ಲತಾ ಮಂಗೇಶ್ಕರ್ (Lata Mangeshkar) ನಿಧನರಾಗಿದ್ದಾರೆ. ಗಾನಕೋಗಿಲೆಯ ನಿಧನದಿಂದ (Death) ಸಂಗೀತ ಲೋಕಕ್ಕೆ (Musical World) ತುಂಬರಾದ ನಷ್ಟವಾಗಿದೆ. ಇಡೀ ಭಾರತ (India) ದೇಶದಲ್ಲಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಜನ ಅವರನ್ನು ಸ್ಮರಿಸುತ್ತಾ ಇದ್ದಾರೆ. ಲತಾ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. 36 ಭಾಷೆಗಳಲ್ಲಿ ತಮ್ಮ ಗಾನಸುದೆ ಹರಿಸುವ ಮೂಲಕ ದೇಶದ ಜನರ ಮನದಲ್ಲಿ ನೆಲೆಯಾಗಿದ್ದ ಲತಾ ಮಂಗೇಶ್ಕರ್ ಅವರು ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಸಂಗೀತಪ್ರಿಯರ ಮನದಲ್ಲಿ ನೆಲೆಯಾಗಿದ್ದಾರೆ.. ವಿಶೇಷ ಅಂದರೆ 13ನೇ ವಯಸ್ಸಿನಲ್ಲಿ ಹಾಡುವುದಕ್ಕೆ ಶುರು ಮಾಡಿದ ಲತಾ ಮಂಗೇಶ್ಕರ್ ಅವರು ಹಿಂದಿಯಲ್ಲಿ 1000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. 8 ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡ ಲತಾ ಮಂಗೇಶ್ಕರ್ ಹಿಂದಿ(Hindi) ಮಾತ್ರವಲ್ಲದೆ ಕನ್ನಡ, ಬೆಂಗಾಲಿ, ಕೊಂಕಣಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ, ಅಸ್ಸಾಮೀಸ್, ಗುಜರಾತಿ ಹಾಡುಗಳಿಗೆ ಲತಾ ಮಂಗೇಶ್ಕರ್ ಧನಿಯಾಗಿದ್ದರು. ಭಾರತದ ಪ್ರತಿಯೊಬ್ಬರು ಲತಾ ಮಂಗೇಶ್ಕರ್ ನಿಧನಕ್ಕೆ ಕಂಬನಿ ಮಿಡಿಯುತ್ತಿದೆ.
ಕಪ್ಪು ಪಟ್ಟು ಕಣಕ್ಕಿಳಿಯಲಿರೋ ಆಟಗಾರರು!
ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿಬ ಮೊದಲ ಏಕದಿನ ಪಂದ್ಯದಲ್ಲಿ ನಡೆಯಲಿದೆ. ಲತಾ ಮಂಗೇಶ್ಕರ್ ಅವರಿಗೆ ಗೌರವಾರ್ಥವಾಗಿ ಇಂದು ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ. ದೇಶದ ಧ್ವಜವು ಅರ್ಧ ಮಟ್ಟದಲ್ಲಿ ಹಾರಾಡಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜಗತ್ತನ್ನು ಮೈಮರೆಸಿದ್ದ ಹಾಡುಗಳಿಗೆ ದನಿಯಾಗಿದ್ದ ಲತಾ ಕಂಠ, ಗಾನಕೋಗಿಲೆಯ ಸುಪ್ರಸಿದ್ಧ ಹಾಡುಗಳಿವು!
ಲತಾ ನಿಧನಕ್ಕೆ ಕಂಬನಿ ಮಿಡಿದ ವಿರಾಟ್ ಕೊಹ್ಲಿ!
ಖ್ಯಾತ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಲತಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದು, ‘ಎಲ್ಲಾ ನೆನಪುಗಳಿಗೆ ಧನ್ಯವಾದ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ’ ಎಂದು ಬರೆದಿದ್ದಾರೆ.
Deeply saddened to hear about the demise of Lata ji. Her melodious songs touched millions of people around the world. Thank you for all the music and the memories. My deepest condolences to the family & the loved ones. 🙏
— Virat Kohli (@imVkohli) February 6, 2022
ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಅಂತ್ಯಕ್ರಿಯೆ
ಲತಾಮಂಗೇಶ್ಕರ್ ಅವರ ಪಾರ್ಥಿವ ಶರೀರವನ್ನು ಸುಮಾರು 12.30 ರ ವೇಳೆಗೆ ಅವರ ನಿವಾಸಕ್ಕೆ ಕೊಂಡೊಯ್ಯಲಾಗುವುದು. ಬಳಿಕ ಶಿವಾಜಿ ಪಾರ್ಕ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಇಂದು ಸಂಜೆ 6.30ಕ್ಕೆ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ. ದೇಶದಲ್ಲಿ ಎರಡು ದಿನ ಶೋಕಾಚರಣೆಯನ್ನು ಸರ್ಕಾರ ಘೋಷಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ