ಉದ್ದ ಜಡೆ, ಮೈಗೆಲ್ಲ ವಿಭೂತಿ: ಅಘೋರಿಯಾದ್ರಾ ಬಾಲಿವುಡ್ ನಟ ಸೈಫ್ ಅಲಿ ಖಾನ್..!

ಬಾಲಿವುಡ್​ನಲ್ಲಿ ಎನ್​ಎಚ್​10 ಎಂಬ ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದ ನವದೀಪ್ ಸಿಂಗ್, ಮೂರು ವರ್ಷಗಳ ಬಳಿಕ ಲಾಲ್ ಕಪ್ತಾನ್​ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

zahir | news18
Updated:May 24, 2019, 8:47 PM IST
ಉದ್ದ ಜಡೆ, ಮೈಗೆಲ್ಲ ವಿಭೂತಿ: ಅಘೋರಿಯಾದ್ರಾ ಬಾಲಿವುಡ್ ನಟ ಸೈಫ್ ಅಲಿ ಖಾನ್..!
ಸೈಫ್ ಅಲಿ ಖಾನ್
zahir | news18
Updated: May 24, 2019, 8:47 PM IST
ಬಾಲಿವುಡ್ ನವಾಬ ಸೈಫ್​ ಅಲಿ ಖಾನ್ ಉದ್ದನೆಯ ಜಡೆ, ಮೈಗೆಲ್ಲ ವಿಭೂತಿ ಹಚ್ಚಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದರೆ ಕರೀನಾ ಪತಿ ನಾಗಸಾಧು ಆಗಿದ್ದಾರೆ ಎಂದು ನೀವಂದುಕೊಳ್ಳಬೇಡಿ. ಏಕೆಂದರೆ ಸೈಫ್​ ಅಲಿ ಖಾನ್ ಹೊಸ ಗೆಟಪ್​ನಲ್ಲಿ ಕಾಣಿಸಿದ್ದು 'ಲಾಲ್​ ಕಪ್ತಾನ್' ಎಂಬ ಚಿತ್ರಕ್ಕಾಗಿ.

ನವದೀಪ್ ಸಿಂಗ್ ನಿರ್ದೇಶಿಸಲಿರುವ 'ಲಾಲ್ ಕಪ್ತಾನ್'​ನಲ್ಲಿ ಸೈಫ್ ಅಲಿ ಖಾನ್ ನಾಗಸಾಧು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೇವಲ ಫಸ್ಟ್​ ಲುಕ್​ನಲ್ಲೇ ಹೊಸ ಅಲೆಯೆಬ್ಬಿಸಿರುವ 'ಲಾಲ್​ ಕಪ್ತಾನ್' ಚಿತ್ರಕ್ಕೆ ಈ ಹಿಂದೆ 'ಹಂಟರ್'​ ಎಂಬ ಶೀರ್ಷಿಕೆ ಇಡಲಾಗಿತ್ತು. ಆದರೆ ಈ ಟೈಟಲ್​ ವಿವಾದಕ್ಕೀಡಾಗಿದ್ದರಿಂದ ನಿರ್ದೇಶಕರು ಇದೀಗ ನೂತನ ಹೆಸರಿನೊಂದಿಗೆ ಮರಳಿದ್ದಾರೆ.

ಬಾಲಿವುಡ್​ನಲ್ಲಿ 'ಎನ್​ಎಚ್​10' ಎಂಬ ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದ ನವದೀಪ್ ಸಿಂಗ್, ಮೂರು ವರ್ಷಗಳ ಬಳಿಕ 'ಲಾಲ್ ಕಪ್ತಾನ್'​ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೀಗ ಫಸ್ಟ್​ ಲುಕ್​ ಬಗ್ಗೆ ವ್ಯಾಪಕ ಚರ್ಚೆಗಳು ಹುಟ್ಟಿಕೊಂಡಿದ್ದು, ಆದರೆ ಚಿತ್ರತಂಡ ಇಲ್ಲಿವರೆಗೂ  ಕಥೆ ಎಳೆಯನ್ನು ಬಿಟ್ಟುಕೊಡದೆ ಸಸ್ಪೆನ್ಸ್ ಉಳಿಸಿಕೊಂಡಿದ್ದಾರೆ.


Loading...ಈ ಹಿಂದಿನ ತಮ್ಮ ಮ್ಯಾಚೊ ಹೀರೋ ಲುಕ್​ ಬದಲಿಸಿ ವಿಭಿನ್ನ ಅವತಾರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿರುವುದು ಚಿತ್ರದ ಮೇಲಿನ ನಿರೀಕ್ಷೆಗೆ ಕಾರಣವಾಗಿದೆ. ಈ ಚಿತ್ರಕ್ಕೆ 'ಜಿರೋ' ಚಿತ್ರದ ನಿರ್ದೇಶಕ ಆನಂದ್ ಎಲ್​. ರೈ ಹಾಗೂ ಸೈಫ್ ಅಲಿ ಖಾನ್ ಬಂಡವಾಳ ಹೂಡಿದ್ದು, ಯೂರೋಸ್ ಎಂಟರ್​ಟೈನ್​ವೆುಂಟ್ ನಿರ್ಮಾಣ ಸಂಸ್ಥೆಯಡಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಥ್ರಿಲ್ಲರ್​ನಿಂದ ಕೂಡಿರುವ ನಿಗೂಢ ಕಥೆ 'ಲಾಲ್​ ಕಪ್ತಾನ್'​ನಲ್ಲಿ ಮೂಡಿ ಬರಲಿದ್ದು, ಚಿತ್ರವು ಸೆಪ್ಟೆಂಬರ್ 6 ರಂದು ತೆರೆಗೆ ಬರಲಿದೆ.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಕಾಂಗ್ರೆಸ್ ನಾಯಕಿ, ನಟಿ ಖುಷ್ಬೂ..!

First published:May 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...