• Home
  • »
  • News
  • »
  • entertainment
  • »
  • Nayanthara: ಬರ್ತಿದೆ ಲೇಡಿ ಸೂಪರ್ ಸ್ಟಾರ್ ನಯನತಾರ 75ನೇ ಸಿನಿಮಾ!

Nayanthara: ಬರ್ತಿದೆ ಲೇಡಿ ಸೂಪರ್ ಸ್ಟಾರ್ ನಯನತಾರ 75ನೇ ಸಿನಿಮಾ!

ನಯನತಾರ

ನಯನತಾರ

ನಯನತಾರ ವೃತ್ತಿಜೀವನದ 75ನೇ ಸಿನೆಮಾ ಘೋಷಣೆ. ನಿಲೇಶ್ ಕೃಷ್ಣ ಚಿತ್ರದ ನಿರ್ದೇಶನ ಮಾಡಲಿದ್ದಾರೆ. ನಟ ಜೈ ಮತ್ತು ಸತ್ಯರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಕೊಳ್ಳಲಿದ್ದಾರೆ.

  • Share this:

ಕಾಲಿವುಡ್​ನ  ಲೇಡಿ ಸೂಪರ್ ಸ್ಟಾರ್ ನಯನತಾರ (Nayanthara) ಅವರು ತಮ್ಮ ಸಿನಿ ಪಯಣದಲ್ಲಿ ಅನೇಕ ಯಶಸ್ಸಿ ಸಿನಿಮಾಗಳನ್ನು ಮಾಡಿ ಜನರ ಮನಸ್ಸು ಗೆದ್ದಿದ್ದಾರೆ. ಬೆಂಗಳೂರಿನಲ್ಲಿ (Bengaluru)  ಜನಿಸಿದ ನಯನತಾರ ತಮಿಳು, ತೆಲುಗು ಮತ್ತು ಮಲಯಾಳಂ ಪ್ರಧಾನ ಭಾಷೆಗಳಲ್ಲಿ  ಪ್ರಮುಖವಾಗಿ ನಟಿಸಿದ್ದಾರೆ. ಇದಲ್ಲದೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಈ ಹಿಂದೆ ಕಾತುವಾಕುಲ ರೆಂಡು ಕಾದಲ್ (Kaathuvaakula Rendu Kaadhal) ಎಂಬ ದೊಡ್ಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ತನ್ನ 75ನೇ ಸಿನಿಮಾಕ್ಕೆ ತಯಾರಾಗಿದ್ದಾರೆ. ಈ ಸಿನಿಮಾವು ನೀಲೇಶ್ ಕೃಷ್ಣ (Nilesh Krishna) ಅವರ ನಿರ್ದೇಶನದಲ್ಲಿ ಮೂಡಿಬರಲಿದೆ.


ಲೇಡಿ ಸೂಪರ್ ಸ್ಟಾರ್ 75
NAAD ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ಸಹಯೋಗದೊಂದಿಗೆ ಜೀ­ ಸ್ಟುಡಿಯೋಸ್ ನಿರ್ಮಿಸಿದ, ನಯನತಾರಾ ಅವರ ಮುಂಬರುವ ಚಿತ್ರಕ್ಕೆ ತಾತ್ಕಾಲಿಕವಾಗಿ ಲೇಡಿ ಸೂಪರ್ ಸ್ಟಾರ್ 75 ಎಂದು ಹೆಸರಿಸಲಾಗಿದೆ. ಜುಲೈ 12ರಂದು ಸರಳ ರೀತಿಯಲ್ಲಿ ಧಾರ್ಮಿಕ ವಿಧಾನಗಳೊಂದಿಗೆ ಚಲನಚಿತ್ರದ ಕೆಲಸವನ್ನು ಪ್ರಾರಂಭಿಸಲಾಯಿತು. ಸುಮಾರು ಎರಡು ದಶಕಗಳ ಕಾಲದ ನಯನತಾರ ಸೂಪರ್ ಹಿಟ್ ಸಿನೆಮಾ ಪಯಣದಲ್ಲಿ ಇದು 75ನೇ ಚಿತ್ರವಾಗಲಿದೆ. ನಿರ್ದೇಶಕ ನಿಲೇಶ್ ಕೃಷ್ಣ ನಯನತಾರ ಅವರ 75ನೇ ಸಿನಿಮಾದ ನಿರ್ದೇಶನವನ್ನು ಮಾಡಲಿದ್ದಾರೆ. ಇವರು ಖ್ಯಾತ ನಿರ್ದೇಶಕ ಶಂಕರ್ ಬಳಿ ಸಹಾಯಕ ನಿರ್ದೇಶಕರಾಗಿದ್ದಾರೆ.


ಅಧಿಕೃತವಾಗಿ ಟ್ವೀಟ್ ಮಾಡಿದ ಜೀ ಸ್ಟುಡಿಯೋಸ್
"ನಯನತಾರ ಅವರ 75ನೇ ಸಿನೆಮಾವನ್ನು ಮಾಡಲು ಜೀ ಸ್ಟುಡೀಯೋಸ್ ತುಂಬಾ ಉತ್ಸುಕವಾಗಿದೆ. ಅತೀ ಶೀಘ್ರದಲ್ಲಿ ಸಿನೆಮಾದ ಶೂಟಿಂಗ್ ಕೆಲಸಗಳು ಪ್ರಾರಂಭವಾಗಲಿದೆ." ಎಂದು ಜೀ ಸ್ಟುಡಿಯೋಸ್ ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಜುಲೈ 12ರಂದು ಘೋಷಿಸಿತು.


ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿ ಡೇರಿಂಗ್ ಸ್ಟೆಪ್, ಯಾರೂ ಊಹಿಸಿರಲಿಲ್ಲ ನ್ಯಾಚುರಲ್​ ಬ್ಯೂಟಿಯ ಈ ನಿರ್ಧಾರ!


ಸಿನೆಮಾ ತಂಡದ ಅಭಿಪ್ರಾಯ
ಈ ಚಿತ್ರದ ಬರಹಗಾರ ಮತ್ತು ನಿರ್ದೇಶಕರಾದ ನಿಲೇಶ್ ಕೃಷ್ಣ ಅವರು, "ಎರಡು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಟ್ರೈಡೆಂಟ್ ಆರ್ಟ್ಸ್ ಮತ್ತು ಜೀ ಸ್ಟುಡಿಯಸ್​ ಅಡಿಯಲ್ಲಿ ಸಿನೆಮಾ ನಿರ್ದೇಶನ ಮಾಡಲು ಅವಕಾಶ ಸಿಕ್ಕಿರುವುದಕ್ಕಾಗಿ ನಾನು ತುಂಬಾ ಖುಷಿಯಾಗಿದ್ದೇನೆ. ಇದಕ್ಕಾಗಿ ನಾನು ಕೃತಜ್ಞನಾಗಿರುತ್ತೇನೆ. ನಯನತಾರ ಅವರ ಸಿನಿಮಾ ಮೈಲಿಗಲ್ಲುಗಳಲ್ಲಿ ಅವರ 75ನೇ ಸಿನಿಮಾವನ್ನು ನಾನು ನಿರ್ದೇಶಿಸುತ್ತಿದ್ದು ಅವರ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಲು ಬದ್ದನಾಗಿರುತ್ತೇನೆ. ನನಗೆ ದೊರೆತ ಈ ಅವಕಾಶವನ್ನು ನಿರ್ದೇಶಕ ಶಂಕರ್, ನನ್ನ ಗುರು ಮತ್ತು ನನ್ನ ಮಾರ್ಗದರ್ಶಕರಿಗೆ ನಾನು ಅಪಿರ್ಸುತ್ತೇನೆ." ಎಂದರು.


ಅಸೋಸಿಯೇಷನ್ ಬಗ್ಗೆ ಪ್ರತಿಕ್ರಿಯಿಸಿದ ಜೀ ಸ್ಟುಡಿಯೋಸ್ ನ ಸೌತ್ ಮೂವೀಸ್ ಮುಖ್ಯಸ್ಥ ಅಕ್ಷಯ್ ಕೇಜ್ರಿವಾಲ್ "ಜೀ ಸ್ಟುಡಿಯೋಸ್ ಜನರನ್ನು ರಂಜಿಸುವ ಮತ್ತು ಪ್ರೇರೆಪಿಸುವ ವಿಷಯವನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿನಲ್ಲಿ ನಯನತಾರ ಅವರ ಈ ಸಿನಿಮಾವು ಸಕಾರಾತ್ಮಕ ಹೆಜ್ಜೆಯಾಗಲಿದೆ." ಎಂದರು.


ಪ್ರಮುಖ ಪಾತ್ರಗಳಲ್ಲಿ ನಟ ಜೈ ಮತ್ತು ಸತ್ಯರಾಜ್
ಈಗಾಗಲೇ ತಮ್ಮ ವಿಭಿನ್ನ ಶೈಲಿಯ ನಟನೆಯ ಮೂಲಕ ಅಭಿಮಾನಗಳ ಮನಸ್ಸು ಗೆದ್ದ ನಟ ಜೈ ಮತ್ತು ಸತ್ಯರಾಜ್ ನಯನತಾರಾ ಅವರ 75ನೇ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇದನ್ನೂ ಓದಿ: Ram Gopal Varma: ಸೂಪರ್ ಹಿಟ್ ಸಿನಿಮಾವನ್ನು ಕಾಪಿ ಮಾಡಿದ್ದೆ, ರಹಸ್ಯ ಬಿಚ್ಚಿಟ್ಟ ರಾಮ್​ ಗೋಪಾಲ್ ವರ್ಮಾ


ಲೇಡಿ ಸೂಪರ್ ಸ್ಟಾರ್ 75 ಚಿತ್ರಕ್ಕೆ ದಿನೇಶ್ ಕೃಷ್ಣನ್ ಡಿಪಿ ಅವರ ಛಾಯಾಗ್ರಹಣ, ಪ್ರವೀಣ್ ಆಂಟೋನಿ ಅವರ ಸಂಕಲನ ಮತ್ತು ಜಾಕಿ ಅವರ ಕಲಾ ನಿರ್ದೇಶನವಿದೆ. ಚಿತ್ರದ ಶೂಟಿಂಗ್ ಅತೀ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.

Published by:Nalini Nalini
First published: