Prince Mahesh Babu: ಟಾಲಿವುಡ್​ ಪ್ರಿನ್ಸ್​ ಮಹೇಶ್​ಬಾಬುಗಾಗಿ ಮರವೇರಿದ ಯುವತಿ

Mahesh Babu: ವಿಜಯವಾಡದ ರೆವೆನ್ಯೂ ಕಾಲೋನಿಯಲ್ಲಿರುವ ಅಗ್ರಿಗೋಲ್ಡ್​ ಕಾರ್ಯಾಲಯದ ಆವರಣದಲ್ಲಿ ಯುವತಿಯೊಬ್ಬರು ಮಾಡಿದ ಕೆಲಸ ಸಂಚಲ ಸೃಷ್ಟಿಸಿತ್ತು. ನಟ ಮಹೇಶ್​ ಬಾಬು ಅವರನ್ನು ನೋಡಲೇಬೇಕು. ಅವರನ್ನು ಇಲ್ಲಿಗೆ ಕರೆಸಿ ಎಂದು ಹಠ ಹಿಡಿದು ಮರವೇರಿ ಕುಳಿತ್ತಿದ್ದಾರೆ.

Anitha E | news18-kannada
Updated:October 16, 2019, 3:40 PM IST
Prince Mahesh Babu: ಟಾಲಿವುಡ್​ ಪ್ರಿನ್ಸ್​ ಮಹೇಶ್​ಬಾಬುಗಾಗಿ ಮರವೇರಿದ ಯುವತಿ
ನಟ ಮಹೇಶ್​ ಬಾಬು
Anitha E | news18-kannada
Updated: October 16, 2019, 3:40 PM IST
ಸಿನಿಮಾ ಸ್ಟಾರ್​ಗಳೆಂದರೆ ಅಭಿಮಾನಿಗಳಿಗೆ ಏನೋ ಪ್ರೀತಿ. ಅದರಲ್ಲೂ ಸೆಲೆಬ್ರಿಟಿಗಳನ್ನು ಭೇಟಿ ಮಾಡೋಕೆ ಅವರು ಪಡದ ಪಾಡಿಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ನೋಡಲು ಹಾಗೂ ಭೇಟಿಯಾಗಲು ಮಾಡುವ ಕಸರತ್ತುಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಈಗ ಟಾಲಿವುಡ್​ ಪ್ರಿನ್ಸ್​ ಮಹೇಶ್​ಬಾಬುರನ್ನ ಭೇಟಿಯಾಗಲು ಯುವತಿಯೊಬ್ಬರು ಮಾಡಿದ ಕೆಲಸ ಈಗ ಸದ್ದು ಮಾಡುತ್ತಿದೆ.

ವಿಜಯವಾಡದ ರೆವೆನ್ಯೂ ಕಾಲೋನಿಯಲ್ಲಿರುವ ಅಗ್ರಿಗೋಲ್ಡ್​ ಕಾರ್ಯಾಲಯದ ಆವರಣದಲ್ಲಿ ಯುವತಿಯೊಬ್ಬರು ಮಾಡಿದ ಕೆಲಸ ಸಂಚಲ ಸೃಷ್ಟಿಸಿತ್ತು. ನಟ ಮಹೇಶ್​ ಬಾಬು ಅವರನ್ನು ನೋಡಲೇಬೇಕು. ಅವರನ್ನು ಇಲ್ಲಿಗೆ ಕರೆಸಿ ಎಂದು ಹಠ ಹಿಡಿದು ಮರವೇರಿ ಕುಳಿತ್ತಿದ್ದಾರೆ.

Mahesh babu, Dulquer Salman and Nayana Tara poses for Vouge October edition
ವೋಗ್​ ಇಂಡಿಯಾ


ಅಷ್ಟೇಅಲ್ಲ ಮೋದಿಯವರೊಂದಿಗೆ ಮಾತನಾಡಬೇಕು, ಜಗನ್​ ತನ್ನ ಮನವಿ ಕೇಳಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಆ ಯುವತಿ. ಈಕೆ ಏತಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಅರಿದ ಜನರು ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಕೆಲವರು ಅವರ ವಿಡಿಯೋ ಮಾಡಲು ಹೋದಾಗ ಮರದ ಕೊಂಬೆಗಳಲ್ಲಿದ್ದ ಕಡ್ಡಿಗಳನ್ನು ಕಿತ್ತು ಹೊಡೆಯಲಾರಂಭಿಸಿದ್ದಾರೆ.

ಇದನ್ನೂ ಓದಿ: Saaho: ಅಮೆಜಾನ್​ ಪ್ರೈಂನಲ್ಲಿ ಸಾಹೋ ರಿಲೀಸ್​ಗೆ ದಿನಾಂಕ ಫಿಕ್ಸ್​..!

ಅಷ್ಟೊತ್ತಿಗೆ ಅಲ್ಲಿಗೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಏಣಿಯ ಸಹಾಯದಿಂದ ಮರವೇರಿ ಆ ಯುವತಿಯನ್ನು ಕಾಪಾಡಿದ್ದಾರೆ. ಪೊಲೀಸರ ವಿಚಾರಣೆಯಿಂದ ಆ ಯುವತಿ ಕೊಲ್ಕತ್ತಾದವರು ಎಂದು ಗೊತ್ತಾಗಿದೆ. ಅನಿತಾ ಎಂಬ ಹೆಸರಿನ ಯುವತಿಗೆ ವಿಜಯವಾಡದಲ್ಲಿ ಕೆಲವರು ಮೋಸ ಮಾಡಿದ್ದು, ಇದರಿಂದ ಮಾನಸಿಕವಾಗಿ ನೊಂದಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಆಕೆಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Pranitha: ಹಾಟ್​ ಯೋಗಾದಿಂದ ಅಭಿಮಾನಿಗಳ ಮನಸ್ಸು ಕದ್ದ ಕನ್ನಡತಿ ಪ್ರಣೀತಾ
Loading...

First published:October 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...