HOME » NEWS » Entertainment » KURUKSHETRA MOVIE SHOW WILL START FROM MID NIGHT ONLY AE

Kurukshetra: ಮಧ್ಯರಾತ್ರಿಯಿಂದಲೇ ಆರಂಭವಾಗಲಿದೆ ಕುರುಕ್ಷೇತ್ರದ ದುರ್ಯೋಧನನ ಅಬ್ಬರ..!

Kurukshetra: ಕನ್ನಡದ ಈ ಪೌರಾಣಿಕ ಸಿನಿಮಾವನ್ನ ನೋಡಲು ಕನ್ನಡ ಚಿತ್ರಪ್ರೇಮಿಗಳು ನಿದ್ದೆಗೂ ಗುಡ್ ಬೈ ಹೇಳ್ತಿದ್ದಾರೆ. ಪರಿಣಾಮ ದುಯೋರ್ಧನನ ಅವತಾರದಲ್ಲಿ ಡಿಬಾಸ್ ಅಬ್ಬರ ಮಧ್ಯರಾತ್ರಿಯಿಂದಲೇ ಶುರುವಾಗಲಿದೆ. ಅಂದಹಾಗೆ ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ 12.05ಕ್ಕೆ ಕುರುಕ್ಷೇತ್ರ ಪ್ರದರ್ಶನ ಆರಂಭವಾಗಲಿದೆ.

Anitha E | news18
Updated:August 8, 2019, 11:12 AM IST
Kurukshetra: ಮಧ್ಯರಾತ್ರಿಯಿಂದಲೇ ಆರಂಭವಾಗಲಿದೆ ಕುರುಕ್ಷೇತ್ರದ ದುರ್ಯೋಧನನ ಅಬ್ಬರ..!
ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್​
  • News18
  • Last Updated: August 8, 2019, 11:12 AM IST
  • Share this:
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಿನಿಮಾವೊಂದು ಬಿಡುಗಡೆಯಾಗುತ್ತೆ ಎಂದರೆ ಅದರ ಅಬ್ಬರ ಹೇಗಿರುತ್ತೆ ಅಂತ ಹೇಳಲೇಬೇಕಿಲ್ಲ. ಅದಕ್ಕೆ ಮತ್ತೊಮ್ಮೆ ಸಾಕ್ಷಿಯಾಗ್ತಿದೆ 'ಕುರುಕ್ಷೇತ್ರ'. ಈ ಪೌರಾಣಿಕ ಸಿನಿಮಾದ ಫೀವರ್ ಇಡೀ ಕರುನಾಡಿಗೆ ಆವರಿಸಿದ್ದು, ಮಧ್ಯರಾತ್ರಿಯಿಂದಲೇ ದುರ್ಯೋಧನನ ಅಬ್ಬರವನ್ನ ನೋಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಕನ್ನಡದ ಈ ಪೌರಾಣಿಕ ಸಿನಿಮಾವನ್ನ ನೋಡಲು ಕನ್ನಡ ಚಿತ್ರಪ್ರೇಮಿಗಳು ನಿದ್ದೆಗೂ ಗುಡ್ ಬೈ ಹೇಳ್ತಿದ್ದಾರೆ. ಪರಿಣಾಮ ದುಯೋರ್ಧನನ ಅವತಾರದಲ್ಲಿ ಡಿಬಾಸ್ ಅಬ್ಬರ ಮಧ್ಯರಾತ್ರಿಯಿಂದಲೇ ಶುರುವಾಗಲಿದೆ. ಅಂದಹಾಗೆ ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ 12.05ಕ್ಕೆ 'ಕುರುಕ್ಷೇತ್ರ' ಪ್ರದರ್ಶನ ಆರಂಭವಾಗಿಲಿದ್ದು, ಸತತ 24 ಗಂಟೆಗಳ ಕಾಲ ದುರ್ಯೋಧನನ ಆರ್ಭಟ ಮುಂದುವರೆಯಲಿದೆ, ಈ ಮೂಲಕ ಒಂದೇ ದಿನ 7 ಶೋಗಳು ಸಿಂಗಲ್ ಸ್ಕ್ರೀನ್‍ನಲ್ಲಿ ಕಾಣಲಿವೆ.

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಈ ವಾರ ಚಿತ್ರ ಬಿಡುಗಡೆಯಾಗುತ್ತಿದೆ. ಮುಂಗಡ ಬುಕಿಂಗ್ಸ್ ವಿವರ ಇಲ್ಲಿದೆ

ಭಾನುವಾರದಿಂದಲೇ ಎಲ್ಲ ಕಡೆ ಬುಕಿಂಗ್ ಸ್ಟಾರ್ಟ್ ಆಗಿದ್ದು, ಬಹುತೇಕ ಕಡೆ ಮೊದಲ ದಿನದ ಎಲ್ಲ ಶೋಗಳ ಟಿಕೆಟ್ ಸೋಲ್ಡ್​ಔಟ್ ಆಗಿವೆ. ಸದ್ಯಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ 'ಕುರುಕ್ಷೇತ್ರ' ಬಿಡುಗಡೆಯಾಗಲಿದ್ದು, ದರ್ಶನ್ ಕೆರಿಯರ್​ನಲ್ಲೇ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗ್ತಿದೆ.

kurukshetra
'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನನಾಗಿ ದರ್ಶನ್​


ಯಶ್ ಅಭಿನಯದ 'ಕೆ.ಜಿ.ಎಫ್' ನಂತರ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗ್ತಿರೋ ಸಿನಿಮಾ 'ಕುರುಕ್ಷೇತ್ರ'. ಹೀಗಾಗಿ ಮೊದಲ ದಿನವೇ ಬಾಕ್ಸಾಫಿಸ್‍ನಲ್ಲಿ 'ಕುರುಕ್ಷೇತ್ರ' ಹೊಸ ದಾಖಲೆ ಬರೆಯೋದು ಪಕ್ಕಾ ಅಂತಿದೆ ಸ್ಯಾಂಡಲ್‍ವುಡ್. ಒಟ್ಟಾರೆ ಅದ್ಧೂರಿ ತಾರಾಗಣ, ಅದ್ಭುತ ಮೇಕಿಂಗ್...​ ಕನ್ನಡ ಚಿತ್ರರಂಗದ ಮಟ್ಟಿಗೆ ದುಬಾರಿ ಬಜೆಟ್​... ಎಲ್ಲವೂ 'ಕುರುಕ್ಷೇತ್ರ'ದ ಹೈಲೈಟ್ ಆಗಿದ್ದು, ಥಿಯೇಟರ್​ನಲ್ಲಿ ಈ ಸಿನಿಮಾ ಅದ್ಯಾವ ಮಟ್ಟಿಗೆ ಮೋಡಿ ಮಾಡಲಿದೆ ಕಾದು ನೋಡಬೇಕಷ್ಟೆ.

ಇದನ್ನೂ ಓದಿ: Priyanka Chopra: ಲಾಸ್​ ಎಂಜಲೀಸ್​ನಲ್ಲಿ ಪ್ರಿಯಾಂಕಾ - ನಿಕ್​ರ ಹೊಸ ಮನೆ: ಬಂಗಲೆಯ ಬೆಲೆ ಕೇಳಿದ್ರೆ ದಂಗಾಗುತ್ತೀರಾ​..!

Priya Prakash Varrier: ಮಾದಕ ನೋಟದಿಂದ ಮತ್ತೇರಿಸುತ್ತಿರುವ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್​ ವಾರಿಯರ್​​..!


 
First published: August 8, 2019, 11:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading