HOME » NEWS » Entertainment » LAL KRISHNA ADVANI GET EMOTIONAL AFTER WATCHING VIDHU VINOD CHOPRA FILMS SHIKARA AE

L.K. Advani Video: ಶಿಕಾರಾ ಸಿನಿಮಾ ನೋಡಿ ಎಲ್.ಕೆ. ಅಡ್ವಾಣಿ ಕಣ್ಣೀರಿಟ್ಟ ವಿಡಿಯೋ ಇಲ್ಲಿದೆ..!

Shikara Movie - ಗಣ್ಯರಿಗಾಗಿ ಶಿಕಾರಾ ಸಿನಿಮಾದ ವಿಶೇಷ ಪ್ರದರ್ಶನವನ್ನು ವಿದು ವಿನೋದ್​ ಚೋಪ್ರಾ ಫಿಲ್ಮ್ಸ್​ ಆಯೋಜಿಸಿತ್ತು. ಅದಕ್ಕೆ ಬಿಜೆಪಿಯ ಹಿರಿಯ ಮುಖಂಡ ಎಲ್​.ಕೆ. ಅಡ್ವಾಣಿ. ಅವರನ್ನೂ ಆಹ್ವಾನಿಸಲಾಗಿತ್ತು. 

Anitha E | news18-kannada
Updated:February 8, 2020, 12:35 PM IST
L.K. Advani Video: ಶಿಕಾರಾ ಸಿನಿಮಾ ನೋಡಿ ಎಲ್.ಕೆ. ಅಡ್ವಾಣಿ ಕಣ್ಣೀರಿಟ್ಟ ವಿಡಿಯೋ ಇಲ್ಲಿದೆ..!
ಮಗಳು ಪ್ರತಿಭಾ ಜೊತೆ ಸಿನಿಮಾ ನೋಡಿದ ಎಲ್​.ಕೆ. ಅಡ್ವಾಣಿ
  • Share this:
'ಶಿಕಾರಾ' ಕಾಶ್ಮೀರಿ ಪಂಡಿತರ ಮೇಲೆ ಮಾಡಿರುವ ಬಾಲಿವುಡ್ ಸಿನಿಮಾ. ನಿರ್ದೇಶಕ ವಿದು ವಿನೋದ್​ ಚೋಪ್ರಾರ ಈ ಸಿನಿಮಾವನ್ನು 1990ರಲ್ಲಿ ಕಾಶ್ಮೀರದಿಂದ ಹೊರಬಂದ ಕಾಶ್ಮೀರಿ ಪಂಡಿತರ ಮೇಲೆ ನಿರ್ಮಿಸಲಾಗಿದೆ. ಈ ಚಿತ್ರ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. 

ಗಣ್ಯರಿಗಾಗಿ 'ಶಿಕಾರಾ' ಸಿನಿಮಾದ ವಿಶೇಷ ಪ್ರದರ್ಶನವನ್ನು ವಿದು ವಿನೋದ್​ ಚೋಪ್ರಾ ಫಿಲ್ಮ್ಸ್​ ಆಯೋಜಿಸಿತ್ತು. ಅದಕ್ಕೆ ಬಿಜೆಪಿಯ ಹಿರಿಯ ಮುಖಂಡ ಎಲ್​.ಕೆ. ಅಡ್ವಾಣಿ ಅವರನ್ನೂ ಆಹ್ವಾನಿಸಲಾಗಿತ್ತು.

Lal Krishna Advani get emotional after watching vidhu vinod chopra films Shikara,
'ಶಿಕಾರಾ' ಸಿನಿಮಾದ ಪೋಸ್ಟರ್​


ಮಗಳು ಪ್ರತಿಭಾ ಜತೆ ವಿಶೇಷ ಪ್ರದರ್ಶನ ನೋಡಲು ಅಡ್ವಾಣಿ ಬಂದಿದ್ದರು. ಸಿನಿಮಾ ನೋಡುತ್ತಿದ್ದ ಕೇಂದ್ರ ಸಲಹಾ ಸಮಿತಿ ಸದಸ್ಯರಾಗಿರುವ ಮಾಜಿ ಉಪ ಪ್ರಧಾನಿ ಅಡ್ವಾಣಿ ಅವರು ಕಾಶ್ಮೀರಿ ಪಂಡಿತರ ನೋವನ್ನು ಕಂಡು ಭಾವುಕರಾದರು. ಅವರ ಕಣ್ಣು ತುಂಬಿಬಂತು. ಜೊತೆಗಿದ್ದ ಮಗಳು ಪ್ರತಿಭಾರ ಕಣ್ಣು ಸಹ ಒದ್ದೆಯಾಗಿತ್ತು. ಈ ಕ್ಷಣವನ್ನು ವಿದು ವಿನೋದ್​ ಚೋಪ್ರಾ ಅವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಪೋಸ್ಟ್​ ಮಾಡಿರುವ ವಿದು ವಿನೋದ್​ ಚೋಪ್ರಾ ಹೀಗೆ ಬರೆದುಕೊಂಡಿದ್ದಾರೆ. 'ಅಡ್ವಾಣಿ ಅವರು ಸಿನಿಮಾ ನೋಡಿ ಆರ್ಶೀವಾದ ಮಾಡಿದ್ದಾರೆ. ಅವರಿಗಾಗಿ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ಸಿನಿಮಾ ನೋಡಿದ ನಂತರ ಅಡ್ವಾಣಿ ಅವರಿಂದ ಕಣ್ಣೀರನ್ನು ತಡೆಯಲಾಗಲಿಲ್ಲ' ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: Anupama Parameshwaran: ಅವಕಾಶಗಳಿಗಾಗಿ ಹೀಗೆಲ್ಲ ಮಾಡುತ್ತಿದ್ದಾರಾ ಪವರ್​ ಸ್ಟಾರ್​ ನಾಯಕಿ ಅನುಪಮಾ..!

ಈ ಸಿನಿಮಾಗೆ ನಟ ಅಮೀರ್ ಖಾನ್​ ಸಹ ಶುಭ ಕೋರಿ ಟ್ವೀಟ್​ ಮಾಡಿದ್ದಾರೆ. ಅಲ್ಲದೆ 'ಶಿಕಾರಾ ಇತಿಹಾಸದಲ್ಲೇ ನಡೆದಿರುವ ದುರಂತ ಘಟನೆ. ಇದರ ಬಗ್ಗೆ ಹೇಳುವ ಅಗತ್ಯ ಇದೆ' ಎಂದಿದ್ದಾರೆ ಅಮೀರ್​​ ಖಾನ್​. ಈ ಸಿನಿಮಾದಲ್ಲಿ 4 ಸಾವಿರಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಅಭಿನಯಿಸಿದ್ದಾರೆ. ಜೊತೆಗೆ ಒಂದು ಸೊಗಸಾದ ಪ್ರೇಮ ಕತೆಯೂ ಇದೆ.

Saina Nehwal: ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರಾ ಸೈನಾ ನೆಹ್ವಾಲ್: ವೈರಲ್​ ಆಗುತ್ತಿವೆ ಚಿತ್ರಗಳು​..!

First published: February 8, 2020, 12:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories