೋಬರ್ 29ರಂದು ಅಪ್ಪು ಹೃದಯಾಘಾತದಿಂದ ನಮ್ಮೆಲ್ಲರನ್ನು ಬಿಟ್ಟು ಬಾರದ ಲೋಕ್ಕೆ ತೆರಳಿದ್ದರು. ಅಪ್ಪು ಇಲ್ಲದೇ ಅಭಿಮಾನಿಗಳು ಮಾತ್ರವಲ್ಲದೇ ಸ್ಯಾಂಡಲ್​ವುಡ್​ ಅನಾಥವಾಗಿದೆ ಎಂದರೆ ತಪ್ಪಲ್ಲ. ಈ ವೈರಲ್ ಟ್ವೀಟ್​ ಮತ್ತೆ ಅಭಿಮಾನಿಗಳನ್ನು ನೋವಿನಲ್ಲಿ ಮುಳುಗಿಸಿದ್ದು, ಅಕ್ಟೋಬರ್ 29ರಂದು ಬಂದಿದ್ದರೆ ಅದಕ್ಕಿಂತ ಸಂತೋಷದ ವಿಚಾರ ಬೇರೆ ಇರುತ್ತಿರಲಿಲ್ಲ ಎಂದು ನೋವಿನಲ್ಲಿ ಹೇಳುತ್ತಿದ್ದಾರೆ.

ಇದನ್ನೂ ಓದಿ: ದೇವೇಗೌಡರ ಮರಿ ಮೊಮ್ಮಗನ ನಾಮಕರಣ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ! ಏನಂಥ ಹೆಸರಿಡಬಹುದು ಗೆಸ್​ ಮಾಡಿ

ಅಪ್ಪು ನೆನಪಲ್ಲಿ ಪ್ರತಿಮೆ ಅನಾವರಣ

ಅಪ್ಪು ದೈಹಿಕವಾಗಿ ಎಲ್ಲರನ್ನು ಬಿಟ್ಟು ಹೋಗಿರಬಹುದು ಆದರೆ ಮಾನಸಿಕವಾಗಿ ಅವರು ಎಲ್ಲರೊಂದಿಗೂ ಇದ್ದಾರೆ. ಅಭಿಮಾನಿಗಳು ಅವರ ನೆನಪಿಗಾಗಿ ಮಾಡದ ಕೆಲಸಗಳು ಇಲ್ಲ. ಮೊನ್ನೆಯಷ್ಟೇ ವಿಜಯನಗರದ ಹೊಸಪೇಟೆಯಲ್ಲಿ ಅಪ್ಪು ಅವರ ಪ್ರತಿಮೆ ಅನಾವರಣವಾಗಿದೆ.  ಬರೋಬ್ಬರಿ 7.4 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ಕರುನಾಡಿಗೆ ಹೆಮ್ಮೆಯ ವಿಚಾರ ಎನ್ನಬಹುದು. ಈ ಅಭೂತಪೂರ್ವ ಕ್ಷಣಕ್ಕೆ ಸಾವಿರಾರು ಅಪ್ಪು ಅಭಿಮಾನಿಗಳು ಸಾಕ್ಷಿಯಾಗಿದ್ದು, ಹಬ್ಬವಿತ್ತು ಎನ್ನುವ ರೀತಿ ಆಚರಣೆ ಮಾಡಲಾಗಿದೆ.

ಇನ್ನು ಪುನೀತ್ ರಾಜಕುಮಾರ್ ಅಕಾಲ ಮರಣ ಹೊಂದಿದ ಬಳಿಕ ಪ್ರತಿನಿತ್ಯ ರಾಜ್ಯದ ಒಂದಲ್ಲಾ ಒಂದು ಹಳ್ಳಿ ಗ್ರಾಮಗಳಲ್ಲಿ ಅವರ ಹೆಸರಲ್ಲಿ ಪುಣ್ಯ ಕಾರ್ಯಗಳು ನಡೆಯುತ್ತದೆ. ಅದೆಷ್ಟೋ ಜನರು ಪ್ರತಿನಿತ್ಯ ಪುನೀತ್ ಹೆಸರು ಹೇಳಿಕೊಂಡು ಹಸಿದವರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಅಲ್ಲದೆ ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದು ಎನ್ನುವಂತೆ ಬದುಕಿದ್ದ ಪುನೀತ್ ರಾಜಕುಮಾರ್ ಅವರು ಎಲ್ಲರಿಗೂ ಸ್ಫೂರ್ತಿ ಎನ್ನುತ್ತಾರೆ ಅಭಿಮಾನಿಗಳು.

ಇದನ್ನೂ ಓದಿ: ಸೂರ್ಯನೊಬ್ಬ-ಚಂದ್ರನೊಬ್ಬ ರಾಜನೂ ಒಬ್ಬ! ಹೊಸಪೇಟೆಯಲ್ಲಿ ಪುನೀತ್ ಪ್ರತಿಮೆ ಅನಾವರಣ

ಅಭಿಮಾನಿಯೊಬ್ಬ ಪುನೀತ್ ಅವರ ಪ್ರೀತಿಗಾಗಿ ಮನೆಯಂಗಳದಲ್ಲಿ ಸಾವಿರಾರು ರೂಪಾಯಿ ಹಣ ಖರ್ಚುಮಾಡಿ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಿದ್ದಾರೆ. ಕೂಡ್ಲಿಗಿ ತಾಲೂಕಿನ ಸಿದ್ದಾಪುರದ ವಡ್ಡರಹಟ್ಟಿಯಲ್ಲಿ ಆರ್.ಟಿ. ನಾಗರಾಜ ಮತ್ತು ಅವರ ಪತ್ನಿ ಮಲ್ಲಮ್ಮ ಅವರ ಅಭಿಮಾನಕ್ಕೆ ಪುನೀತ್ ರಾಜಕುಮಾರ್ ಅವರು ಪುತ್ಥಳಿ ಸಾಕ್ಷಿಯಾಗಿ ಅನೇಕರ ಗಮನ ಸೆಳೆದಿತ್ತು.
Published by:Sandhya M
First published: