Lata Mangeshkar Health: ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್​ ಆರೋಗ್ಯದಲ್ಲಿ ಚೇತರಿಕೆ

ಉಸಿರಾಟದ ತೊಂದರೆಯಿಂದಾಗಿ ಲತಾ ಮಂಗೇಶ್ಕರ್​ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ತೀವ್ರ ಹದಗೆಟ್ಟಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

Rajesh Duggumane | news18-kannada
Updated:November 12, 2019, 2:21 PM IST
Lata Mangeshkar Health: ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್​ ಆರೋಗ್ಯದಲ್ಲಿ ಚೇತರಿಕೆ
ಲತಾ ಮಂಗೇಶ್ಕರ್
  • Share this:
ಮುಂಬೈ (ನ.12): ಅನಾರೋಗ್ಯ ಹಿನ್ನೆಲೆಯಲ್ಲಿ ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಉಸಿರಾಟದ ತೊಂದರೆಯಿಂದಾಗಿ ಲತಾ ಮಂಗೇಶ್ಕರ್​ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ತೀವ್ರ ಹದಗೆಟ್ಟಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎನ್ನಲಾಗಿದೆ. “ಲತಾ ಆರೋಗ್ಯ ಸ್ಥಿರವಾಗಿದೆ. ಅವರ ಅಭಿಮಾನಿಗಳು ಭಯ ಪಡುವ ಅಗತ್ಯವಿಲ್ಲ,” ಎಂದು ಲತಾ ಮಂಗೇಶ್ಕರ್​ ಆಪ್ತರು ಹೇಳಿದ್ದಾರೆ.

ಹಿಂದಿ, ಕನ್ನಡ ಸೇರಿ ಸಾಕಷ್ಟು ಭಾಷೆಗಳಲ್ಲಿ ಲತಾ ಮಂಗೇಶ್ಕರ್​ ಹಾಡಿದ್ದಾರೆ. ಅವರು ಸಿನಿಮಾಗಾಗಿ ಹಾಡುವುದನ್ನು ನಿಲ್ಲಿಸಿ ಅನೇಕ ವರ್ಷಗಳೆ ಕಳೆದಿವೆ. ಭಾರತ ಸೇನೆಗೆ ಗೌರವ ಸೂಚಿಸುವ ‘ಸೌಗಂಧ ಮುಜೆ ಈಸ್​ ಮಿಟ್ಟಿ ಕಿ…’ ಲತಾ ಮಂಗೇಶ್ಕರ್​ ಹಾಡಿದ ಕೊನೆಯ ಹಾಡು.  2001ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿತ್ತು.

First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ