Kurukshetra: ಮುಖ್ಯ ಥಿಯೇಟರ್​ ಪರಿಕಲ್ಪನೆಗೆ ಬ್ರೇಕ್​ ಹಾಕಿದ ದರ್ಶನ್​: ಮೆಜೆಸ್ಟಿಕ್​ನಲ್ಲೇ ಎರಡು ಚಿತ್ರಮಂದಿರಗಳಲ್ಲಿ ಕುರುಕ್ಷೇತ್ರ ..!

Kurukshetra Movie: ಸ್ಟಾರ್​ ನಟರ ಸಿನಿಮಾಗಳಿಗಾಗಿ ಒಂದು ತಿಂಗಳು ಮುಂಚಿತವಾಗಿಯೇ ಕೆ.ಜಿ. ರಸ್ತೆಯಲ್ಲಿರುವ ಚಿತ್ರ ಮಂದಿರದ ಬುಕಿಂಗ್​ ಆಗುತ್ತದೆ. ಆದರೆ ಈ ಸಲ ದರ್ಶನ್​ ಅಭಿನಯದ ಕುರುಕ್ಷೇತ್ರ ಸಿನಿಮಾ ಮೆಜೆಸ್ಟಿಕ್​ನಲ್ಲೇ ಎರಡು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಿದೆ.

Anitha E | news18
Updated:August 9, 2019, 11:11 AM IST
Kurukshetra: ಮುಖ್ಯ ಥಿಯೇಟರ್​ ಪರಿಕಲ್ಪನೆಗೆ ಬ್ರೇಕ್​ ಹಾಕಿದ ದರ್ಶನ್​: ಮೆಜೆಸ್ಟಿಕ್​ನಲ್ಲೇ ಎರಡು ಚಿತ್ರಮಂದಿರಗಳಲ್ಲಿ ಕುರುಕ್ಷೇತ್ರ ..!
ತ್ರಿವೇಣಿ ಹಾಗೂ ನರ್ತಕಿಯಲ್ಲಿ ಕುರುಕ್ಷೇತ್ರ
Anitha E | news18
Updated: August 9, 2019, 11:11 AM IST
ಸ್ಯಾಂಡಲ್​ವುಡ್​ನಲ್ಲಿ ಯಾವುದಾದರೂ ಸಿನಿಮಾ ಬಿಡಗುಡೆಯಾಗುತ್ತಿದೆ ಅಂದರೆ ಅದು ಗಾಂಧಿನಗರದರಲ್ಲಿರುವ ದೊಡ್ಡ ಚಿತ್ರಮಂದಿರಗಳಲ್ಲಿ ಒಂದರಲ್ಲಾದರೂ ಬಿಡುಗಡೆ ಆಗಲೇ ಬೇಕು. ಆ ಸಿನಿಮಾಗೆಂದೇ ಒಂದು ಮುಖ್ಯ ಚಿತ್ರಮಂದಿರ ಇರಲೇಬೇಕು. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಒಂದುವೇಳೆ ಗಾಂಧಿನಗರದ ಅಂದರೆ ಕೆ.ಜಿ. ರಸ್ತೆಯಲ್ಲಿರುವ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಸಿಗಲಿಲ್ಲ ಅಂದರೆ ಸಿನಿಮಾ ನಿರ್ಮಾಪಕರು ಚಿತ್ರದ ಬಿಡುಗಡೆ ದಿನಾಂಕವನ್ನೇ ಮುಂದಕ್ಕೆ ಹಾಕುತ್ತಾರೆ. ಹಾಗೆಯೇ ಮುಖ್ಯ ಚಿತ್ರಮಂದಿರ ಸಿಗದೇ ಬೇರೆ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದವರೂ ಇದ್ದಾರೆ.

Kurukshetra movie released in foreign
ವಿದೇಶದಲ್ಲಿ 'ಕುರುಕ್ಷೇತ್ರ'


ಆದರೆ ಸ್ಟಾರ್​ ನಟರ ಸಿನಿಮಾಗಳಿಗಾಗಿ ಒಂದು ತಿಂಗಳು ಮುಂಚಿತವಾಗಿಯೇ ಕೆ.ಜಿ. ರಸ್ತೆಯಲ್ಲಿರುವ ಚಿತ್ರ ಮಂದಿರದ ಬುಕಿಂಗ್​ ಆಗುತ್ತದೆ. ಆದರೆ ಈ ಸಲ ದರ್ಶನ್​ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಮೆಜೆಸ್ಟಿಕ್​ನಲ್ಲೇ ಎರಡು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಿದೆ.

ಇದನ್ನೂ ಓದಿ: ವಿದೇಶಗಳಲ್ಲೂ ಧುರ್ಯೋಧನನ ಹವಾ: 40 ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ 'ಕುರುಕ್ಷೇತ್ರ'

ನರ್ತಕಿ ಹಾಗೂ ತ್ರಿವೇಣಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಮೂಲಕ ಮುಖ್ಯ ಥಿಯೇಟರ್​ ಕಲ್ಪನೆಯನ್ನು 'ಕುರುಕ್ಷೇತ್ರ' ಮುರಿದಿದೆ. ನರ್ತಕಿಯಲ್ಲಿ 3ಡಿ ಹಾಗೂ ತ್ರಿವೇಣಿಯಲ್ಲಿ 2ಡಿ ಚಿತ್ರ ಬಿಡುಗಡೆಯಾಗಿದೆ.

ಇದನ್ನೂ ಓದಿ: Darshan: ಕುರುಕ್ಷೇತ್ರ ನೋಡೋಕೆ ಇಲ್ಲಿವೆ 9 ಕಾರಣಗಳು..!
Loading...

ಎರಡೂ ಚಿತ್ರಮಂದಿರಗಳಲ್ಲಿ ದಿನಕ್ಕೆ ನಾಲ್ಕು ಶೋಗಳಿದ್ದು, ತ್ರಿವೇಣಿಯಲ್ಲಿ ಒಂದು ವಾರದವರೆಗೂ ಮುಂಗಡವಾಗಿ ಟಿಕೆಟ್​ ಬುಕ್​ ಮಾಡುವ ಅವಕಾಶವಿದೆ.

Shraddha Kapoor: ಕೆಂಪು ಗೌನ್​ನಲ್ಲಿ ಮಿಂಚಿದ ಸಾಹೋ ರಾಣಿ ಶ್ರದ್ಧಾ ಕಪೂರ್​


 
First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...