Lata Mangeshkar: ಲತಾ ಕಾಲಲ್ಲಿ ಸದಾ ಹೊಳೆಯುತ್ತಿತ್ತು ಚಿನ್ನದ ಕಾಲ್ಗೆಜ್ಜೆ, ಇದರ ಹಿಂದಿದೆ ಅಚ್ಚರಿಯ ಕತೆ!

ಲತಾ ಮಂಗೇಶ್ಕರ್ ಬಡತನದ ಹಾದಿಯಲ್ಲಿ ಬರಿಗಾಲಲ್ಲೇ ನಡೆದು, ಸಂಗೀತ ಸಾಮ್ರಾಜ್ಯದ ಅನಭಿಷಕ್ತ ರಾಣಿಯಾಗಿ ಮೆರೆದವರು. ಗಾನಗೋಗಿಲೆಯ ಗಾನದ ಹಿಂದೆ ನೋವಿನ ಕಥೆಯೂ ಇದೆ. ಅದೇನು ಅಂತ ನೀವೇ ಓದಿ…

ಲತಾ ಮಂಗೇಶ್ಕರ್ ಹರೆಯದ  ದಿನಗಳ ಚಿತ್ರ

ಲತಾ ಮಂಗೇಶ್ಕರ್ ಹರೆಯದ ದಿನಗಳ ಚಿತ್ರ

  • Share this:
ಲತಾ ಮಂಗೇಶ್ಕರ್ (Lata Mangeshkar) ನಿಧನರಾಗಿದ್ದಾರೆ. ಗಾನಕೋಗಿಲೆಯ ನಿಧನದಿಂದ (Death) ಸಂಗೀತ ಲೋಕಕ್ಕೆ (Musical World) ತುಂಬರಾದ ನಷ್ಟವಾಗಿದೆ. ಇಡೀ ಭಾರತ (India) ದೇಶದಲ್ಲಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಜನ ಅವರನ್ನು ಸ್ಮರಿಸುತ್ತಾ ಇದ್ದಾರೆ. ತಮ್ಮ ಹಾಡುಗಳ (Songs) ಮೂಲಕವೇ ಲತಾ ಜನರ ಮನೆ-ಮನವನ್ನು ಸೇರಿದ್ದರು. ತಮ್ಮ ಗಾಯನದ ಮೂಲಕವೇ ಭಾರತರತ್ನದಂತಹ (Bharata Ratna) ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಆದ್ರೆ ಲತಾ ಮಂಗೇಶ್ಕರ್ ಏಕಾಏಕಿ ಗಾನಕೋಗಿಲೆ ಆದವರಲ್ಲ. ಏಕಾಏಕಿ ಭಾರತರತ್ನ ಮುಡಿಗೇರಿಸಿಕೊಂಡವರು ಅಲ್ಲ. ಅವರೂ ನಮ್ಮ ನಿಮ್ಮಂತೆಯೇ ಸಾದಾಸೀದ ಜೀವನ ಸಾಗಿಸದವರು. ನಮಗಿಂತ ಬಡತನದ ಸ್ಥಿತಿಯಲ್ಲಿ ಬೆಳೆದವರು. ಬಡತನದ ಹಾದಿಯಲ್ಲೇ ಬರಿಗಾಲಲ್ಲಿ ನಡೆದು, ಸಂಗೀತ ಸಾಮ್ರಾಜ್ಯದ ಅನಭಿಷಕ್ತ ರಾಣಿಯಾಗಿ ಮೆರೆದವರು. ಗಾನಗೋಗಿಲೆಯ ಗಾನದ ಹಿಂದೆ ನೋವಿನ ಕಥೆಯೂ (Sad Story) ಇದೆ. ಅದೇನು ಅಂತ ನೀವೇ ಕೇಳಿ…

ಬಡತನದ ಕುಟುಂಬದಲ್ಲಿ ಹುಟ್ಟಿದ್ದ ‘ಹೇಮಾ’

ನಿಮಗೆ ಗೊತ್ತಿರುವಂತೆ ಲತಾ ಮಂಗೇಶ್ಕರ್ ಅವರ ಮೂಲ ಹೆಸರು ಹೇಮಾ. ಲತಾ ಮಂಗೇಶ್ಕರ್ ಅವರ ತಂದೆ ದೀನನಾಥ್ ಮಂಗೇಶ್ಕರ್ ಅವರದ್ದು ತೀರಾ ಬಡತನದ ಕುಟುಂಬ. ಒಬ್ಬರು ದುಡಿದು ಹೆಂಡತಿ ಹಾಗೂ 5 ಮಕ್ಕಳ ತುಂಬು ಸಂಸಾರ. ಅದರ ಜೊತೆಗೆ ಆಗಿನ ಕಾಲದಲ್ಲಿ ಮನೆಗೆ ಬರುವ ಹೋಗುವ ನೆಂಟರೂ ಹೆಚ್ಚೇ. ಇವರನ್ನೆಲ್ಲ ತೂಗಿಸಿಕೊಂಡು ಹೋಗುವುದರಲ್ಲೇ ದೀನನಾಥ್ ಮಂಗೇಶ್ಕರ್ ಹೈರಾಣಾಗಿದ್ದರು.

ಬಾಲಕಿ ಲತಾ ಕಣ್ಣಲ್ಲಿತ್ತು ನೂರಾರು ಕನಸು

ಕನಸಿಗ್ಯಾವ ಬಡತನ ಹೇಳಿ? ಹಾಗೆಯೇ ಬಾಲಕಿ ಲತಾ ಬಡತನವಿದ್ದರೂ ಬಣ್ಣ ಬಣ್ಣದ ಕನಸು ಕಾಣುತ್ತಿದ್ದಳು. ತಾನು ಓರಗೆಯ ಗೆಳತಿಯರಂತೆ ಒಳ್ಳೆ ಬಟ್ಟೆ ಹಾಕಿಕೊಳ್ಳಬೇಕು, ಒಳ್ಳೆ ತಿಂಡಿ ತಿನಿಸುಗಳನ್ನು ತಿನ್ನಬೇಕು ಅಂತ ಆಸೆಪಡುತ್ತಿದ್ದಳು. ಆಕೆಗೆ ಆ ವಯಸ್ಸಲ್ಲಿ ಬಂಗಾರ ಎಂದರೆ ಅಪಾರ ಪ್ರೀತಿ. ಬಡತನವನ್ನೇ ಹೊದ್ದು ಮಲಗಿದ ಮನೆಯಲ್ಲಿ ಬಂಗಾರದ ಮಾತೇ ದುಬಾರಿ. ಹೀಗಾಗಿ ಒಂದು ಬೆಳ್ಳಿಯ ಕಾಲ್ಗೆಜ್ಜೆಯಾದರೂ ಇದ್ದಿದ್ದರೆ ಎಷ್ಟು ಚೆನ್ನ ಅಂದುಕೊಂಡಿದ್ದಳು ಆದರೆ ಬೆಳ್ಳಿ ಧರಿಸುವುದೂ ಕೂಡ ದೂರದ ಮಾತಾಗಿತ್ತು.

13 ನೇ ವಯಸ್ಸಿಗೆ ಲತಾ ಹೆಗಲೇರಿತು ಮನೆಯ ಜವಾಬ್ದಾರಿ

ತಂದೆ ದೀನನಾಥ್ ಮಂಗೇಶ್ಕರ್ ಬಾಲಕಿ ಲತಾ ಮಂಗೇಶ್ಕರ್ ಅವರಿಗೆ ಕೇವಲ13 ವರ್ಷ ಇರುವಾಗ ಇಹಲೋಕ ತ್ಯಜಿಸಿದರು. ಆಗ ಇಡೀ ಮನೆಯ ಜವಾಬ್ದಾರಿ ಲತಾ ಹೆಗಲೇರಿತು. ತಾಯಿ, ಲತಾ ಅವರ ಸಹೋದರ ಹೃದಯನಾಥ ಮಂಗೇಶ್ಕರ.. ಸಹೋದರಿ ಆಶಾ ಭೋಸಲೆ.. ಉಷಾ ಮಂಗೇಶ್ಕರ್.. ಮೀನಾ ಖಾಡಿಲ್ಕರ್ ಇವರ ಹೊಣೆಗಾರಿಕೆಯನ್ನು ಲತಾ ವಹಿಸಿಕೊಂಡು.. ಅಷ್ಟರಲ್ಲಾಗಲೇ ಲತಾ ಅವರ ಚಿನ್ನ-ಬೆಳ್ಳಿಯ ಕನಸು ಮಾಯವಾಗಿತ್ತು.

ಇದನ್ನೂ ಓದಿ: Lata Mangeshkar: ಇಂದು ಸಂಜೆ 6.30ಕ್ಕೆ ಗಾನಕೋಗಿಲೆ ಅಂತ್ಯಕ್ರಿಯೆ.. ಮುಂಬೈನ ಶಿವಾಜಿ ಪಾರ್ಕ್​ನಲ್ಲಿಅಂತಿಮ ವಿಧಿವಿಧಾನಕ್ಕೆ ಸಿದ್ಧತೆ

ಲತಾ ಕಾಲಿನಲ್ಲಿ ಧರಿಸಿದ್ದರು ಬಂಗಾರದ ಕಾಲ್ಗೆಜ್ಜೆ!

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಕಾಲ್ಗೆಜ್ಜೆ ಅಂದರೆ ಅಪಾರ ಪ್ರೀತಿ. ಅಪ್ಪನನ್ನು ಕಾಡಿಯೋ ಬೇಡಿಯೋ ಹೆಣ್ಣು ಮಕ್ಕಳು ಬೆಳ್ಳಿಯ ಕಾಲ್ಗೆಜ್ಜೆ ತರಿಸಿಕೊಳ್ಳುತ್ತಾರೆ. ಅದನ್ನು ಧರಿಸಿಕೊಂಡು ಲೋಕವನ್ನೇ ಗೆದ್ದಂತೆ ಮಾಡುತ್ತಾರೆ. ಆದರೆ ನೀವು ನಂಬಲಿಕ್ಕಿಲ್ಲ ಲತಾ ಮಂಗೇಶ್ಕರ್ ತಮ್ಮ ಕಾಲಿಗೆ ಮಿರಿಮಿರಿ ಮಿಂಚುವ ಚಿನ್ನದ ಕಾಲ್ಗೆಜ್ಜೆ ಧರಿಸಿದ್ದರು.

ಬಂಗಾರದ ಕಾಲ್ಗೆಜ್ಜೆ ಹಿಂದಿನ ರಹಸ್ಯವೇನು ಗೊತ್ತಾ?

ಲತಾ ಮಂಗೇಶ್ಕರ್ ಅವರು ಧರಿಸಿದ್ದ ಬಂಗಾರದ ಕಾಲ್ಗೆಜ್ಜೆ ಬಗ್ಗೆ ಆ ಕಾಲಕ್ಕೆ ದೊಡ್ಡ ಚರ್ಚೆಯೇ ಶುರುವಾಗಿತ್ತು. ಮುಂಬೈನ ಹಿರಿಯ ಪತ್ರಕರ್ತರೊಬ್ಬರು ಆ ಬಗ್ಗೆ ಕೇಳಿದ್ದರು. ಆಗ ಲತಾ ಕೊಟ್ಟ ಉತ್ತರ ಅಚ್ಚರಿಗೆ ಕಾರಣವಾಗಿತ್ತು.

ಇದನ್ನೂ ಓದಿ: Lata Mangeshkar: ಚಂದನವನದಲ್ಲೂ ಹಾಡಿತ್ತು ‘ಗಾನ ಕೋಗಿಲೆ‘! ಕನ್ನಡಿಗರೆದೆಯಲ್ಲಿ 'ಬೆಳಕು' ಮೂಡಿಸಿದ್ದ ಲತಾ

"ಹಿಂದೆ ನಂಗೆ ಕಾಲ್ಗೆಜ್ಜೆ ಧರಿಸಬೇಕು ಅಂತ ಆಸೆ ಇತ್ತು. ಆದರೆ ಆಗ ಬಡತನವಿತ್ತು. ತಂದೆಯನ್ನು ಉಳಿಸಿಕೊಳ್ಳಲೂ ಆಗದಷ್ಟು ಕಷ್ಟ ಇತ್ತು. ಆಗ ಎಲ್ಲಾ ಹೆಣ್ಣು ಮಕ್ಕಳಂತೆ ಆಭರಣ ಧರಿಸಲು ನನಗೆ ಸಾಧ್ಯವಾಗಲೇ ಇಲ್ಲ. ಆದ್ರೆ ಈಗ ಬೆಳ್ಳಿ ಬಂಗಾರ ಹಾಕಿಕೊಂಡು, ನಲಿಯುವ ವಯಸ್ಸಲ್ಲ. ಆದರೆ ಅಂದಿನ ಬಡತನದ ಪರಿಸ್ಥಿತಿ ಬಗ್ಗೆ ನನಗೆ ಬೇಸರ ಇತ್ತು. ಅಂದು ಬೆಳ್ಳಿ ಕಾಲ್ಗೆಜ್ಜೆ ಧರಿಸೋಕೆ ಆಗದೇ ಇದ್ದರೆ ಏನಂತೆ. ಅದಕ್ಕಾಗಿ ಈಗ ಚಿನ್ನದ ಕಾಲ್ಗೆಜ್ಜೆ ಹಾಕಿಕೊಳ್ಳುತ್ತಿದ್ದೇನೆ" ಅಂತ ಹೇಳಿದ್ದರಂತೆ.

ಇಷ್ಟಾದರೂ ಲತಾ ಮಂಗೇಶ್ಕರ್ ಎಂದೂ ಐಶಾರಾಮಿ ಜೀವನ ನಡೆಸಿದವರಲ್ಲ. ಅಷ್ಟೇಲ್ಲಾ ಹಣ, ಕೀರ್ತಿ, ಅಂತಸ್ತು ಇದ್ದರೂ ಸರಳವಾಗಿ ಬದುಕಿದವರು.
Published by:Annappa Achari
First published: