Kurukshetra: ಮಧ್ಯರಾತ್ರಿ ‘ಕುರುಕ್ಷೇತ್ರ’ ನೋಡಿದ ಅಭಿಮಾನಿಗಳು ಏನಂದ್ರು?; ದರ್ಶನ್ 50ನೇ ಸಿನಿಮಾಗೆ ಸಿಗಲಿದೆಯಾ ದೊಡ್ಡ ಯಶಸ್ಸು?

Kurukshetra: ನಗರದ ಹಲವೆಡೆ ಮಧ್ಯರಾತ್ರಿಯಿಂದಲೇ ‘ಕುರುಕ್ಷೇತ್ರ’ ಪ್ರದರ್ಶನ ಕಂಡಿದೆ. ಜೆಪಿ‌ ನಗರದ ಸಿದ್ಧಲಿಂಗೇಶ್ವರ ಮತ್ತು ಸಂಜಯ್ ನಗರದ ವೈಭವ್ ಥಿಯೇಟರ್​ನಲ್ಲಿ ಮಧ್ಯರಾತ್ರಿಯೇ ಪ್ರೇಕ್ಷಕರು ದರ್ಶನ್​ ಸಿನಿಮಾವನ್ನು ವೀಕ್ಷಿಸಿದ್ದಾರೆ.

Rajesh Duggumane | news18
Updated:August 9, 2019, 9:09 AM IST
Kurukshetra: ಮಧ್ಯರಾತ್ರಿ ‘ಕುರುಕ್ಷೇತ್ರ’ ನೋಡಿದ ಅಭಿಮಾನಿಗಳು ಏನಂದ್ರು?; ದರ್ಶನ್ 50ನೇ ಸಿನಿಮಾಗೆ ಸಿಗಲಿದೆಯಾ ದೊಡ್ಡ ಯಶಸ್ಸು?
ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನಾಗಿ ದರ್ಶನ್​
  • News18
  • Last Updated: August 9, 2019, 9:09 AM IST
  • Share this:
ಮಹಾ ಭಾರತದ ಕಥೆ, ಅದ್ಭುತ ತಾರಾಗಣ, 3ಡಿ ಎಫೆಕ್ಟ್​ ಹೀಗೆ ನಾನಾ ವಿಶೇಷತೆಗಳನ್ನು ಹೊಂದಿರುವ ‘ಕುರುಕ್ಷೇತ್ರ’ ಸಿನಿಮಾ ಇಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು, ಬೆಂಗಳೂರಿನಲ್ಲಿ ಇಂದಿನ ಶೋನ ಎಲ್ಲ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ.

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ‘ಕುರಕ್ಷೇತ್ರ’ ತೆರೆಗೆ ಬರುತ್ತಿದೆ. ಕನ್ನಡದಲ್ಲಿ 3ಡಿ ಸಿನಿಮಾಗೆ ಹೆಚ್ಚಿನ ಆದ್ಯತೆ ಸಿಕ್ಕಿಲ್ಲ. ಹಾಗಾಗಿ, ಈಗ ಮಹಾಭಾರವನ್ನು 3ಡಿಯಲ್ಲಿ ಸವಿಯುವ ಅವಕಾಶ ಸಿಕ್ಕಿರುವುದು ಸಿನಿಪ್ರಿಯರಿಗೆ ರಸದೌತಣ ಸಿಕ್ಕಂತಾಗಿದೆ.

ನಗರದ ಹಲವೆಡೆ ಮಧ್ಯರಾತ್ರಿಯಿಂದಲೇ ‘ಕುರುಕ್ಷೇತ್ರ’ ಪ್ರದರ್ಶನ ಕಂಡಿದೆ. ಜೆಪಿ‌ ನಗರದ ಸಿದ್ಧಲಿಂಗೇಶ್ವರ ಮತ್ತು ಸಂಜಯ್ ನಗರದ ವೈಭವ್ ಥಿಯೇಟರ್​ನಲ್ಲಿ ಮಧ್ಯರಾತ್ರಿಯೇ ಪ್ರೇಕ್ಷಕರು ದರ್ಶನ್​ ಸಿನಿಮಾವನ್ನು ವೀಕ್ಷಿಸಿದ್ದಾರೆ. ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ಬೆಳಗ್ಗೆ 9:30ಕ್ಕೆ‘ಕುರುಕ್ಷೇತ್ರ’ದ ಮೊದಲ‌ ಶೋ ನಡೆಯಲಿದೆ.

ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ ಕುರುಕ್ಷೇತ್ರ ಚಿತ್ರದ ಗುಟ್ಟು ರಟ್ಟು..!

ಮಧ್ಯರಾತ್ರಿ ಸಿನಿಮಾ ವೀಕ್ಷಿಸಿದ ಅನೇಕರು ಚಿತ್ರದ ಬಗ್ಗೆ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಗುರುವಾರ ಸಂಜೆ ಸೆಲಬ್ರೆಟಿಗಳಿಗೋಸ್ಕರ ವಿಶೇಷ ಶೋ ಎರ್ಪಡಿಸಲಾಗಿತ್ತು. ‘ಕುರುಕ್ಷೇತ್ರ’ ವೀಕ್ಷಿಸಿದ ಬಳಿಕ ಸುಮಲತಾ ಅಂಬರೀಶ್ ಸಂತಸ ವ್ಯಕ್ತಪಡಿಸಿದ್ದಾರೆ. “ಕುರುಕ್ಷೇತ್ರ ಎಂಬುದನ್ನು ಸಿನಿಮಾ ಎಂದರೆ ತಪ್ಪಾಗಲಿದೆ. ಅದೊಂದು‌ ಅನುಭವ ಮತ್ತು ಜರ್ನಿ. ದರ್ಶನ್‌ಗೆ ‘ಸಂಗೊಳ್ಳಿ ರಾಯಣ್ಣ’ ಆದ ನಂತರ ಇದೊಂದು ಮೈಲಿಗಲ್ಲು. ದುರ್ಯೋಧನನೇ ದರ್ಶನ್, ದರ್ಶನ್ ಅವ್ರೇ ದುರ್ಯೋಧನ. ಅಷ್ಟು ಕರಾರುವಕ್ಕಾಗಿ ಅವರು ನಟಿಸಿದ್ದಾರೆ,” ಎಂದು ದರ್ಶನ್​ ಅವರನ್ನು ಹೊಗಳಿದರು ಸುಮಲತಾ.

“ಕರ್ನಾಟಕದ ಜನ 100 ವರ್ಷ ನೆನಪಿಸಿಕೊಳ್ಳುವ ಸಿನಿಮಾ. ಇದೊಂದು ಭಾವನಾತ್ಮಕ ಅನುಭವ. ಅಂಬರೀಶ್ ಅವರನ್ನು ಕೊನೆಯ ಬಾರಿಗೆ ದೊಡ್ಡ ಪರದೆಯ ಮೇಲೆ ನೋಡಿದ್ದು. ಮುನಿರತ್ನ ಅವರಿಗೆ ಥ್ಯಾಂಕ್ಸ್ ಹೇಳಬೇಕು. ಅವರ ಬಲವಂತಕ್ಕಾಗಿ ಅಂಬರೀಶ್ ನಟಿಸಿದ್ದರು,” ಎಂದು ಭಾವುಕರಾದ ಸುಮಲತಾ, ಅರ್ಜುನ್​ ಸರ್ಜಾ, ನಿಖಿಲ್​ ಕುಮಾರ್​, ರವಿಚಂದ್ರನ್ ‌ಅವರ ನಟನೆಯ ಬಗ್ಗೆಯೂ ಶ್ಲಾಘಿಸಿದರು.

First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...