Laal Singh Chaddha: ಟಾಮ್​ ಹ್ಯಾಂಕ್ಸ್​​ ಅಭಿನಯದ 'ಫಾರೆಸ್ಟ್​ ಗಂಪ್​' ಸಿನಿಮಾದ ಹಿಂದಿ ರಿಮೇಕ್​ನಲ್ಲಿ ಅಮೀರ್​ ಖಾನ್​..!

ಹಾಲಿವುಡ್​ನ ಖ್ಯಾತ ನಟ ಟಾಮ್​ ಹ್ಯಾಂಕ್ಸ್​​ ಅಭಿನಯದ 'ಫಾರೆಸ್ಟ್​ ಗಂಪ್​' ಸಿನಿಮಾ ಹಿಂದಿಯಲ್ಲಿ ರಿಮೇಕ್​ ಆಗುತ್ತಿದೆ. ಇದರ ಕುರಿತಾಗಿ ಅಧಿಕೃತವಾಗಿ ಪ್ರಕಟಣೆ ಹೊರ ಬಿದ್ದಿದೆ. ನಟ ಅಮೀರ್​ ಖಾನ್​ಗೆ ಈ ಸಿನಿಮಾ ತುಂಬಾ ಇಷ್ಟವಾಗಿದ್ದು, ಇದರಿಂದ ಅವರು ಪ್ರೇರಿತರಾಗಿದ್ದಾರಂತೆ.

Anitha E | news18
Updated:March 15, 2019, 4:13 PM IST
Laal Singh Chaddha: ಟಾಮ್​ ಹ್ಯಾಂಕ್ಸ್​​ ಅಭಿನಯದ 'ಫಾರೆಸ್ಟ್​ ಗಂಪ್​' ಸಿನಿಮಾದ ಹಿಂದಿ ರಿಮೇಕ್​ನಲ್ಲಿ ಅಮೀರ್​ ಖಾನ್​..!
ಟಾಮ್​ ಹ್ಯಾಂಗ್ಸ್​ ಅಭಿನಯದ ಹಾಲಿವುಡ್​ ಸಿನಿಮಾ 'ಫಾರೆಸ್ಟ್​ ಗಂಪ್​'ನ ಹಿಂದಿ ರಿಮೇಕ್​ನಲ್ಲಿ ಅಮೀರ್​ ಖಾನ್​
Anitha E | news18
Updated: March 15, 2019, 4:13 PM IST
ಬಾಲಿವುಡ್​ನ ಪರ್ಫೆಕ್ಷನಿಸ್ಟ್​ ಅಮೀರ್​ ಖಾನ್ ತಮ್ಮ ಸಿನಿಮಾಗಳ ಮೂಲಕ ಬಿ-ಟೌನ್​ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂತಹ ನಟ ನಿನ್ನೆಯಷ್ಟೆ 54ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲೇ ತಮ್ಮ ಹೊಸ ಸಿನಿಮಾ ಕುರಿತು ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಂಭ್ರಮ

ಹೌದು, ನಟ ಅಮೀರ್​ ಖಾನ್​ ಹಾಲಿವುಡ್​ ಸಿನಿಮಾ 'ಫಾರೆಸ್ಟ್​ ಗಂಪ್​' ಅನ್ನು ಹಿಂದಿಗೆ ರಿಮೇಕ್​ ಮಾಡಲಿದ್ದಾರೆ. ಖ್ಯಾತ ನಟ ಹಾಗೂ ಆಸ್ಕರ್​ ವಿಜೇತ ಟಾಮ್​ ಹ್ಯಾಂಕ್ಸ್​​ ಅಭಿನಯದ 'ಫಾರೆಸ್ಟ್​ ಗಂಪ್​' ಹಾಲಿವುಡ್​ನ ಹಿಟ್​ ಸಿನಿಮಾ ಆದರೂ ಅದನ್ನು ಆ ಕಾಲಕ್ಕೆ ಒಂದು ದಂತಕತೆ ಎನ್ನಲಾಗುತ್ತದೆ.

ಈ ಸಿನಿಮಾವನ್ನು ಹಿಂದಿಯಲ್ಲಿ 'ಲಾಲ್​ ಸಿಂಗ್​ ಚಡ್ಡಾ' ಎಂಬ ಶೀರ್ಷಿಕೆಯಲ್ಲಿ ನಿರ್ಮಿಸಲಾಗುತ್ತಿದ್ದು, ಇದರಲ್ಲಿ ಲಾಲ್​ ಸಿಂಗ್​ ಪಾತ್ರದಲ್ಲಿ ಅಮೀರ್ ಅಭಿನಯಿಸುತ್ತಿರುವುದಾಗಿ, ನಿನ್ನೆ ಅವರ ಹುಟ್ಟುಹಬ್ಬದಂದು ಸ್ಪಷ್ಟಪಡಿಸಿದ್ದಾರೆ.

 
View this post on Instagram
 

Just in #aamirkhan with #kironrao #happybirthday


A post shared by Viral Bhayani (@viralbhayani) on


ಈ ಹಿಂದೆ 'ಫಾರೆಸ್ಟ್​ ಗಂಪ್​' ಸಿನಿಮಾವನ್ನು ಭಾರತದಲ್ಲಿ ರಿಮೇಕ್​ ಮಾಡಲಾಗುವುದು ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಯಾವ ಭಾಷೆ ಹಾಗೂ ಯಾರು ಮಾಡಲಿದ್ದಾರೆ ಎಂದು ಸ್ಪಷ್ಟವಾಗಿರಲಿಲ್ಲ. ಆದರೆ ನಿನ್ನೆ ಅಮೀರ್​ ಎಲ್ಲ ಅನುಮಾನಗಳಿಗೂ ತೆರೆ ಎಳೆದಿದ್ದಾರೆ.

ಇನ್ನೂ ಈ ಚಿತ್ರದ ಬಗ್ಗೆ ಹೇಳುವುದಾದರೆ, ಇದರಲ್ಲಿ ಚಡ್ಡಾ ಹೆಸರೇ ಸೂಚಿಸುವಂತೆ ಅಮೀರ್ ಸಿಖ್ ಪಾತ್ರದಲ್ಲಿ ನಟಿಸಲಿದ್ದು, ಸಿನಿಮಾದಲ್ಲಿ ಅವರು 'ಟರ್ಬನ್​' (ಪೇಟಾ)ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಸಿನಿಮಾದಲ್ಲಿನ ಇತರೆ ತಾರಾಬಳಗದ ಕುರಿತಂತೆ ಯಾವುದೇ ಮಾಹಿತಿಯನ್ನು ಅಮೀರ್​ ನೀಡಿಲ್ಲ. ಆದರೆ 'ಸೀಕ್ರೆಟ್​ ಸೂಪರ್​ ಸ್ಟಾರ್​' ಸಿನಿಮಾದ ನಿರ್ದೇಶಕ ಅದ್ವೈತ್ ಚಂದನ್​ ಅವರೇ ಈ ಚಿತ್ರವನ್ನು ನಿರ್ದೇಶಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.​


PHOTOS: ಸೀರೆಯುಟ್ಟು ಕ್ಯಾಮೆರಾಗೆ ಪೋಸ್​ ನೀಡಿದ ತುಪ್ಪದ ಹುಡುಗಿ ರಾಗಿಣಿ ..!
First published:March 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ