• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Kurukshetra: ಡಿಬಾಸ್​ ಅಭಿಮಾನಿಗಳಿಗೆ ಸಿಹಿ ಸುದ್ದಿ: 'ಕುರುಕ್ಷೇತ್ರ' ಆಡಿಯೋ ಬಿಡುಗಡೆ ಆಹ್ವಾನ ಪತ್ರಿಕೆಯಲ್ಲಿ ದರ್ಶನ್​ರ ಹೊಸ ಫೋಟೋ

Kurukshetra: ಡಿಬಾಸ್​ ಅಭಿಮಾನಿಗಳಿಗೆ ಸಿಹಿ ಸುದ್ದಿ: 'ಕುರುಕ್ಷೇತ್ರ' ಆಡಿಯೋ ಬಿಡುಗಡೆ ಆಹ್ವಾನ ಪತ್ರಿಕೆಯಲ್ಲಿ ದರ್ಶನ್​ರ ಹೊಸ ಫೋಟೋ

'ಕುರುಕ್ಷೇತ್ರ'ದ ಚಿತ್ರ ಆಯಿಯೋ ಲಾಂಚ್​ ಆಹ್ವಾನ ಪತ್ರಿಕೆಯಲ್ಲಿ ದರ್ಶನ್​ರ ಹೊಸ ಲುಕ್​ ಔಟ್​

'ಕುರುಕ್ಷೇತ್ರ'ದ ಚಿತ್ರ ಆಯಿಯೋ ಲಾಂಚ್​ ಆಹ್ವಾನ ಪತ್ರಿಕೆಯಲ್ಲಿ ದರ್ಶನ್​ರ ಹೊಸ ಲುಕ್​ ಔಟ್​

Kurukshetra Movie: ಕಡೆಗೂ ದರ್ಶನ್​ ಅಭಿಮಾನಿಗಳಿಗೆ ಸಿಕ್ತು ಸಿಹಿ ಸುದ್ದಿ. 'ಕುರುಕ್ಷೇತ್ರ' ಆಡಿಯೋ ಆಹ್ವಾನ ಪತ್ರಿಕೆಯಲ್ಲಿ ಡಿಬಾಸ್​ ದರ್ಶನ್​ರ ಹೊಸ ಪೋಸ್ಟ್​ ಬಿಡುಗಡೆಯಾಗಿದೆ.

  • News18
  • 3-MIN READ
  • Last Updated :
  • Share this:

- ಅನಿತಾ ಈ, 

'ಕುರುಕ್ಷೇತ್ರ' ಸಿನಿಮಾ ಬಿಡುಗಡೆಗೆ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಒಂದು ಕಡೆ ಮೇಕಿಂಗ್​, ಭಾರೀ ಬಜೆಟ್​ನಿಂದಾಗಿ ಸುದ್ದಿಯಾಗುತ್ತಿದ್ದರೆ, ಮತ್ತೊಂದು ಕಡೆ ದರ್ಶನ್​ರ 50 ನೇ ಸಿನಿಮಾ ಆಗಿರುವ ಕಾರಣಕ್ಕೆ ಮತ್ತಷ್ಟು ಸದ್ದು ಮಾಡುತ್ತಿದೆ.

ಹೀಗಿರುವಾಗಲೇ ದರ್ಶನ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರ ಆಡಿಯೋ ಲಾಂಚ್​ ಕುರಿತಂತೆ ಇತ್ತೀಚೆಗೆ ದಿನಾಂಕ ಪ್ರಕಟಿಸಲಾಗಿತ್ತು. ಅದಕ್ಕೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲೂ ಎಲ್ಲ ಸಿದ್ಧತೆಗಳು ನಡೆದಿದ್ದವು. ಆದರೆ ಕಾರ್ಯಕ್ರಮದ ಪಾಸ್​ನಲ್ಲಿ ದರ್ಶನ್​ ಅವರ ಚಿತ್ರವೇ ಇರಲಿಲ್ಲ.

Darshan in Kurukshetra
'ಕುರುಕ್ಷೇತ್ರ' ಸಿನಿಮಾದಲ್ಲಿ ದರ್ಶನ್​


ಇದರಿಂದಾಗಿ ಡಿಬಾಸ್ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ ಆಗಿ, ಸಾಮಾಜಿಕ ಜಾಲತಾಣದಲ್ಲಿ ನಿರ್ಮಾಪಕ ಮುನಿರತ್ನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದಾಗಿ ದರ್ಶನ್​ ಅಭಿಮಾನಿಗಳಿಗೆ ಓಪನ್​ ಚಾಲೆಂಜ್​ ಹಾಕುವ ಮೂಲಕ ಜಾಣತನದಿಂದ ಮುಂದಾಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.

ದರ್ಶನ್​ ಅವರು ಲೈವ್​ ಬಂದಿದ್ದು ಕಳೆದ ಸೋಮವಾರ. ನಿನ್ನೆ ಅಂದರೆ ಗುರುವಾರ ರಾತ್ರಿ 'ಕುರುಕ್ಷೇತ್ರ' ಸಿನಿಮಾದ ಆಡಿಯೋ ಬಿಡುಗಡೆಯ ಆಹ್ವಾನ ಪತ್ರಿಕೆ ಸಿದ್ಧವಾಗಿದ್ದು, ಅದನ್ನು ನಿರ್ಮಾಪಕ ಮುನಿರತ್ನ ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.


ಮುನಿರತ್ನ ಅವರು ಹಂಚಿಕೊಂಡಿರುವ ಟ್ವೀಟ್​ನಲ್ಲಿ ಒಂದು ವಿಶೇಷವಿದೆ. ಹೌದು, ಈ ಸಲ ಭಾನುವಾರದಂದು ಅಂದರೆ ಜು.7ರಂದು ನಡೆಯಲಿರುವ ಆಡಿಯೋ ಬಿಡುಗಡೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ದರ್ಶನ್​ರ ಹೊಸ ಪೋಸ್ಟರ್​ ಅನ್ನು ರಿಲೀಸ್​ ಮಾಡಲಾಗಿದೆ. ಇದರಲ್ಲಿ ಇದು ದರ್ಶನ್​ ಅವರ 50ನೇ ಸಿನಿಮಾ ಎಂದೆಲ್ಲ ಬರೆಯಲಾಗಿದೆ. ಈ ಹಿಂದೆ ಕೋಪಗೊಂಡಿದ್ದ ದಚ್ಚು ಅಭಿಮಾನಿಗಳನ್ನು ಮುನಿರತ್ನ ಶಾಂತಗೊಳಿಸಲು ಈ ದಾರಿ ಕಂಡುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Lindsay Lohan: ಇನ್​ಸ್ಟಾಗ್ರಾಂನಲ್ಲಿ ತನ್ನದೇ ನಗ್ನ ಸೆಲ್ಫಿ ಪೋಸ್ಟ್​ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ನಟಿ..!

ಇನ್ನು ಸಿನಿಮಾವನ್ನು ಸಿನಿಮಾದಂತೆ ನೋಡಿ ಎಂದು ಅಭಿಮಾನಿಗಳಿಗೆ ಪಾಠ ಮಾಡಿದ್ದ  ದರ್ಶನ್, 'ಕುರುಕ್ಚೇತ್ರ' ಚಿತ್ರಕ್ಕಾಗಿ ಶ್ರಮಿಸಿರುವ ಎಲ್ಲರಿಗೂ ಧನ್ಯವಾದ ತಿಳಿಸುವ ಮೂಲಕ ಆಡಿಯೋ ಲಾಂಚ್​ನ ಆಹ್ವಾನ ಪತ್ರಿಕೆಯನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ​

ಬಹುತಾರಾಗಣ ಹೊಂದಿರುವ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇದೇ ಭಾನುವಾರ ಜುಲೈ ೭ ರಂದು ನಡೆಯಲಿದೆ. ಬಹಳಷ್ಟು ನಟರು ಹಾಗೂ ತಂತ್ರಘ್ನರು ಈ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಸದಾ ಇರಲಿ 😊 pic.twitter.com/1NB13H4Qns


ಒಟ್ಟಾರೆ ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಹಾಗೂ ಬಿಗ್​ ಬಜೆಟ್​ ಸಿನಿಮಾ 'ಕುರುಕ್ಷೇತ್ರ'. ನಾಗಣ್ಣ, ವಿ.ನಾಗೇಂದ್ರ ಪ್ರಸಾದ್​, ಎಸ್​.ವಿ. ಪ್ರಸಾದ್​ ಹಾಗೂ ದೇವರಾಜ್​ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅಂಬರೀಷ್​, ರವಿಚಂದ್ರನ್​, ಅರ್ಜುನ್​ ಸರ್ಜಾ, ನಿಖಿಲ್​ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ.

Sunny Leone: ಪಡ್ಡೆಗಳಿಗೆ ಸಮೂಹ ಸನ್ನಿ ಹಿಡಿಸಿದ್ದ ಮಾಜಿ ನೀಲಿ ತಾರೆ ಸನ್ನಿಗೂ ಇತ್ತಂತೆ ಆ ಕಾಯಿಲೆ..!

First published: