• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Kurukshetra Trailer: ಹೊಸ ಟ್ರೈಲರ್​ಗಾಗಿ ಡಿಬಾಸ್​ ಅಭಿಮಾನಿಗಳಿಂದ ಹೆಚ್ಚಿದ ಬೇಡಿಕೆ: ಅಭಿಮಾನಿಗಳ ಒತ್ತಾಯಕ್ಕೆ ಮಣಿದರಾ ಮುನಿರತ್ನ..?

Kurukshetra Trailer: ಹೊಸ ಟ್ರೈಲರ್​ಗಾಗಿ ಡಿಬಾಸ್​ ಅಭಿಮಾನಿಗಳಿಂದ ಹೆಚ್ಚಿದ ಬೇಡಿಕೆ: ಅಭಿಮಾನಿಗಳ ಒತ್ತಾಯಕ್ಕೆ ಮಣಿದರಾ ಮುನಿರತ್ನ..?

'ಕುರುಕ್ಷೇತ್ರ' ಸಿನಿಮಾದಲ್ಲಿ ದರ್ಶನ್​

'ಕುರುಕ್ಷೇತ್ರ' ಸಿನಿಮಾದಲ್ಲಿ ದರ್ಶನ್​

Kurukshetra New Trailer: ಸಾಮಾಜಿಕ ಜಾಲತಾಣದಲ್ಲಿ 'ಕುರುಕ್ಷೇತ್ರ' ಸಿನಿಮಾದ ಹೊಸ ಟ್ರೈಲರ್​ ಬಿಡುಗಡೆ ಕುರಿತಾಗಿ ಹೊಸ ವಿಷಯ ಹರಿದಾಡುತ್ತಿದೆ. ಅದು ಚಿತ್ರತಂಡ ಮತ್ತೆ ನಾಳೆ ಅಂದರೆ ಜು.12ಕ್ಕೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳದಲ್ಲಿ ಮತ್ತೆ ಹೊಸ ಟ್ರೈಲರ್ ಬಿಡುಗಡೆ ಮಾಡಲಿದೆಯಂತೆ. 

ಮುಂದೆ ಓದಿ ...
  • News18
  • 5-MIN READ
  • Last Updated :
  • Share this:

- ಅನಿತಾ ಈ, 

'ಕುರುಕ್ಷೇತ್ರ' ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾದಾಗಿನಿಂದ ದರ್ಶನ್ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆಯೇ ಇಲ್ಲದಂತಾಗಿದೆ. ಡಿಬಾಸ್​ ಅಭಿನಯದ 50ನೇ ಸಿನಿಮಾ ಇದಾಗಿರುವ ಕಾರಣಕ್ಕೆ ದಚ್ಚು ಫ್ಯಾನ್ಸ್​ಗೆ ಇದು ಯಾವ ಹಬ್ಬಕ್ಕೈ ಕಮ್ಮಿ ಇಲ್ಲ.

ಆದರೆ ಈ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದ ಪಾಸ್​ನಿಂದ ಹಿಡಿದು ಬಿಡುಗಡೆಯಾಗಿರುವ ಟ್ರೈಲರ್​ವರೆಗೆ ಕೇವಲ ವಿವಾದಗಳದ್ದೇ ಸದ್ದು. ಹೌದು, ನಿರ್ಮಾಪಕ ಮುನಿರತ್ನ ಅವರು ದರ್ಶನ್​ ಅವರ ಭಾವಚಿತ್ರವಿಲ್ಲದೆ ಆಡಿಯೋ ಬಿಡುಗಡೆ ಕಾರ್ಯಕ್ರಮದ ಪಾಸ್​ ಪ್ರಿಂಟ್​ ಮಾಡಿಸುವ ಮೂಲಕ ಮೊದಲನೇ ವಿವಾದಕ್ಕೆ ನಾಂದಿ ಹಾಡಿದ್ದರು.

bad comments to kurukshetra trailer (2)
ಯೂಟ್ಯೂಬ್​ನಲ್ಲಿ ಅಭಿಮಾನಿಗಳ ಆಕ್ರೋಶ


bad comments to kurukshetra trailer (2)
ಟ್ರೈಲರ್​ಗೆ ಅಭಿಮಾನಿಗಳ ಕಮೆಂಟ್ಸ್​


ಇದರಿಂದ ಗರಂ ಆಗಿದ್ದ ಅಭಿಮಾನಿಗಳು ನಟ ದರ್ಶನ್​ ಬಹಳ ಚಾಣಾಕ್ಷತನದಿಂದ ಅವರನ್ನು ತಣ್ಣಗೆ ಮಾಡಿದರು. ಇದಾದ ನಂತೆ ಆಡಿಯೋ ಬಿಡುಗಡೆ ಕಾರ್ಯಕ್ರಮವೇನೋ ಅದ್ಧೂರಿಯಾಗಿ ನಡೆಯಿತು. ಆದರೆ ಅಂದೇ ಬಿಡುಗಡೆಯಾದ ಸಿನಿಮಾದ ಟ್ರೈಲರ್​ ಈಗ ದಚ್ಚು ಅಭಿಮಾನಿಗಳನ್ನು ಮತ್ತೆ ಕೆರಳಿಸಿದೆ. ಟೀಸರ್​ಗಳನ್ನು ಜೋಡಿಸಿ ಟ್ರೈಲರ್​ ಮಾಡಲಾಗಿದೆ ಎಂದು ​ಖಾರವಾಗಿಯೇ ಕಮೆಂಟ್​ಗಳನ್ನು ಮಾಡಿದ್ದರು. ನಂತರ ಯೂಟ್ಯೂಬ್​ನಲ್ಲಿ ಕಮೆಂಟ್​ಗಳು ಕಾಣದಂತೆ ಡಿಸೇಬಲ್​ ಮಾಡಲಾಯಿತು.

ಇದನ್ನೂ ಓದಿ: Kurukshetra: ಲೋಕಾರ್ಪಣೆಗೊಳ್ಳಲಿದೆ ಕುರುಕ್ಷೇತ್ರ ಸಿನಿಮಾದ ಮತ್ತೊಂದು ಹಾಡು..!

ಆದರೆ ಡಿಬಾಸ್​ ಅಭಿಮಾನಿಗಳು ಇಷ್ಟಕ್ಕೇ ಸುಮ್ಮನಾಗಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೈಲರ್ ಬಿಡುಗಡೆ ಮಾಡುವಂತೆ ಅಭಿಯಾನ ಆರಂಭಿಸಿದರು. ಜತೆಗೆ ನಿರ್ಮಾಪಕ ಮುನಿರತ್ನ ವಿರುದ್ಧ ಸಾಕಷ್ಟು ವಿಡಿಯೋಗಳನ್ನು ಮಾಡಿ ಹರಿ ಬಿಟ್ಟರು.ನಿರ್ಮಾಪಕ ಮುನಿರತ್ನ ರವರಿಗೆ ನನ್ನದೊಂದು ಮನವಿ
#WeWantKurukshetraNewTrailer#WeWantKurukshetraNewTrailer#WeWantKurukshetraNewTrailer#WeWantKurukshetraNewTrailer#WeWantKurukshetraNewTrailer#WeWantKurukshetraNewTrailer#WeWantKurukshetraNewTrailer#WeWantKurukshetraNewTrailer#WeWantKurukshetraNewTrailer


ಇಷ್ಟೆಲ್ಲ ಆದ ನಂತರ ಈಗ ಸಾಮಾಜಿಕ ಜಾಲತಾಣದಲ್ಲಿ 'ಕುರುಕ್ಷೇತ್ರ' ಸಿನಿಮಾದ ಹೊಸ ಟ್ರೈಲರ್​ ಬಿಡುಗಡೆ ಕುರಿತಾಗಿ ಹೊಸ ವಿಷಯ ಹರಿದಾಡುತ್ತಿದೆ. ಅದು ಚಿತ್ರತಂಡ ಮತ್ತೆ ನಾಳೆ ಅಂದರೆ ಜು.12ಕ್ಕೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳದಲ್ಲಿ ಮತ್ತೆ ಹೊಸ ಟ್ರೈಲರ್ ಬಿಡುಗಡೆ ಮಾಡಲಿದೆಯಂತೆ.

Krukshetra new trailer Poster
ನಾಳೆ ಬಿಡುಗಡೆಯಾಗಲಿದೆ 'ಕುರುಕ್ಷೇತ್ರ'ದ ಹೊಸ ಟ್ರೈಲರ್​


#Kurukshetra New Trailer In #Kannada #Telugu #Tamil #Malayalam #Hindi


ಈ ವಿಷಯ ತಿಳಿದ ದರ್ಶನ್​ ಅಭಿಮಾನಿಗಳು ಸದ್ಯ ಸಂಭ್ರಮದಿಂದ ಹಂಚಿಕೊಳ್ಳುತ್ತಿದ್ದು, ನಿರ್ಮಾಪಕ ಮುನಿರತ್ನ ಅವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ಆದರೆ ಸಿನಿಮಾ ತಂಡ ಮಾತ್ರ ಇನ್ನೂ ಎಲ್ಲೂ ಅಧಿಕೃತವಾಗಿ ಈ ಕುರಿತು ಹೇಳಿಕೆ ನೀಡಿಲ್ಲ. ಒಂದು ರಾತ್ರಿ ಕಳೆದರೆ ಸಾಕು ಬೆಳಿಗ್ಗೆ ಸತ್ಯಾಸತ್ಯತೆ ಗೊತ್ತಾಗಲಿದೆ.

ಇದನ್ನೂ ಓದಿ: Lakshmi Rai: ಬಿಕಿನಿಯಲ್ಲಿ ಕರಾವಳಿ ಸುಂದರಿ: ಹಾಟ್​ ಲುಕ್​ನಲ್ಲಿ ನಟಿ ಲಕ್ಷ್ಮಿ ರೈ

 

Urvashi Rautela: ಮತ್ತೇರಿಸುತ್ತಿದೆ ಡಿಬಾಸ್​ ಹುಡುಗಿ ಊರ್ವಶಿಯ ಈ ಹಾಟ್​ ಲುಕ್​..!

First published: