HOME » NEWS » Entertainment » LAHARI AUDIO COPANY PURCHASED THE AUDIO RIGHTS OF SUDEEPS MOVIE PAILWAAN

Pailwaan: ಲಹರಿ ಸಂಸ್ಥೆ​ ಪಾಲಾಯ್ತು ಪೈಲ್ವಾನ ಚಿತ್ರ ಆಡಿಯೋ ಹಕ್ಕು

Pailwaan: ಪೈಲ್ವಾನ್​ ಸಿನಿಮಾ ಬಿಡುಗಡೆ ದಿನಾಂಕ ಕುರಿತಾಗಿ ಈಗಾಗಲೇ ಸಾಕಷ್ಟು ಸುದ್ದಿ ಹರಿದಾಡುತ್ತಿವೆ. ಹೀಗಿರುವಾಗಲೇ ಸುದೀಪ್​ ಈ ಸಿನಿಮಾ ಒಂದು ತಿಂಗಳು ಮುಂದಕ್ಕೆ ಹೋಗಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಸಿನಿಮಾದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ತನ್ನದಾಗಿಸಿಕೊಂಡಿರುವ ಸುದ್ದಿಯನ್ನೂ ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.

Anitha E | news18
Updated:July 6, 2019, 4:32 PM IST
Pailwaan: ಲಹರಿ ಸಂಸ್ಥೆ​ ಪಾಲಾಯ್ತು ಪೈಲ್ವಾನ ಚಿತ್ರ ಆಡಿಯೋ ಹಕ್ಕು
ಪೈಲ್ವಾನ್​ ಸಿನಿಮಾದಲ್ಲಿ ಸುದೀಪ್​
  • News18
  • Last Updated: July 6, 2019, 4:32 PM IST
  • Share this:
ಸ್ಯಾಂಡಲ್​ವುಡ್​ನಲ್ಲಿ ಬಿಡುಗಡೆಯಾಗದೆಯೇ ಸದ್ಯಕ್ಕೆ ಸದ್ದು ಮಾಡುತ್ತಿರುವ ಸಿನಿಮಾಗಳ ಪೈಕಿ 'ಪೈಲ್ವಾನ್' ಸಹ ಒಂದು. ಕಿಚ್ಚ ಸುದೀಪ್​ ಅಭಿನಯದ ಈ ಸಿನಿಮಾದ ಆಡಿಯೋ ಹಕ್ಕು ಈಗ ಲಹರಿ ಸಂಸ್ಥೆ ಪಾಲಾಗಿದೆ.

ಸುದೀಪ್​ ಅವರನ್ನು ಬೆಳ್ಳಿ ಪರದೆ ಮೇಲೆ ಪೈಲ್ವಾನ್​ ಆಗಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಸಿನಿಮಾದ ರಿಲೀಸ್​ ದಿನಾಂಕ ಮುಂದೂಡಿದ ಕಾರಣಕ್ಕೆ ಕೊಂಚ ಬೇಸರ ಇದೆ. ಆದರೂ ಕಿಚ್ಚಿನ ಹುಟ್ಟುಹಬ್ಬಕ್ಕೆ ಚಿತ್ರ ತೆರೆಕಾಣಲಿರುವ ಸುದ್ದಿ ಕೊಂಚ ನೆಮ್ಮದಿ ಕೊಟ್ಟಿದೆ.

ಹೀಗಿರುವಾಗಲೇ ಈ ಚಿತ್ರದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ. ಹೀಗೆಂದು ಖುದ್ದು ಸಂಸ್ಥೆಯ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ.


ಲಹರಿ ಸಂಸ್ಥೆಯ ಟ್ವೀಟ್​ ಅನ್ನು ರೀಟ್ವೀಟ್​ ಮಾಡುವ ಮೂಲಕ ಕಿಚ್ಚ ಈ ಸುದ್ದಿಯನ್ನು ಖಚಿತ ಪಡಿಸಿದ್ದಾರೆ.

 



ಅರ್ಜುನ್​ ಜನ್ಯ ಸಂಗೀತ ನೀಡಿರುವ ಈ ಸಿನಿಮಾದಲ್ಲಿ ಸುದೀಪ್​ಗೆ ನಾಯಕಿಯಾಗಿ ಬಾಲಿವುಡ್ನ ಕಿರುತೆರೆ ನಟಿ ಹಾಗೂ ಟಾಲಿವುಡ್​ನಲ್ಲಿ ನಾಗಾರ್ಜುನ ಜತೆ ತೆರೆ ಹಂಚಿಕೊಂಡಿರುವ ಆಕಾಂಕ್ಷ ಸಿಂಗ್​ ಅಭಿನಯಿಸಿದ್ದಾರೆ.

ಇದನ್ನೂ ಓದಿ: Kurukshetra Video Song: ಕೌರವಾಧಿಪತಿ ದುರ್ಯೋಧನನಾಗಿ ಘರ್ಜಿಸಿದ ಡಿಬಾಸ್​ ದರ್ಶನ್​..!

'ಪೈಲ್ವಾನ್'​ ಸಿನಿಮಾ ಕುರಿತಂತೆ ಸುದೀಪ್​ ಈಗಾಗಲೇ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇನ್ನು ಚಿತ್ರ ಕುರಿತಂತೆ ಸಾಕಷ್ಟು ಕೆಲಸಗಳು ಬಾಕಿ ಇವೆಯಂತೆ. ಅದಕ್ಕಾಗಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆಯಂತೆ. ಅಲ್ಲದೆ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರವನ್ನು ತೆರೆಗೆ ತರಲು ಯೋಚಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.

Sunny Leone: ಪಡ್ಡೆಗಳಿಗೆ ಸಮೂಹ ಸನ್ನಿ ಹಿಡಿಸಿದ್ದ ಮಾಜಿ ನೀಲಿ ತಾರೆ ಸನ್ನಿಗೂ ಇತ್ತಂತೆ ಆ ಕಾಯಿಲೆ..!

First published: July 6, 2019, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories