ಸದ್ಯ ಚಿತ್ರರಂಗ ಸೇರಿದಂತೆ ಕಿರುತೆರೆಯ ನಟ, ನಟಿಯರು ತಂದೆ- ತಾಯಿಯಾಗುತ್ತಿದ್ದು, ಅಭಿಮಾನಿಗಳಲ್ಲಿ ಸಂತಸ ತಂದಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ತಾಯಿಯಾದರೆ, ಕಳೆದ ಕೆಲ ದಿನಗಳ ಹಿಂದೆ ನಟಿ ಕಾಜಲ್ ಅಗರ್ವಾಲ್ (Kajal Aggarwal) ಪಾಲಕರಾಗಿ ಬಡ್ತಿ ಪಡೆದು, ಹೊಸ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ. ಇದರ ನಡುವೆ ಇದೀಗ ಕನ್ನಡ ಕಿರುತೆರೆಯ ಜನಪ್ರೀಯ ಧಾರಾವಹಿ ಲಕ್ಷ್ಮೀ ಬಾರಮ್ಮ ( Lakshmi Baramma), 'ಗೃಹಲಕ್ಷ್ಮೀ' ಮುಂತಾದ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ ನಟ ಚಂದು ಬಿ ಗೌಡ (Chandu Gowda) ಸಹ ಈ ಸಾಲಿಗೆ ಸೇರ್ಫಡೆಯಾಗಲಿದ್ದಾರಂತೆ. ಹೌದು, ಸದ್ಯ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಚಂದು ಗೌಡ ಇನ್ನೇನು ಕೆಲ ದಿನಗಳ್ಲಲಿಯೇ ತಂದೆಯಾಗಿ ಬಡ್ತಿಪಡೆಯಲಿದ್ದಾರೆ.
ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಲಿದ್ದಾರಾ ಶಾಲಿನಿ?:
ನಟ ಚಂದು ಗೌಡ ಪತ್ನಿ ಶಾಲಿನಿ ನಾರಾಯಣ್ ಕೆಲ ದಿನಗಳ ಹಿಂದೆ ಮದುವೆಯೊಂದರಲ್ಲಿ ಭಾಗಿಯಾದ ಫೋಟೋvನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು ಶಾಲಿನಿಯವರು ಗರ್ಭಿಣಿಯಾಗಿದ್ದಾರೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಫೋಟೋ ಸಹ ಸಖತ್ ವೈಲರ್ ಆಗಿತ್ತು. ಕೆಲವರಂತೂ ಶಾಲಿನಿ ಮತ್ತು ಚಂದು ದಂಪತಿಗಳಿಗೆ ಶುಭಾಷಯಗಳನ್ನೂ ಸಹ ತಿಳಿಸಿದ್ದರು. ಆದರೆ ಇದನ್ನೆಲ್ಲಾ ಗಮನಿಸದ ಚಂದು ನಂತರ ಸಾಮಾಜಿಕ ಜಾಲತಾಣದಲ್ಲಿ ತಾವಿಬ್ಬರು ಪಾಲಕರಾಗುತ್ತಿರುವುದಾಗಿ ತಿಳಿಸಿದ್ದರು.
ಪಾಲಕರಾಗುತ್ತಿರುವ ವಿಷಯವನ್ನು ತಿಳಸಿದ ಚಂದು:
ಇನ್ನು, ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹರಿದಾಡಲು ಆರಮಬಿಸುತ್ತಿದ್ದಂತೆ ಸ್ವತಃ ಚಂದು ಅವರೇ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಅಧಿಕೃತಗೊಳಿಸಿದರು. ಈ ಕುರಿತು ಬರೆದುಕೊಂಡಿರುವ ಅವರು, ‘ಕುಟುಂಬಕ್ಕೆ ಹೊಸಬರನ್ನು ಸ್ವಾಗತ ಮಾಡಲು ಎಲ್ಲ ರೆಡಿಯಾಗಿದ್ದೆವೆ‘ ಎಂದು ಚಂದು ಗೌಡ ಸಂಸತದ ಸುದ್ದಿಯನ್ನು ಹಂಚಿಕೊಂಡಿದ್ದರು. ಈ ಫೋಸ್ಟ್ ನೋಡಿದ ಅಭಿಮಾನಿಗಳು ಹಾಗೂ ದಿಶಾ ಮದನ್, ರಾಜೇಶ್ ಧ್ರುವ, ಆಕಾಶ್ ಬೈರಮುಡಿ, ಸಿರಿ ರಾಜು, ನಿರಂಜನ್ ದೇಶಪಾಂಡೆ ಮುಂತಾದವರು ಶುಭಾಶಯ ತಿಳಿಸಿದ್ದಾರೆ.
2020ರಲ್ಲಿ ಅಕ್ಟೋಬರ್ 29ರಂದು ಚಂದು ಬಿ ಗೌಡ ಹಾಗೂ ಶಾಲಿನಿ ನಾರಾಯಣ್ ಸರಳವಾಗಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು, ಮಾಡೆಲಿಂಗ್ ಮಾಡುತ್ತಿದ್ದ ಶಾಲಿನಿ ನಾರಾಯಣ್ ಅವರ ಪರಿಚಯದ ನಂತರ ಸ್ನೇಹವಾಘಿ ನಂತರ ಪ್ರತಿಸಿ ಇವರಿಬ್ಬರೂ ವಿವಾಹವಾದರು. ಸುಮಾರು 4 ವರ್ಷಗಳ ಕಾಲ ಪ್ರತಿಯಲ್ಲಿದ್ದ ಇವರು ಕೊನೆಯ 2020ರಲ್ಲಿ ಮನೆಯವರ ಒಪ್ಪಿಗೆ ಮೇರೆಗೆ ವಿವಾಹವಾದರು.
ಚಂದು ಗೌಡ ಅವರು ಕಿರುತೆರೆಯ ಲಕ್ಷ್ಮೀ ಬಾರಮ್ಮಾ, ಗೃಹಲಕ್ಷ್ಮೀ ಸೇರಿದಂತೆ ಅನೇಕ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಸದ್ಯ ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಅವರು ರಾಬರ್ಟ್ ಸಿನಿಮಾದಲ್ಲಿ ಮೊದಲ ಬಾರಿಗೆ ನೆಗೆಟಿವ್ ರೋಲ್ನಲ್ಲಿ ನಟಿಸಿದರು. ಇದರೊಂದಿಗೆ ಕುಷ್ಕ, ಜಾಕ್ಫಾಟ್, ಕಮರೊಟ್ಟು ಚೆಕ್ಪೋಸ್ಟ್, ದ್ವಿಪಾತ್ರ, ಶ್ರೀ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ