• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Lara Dutta Love Story: ಮೊದಲ ಬಾರಿಗೆ ನಟಿ ಲಾರಾಗೆ ಭೇಟಿಯಾಗಲು ಮಹೇಶ್ ಭೂಪತಿ ಏನಂತ ಮೆಸೇಜ್ ಮಾಡಿದ್ರು ಗೊತ್ತಾ? ಇವರಿಬ್ಬರ ಲವ್ ಸ್ಟೋರಿ ಇಲ್ಲಿದೆ ನೋಡಿ!

Lara Dutta Love Story: ಮೊದಲ ಬಾರಿಗೆ ನಟಿ ಲಾರಾಗೆ ಭೇಟಿಯಾಗಲು ಮಹೇಶ್ ಭೂಪತಿ ಏನಂತ ಮೆಸೇಜ್ ಮಾಡಿದ್ರು ಗೊತ್ತಾ? ಇವರಿಬ್ಬರ ಲವ್ ಸ್ಟೋರಿ ಇಲ್ಲಿದೆ ನೋಡಿ!

ಪ್ರೇಮ್​ ಕಹಾನಿ!

ಪ್ರೇಮ್​ ಕಹಾನಿ!

ಸ್ವಲ್ಪ ಸಮಯದವರೆಗೆ ಲಾರಾ ಬಾಲಿವುಡ್ ನಟ ಮತ್ತು ದೀರ್ಘಕಾಲದ ಸ್ನೇಹಿತ ಡಿನೋ ಮೋರಿಯಾ ಅವರೊಂದಿಗೆ ಡೇಟಿಂಗ್ ಮಾಡಿದರು. ಆದರೆ ಭೂಪತಿಯೊಂದಿಗೆ ಜೀವನ ಶುರು ಮಾಡುವ ಮುಂಚೆ ಈ ಎಲ್ಲಾ ಸಂಬಂಧಗಳಿಗೆ ಗುಡ್ ಬೈ ಹೇಳಿದ್ದರು ಲಾರಾ.

 • Share this:

ಮಾಜಿ ವಿಶ್ವಸುಂದರಿ ಮತ್ತು ನಟಿ ಲಾರಾ ದತ್ತಾ (Lara Dutta) ಅವರು ಭಾರತದ ಟೆನಿಸ್ ಆಟಗಾರ ಮಹೇಶ್ ಭೂಪತಿ ಅವರನ್ನು ಮದುವೆಯಾಗಿ 12 ವರ್ಷಗಳೇ ಕಳೆದಿವೆ. ಇವರಿಗೆ ಸೈರಾ ಎಂಬ ಒಬ್ಬ ಮಗಳು ಸಹ ಇದ್ದಾಳೆ. ಆದರೆ ಭೂಪತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೊದಲು, ಲಾರಾ ಮಾಡೆಲ್ ಕೆಲ್ಲಿ ದೋರ್ಜಿಯೊಂದಿಗೆ ಸುದೀರ್ಘ ಸಂಬಂಧವನ್ನು ಹೊಂದಿದ್ದರು. ನಂತರ ಸ್ವಲ್ಪ ಸಮಯದವರೆಗೆ ಲಾರಾ ಬಾಲಿವುಡ್ ನಟ ಮತ್ತು ದೀರ್ಘಕಾಲದ ಸ್ನೇಹಿತ ಡಿನೋ ಮೋರಿಯಾ (Dino Morea) ಅವರೊಂದಿಗೆ ಡೇಟಿಂಗ್ ಮಾಡಿದರು. ಆದರೆ ಭೂಪತಿಯೊಂದಿಗೆ ಜೀವನ ಶುರು ಮಾಡುವ ಮುಂಚೆ ಈ ಎಲ್ಲಾ ಸಂಬಂಧಗಳಿಗೆ ಗುಡ್ ಬೈ ಹೇಳಿದ್ದರು ಲಾರಾ.


ನಿನ್ನೆ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಲಾರಾ


ನಿನ್ನೆ ಎಂದರೆ ಏಪ್ರಿಲ್ 16ನೇ ತಾರೀಖಿಗೆ ನಟಿ ಲಾರಾ ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಲಾರಾ ಮತ್ತು ಮಹೇಶ್ ಮೊದಲ ಬಾರಿಗೆ ಹೇಗೆ ಮತ್ತು ಎಲ್ಲಿ ಭೇಟಿಯಾದರು, ಹೇಗೆ ಇವರಿಬ್ಬರ ಮಧ್ಯೆ ಪ್ರೀತಿ ಶುರುವಾಯ್ತು ಅಂತೆಲ್ಲಾ ತಿಳಿಯೋಣ ಬನ್ನಿ.


ಹೌಸ್‌ಫುಲ್ ಚಿತ್ರದ ನಟಿ 2010 ರಲ್ಲಿ ಕಾಫಿ ವಿತ್ ಕರಣ್ ಶೋ ಗೆ ಬಂದಾಗ ತನ್ನ ಅಂದಿನ ಭಾವೀ ಪತಿ ಮಹೇಶ್ ಭೂಪತಿಯೊಂದಿಗೆ ಕಾಣಿಸಿಕೊಂಡಿದ್ದರು. "ಮಹೇಶ್ ಮಿಸ್ಟರ್ ಡಾರ್ಸಿ ಮತ್ತು ನಾನು ಸಾಹಿತ್ಯ ಪ್ರೇಮಿ, ಆದ್ದರಿಂದ ಎಲಿಜಬೆತ್ ತನ್ನ ಮಿಸ್ಟರ್ ಡಾರ್ಸಿಯನ್ನು ಕಂಡುಕೊಂಡಿದ್ದಾಳೆ” ಎಂದು ಲಾರಾ ಹೇಳಿದ್ದರಂತೆ.


ಮಹೇಶ್ ಭೂಪತಿ ಅವರು 2000 ರಲ್ಲಿ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಮಿಸ್ ಯೂನಿವರ್ಸ್ ವಿಜಯವನ್ನು ಆಚರಿಸುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಲಾರಾ ದತ್ತಾ ಅವರನ್ನು ನೋಡಿದಾಗಿನಿಂದ ಅವರ ಮೇಲೆ ಒಂದು ಕಣ್ಣಿಟ್ಟಿದ್ದರಂತೆ.


ಆದರೆ 2009 ರ ಮೊದಲು ಅವರಿಗೆ ಸಂಪರ್ಕಿಸಲು ಪ್ರಯತ್ನಪಟ್ಟರೂ, ಅವರಿಗೆ ಲಾರಾ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿರಲಿಲ್ವಂತೆ.


ಲಾರಾ ಮತ್ತು ಮಹೇಶ್ ಇಬ್ಬರು ಮೊದಲ ಬಾರಿಗೆ ಎಲ್ಲಿ ಭೇಟಿಯಾದ್ರೂ ನೋಡಿ..


ಮಹೇಶ್ ಭೂಪತಿ ಅವರೊಂದಿಗಿನ ತಮ್ಮ ಮೊದಲ ಭೇಟಿ ವೃತ್ತಿಪರ ಕಾರಣಗಳಿಗಾಗಿ ಎಂದು ಲಾರಾ ದತ್ತಾ ಕರಣ್ ಜೋಹರ್ ಅವರೊಂದಿಗೆ ಹಂಚಿಕೊಂಡಿದ್ದರು.


ಇದನ್ನೂ ಓದಿ: ಪಾಕ್‌ನ ಟ್ವಿಟರ್ ಬಳಕೆದಾರರು ಪ್ರಿಯಾಂಕಾ ಚೋಪ್ರಾರನ್ನು ಮತಾಂಧ ಎಂದು ಕರೆದಿದ್ದೇಕೆ?


"ನಾವು ವೃತ್ತಿಪರರಾಗಿ ಭೇಟಿಯಾದೆವು ಮತ್ತು ಮಹೇಶ್ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ನಾನು ದೊಡ್ಡ ಟೆನಿಸ್ ಅಭಿಮಾನಿಯಲ್ಲ. ನಾನು ಅವರನ್ನು ಗ್ಲೋಬೊಸ್ಪೋರ್ಟ್ ಮುಖ್ಯಸ್ಥನಾಗಿ ಮತ್ತು ಅವರು ನಿರ್ವಹಿಸುತ್ತಿದ್ದ ಕ್ಲೈಂಟ್ ಆಗಿ ಭೇಟಿಯಾದೆ.


ಭೂಪತಿ ಲಾರಾಗೆ ಮೊದಲ ಬಾರಿ "ಹೇ ಲಾರಾ, ಇದು ಮಹೇಶ್ ಭೂಪತಿ. ನಿಮ್ಮನ್ನು ಭೇಟಿಯಾಗಲು ಇಷ್ಟಪಡುತ್ತೇನೆ. ನೀವು ಡ್ರೀಂಕ್ಸ್ ಗೆ ಹೋಗುವಾಗ ನನಗೆ ತಿಳಿಸಿ" ಅಂತ ಮೆಸೇಜ್ ಮಾಡಿದ್ರಂತೆ.


ಈ ಬಗ್ಗೆ ದತ್ತಾ ಅವರ ವೃತ್ತಿಪರತೆಯನ್ನು ಅನುಮಾನಿಸಿದರು ಮತ್ತು ತಾನು ಕುಡಿಯುವುದಿಲ್ಲ ಮತ್ತು ಕಾಫಿಗಾಗಿ ಭೇಟಿಯಾಗುವುದಾಗಿ ಹೇಳಿದರು. ಹಾಗೆ ಇಬ್ಬರು ಕಾಫಿ ಕುಡಿಯಲು ಭೇಟಿಯಾದರು ಮತ್ತು ಅಂದಿನಿಂದ, ಅವರ ಟೆನಿಸ್ ಪಂದ್ಯಾವಳಿಗಳ ನಡುವೆ ಭೇಟಿಯಾಗಲು ಪ್ರಾರಂಭಿಸಿದರಂತೆ.


ಲಂಡನ್ ನಲ್ಲಿ ಇಬ್ಬರು ಸೆಲೆಬ್ರಿಟಿಗಳು ಪರಸ್ಪರ ಹತ್ತಿರವಾದ್ರಂತೆ..


2010 ರ ಚಲನಚಿತ್ರ ಹೌಸ್‌ಫುಲ್ ನ ಚಿತ್ರೀಕರಣಕ್ಕಾಗಿ ಅವರು ಲಂಡನ್ ನಲ್ಲಿದ್ದಾಗ ಇಬ್ಬರು ಸೆಲೆಬ್ರಿಟಿಗಳು ಹತ್ತಿರವಾದರು. ಭೂಪತಿ ತಮ್ಮ ಯುಎಸ್ ಪ್ರವಾಸಕ್ಕೆ ತೆರಳುವ ಮೊದಲು ಲಂಡನ್ ನಲ್ಲಿ ಮೂರು ವಾರಗಳನ್ನು ಕಳೆದರು.




"ನಾವು ಇಬ್ಬರು ಹೊರಗೆ ಹೋಗಿ ಅವರ ಸ್ನೇಹಿತರು ಮತ್ತು ಅವರ ಕುಟುಂಬದೊಂದಿಗೆ ಅವರ ಜನ್ಮದಿನವನ್ನು ಆಚರಿಸಿದೆ. ನನ್ನನ್ನು ಮಾತ್ರ ಆಹ್ವಾನಿಸಲಾಗಿತ್ತು, ಆದ್ದರಿಂದ ನನಗೆ ಸ್ವಲ್ಪ ಆಶ್ಚರ್ಯವಾಗಿತ್ತು.


ಆದರೆ ಅಷ್ಟೊತ್ತಿಗಾಗಲೇ ಅವನು ನನಗೆ ಇಷ್ಟವಾಗಿದ್ದ ಮತ್ತು ಅವರು ಸಹ ಆಗ ಸಿಂಗಲ್ ಆಗಿದ್ದಾರೆ ಅನ್ನೋ ವಿಷಯ ನನಗೆ ಗೊತ್ತಿತ್ತು, ಆದ್ದರಿಂದ ನಮ್ಮ ಮಧ್ಯೆ ಪ್ರೀತಿ ಶುರುವಾಯಿತು" ಎಂದು ಲಾರಾ ವಿವರಿಸಿದರು.


ಇದನ್ನೂ ಓದಿ: ಅಗ್ನಿಸಾಕ್ಷಿ ನಟ ಆತ್ಮಹತ್ಯೆ! ಮದುವೆಯಾಗಿ ಒಂದು ವರ್ಷ ಆಗಿತ್ತಷ್ಟೆ


ಲಾರಾ ದತ್ತಾ ಮತ್ತು ಮಹೇಶ್ ಭೂಪತಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಹೊರ ಬಂದ ನಂತರ, ಕೆಲವರು ಅವರ ಅಂದಿನ ಪತ್ನಿ ಶ್ವೇತಾ ಅವರಿಂದ ವಿಚ್ಛೇದನ ಪಡೆಯಲು ಲಾರಾ ಕಾರಣ ಎಂದು ಹೇಳಿದರು. ಆದರೆ ಲಾರಾ ಮಾತ್ರ ಮಹೇಶ್ ಅವರ ಮದುವೆ ಬಗ್ಗೆ ತಿಳಿದಿರಲಿಲ್ಲ ಅಂತ ಹೇಳಿದ್ದರು.


ಮಧ್ಯರಾತ್ರಿ 2 ಗಂಟೆಗೆ ಲಾರಾಗೆ ಪ್ರಪೋಸ್ ಮಾಡಿದ್ರಂತೆ ಮಹೇಶ್ ಭೂಪತಿ..


"ನಾವು ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿದ್ದೆವು ಮತ್ತು ಒಂದು ದಿನ ಸಂಜೆ ಇಬ್ಬರು ಭೇಟಿಯಾಗಲು ನಿರ್ಧರಿಸಿದ್ದೇವು. ಅದು ಸುಮಾರು ರಾತ್ರಿ 2 ಗಂಟೆಯಾಗಿತ್ತು ಮತ್ತು ನಿದ್ರೆಗೆ ಜಾರುವ ಮೊದಲು ನಾವು ಸ್ವಲ್ಪ ಟಿವಿ ನೋಡುತ್ತಿದ್ದೆವು. ಮಹೇಶ್ “ನೀನು ನನ್ನನ್ನು ಮದುವೆಯಾಗುತ್ತೀಯಾ?” ಅಂತ ಕೇಳಿಯೇ ಬಿಟ್ಟರು ಅಂತ ಲಾರಾ ಹೇಳಿದರು.




ಈ ರೀತಿಯಾಗಿ ಭೂಪತಿ ಅವರು ನ್ಯೂಯಾರ್ಕ್ ನಲ್ಲಿರುವ ತಮ್ಮ ಲೇಡಿ ಲವ್ ಗೆ ಪ್ರಪೋಸ್ ಮಾಡಿದರು. "ನಾವು ಯುಎಸ್ ಓಪನ್ ನಲ್ಲಿ ನ್ಯೂಯಾರ್ಕ್ ನಲ್ಲಿದ್ದಾಗ ಅವರು ಪ್ರಪೋಸ್ ಮಾಡಿದರು.


top videos



  ಅದು ನಿಜವಾಗಿಯೂ ತುಂಬಾನೇ ಮುದ್ದಾಗಿತ್ತು. ನಂತರ ಮಹೇಶ್ ನನ್ನನ್ನು ಇಟಾಲಿಯನ್ ರೆಸ್ಟೋರೆಂಟ್ ಗೆ ಕರೆದೊಯ್ದರು ಮತ್ತು ನಾವು ನ್ಯೂಯಾರ್ಕ್ ನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡೆವು" ಅಂತ ಲಾರಾ ಹೇಳಿಕೊಂಡಿದ್ದರು.

  First published: