ದರ್ಶನ್ ನಟನೆಯ ಬಹುನಿರೀಕ್ಷಿತ 'ಕುರುಕ್ಷೇತ್ರ' ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಬೆಂಗಳೂರಿನ ಕೋರಮಂಗಲದ ಇನ್‍ಡೋರ್ ಸ್ಟೇಡಿಯಂನಲ್ಲಿ ನಿನ್ನೆ ಸಂಜೆ ನಡೆದ ಅದ್ಧೂರಿ ಸಮಾರಂಭದಲ್ಲಿ ಧ್ವನಿ ಸುರಳಿ ಜತೆಗೆ ಸಿನಿಮಾದ ಟ್ರೈಲರ್ ಸಹ ಬಿಡುಗಡೆಯಾಗಿದೆ.
ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ'. ಈ ಕಾರಣದಿಂದಾಗಿ ಡಿಬಾಸ್ ಅಭಿಮಾನಿಗಳು ಇದೆ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗಲೇ ಸಿನಿಮಾದ ಟ್ರೈಲರ್ ಸಹ ಬಿಡುಗಡೆಯಾಗಿರುವುದು ಅವರ ಸಂಭ್ರಮಕ್ಕೆ ಮತ್ತಷ್ಟು ಮೆರುಗು ಕೊಟ್ಟಿದೆ. ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಈ ಟ್ರೈಲರ್ ಸದ್ಯ ಟ್ರೆಂಡಿಂಗ್ನಲ್ಲಿದೆ.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ 'ಸಾಹೋರೆ ಸಾಹೋ...' ಹಾಡಿನ ಮೂಲಕ ದರ್ಶನ್ ಅವರನ್ನು ವೇದಿಕೆಗೆ ಸ್ವಾಗತಿಸಲಾಯಿತು.
ತಮ್ಮ ನೆಚ್ಚಿನ ಆರಾಧ್ಯ ದೈವರನ್ನು ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳು @dasadarshan @LahariMusic@MunirathnaMLA @AICSDF @DBoss_Hudugaru_ @Dcompany171 @CSDSK1 @DarshanTrends @Darshanfans171 @DarshanFanz pic.twitter.com/EKOUsGeFWi
— Karunada Kalaputra Darshan Thoogudeepa Fans-KKDTFA (@kkdtfs) July 7, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ