ಭಾರತೀಯ ಸಿನಿಮಾ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಲಿದೆ ಎನ್ನುವಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಆರ್ಆರ್ಆರ್ ಅರ್ಥಾತ್ ರಣ ರೌದ್ರ ರುಧಿರ. ಬಾಹುಬಲಿಯಂತಹ ಮಾಸ್ಟರ್ ಪೀಸ್ ಸೃಷ್ಟಿಸಿದ್ದ ಮಾಸ್ಟರ್ ಡೈರೆಕ್ಟರ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಆರ್ಆರ್ಆರ್. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಲು ರೆಡಿಯಾಗುತ್ತಿರುವ ಆರ್ಆರ್ಆರ್ ಮೊದಲ ದಿನದಿಂದಲೂ ಪ್ರತಿ ಹಂತದಲ್ಲೂ ಸಾಕಷ್ಟು ಕಾತರ ಸೃಷ್ಟಿಸಿದೆ. ತಾರಾಗಣ, ಮೇಕಿಂಗ್, ಬಜೆಟ್... ಹೀಗೆ ಪ್ರತಿ ವಿಷಯದಲ್ಲೂ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿದೆ ಆರ್ಆರ್ಆರ್. ಇಂತಹ ದೃಶ್ಯಕಾವ್ಯ ಈಗ ಆಡಿಯೋ ರೈಟ್ಸ್ ವಿಷಯದಲ್ಲೂ ಹೊಸ ರೆಕಾರ್ಡ್ ಮಾಡಿದೆ.
ಹೌದು, ರಾಕಿಂಗ್ ಸ್ಟಾರ್ ಯಶ್ ನಟಿಸಿರುವ, ಪ್ರಶಾಂತ್ ನೀಲ್ ನಿರ್ದೇಶನದ, ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್ 2 ಚಿತ್ರ ಇದುವರೆಗೆ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬೆಲೆಗೆ ಆಡಿಯೋ ರೈಟ್ಸ್ ಪಡೆದಿದ್ದ ಸಿನಿಮಾ ಆಗಿತ್ತು. ಆ ಸಿನಿಮಾದ ಹಾಡುಗಳ ಹಕ್ಕನ್ನು ಲಹರಿ ಮ್ಯೂಸಿಕ್ ಸಂಸ್ಥೆಯೇ ಬರೋಬ್ಬರಿ 7.20 ಕೋಟಿ ರೂಪಾಯಿಗೆ ಖರೀದಿಸಿತ್ತು. ಕೆಜಿಎಫ್ ಚಾಪ್ಟರ್ 1 ಅನ್ನು 3.60 ಕೋಟಿಗೆ ಖರೀದಿಸಿದ್ದ ಲಹರಿ ಮ್ಯೂಸಿಕ್, ಕೆಜಿಎಫ್ ಚಾಪ್ಟರ್ 2ಗೆ ಅದರ ದುಪ್ಪಟ್ಟು ಅರ್ಥಾತ್ 7.20 ಕೋಟಿ ರೂಪಾಯಿ ನೀಡಿತ್ತು. ಇದೇ ಜುಲೈ ಮೊದಲ ವಾರ ಈ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈಗ ಜುಲೈ ಕೊನೆಯ ವಾರವೇ ಲಹರಿ ಸಂಸ್ಥೆ ತನ್ನ ದಾಖಲೆಯನ್ನು ತಾನೇ ಮುರಿದಿದೆ. ಹೌದು, ಮೂಲಗಳ ಪ್ರಕಾರ ಆರ್ಆರ್ಆರ್ ಸಿನಿಮಾದ ಆಡಿಯೋ ಹಕ್ಕುಗಳನ್ನು ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಿಂತಲೂ ಹೆಚ್ಚು ಹಣ ನೀಡಿ ಖರೀದಿಸಿದ್ದಾರೆ ಎನ್ನಲಾಗಿದೆ.
Glad to acquire the music rights of India’s Biggest Action Drama, @SSRajamouli’s @RRRMovie 🤩🔥🌊
An @mmkeeravaani Musical
🎶 on @TSeries & @LahariMusic#RRRAudioOnTseriesLahari@tarak9999 @AlwaysRamCharan @ajaydevgn @aliaa08 pic.twitter.com/6ZFlL613fa
— Lahari Music (@LahariMusic) July 26, 2021
ಬರೋಬ್ಬರಿ 350 ಕೋಟಿ ರೂಪಾಯಿಗೂ ಅಧಿಕ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿರುವ ಆರ್ಆರ್ಆರ್, ಒಂದು ಐತಿಹಾಸಿಕ ಸಿನಿಮಾ. ಬ್ರಿಟಿಷರು ಹಾಗೂ ಹೈದರಾಬಾದ್ ನಿಜಾಮರ ವಿರುದ್ಧ ಹೋರಾಡಿದ ಅಲ್ಲೂರಿ ಸೀತಾರಾಮರಾಜು ಹಾಗೂ ಕೊಮರಮ್ ಭೀಮ್ ಎಂಬ ಇಬ್ಬರು ಧೀರ ಸ್ವಾತಂತ್ರ್ರ್ಯ ಸೇನಾನಿಗಳ ಜೀವನಾಧಾರಿತ ಚಿತ್ರ. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್‍ಚರಣ್ ತೇಜ ಹಾಗೂ ಕೊಮರಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‍ಟಿಆರ್ ನಟಿಸುತ್ತಿದ್ದು, ಬಾಲಿವುಡ್ ಆ್ಯಕ್ಷನ್ ಕಿಂಗ್ ಅಜಯ್ ದೇವ್ಗನ್, ನಟಿ ಆಲಿಯಾ ಭಟ್, ಸಮುತಿರಕಣಿ, ಶ್ರಿಯಾ ಸರಣ್, ಛತ್ರಪತಿ ಶೇಖರ್, ರಾಜೀವ್ ಕನಕಲ ಜೊತೆಗೆ ಆಲಿಸನ್ ಡೂಡಿ, ರೇ ಸ್ಟೀವನ್ಸನ್ ಸೇರಿದಂತೆ ಹಲವು ಹಾಲಿವುಡ್ ಕಲಾವಿದರೂ ಆರ್ಆರ್ಆರ್ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: RIP Jayanthi: ನೇತ್ರ ದಾನ: ಇಬ್ಬರು ಅಂಧರ ಬಾಳಿಗೆ ಬೆಳಕಾಗಲಿರುವ ನಟಿ ಜಯಂತಿ..!
ಎಲ್ಲವೂ ಅಂದುಕೊಂಡಂತಾಗಿದ್ದರೆ ಇಷ್ಟು ಹೊತ್ತಿಗಾಗಲೇ ರಣ ರೌದ್ರ ರುಧಿರ ತೆರೆಯ ಮೇಲೆ ವಿಜೃಂಭಿಸಿ ಹಲವು ದಿನಗಳೇ ಆಗಬೇಕಿತ್ತು. ಆದರೆ ಕೊರೊನಾ ಹಾಗೂ ಲಾಕ್‍ಡೌನ್‍ನಿಂದಾಗಿ ಮುಂದೂಡಲ್ಪಡುತ್ತಾ ಬಂದಿದೆ. ಆದರೆ ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಈ ಮಾಸ್ಟರ್‍ಪೀಸ್ ಇದೇ ಅಕ್ಟೋಬರ್ 13ರಂದು ವಿಶ್ವದಾದ್ಯಂತ ರಿಲೀಸ್ ಆಗುವ ನಿರೀಕ್ಷೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ