Aamir Khan New Look: ಸಿನಿಮಾಗಾಗಿ ಮತ್ತೆ ಲುಕ್​ ಬದಲಾಯಿಸಿಕೊಂಡ ಪರ್ಫೆಕ್ಷನಿಸ್ಟ್​ ಅಮೀರ್ ಖಾನ್​..!

Aamir Khan New Look: ಅಮೀರ್​ ಖಾನ್​ ಅಭಿನಯಿಸುವ ಪಾತ್ರಗಳ ವಿಷಯಕ್ಕೆ ಬಂದರೂ ಅಷ್ಟೆ.  ಅವರು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಪಾತ್ರ ಕೇಳುವಂತೆ ತಮ್ಮ ದೇಹವನ್ನು ಹುರಿಗೊಳಿಸಿಕೊಳ್ಳುತ್ತಾರೆ. ಈ ಹಿಂದೆ ಅವರ ಅಭಿನಯದ ದಂಗಲ್​ ಸಿನಿಮಾಗಾಗಿ ಅವರು ದೇಹದ ತೂಕ ಹೆಚ್ಚಿಸಿಕೊಂಡು, ನಂತರ ಅದೇ ಸಿನಿಮಾಗಾಗಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು. 

Anitha E | news18-kannada
Updated:February 1, 2020, 12:56 PM IST
Aamir Khan New Look: ಸಿನಿಮಾಗಾಗಿ ಮತ್ತೆ ಲುಕ್​ ಬದಲಾಯಿಸಿಕೊಂಡ ಪರ್ಫೆಕ್ಷನಿಸ್ಟ್​ ಅಮೀರ್ ಖಾನ್​..!
ನಟ ಅಮೀರ್​ ಖಾನ್​
  • Share this:
ನಟ ಅಮೀರ್ ಖಾನ್​ ಯಾವುದೇ ಸಿನಿಮಾವಾದರೂ ರಾಜಿ ಮಾಡಿಕೊಳ್ಳದೆ ಬೇಕಾದಂತೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಅದು ಬಜೆಟ್​, ಸೆಟ್​, ಪಾತ್ರಧಾರಿಗಳ ಆಯ್ಕೆ ಹೀಗೆ ಏನೇ ಆಗಿದ್ದರೂ ಎಲ್ಲವೂ ಪರ್ಫೆಕ್ಟ್​ ಆಗಿರಬೇಕು.

ಅಮೀರ್​ ಖಾನ್​ ಅಭಿನಯಿಸುವ ಪಾತ್ರಗಳ ವಿಷಯಕ್ಕೆ ಬಂದರೂ ಅಷ್ಟೆ.  ಅವರು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಪಾತ್ರ ಕೇಳುವಂತೆ ತಮ್ಮ ದೇಹವನ್ನು ಹುರಿಗೊಳಿಸಿಕೊಳ್ಳುತ್ತಾರೆ. ಈ ಹಿಂದೆ ಅವರ ಅಭಿನಯದ 'ದಂಗಲ್​' ಸಿನಿಮಾಗಾಗಿ ಅವರು ದೇಹದ ತೂಕ ಹೆಚ್ಚಿಸಿಕೊಂಡು, ನಂತರ ಅದೇ ಸಿನಿಮಾಗಾಗಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದರು.

Aamir Khan Not Doing Mahabharat because of Hindu Community Opposed it
'ಲಾಲ್​ ಸಿಂಗ್​ ಚಡ್ಡಾ' ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ನಲ್ಲಿ ಅಮೀರ್​ ಖಾನ್​


ಈಗಲೂ ಸಹ ಅವರು 'ಲಾಲ್​ ಸಿಂಗ್​ ಚಡ್ಡಾ' ಚಿತ್ರಕ್ಕಾಗಿ ಉದ್ದುದ್ದ ಕೂದಲುಹಾಗೂ ಗಡ್ಡ ಬಿಟ್ಟಿದ್ದರು. ಈ ಚಿತ್ರದ ಚಿತ್ರೀಕರಣ ಕೊಂಚ ಮುಗಿದಿದೆ. ಇದೇ ಸಿನಿಮಾಗಾಗಿ ಅಮೀರ್ ಮತ್ತೆ ಲುಕ್​ ಬದಲಾಯಿಸಿಕೊಂಡಿದ್ದಾರೆ. ಹೇರ್​ ಸ್ಟೈಲ್​ ಅನ್ನು ಫುಲ್​ ಟ್ರಿಮ್ ಮಾಡಿದ್ದು, ಒಳ್ಳೆ ಅರ್ಮಿ ಜವಾನ್​ ತರ ಕಾಣಿಸುತ್ತಿದ್ದಾರೆ.

ಇದನ್ನೂ ಓದಿ: Maidaan: ಫುಟ್ಬಾಲ್​ ಕೋಚ್​ ಆದ್ರು ಅಜಯ್​ ದೇವಗನ್​: ಇಲ್ಲಿದೆ ಮೈದಾನ್​ ಚಿತ್ರದ ಫಸ್ಟ್​ಲುಕ್ ಪೋಸ್ಟರ್​..!

ಟಾಮ್​ ಹ್ಯಾಂಕ್ಸ್​ ಅಭಿನಯದ 'ಫಾರೆಸ್ಟ್​ ಗಂಪ್​' ಸಿನಿಮಾದ ಹಿಂದಿ ರಿಮೇಕ್​ ಈ 'ಲಾಲ್​ ಸಿಂಗ್​ ಚಡ್ಡಾ'. ಇದು ಇದೇ ವರ್ಷ ಡಿಸೆಂಬರ್​ನಲ್ಲಿ ಕ್ರಿಸ್ಮಸ್​ಗೆ ಬಿಡುಗಡೆಯಾಗಲಿದೆ. ಈ ಸಿನಿಮಾಗಾಗಿ ಅಮೀರ್​ ಇತ್ತೀಚೆಗಷ್ಟೆ ನಟ ಅಕ್ಷಯ್​ ಕುಮಾರ್​ ಅವರ ಸಹಾಯ ಕೇಳಿದ್ದು, ಅವರ 'ಬಚ್ಚನ್ ಪಾಂಡೆ' ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡುವಂತೆ ಮಾಡಿದ್ದಾರೆ.

'ಜೇಮ್ಸ್'​ ಸಿನಿಮಾದಲ್ಲಿ ಪುನೀತ್ ನಾಯಕಿಯಾಗಲಿದ್ದಾರಂತೆ ಈ ಕನ್ನಡತಿ..!

 

 

 
First published: February 1, 2020, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading