Bollywood Movie: ಮಕಾಡೆ ಮಲಗಿದ ಲಾಲ್ ಸಿಂಗ್ ಚೆಡ್ಡಾ, ರಕ್ಷಾ ಬಂಧನ ಮರೆತೇ ಬಿಡಿ ‘ಕೆನಡಾ ಕುಮಾರ’

2022ರಲ್ಲಿ ತೆರೆಕಂಡ ನಟ ಅಕ್ಷಯ್ ಕುಮಾರ್​ ಚಿತ್ರಗಳು ಸಾಲು ಸಾಲು ಸೋಲು ಕಂಡಿವೆ. ಈ ಚಿತ್ರವಾದ್ರು ಗೆಲ್ಲುತ್ತೆ ಅನ್ನೊ ನಿರೀಕ್ಷೆ ಹೊಂದಿದ್ದ ಅಕ್ಷಯ್ ಕುಮಾರ್​ಗೂ ನಿರಾಸೆಯಾಗಿದೆ. ಇತ್ತ ಆಮೀರ್​ ಖಾನ್ ಅವರ ಚಿತ್ರ ಕೂಡ ಬಾಕ್ಸ್​ ಆಫೀಸ್​ನಲ್ಲಿ ಅಷ್ಟೇನು ಸದ್ದು ಮಾಡಿಲ್ಲ.

ಆಮೀರ್ ಖಾನ್​, ಅಕ್ಷಯ್ ಕುಮಾರ್

ಆಮೀರ್ ಖಾನ್​, ಅಕ್ಷಯ್ ಕುಮಾರ್

  • Share this:
ಬಾಲಿವುಡ್‌ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ (Box Office) ಚೇತರಿಸಿಕೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಕಳೆದ ವಾರ ಪ್ರೇಕ್ಷಕರನ್ನು ರಂಜಿಸೋಕೆ ಬಂದ ಆಮೀರ್ ಖಾನ್ ಹಾಗೂ ಅಕ್ಷಯ್‌ ಕುಮಾರ್‌ (Akshay Kumar) ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸೋತಿದೆ. ಬಾಕ್ಸಾ ಆಫೀಸ್‌ನಲ್ಲಿ ಲಾಲ್‌ ಸಿಂಗ್‌ ಚಡ್ಡಾ (Raksha Bandhan) ಹಾಗೂ ರಕ್ಷಾ ಬಂಧನ್ ಸಿನಿಮಾಗಳ ಪರ್ಫಾರ್ಮೆನ್ಸ್‌ ನೀರಸವಾಗಿದೆ. 2022ರಲ್ಲಿ ತೆರೆಕಂಡ ನಟ ಅಕ್ಷಯ್ ಕುಮಾರ್​ ಚಿತ್ರಗಳು ಸಾಲು ಸಾಲು ಸೋಲು ಕಂಡಿವೆ. ಈ ಚಿತ್ರವಾದ್ರು ಗೆಲ್ಲುತ್ತೆ ಅನ್ನೊ ನಿರೀಕ್ಷೆ ಹೊಂದಿದ್ದ ಅಕ್ಷಯ್ ಕುಮಾರ್​ಗೂ ನಿರಾಸೆಯಾಗಿದೆ. ಇತ್ತ ಆಮೀರ್​ ಖಾನ್ (Aamir Khan) ಅವರ ಚಿತ್ರ ಕೂಡ ಬಾಕ್ಸ್​ ಆಫೀಸ್​ನಲ್ಲಿ ಅಷ್ಟೇನು ಸದ್ದು ಮಾಡಿಲ್ಲ. ಇದ್ರಿಂದ ಅಮೀರ್ ಖಾನ್ ಕೂಡ ಕಂಗೆಟ್ಟಿದ್ದಾರೆ.

ಕೆನಡಾ ಕುಮಾರನಿಗೆ ಕೆನಡಾನೇ ಗತಿ

ಈ ಹಿಂದೆ ಸಾಲು ಸಾಲು ಸಿನಿಮಾಗಳು ಸೋತಾಗ ಭಾರತ ಬಿಟ್ಟು ಕೆನಡಾಗೆ ಹೋಗಲು ಅಕ್ಷಯ್​ ಕುಮಾರ್​ ಪ್ಲ್ಯಾನ್​ ಮಾಡಿದ್ದರು. ಇದೀಗ ಮತ್ತೆ ಅವರ ಚಿತ್ರ ಸೋತಿರೋ ಹಿನ್ನೆಲೆ ಅವರಿಗೆ ಮತ್ತೆ ಅದೇ ಪರಿಸ್ಥಿತಿ ಬಂದಿದೆ ಎಂದು ನೆಟ್ಟಿಗರು ಕಾಮೆಂಟ್​ಗಳನ್ನು ಮಾಡ್ತಿದ್ದಾರೆ.  14-15 ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಸೋತಾಗ ಅವರು ಭಾರತ ಬಿಟ್ಟು ಕೆನಡಾಗೆ ತೆರಳಲು ನಿರ್ಧರಿಸಿದ್ದರು. ಅಲ್ಲಿನ ಪೌರತ್ವ ಪಡೆಯುಲ್ಲಿಯೂ ಯಶಸ್ವಿ ಆಗಿದ್ದರು. ಕಷ್ಟದ ಸಂದರ್ಭದಲ್ಲಿ ಭಾರತ ತೊರೆಯುವ ನಿರ್ಧಾರ ಮಾಡಿದ್ದಕ್ಕೆ ಅವರನ್ನು ಇಂದಿಗೂ ಜನರು ಟ್ರೋಲ್​ ಮಾಡುತ್ತಲೇ ಇದ್ದಾರೆ.

ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಲಿಲ್ಲ

ಆಗಸ್ಟ್​ 11ರಂದು ಬಿಡುಗಡೆಯಾದ ‘ರಕ್ಷಾ ಬಂಧನ್​’ ಸಿನಿಮಾದಲ್ಲಿ ಫ್ಯಾಮಿಲಿ ಕಥಾಹಂದರ ಇದೆ. ರಕ್ಷಾ ಬಂಧನ ಹಬ್ಬ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್​ ಆಗಬಹುದು ಎಂದೇ ಎಲ್ಲರೂ ಊಹಿಸಿದ್ದರು. ಆದರೆ ನಾಲ್ಕು ದಿನಕ್ಕೆ ಈ ಚಿತ್ರ ಗಳಿಸಿದ್ದು 28 ಕೋಟಿ ರೂಪಾಯಿ ಮಾತ್ರ. ಸತತ ಸೋಲಿನ ಸುಳಿಗೆ ಸಿಲುಕಿದ ಅಕ್ಷಯ್​ ಕುಮಾರ್​ ಮತ್ತೆ ಕೆನಡಾ ಕಡೆಗೆ ಮುಖ ಮಾಡುತ್ತಾರಾ ಎಂದು ಟ್ರೋಲ್​ ಮಂದಿ ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Katrina Kaif and Vicky Kaushal: ಬಾಲಿವುಡ್​ನ ಮತ್ತೊಂದು ಜೋಡಿಯಿಂದ ಗುಡ್​ನ್ಯೂಸ್​! ಆಲಿಯಾ ಬಳಿಕ ತಾಯಿಯಾಗ್ತಿದ್ದಾರಾ ಕತ್ರಿನಾ ಕೈಫ್​?

ಲಾಲ್​ ಸಿಂಗ್​ ಚಡ್ಡಾಗೆ ಕಳಪೆ ರೇಟಿಂಗ್​

‘ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಅವರು 12,000 ಮತಗಳ ಆಧಾರದ ಮೇಲೆ ಐಎಂಡಿಬಿಯಲ್ಲಿ 3.5 ರೇಟಿಂಗ್ ನೀಡಿದ್ದಾರೆ. ಜನಪ್ರಿಯ ಮೂವಿ ರೇಟಿಂಗ್ ಸೈಟ್ ನಲ್ಲಿ ಇದು ತುಂಬಾ ಕಳಪೆ ರೇಟಿಂಗ್ ಆಗಿದೆ. ವಾಸ್ತವವಾಗಿ, ‘ಲಾಲ್ ಸಿಂಗ್ ಚಡ್ಡಾ’ ಚಿತ್ರವು ಐಎಂಡಿಬಿಯಲ್ಲಿ ನಟ ಆಮಿರ್ ಅವರ ಅತ್ಯಂತ ಕಡಿಮೆ ರೇಟಿಂಗ್ ಚಿತ್ರವಾಗಿದೆ.

Aamir Khans Laal Singh Chaddha movie is a lowest rated film on IMDb stg asp
ಲಾಲ್ ಸಿಂಗ್ ಚಡ್ಡಾ


ಅವರ ಪ್ರಮುಖ ಫ್ಲಾಪ್ ಚಿತ್ರಗಳಾದ 2000ನೇ ಇಸವಿಯಲ್ಲಿ ಬಿಡುಗಡೆಯಾದ ಮೇಲಾ, 2013 ರಲ್ಲಿ ಬಿಡುಗಡೆಯಾದ ಧೂಮ್ 3 ಮತ್ತು 2018 ರಲ್ಲಿ ಬಿಡುಗಡೆಯಾದ ಥಗ್ಸ್ ಆಫ್ ಹಿಂದೂಸ್ತಾನ್ ಉತ್ತಮ ರೇಟಿಂಗ್ ಪಡೆದಿದ್ದವು. ಈ ಚಿತ್ರದ ತಯಾರಕರಿಗೆ ಇದು ಉತ್ತಮವಾದ ಸಂಕೇತವಲ್ಲ, ಆದಾಗ್ಯೂ, ಹೆಚ್ಚಿನ ಮತಗಳು ಚಲಾವಣೆಯಾದರೆ ರೇಟಿಂಗ್ ಗಳು ಬದಲಾಗುತ್ತವೆ, ಆದ್ದರಿಂದ ಮುಂಬರುವ ಸಮಯದಲ್ಲಿ ರೇಟಿಂಗ್ ಹೆಚ್ಚಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: Shivarajkumar: ರಜನಿಕಾಂತ್ ಜೈಲರ್ ಚಿತ್ರದಲ್ಲಿ ಶಿವಣ್ಣ ಪಾತ್ರ ರಿವೀಲ್! ಹೇಗಿರುತ್ತೆ ಟಗರು ಖದರ್!?

ಮೇಲೇಳಲಿಲ್ಲ ಅಮೀರ್ ಚಿತ್ರ

ಅಮೀರ್ ಖಾನ್​ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತಿದ್ದಾರೆ. ಸಿನಿಮಾ ಬಗ್ಗೆ ನೆಗೆಟಿವ್ ಟಾಕ್ ಹೆಚ್ಚಾಗಿದೆ. ಸಿನಿಮಾ ಮೊದಲ ದಿನ 11 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕಳೆದ 10 ವರ್ಷಗಳಲ್ಲಿ ಆಮಿರ್ ಖಾನ್ ನಟನೆಯ ಯಾವುದೇ ಸಿನಿಮಾ ಮೊದಲ ದಿನ ಇಷ್ಟು ಕಡಿಮೆ ಕಲೆಕ್ಷನ್ ಮಾಡಿದ ಉದಾಹರಣೆ ಇಲ್ಲ ಎಂಬ ಚರ್ಚೆ ಕೂಡ ನಡೀತಿದೆ.
Published by:Pavana HS
First published: