Lata Mangeshkar: ರೈಲ್ವೆ ಸಿಂಗರ್ ರಾನು ಬಗ್ಗೆ ಕಮೆಂಟ್​ ಮಾಡಿ ಟ್ರಾಲ್​ ಆದ ಸ್ವರ ಕೋಗಿಲೆ ಲತಾ ಮಂಗೇಶ್ಕರ್​

ರಾನು ಗಾಯನದ ಕುರಿತಾಗಿ ಲತಾ ಮಂಗೇಶ್ಕರ್​ ಅವರು ನೀಡಿರುವ ಪ್ರತಿಕ್ರಿಯೆ ಜನರಿಗೆ ಇಷ್ಟವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ನಕಾರಾತ್ಮಕ ಕಮೆಂಟ್​ಗಳು ಸಿಗುತ್ತಿವೆ. ಸಾಕಷ್ಟು ಮಂದಿ ಲತಾ ಅವರ ಈ ನಡೆಯನ್ನು ಟೀಕಿಸಿ ಕಮೆಂಟ್​ ಮಾಡುತ್ತಿದ್ದಾರೆ. 

Anitha E | news18-kannada
Updated:September 6, 2019, 9:43 AM IST
Lata Mangeshkar: ರೈಲ್ವೆ ಸಿಂಗರ್ ರಾನು ಬಗ್ಗೆ ಕಮೆಂಟ್​ ಮಾಡಿ ಟ್ರಾಲ್​ ಆದ ಸ್ವರ ಕೋಗಿಲೆ ಲತಾ ಮಂಗೇಶ್ಕರ್​
ಲತಾ ಮಂಗೇಶ್ಕರ್​ ಹಾಗೂ ರಾನು ಮಂಡಲ್​
  • Share this:
ರಾನು ಮಂಡಲ್​ ಸದ್ಯದ ಇಂಟರ್​ನೆಟ್​ ಸೆನ್ಸೇಷನ್​ ಸ್ಟಾರ್​. ಇವರ ಗಾಯನದ ಬಗೆಗಿನ ಚರ್ಚೆಗಳನ್ನು ನೀವೂ ಕೇಳಿರುತ್ತೀರಿ. ರೈಲ್ವೆ ನಿಲ್ದಾಣದಿಂದ ಬಾಲಿವುಡ್​ ಅಂಗಳದವರೆಗಿನ ಪಯಣದ ವಿಷಯ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಅದಕ್ಕೂ ಹೆಚ್ಚಾಗಿ ಅವರ ಗಾಯನದ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿನ್ನೆಯಷ್ಟೆ ರಾನು ಅವರ ಗಾಯನದ ಬಗ್ಗೆ ಗಾಯಕಿ ಲತಾ ಮಂಗೇಶ್ಕರ್​ ಅವರೂ ತಮ್ಮ ಅಭಿಪ್ರಾಯ ತಿಳಿಸಿದ್ದರು.

ರಾನು ಅವರು ಗಾಯಕಿ ಲತಾ ಮಂಗೇಶ್ಕರ್​ ಅವರು ಹಾಡಿದ್ದ 'ಏಕ್ ಪ್ಯಾರ್​ ಕಾ ನಗ್ಮಾ ಹೈ....​' ಹಾಡನ್ನು ಹಾಡುವ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದವರು. ತಮ್ಮ ಸ್ವರದಿಂದಲೇ ಈಗ ರಾಣು ಸ್ಟಾರ್​ ಆಗಿದ್ದಾರೆ. ಇವರನ್ನು ಸಂಗೀತ ನಿರ್ದೇಶಕ ಹಿಮೇಶ್​ ರೇಶಮಿಯಾ ಬಾಲಿವುಡ್​ನಲ್ಲಿ ಲಾಂಚ್​ ಸಹ ಮಾಡಿ ಆಯಿತು. ರಾನು ಅವರ ವಿಷಯ ಲತಾ ಮಂಗೇಶ್ಕರ್​ ಅವರನ್ನೂ ತಲುಪಿದೆ. ಇದಕ್ಕೆ ರಾನು ಅವರ ಗಾಯನದ ಕುರಿತು ಪ್ರತಿಕ್ರಿಯಿಸಿರುವ ಲತಾ ಮಂಗೇಶ್ಕರ್​ ಅವರು ಅನುಕರಣೆ ಮಾಡದೆ ಸ್ವಂತ ಧ್ವನಿಯಲ್ಲಿ ಹಾಡಿ ಎಂದಿದ್ದಾರೆ.

Singer Lata Mangeshkar receiving negetive comments on Ranu Issue
ಗಾಯಕಿ ಲತಾ ಅವರ ಪ್ರತಿಕ್ರಿಯೆಗೆ ನೆಟ್ಟಿಗರು ನೀಡುತ್ತಿರುವ ಉತ್ತರ


ಆದರೆ ಲತಾ ಅವರ ಈ ರೀತಿಯ ಪ್ರತಿಕ್ರಿಯೆ ಜನರಿಗೆ ಇಷ್ಟವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ನಕಾರಾತ್ಮಕ ಕಮೆಂಟ್​ಗಳು ಸಿಗುತ್ತಿವೆ. ಸಾಕಷ್ಟು ಮಂದಿ ಲತಾ ಅವರ ಈ ನಡೆಯನ್ನು ಟೀಕಿಸಿ ಕಮೆಂಟ್​ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕ್ಷಮೆಯಾಚಿಸಿದ ಅಮೀರ್​ ಖಾನ್​: ಹಣ ವಾಪಸ್​ ಕೇಳಿದ ಜನರು..!

ಲತಾ ಮಂಗೇಶ್ಕರ್​ ಅವರು ವೃತ್ತಿ ಜೀವನದ ಯಶಸ್ಸಿನಲ್ಲಿರುವಾಗ ತುಂಬಾ ಜನ ಮಹಿಳಾ ಗಾಯಕಿಯರ ಜೀವನ ಹಾಳು ಮಾಡಿದ್ದರು. ಈಗ ಅವರು ಯಾರನ್ನಾದರೂ ಪ್ರೋತ್ಸಾಹಿಸಲು ಹೇಗೆ ಸಾಧ್ಯ ಎಂದು ಒಬ್ಬರು ಟ್ವೀಟ್​ ಮಾಡಿದ್ದಾರೆ. ಮತ್ತೊಬ್ಬರು ಹೀಗೆ ಬರೆದಿದ್ದಾರೆ... ನಿಮ್ಮ ಟೀಕಾಕಾರಿ ಹೇಳಿಕೆ ಹಾಗೂ ನಿಂದನೆ ಮಾಡುವ ವಿಷಯ ಬಗ್ಗೆ ನಮ್ಮ ಸಹಮತವಿಲ್ಲ. ನೀವು ಟೀಕೆ ಮಾಡುವ ರೀತಿಯ ಹೇಳಿಕೆಗಳನ್ನು ಕೊಡುವ ಗುಣವನ್ನು ಕೊಂಚ ಬದಲಾಯಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮತ್ತೊಂದು ಬೋಲ್ಡ್ ​ಫೋಟೋಶೂಟ್​ನಲ್ಲಿ ಕಿರಿಕ್​ ಹುಡುಗಿ: ಬ್ಯಾಕ್​ಲೆಸ್​ ಡ್ರೆಸ್​ನಲ್ಲಿ ರಶ್ಮಿಕಾ ಮಂದಣ್ಣ

ಇನ್ನೂ ಒಬ್ಬ ಟ್ವೀಟಿಗರು ತನಗೆ ಲತಾ ಅವರನ್ನು ಕಂಡರೆ ಇಷ್ಟವಿಲ್ಲ ಎಂದು ಬರೆದುಕೊಂಡಿದ್ದಾರೆ.

ಲತಾ ಮಂಗೇಶ್ಕರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡು ಕೆಲವರು ಟ್ವೀಟ್ ಮಾಡಿದ್ದಾರೆ. ಲತಾ ಮಂಗೇಶ್ಕರ್ ಸ್ವಂತ ಪರಿಶ್ರಮದಿಂದ ಉನ್ನತ ಮಟ್ಟ ತಲುಪಿದ್ದಾರೆ. ಅವರು ಹೇಳಿಕೆ ನೀಡಿದರೆ ಅದಕ್ಕೆ ಅರ್ಥವಿರುತ್ತದೆ. ಅನುಕರಣೆಯಿಂದ ಯಾರೂ ಕೂಡ ಸಾಫಲ್ಯ ಕಂಡಿಲ್ಲ. ರಾನು ಮಂಡಲ್ ಕೂಡ ಇದೇ ಹಾದಿ ತುಳಿಯಬಾರದೆಂದು ಲತಾ ಮಂಗೇಶ್ಕರ್ ಎಚ್ಚರಿಸಿದ್ದಾರಷ್ಟೇ. ಅವರ ಹೇಳಿಕೆಯನ್ನು ತಪ್ಪಾಗಿ ಪರಿಭಾವಿಸಲಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಈ ಕುರಿತು ರಾನು ಮಂಡಲ್​ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ರಾನು ಪರವಾಗಿ ಜನರೇ ಪ್ರತಿಕ್ರಿಯಿಸುತ್ತಿದ್ದಾರೆ.

ಸಂಗೀತ ನಿರ್ದೇಶಕ ಹಿಮೇಶ್​ ಅವರ ಸಿನಿಮಾದಲ್ಲಿ ರಾನು ಒಂದಲ್ಲ... ಎರಡಲ್ಲ... ಮೂರು  ಹಾಡುಗಳ ರೆಕಾರ್ಡಿಂಗ್​ ಮುಗಿಸಿದ್ದಾರೆ. ಅದರ ವಿಡಿಯೋ ತುಣುಕುಗಳನ್ನು ಹಿಮೇಶ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ರಾನು ಅವರ ವಿಡಿಯೋಗಳನ್ನು ಜನರು ತುಂಬಾ ಇಷ್ಟಪಟ್ಟು ನೋಡುತ್ತಿದ್ದು, ಸಾಕಷ್ಟು ವೀಕ್ಷಣೆ ಸಹ ಸಿಗುತ್ತಿದೆ.

Rashmi Gautham: ಕಣ್ಣೋಟದಿಂದಲೇ ಪಡ್ಡೆಗಳ ನಿದ್ದೆ ಕದ್ದಿರುವ ರಶ್ಮಿ ಗೌತಮ್​..!

First published: September 5, 2019, 6:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading