ಕುಖ್ಯಾತ ದರೋಡೆಕೋರನಿಗೆ ಖ್ಯಾತ ನಟಿಯೊಂದಿಗೆ ಸಂಬಂಧ..!

ಇನ್ನು ಮುರುಗನ್ ಗ್ಯಾಂಗ್ ಈವರೆಗೆ 100 ಕೋಟಿಗೂ ಹೆಚ್ಚಿನ ಮೌಲ್ಯದ ಕಳ್ಳತನ ಮಾಡಿದ್ದಾರೆ ಸುದ್ದಿ  ಇದೆ. ಇದರಿಂದಾಗಿ ದರೋಡೆಕೋರರ ಗುಂಪು ಚಿತ್ರರಂಗದಲ್ಲಿ ಹಣ ಹೂಡಿಕೆ ಮಾಡಿದ್ದಾರೆಯೇ ಎಂಬ ಸಂಶಯ ಹುಟ್ಟಿಕೊಂಡಿದೆ.

news18-kannada
Updated:October 16, 2019, 7:42 PM IST
ಕುಖ್ಯಾತ ದರೋಡೆಕೋರನಿಗೆ ಖ್ಯಾತ ನಟಿಯೊಂದಿಗೆ ಸಂಬಂಧ..!
ಮುರುಗನ್
  • Share this:
ಅ.2 ರಂದು ನಾಯಿ, ಬೆಕ್ಕಿನ ಮುಖವಾಡ ಧರಿಸಿ ತಂಡವೊಂದು ತಮಿಳುನಾಡಿನ ಲಲಿತಾ ಜ್ಯುವೆಲ್ಲರಿ ಶಾಪ್‌ಗೆ ಕನ್ನಹಾಕಿದ್ದರು. ಬರೋಬ್ಬರಿ 12.50 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಈ ತಂಡ ದೋಚಿತ್ತು. ಆದರೆ ದರೋಡೆ ಬಳಿಕ ಈ ಗ್ಯಾಂಗ್​ನ ನಾಯಕ ಮುರುಗನ್‌ ಬೆಂಗಳೂರು ಕೋರ್ಟ್‌ಗೆ ಶರಣಾಗಿದ್ದ.

ಅಂತಾರಾಜ್ಯ ಕಳ್ಳನಾಗಿರುವ ಮುರುಗನ್‌ ವಿರುದ್ಧ ನಗರದ ನಾನಾ ಠಾಣೆಗಳಲ್ಲಿ30 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ. ಯಶಸ್ವಿಯಾಗಿ ದರೋಡೆ ಮಾಡಿದ್ದರೂ ಮುರುಗನ್ ಯಾಕೆ ಶರಣಾಗಿದ್ದ ಎಂಬುದು ಅಚ್ಚರಿಗೆ ಕಾರಣವಾಗಿತ್ತು.

ಅಪಾರ ಮೌಲ್ಯದ ಆಭರಣ ಎಗರಿಸಿದ್ದರಿಂದ ಮುರುಗನ್​ಗೆ ಬಂಧನ ಭೀತಿಯಂತು ಎದುರಾಗಿತ್ತು. ಅದರಲ್ಲೂ ಪೊಲೀಸರ ಶಿಕ್ಷೆ ಕಳ್ಳನನ್ನು ಮತ್ತಷ್ಟು ಚಿಂತೆಗೆ ದೂಡಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಮುರುಗನ್​ಗೆ ತಾನು ಸಿಕ್ಕಿಬೀಳುವುದಂತು ಪಕ್ಕಾ ಆಗಿತ್ತು. ನೇರವಾಗಿ ಪೊಲೀಸರಿಗೆ ಸಿಕ್ಕಾಕಿಕೊಂಡರೆ ಸಿಗುವ ಶಿಕ್ಷೆಯ ಬಗ್ಗೆ ಹೆದರಿದ್ದ. ಹೀಗಾಗಿ ಭಯದಿಂದ ನೇರವಾಗಿ ಬೆಂಗಳೂರಿನ ನ್ಯಾಯಾಲಕ್ಕೆ ಶರಣಾಗಿದ್ದನು. ಅತ್ತ ಮುರುಗನ್​​ನ ಬಲಗೈ ಬಂಟ ಸುರೇಶ್‌ ತಿರುಚಿರಪಳ್ಳಿ ಕೋರ್ಟ್‌ಗೆ ಶರಣಾಗಿದ್ದ.

ಇದೀಗ ಮುರುಗನ್ ವಿಚಾರಣೆ ನಡೆಯುತ್ತಿದೆ. ಈ ವೇಳೆ ಒಂದೊಂದೇ ಸತ್ಯವನ್ನು ದರೋಡೆಕೋರ ಹೊರಹಾಕುತ್ತಿದ್ದಾನೆ. ತಾನು ಕದಿಯುತ್ತಿದ್ದ ಆಭರಣಗಳನ್ನು ಮಾರಿ ಮಸ್ತ್ ಮಜಾ ಮಾಡುತ್ತಿದ್ದೆ ಎಂಬುದನ್ನು ಮುರುಗನ್ ಒಪ್ಪಿಕೊಂಡಿದ್ದಾನೆ. ಐಷಾರಾಮಿ ಜೀವನಕ್ಕಾಗಿಯೇ ಕಳ್ಳತನ ಮಾಡಿದ್ದೆ ಎಂಬುದನ್ನು  ತಿಳಿಸಿದ್ದಾನೆ. ಈವೆರೆಗೆ ಮಾಡಿದ್ದ ಕಳ್ಳತನದಿಂದ ಬಂದ ಹಣವನ್ನು ಚಲನಚಿತ್ರ ವ್ಯವಹಾರಗಳಲ್ಲೂ ಹೂಡಿಕೆ ಮಾಡಿರುವುದಾಗಿ ಅಚ್ಚರಿ ಮೂಡಿಸಿದ್ದಾನೆ.

ಅಷ್ಟೇ ಅಲ್ಲ ಕಾಲಿವುಡ್​ ಕೆಲ ನಟಿಯರಿಗೆ ಹಣ ನೀಡಿದ್ದೇನೆ. ಹಾಗೆಯೇ ಯುವನಟಿಯೊಂದಿಗೆ ನನಗೆ ದೈಹಿಕ ಸಂಬಂಧವೂ ಇತ್ತು ಎಂಬುದನ್ನು ಮುರುಗನ್ ಬಹಿರಂಗಪಡಿಸಿದ್ದಾರೆ. ಆದರೆ ಆ ನಟಿಯ ಹೆಸರನ್ನು ಮಾತ್ರ ಬಾಯಿ ಬಿಟ್ಟಿಲ್ಲ.  ಕಳ್ಳನ ಮಾತುಗಳನ್ನು ಕೇಳಿ ಇದೀಗ ಪೊಲೀಸರೇ ಬೆಸ್ತು ಬಿದ್ದಿದ್ದಾರೆ. ಏಕೆಂದರೆ ಮುರುಗನ್ ಮಾರಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಇದರ ನಡುವೆ ತಮಿಳು ಚಿತ್ರರಂಗದಲ್ಲಿ ನಂಟು ಹೊಂದಿರುವುದಾಗಿ ತಿಳಿಸಿ ಎಲ್ಲರನ್ನು ಬೆಚ್ಚಿ ಬೀಳಿಸಿದ್ದಾನೆ.

ಇದರಲ್ಲಿ ಎಷ್ಟು ಸತ್ಯಾಂಶವಿದೆಯೋ ಗೊತ್ತಿಲ್ಲ. ಏಕೆಂದರೆ ಮುರುಗನ್ ವಿಚಾರಣೆ ವೇಳೆ ಒಂದೊಂದೇ ಕಥೆ  ಹೇಳುತ್ತಿದ್ದಾನೆ. ಇದರಿಂದಾಗಿ ಪೊಲೀಸರಿಗೂ ಮುರುಗನ್ ಸುಳ್ಳು ಹೇಳುತ್ತಿದ್ದಾನೆಯೇ ಎಂಬ ಅನುಮಾನ ಕೂಡ ಇದೆ ಎಂದು ವರದಿಯೊಂದು ತಿಳಿಸಿದೆ.

ಇದನ್ನೂ ಓದಿ: Bigg Boss Kannada 7: ಬಿಗ್ ಬಾಸ್​ ಮನೆಯಲ್ಲಿದ್ದಾರೆ ರಾಕಿಂಗ್ ಸ್ಟಾರ್ ಯಶ್ ತಂಗಿ..!ಇನ್ನು ಮುರುಗನ್ ಗ್ಯಾಂಗ್ ಈವರೆಗೆ 100 ಕೋಟಿಗೂ ಹೆಚ್ಚಿನ ಮೌಲ್ಯದ ಕಳ್ಳತನ ಮಾಡಿದ್ದಾರೆ ಸುದ್ದಿ  ಇದೆ. ಇದರಿಂದಾಗಿ ದರೋಡೆಕೋರರ ಗುಂಪು ಚಿತ್ರರಂಗದಲ್ಲಿ ಹಣ ಹೂಡಿಕೆ ಮಾಡಿದ್ದಾರೆಯೇ ಎಂಬ ಸಂಶಯ ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ಕಳ್ಳನಾಗಿ ಚಿತ್ರರಂಗದಲ್ಲಿ ಹಣ ಹೂಡಿಕೆ ಮಾಡಿದ್ದೇನೆ ಎಂದೇಳುತ್ತಿರುವ ಮುರುಗನ್ ಕಹಾನಿಯೇ ಒಂದು ಸಿನಿಮಾದಂತಿರುವುದು ಸುಳ್ಳಲ್ಲ.

 
First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading