Kurukshetra: ಲೋಕಾರ್ಪಣೆಗೊಳ್ಳಲಿದೆ ಕುರುಕ್ಷೇತ್ರ ಸಿನಿಮಾದ ಮತ್ತೊಂದು ಹಾಡು..!

Kurukshetra: ಲಹರಿ ಸಂಸ್ಥೆ ಕುರುಕ್ಷೇತ್ರ ಸಿನಿಮಾ ಆಡಿಯೋ ಹಕ್ಕನ್ನು ಖರೀದಿಸಿದ್ದು, ಇತ್ತೀಚೆಗಷ್ಟೆ ಒಂದು ಲಿರಿಕಲ್​ ವಿಡಿಯೋ ಹಾಡನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ದರ್ಶನ್​ ದುರ್ಯೋಧನನಾಗಿ ಅಬ್ಬರಿಸಿದ್ದಾರೆ. ಅವರ ಅಬ್ಬರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿತ್ತು. ಈಗ ಮತ್ತೊಂದು ಹಾಡಿನ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದೆ.

Anitha E | news18
Updated:July 11, 2019, 4:14 PM IST
Kurukshetra: ಲೋಕಾರ್ಪಣೆಗೊಳ್ಳಲಿದೆ ಕುರುಕ್ಷೇತ್ರ ಸಿನಿಮಾದ ಮತ್ತೊಂದು ಹಾಡು..!
ಕುರುಕ್ಷೇತ್ರ ಸಿನಿಮಾದ ಮತ್ತೊಂದು ಹಾಡಿನ ಲೋಕಾರ್ಪಣೆ
Anitha E | news18
Updated: July 11, 2019, 4:14 PM IST
ಸ್ಯಾಂಡಲ್​ವುಡ್​ನಲ್ಲಿ ಸದ್ಯ ಹವಾ ಎಬ್ಬಿಸಿರುವ ಸಿನಿಮಾ ಎಂದರೆ ಅದು 'ಕುರುಕ್ಷೇತ್ರ'. ಸ್ಟಾರ್​ ನಟರು ಅಭಿನಯಿಸಿರುವ ಬಹು ತಾರಾಗಣದ ಈ ಸಿನಿಮಾದ ಟ್ರೈಲರ್​ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಆಡಿಯೋ ಸಹ ಲೋಕಾರ್ಪಣೆಗೊಂಡಿದೆ. ಹೀಗಿರುವಾಗಲೇ ಈಗ ಚಿತ್ರ ತಂಡ ಈ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದೆ.

ಲಹರಿ ಸಂಸ್ಥೆ ಈ ಸಿನಿಮಾ ಆಡಿಯೋ ಹಕ್ಕನ್ನು ಖರೀದಿಸಿದ್ದು, ಇತ್ತೀಚೆಗಷ್ಟೆ ಒಂದು ಲಿರಿಕಲ್​ ವಿಡಿಯೋ ಹಾಡನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ದರ್ಶನ್​ ದುರ್ಯೋಧನನಾಗಿ ಅಬ್ಬರಿಸಿದ್ದಾರೆ. ಅವರ ಅಬ್ಬರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿತ್ತು.

Darshan and Meghana Sarja in Chaarutanti song
'ಚಾರುತಂತಿ....' ಹಾಡಿನಲ್ಲಿ ದರ್ಶನ್​ ಹಾಗೂ ಮೇಘನಾ ಸರ್ಜಾ


ಈಗ ಲಹರಿ ಸಂಸ್ಥೆ ಚಿತ್ರ ಮತ್ತೊಂದು ಹಾಡು 'ಚಾರುತಂತಿ'ಯ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಮಾಡಿದೆ. ಜು.13ರಂದು ಸಂಜೆ 6.30ಕ್ಕೆ ಈ ಹಾಡು ಅಭಿಮಾನಿಗಳಿಗೆ ಕೈಬೆರಳುಗಳ ತುದಿಯಲ್ಲಿ ಇರಲಿದೆ.



ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ ಎನ್ನಲಾಗುತ್ತಿದೆ. ಈಗ ಬಿಡುಗಡೆಯಾಗಲಿರುವ ಹಾಡಿನಲ್ಲಿ ದರ್ಶನ್​ ಹಾಗೂ ಮೇಘನಾ ರಾಜ್​ ಸಹ ಇರಲಿದ್ದಾರೆ.

ಹಾಡಿನ ಬಿಡುಗಡೆಗಾಗಿ ಮಾಡಲಾಗಿರುವ ಪೋಸ್ಟರ್​ನಲ್ಲಿ ಮೇಘನಾ ರಾಜ್​ ಹಾಗೂ ದರ್ಶನ್​ ಫುಲ್ ರೊಮ್ಯಾಂಟಿಕ್​ ಫೋಸ್​ ನೀಡಿದ್ದಾರೆ. ಇದು ದುರ್ಯೋಧನ ಹಾಗೂ ಭಾನುಮತಿ ನಡೆಯುವ ಪ್ರೇಮ ಗೀತೆಯಾಗಿದೆ.

ಇದನ್ನೂ ಓದಿ: Dear Comrade Official Trailer: ಮುಂದುವರೆದಿದೆ ರಶ್ಮಿಕಾ-ವಿಜಯ್​ ದೇವರಕೊಂಡ ಲಿಪ್​ಲಾಕ್​ ..!

ಮುನಿರತ್ನ ನಿರ್ದೇಶನದ ಈ ಸಿನಿಮಾವನ್ನು ನಾಗಣ್ಣ ನಿರ್ದೇಶಿಸಿದ್ದಾರೆ. ಇದರಲ್ಲಿ ದರ್ಶನ್​ ಅವರೊಂದಿಗೆ ಅರ್ಜುನ್​ ಸರ್ಜಾ, ಅಂಬರೀಷ್​, ರವಿಚಂದ್ರನ್​ ನಿಖಿಲ್​ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಇದನ್ನೂ ಓದಿ: ಮೂಢನಂಬಿಕೆಯ ಕಾರಣದಿಂದಾಗಿ ಇಡೀ ಜೀವನ ಮದುವೆಯೇ ಆಗಲಿಲ್ಲ ಈ ಸ್ಟಾರ್​ ನಟ..!

 

Lakshmi Rai: ಬಿಕಿನಿಯಲ್ಲಿ ಕರಾವಳಿ ಸುಂದರಿ: ಹಾಟ್​ ಲುಕ್​ನಲ್ಲಿ ನಟಿ ಲಕ್ಷ್ಮಿ ರೈ
First published:July 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...