HOME » NEWS » Entertainment » KURUKSHETRA TEAM RELEASED THE FIRST LYRICAL VIDEO SONG

Kurukshetra Video Song: ಕೌರವಾಧಿಪತಿ ದುರ್ಯೋಧನನಾಗಿ ಘರ್ಜಿಸಿದ ಡಿಬಾಸ್​ ದರ್ಶನ್​..!

Kurukshetra Video Song: ಹೌದು, ನಾಳೆ  (ಜು.7) ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರದ ಆಡಿಯೋ ಬಿಡುಗಡೆಯಾಗಲಿದೆ. ಅದಕ್ಕೆ ಎಲ್ಲ ಸಿದ್ಧತೆಗಳು ನಡೆಯುವಾಗಲೇ ವೃಷಭಾದ್ರಿ ಪ್ರೊಡಕ್ಷನ್ಸ್​ ದುರ್ಯೋಧನನ ಕುರಿತಾದ ಲಿರಿಕ್​ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ.

Anitha E | news18
Updated:July 6, 2019, 2:37 PM IST
Kurukshetra Video Song: ಕೌರವಾಧಿಪತಿ ದುರ್ಯೋಧನನಾಗಿ ಘರ್ಜಿಸಿದ ಡಿಬಾಸ್​ ದರ್ಶನ್​..!
ಕುರುಕ್ಷೇತ್ರದ ಚಿತ್ರ ಆಯಿಯೋ ಲಾಂಚ್​ ಆಹ್ವಾನ ಪತ್ರಿಕೆಯಲ್ಲಿ ದರ್ಶನ್​ರ ಹೊಸ ಲುಕ್​ ಔಟ್​
  • News18
  • Last Updated: July 6, 2019, 2:37 PM IST
  • Share this:
ಈಗೇನಿದ್ದರೂ ಎಲ್ಲೆಡೆ ದುರ್ಯೋಧನನ ಹವಾ... ಸ್ಯಾಂಡಲ್​ವುಡ್​ ಡಿಬಾಸ್ ಈಗ​ ಸುಯೋಧನ... ಈ ಪಾತ್ರದಲ್ಲಿ ದಚ್ಚು ಹೇಗೆ ಕಾಣಲಿದ್ದಾರೆ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ರಸದೌತಣ ಸಿಕ್ಕಿದೆ.

ಹೌದು, ನಾಳೆ  (ಜು.7) ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಸಿನಿಮಾ 'ಕುರುಕ್ಷೇತ್ರ'ದ ಆಡಿಯೋ ಬಿಡುಗಡೆಯಾಗಲಿದೆ. ಅದಕ್ಕೆ ಎಲ್ಲ ಸಿದ್ಧತೆಗಳು ನಡೆಯುವಾಗಲೇ ವೃಷಭಾದ್ರಿ ಪ್ರೊಡಕ್ಷನ್ಸ್​ ದುರ್ಯೋಧನನ ಕುರಿತಾದ ಲಿರಿಕ್​ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ.

Youtube Video


ಸಿನಿಮಾದ ಟೀಸರ್​ ನಂತರ 'ಸಾಹೋರೇ ಸಾಹೋ.... ಆಜಾನುಬಾಹು....' ಲಿರಿಕ್​ ವಿಡಿಯೋ ಬಿಡುಗಡೆಯಾಗಿರುವುದು. ಇದು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಲಕ್ಷಗಟ್ಟಲೆ ವೀಕ್ಷಣೆ ಸಿಕ್ಕಿದೆ ಈ ಹಾಡಿದೆ. ಸದ್ಯಕ್ಕೆ ಈ ಹಾಡು ಟ್ರೆಂಡಿಂಗ್​ನಲ್ಲಿ ನಂಬರ್​ ಒನ್​ ಸ್ಥಾನದಲ್ಲಿದ್ದು, 4 ಲಕ್ಷದ 48 ಸಾವಿರ ವೀಕ್ಷಣೆ ಸಿಕ್ಕಿದೆ.

ಇದನ್ನೂ ಓದಿ: Lindsay Lohan: ಇನ್​ಸ್ಟಾಗ್ರಾಂನಲ್ಲಿ ತನ್ನದೇ ನಗ್ನ ಸೆಲ್ಫಿ ಪೋಸ್ಟ್​ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ನಟಿ..!

ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಸಿನಿಮಾದ ವಿತರಣಾ ಹಕ್ಕು ನಿರ್ಮಾಪಕ ಹಾಗೂ ನಟ ರಾಕ್​ಲೈನ್​ ವೆಂಕಟೇಶ್​ ಅವರು ಖರೀದಿಸಿದ್ದಾರೆ. ನಾಗಣ್ಣ ನಿರ್ದೇಶನದ ಸಿನಿಮಾದಲ್ಲಿ ಅಂಬರೀಷ್​, ರವಿಚಂದ್ರನ್​, ಅರ್ಜುನ್​ ಸರ್ಜಾ, ನಿಖಿಲ್​ ಸೇರಿದಂತೆ ಸಾಕಷ್ಟು ದೊಡ್ಡ ತಾರಾ ಬಳಗವೇ ಇದೆ.

Sunny Leone: ಪಡ್ಡೆಗಳಿಗೆ ಸಮೂಹ ಸನ್ನಿ ಹಿಡಿಸಿದ್ದ ಮಾಜಿ ನೀಲಿ ತಾರೆ ಸನ್ನಿಗೂ ಇತ್ತಂತೆ ಆ ಕಾಯಿಲೆ..!
First published: July 6, 2019, 11:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories