Kurukshetra: ದರ್ಶನ್ ಈಗ ಕೇವಲ ಡಿ ಬಾಸ್ ಅಲ್ಲ; ಕುರುಕ್ಷೇತ್ರ ವೀಕ್ಷಿಸಿ ದರ್ಶನ್​ಗೆ ಸುಮಲತಾ ನೀಡಿದ ಹೊಸ ಬಿರುದೇನು ಗೊತ್ತಾ?

ಗುರುವಾರ ರಾತ್ರಿ ಸೆಲಬ್ರೆಟಿಗಳಿಗೋಸ್ಕರ ‘ಕುರಕ್ಷೇತ್ರ’ ಚಿತ್ರದ ಪ್ರೀಮಿಯರ್​ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಿನಿಮಾ ವೀಕ್ಷಿಸಿದ ಸುಮಲತಾ ತುಂಬಾನೇ ಖುಷಿಪಟ್ಟಿದ್ದಾರೆ. ಧುರ್ಯೋದನನ ಪಾತ್ರಕ್ಕೆ ದರ್ಶನ್​ ನ್ಯಾಯ ಒದಗಿಸಿದ್ದಾರೆ ಎಂದು ಕೊಂಡಾಡಿದ್ದಾರೆ.

Rajesh Duggumane | news18
Updated:August 9, 2019, 9:25 AM IST
Kurukshetra: ದರ್ಶನ್ ಈಗ ಕೇವಲ ಡಿ ಬಾಸ್ ಅಲ್ಲ; ಕುರುಕ್ಷೇತ್ರ ವೀಕ್ಷಿಸಿ ದರ್ಶನ್​ಗೆ ಸುಮಲತಾ ನೀಡಿದ ಹೊಸ ಬಿರುದೇನು ಗೊತ್ತಾ?
ದರ್ಶನ್​-ಸುಮಲತಾ
  • News18
  • Last Updated: August 9, 2019, 9:25 AM IST
  • Share this:
ಅಂಬರೀಶ್​ ಕುಟುಂಬದ ಜೊತೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಒಳ್ಳೆಯ ನಂಟು ಇಟ್ಟುಕೊಂಡಿದ್ದಾರೆ. ಅಂಬರೀಶ್​ ನಿಧನ ಹೊಂದಿದಾಗ ಶೂಟಿಂಗ್​ಗಾಗಿ ವಿದೇಶದಲ್ಲಿದ್ದರೂ ಓಡೋಡಿ ಬಂದಿದ್ದರು. ಅವರೇ ಮುಂದೆ ನಿಂತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್​ ಗೆಲ್ಲಲು ದರ್ಶನ್​ ಕೂಡ ಪ್ರಮುಖ ಪಾತ್ರವಹಿಸಿದ್ದರು. ಇದೇ ಕಾರಣಕ್ಕೆ ಸುಮಲತಾಗೂ ದರ್ಶನ್​ ಎಂದರೆ ಅಚ್ಚುಮೆಚ್ಚು. ಇಂದು ದರ್ಶನ್​ ನಟನೆಯ ‘ಕುರುಕ್ಷೇತ್ರ’ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾ ನೋಡಿದ ಸುಮಲತಾ ಡಿ ಬಾಸ್​ಗೆ ಹೊರ ಬಿರುದು ನೀಡಿದ್ದಾರೆ.

ಗುರುವಾರ ರಾತ್ರಿ ಸೆಲಬ್ರೆಟಿಗಳಿಗೋಸ್ಕರ ‘ಕುರಕ್ಷೇತ್ರ’ ಚಿತ್ರದ ಪ್ರೀಮಿಯರ್​ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಿನಿಮಾ ವೀಕ್ಷಿಸಿದ ಸುಮಲತಾ ತುಂಬಾನೇ ಖುಷಿಪಟ್ಟಿದ್ದಾರೆ. ದುರ್ಯೋಧನನ ಪಾತ್ರಕ್ಕೆ ದರ್ಶನ್​ ನ್ಯಾಯ ಒದಗಿಸಿದ್ದಾರೆ ಎಂದು ಕೊಂಡಾಡಿದ್ದಾರೆ.

“ಕುರುಕ್ಷೇತ್ರ ಎಂಬುದನ್ನು ಸಿನಿಮಾ ಎಂದರೆ ತಪ್ಪಾಗಲಿದೆ. ಅದೊಂದು‌ ಅನುಭವ ಮತ್ತು ಜರ್ನಿ. ದರ್ಶನ್‌ಗೆ ‘ಸಂಗೊಳ್ಳಿ ರಾಯಣ್ಣ’ ಆದ ನಂತರ ಇದೊಂದು ಮೈಲಿಗಲ್ಲು. ದುರ್ಯೋಧನನೇ ದರ್ಶನ್, ದರ್ಶನ್ ಅವ್ರೇ ದುರ್ಯೋಧನ. ಅಷ್ಟು ಕರಾರುವಕ್ಕಾಗಿ ಅವರು ನಟಿಸಿದ್ದಾರೆ,” ಎಂದು ದರ್ಶನ್​ ಅವರನ್ನು ಹೊಗಳಿದರು ಸುಮಲತಾ.

ಇದನ್ನೂ ಓದಿ: ಮಧ್ಯರಾತ್ರಿ ‘ಕುರುಕ್ಷೇತ್ರ’ ನೋಡಿದ ಅಭಿಮಾನಿಗಳು ಏನಂದ್ರು?; ದರ್ಶನ್ 50ನೇ ಸಿನಿಮಾಗೆ ಸಿಗಲಿದೆಯಾ ದೊಡ್ಡ ಯಶಸ್ಸು?

ಇದೇ ವೇಳೆ ದರ್ಶನ್​ಗೆ ಸುಮಲತಾ ಹೊಸ ಬಿರುದು ನೀಡಿದರು. ದರ್ಶನ್​ಗೆ ಡಿ ಬಾಸ್​ ಎಂದು ಅವರ ಅಭಿಮಾನಿಗಳು ಕರೆಯುತ್ತಾರೆ. ಸುಮಲತಾ ಇದು ಬಿರುದನ್ನೇ ಸ್ವಲ್ಪ ಬದಲಾಯಿಸಿದ್ದಾರೆ. “ದರ್ಶನ್​ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದರ್ಶನ್ ಬರಿ ಡಿ‌ ಬಾಸ್ ಅಲ್ಲ. ಅವರನ್ನು ದೂರ್ಯೋಧನ ಬಾಸ್ ಎಂದು ಕರಿಯಬೇಕು,” ಎಂದಿದ್ದಾರೆ.

ನಗರದ ಹಲವೆಡೆ ಮಧ್ಯರಾತ್ರಿಯಿಂದಲೇ ‘ಕುರುಕ್ಷೇತ್ರ’ ಪ್ರದರ್ಶನ ಕಂಡಿದೆ. ಜೆಪಿ‌ ನಗರದ ಸಿದ್ಧಲಿಂಗೇಶ್ವರ ಮತ್ತು ಸಂಜಯ್ ನಗರದ ವೈಭವ್ ಥಿಯೇಟರ್​ನಲ್ಲಿ ಮಧ್ಯರಾತ್ರಿಯೇ ಪ್ರೇಕ್ಷಕರು ದರ್ಶನ್​ ಸಿನಿಮಾವನ್ನು ವೀಕ್ಷಿಸಿದ್ದಾರೆ.

First published: August 9, 2019, 9:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading