Kurukshetra: ವಿದೇಶಗಳಲ್ಲೂ ಧುರ್ಯೋಧನನ ಹವಾ: 40 ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಕುರುಕ್ಷೇತ್ರ

Kurukshetra: ಕುರುಕ್ಷೇತ್ರ, ಮಹಾಭಾರತ ಮಹಾಕಾವ್ಯದ ಮಹೋನ್ನತ ದೃಶ್ಯ ವೈಭವ. ದುರ್ಯೋಧನನಾಗಿ ಚಾಲೆಂಜಿಂಗ್‍ಸ್ಟಾರ್​ಗೆ 50ನೇ ಚಿತ್ರದ ಸಂಭ್ರಮ ಬೇರೆ, ಭೀಷ್ಮನಾಗಿ ಅಂಬಿ, ಕರ್ಣನಾಗಿ ಅರ್ಜುನ್ ಸರ್ಜಾ, ಅರ್ಜುನನಾಗಿ ಸೋನು ಸೂದ್ ಮಹೋನ್ನತ ಪಾತ್ರಗಳಾಗಿ ಮೇಳೈಸಿರೋ ಚಿತ್ರ ಇದು.

Anitha E | news18
Updated:August 9, 2019, 10:40 AM IST
Kurukshetra: ವಿದೇಶಗಳಲ್ಲೂ ಧುರ್ಯೋಧನನ ಹವಾ: 40 ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಕುರುಕ್ಷೇತ್ರ
ಕರುಕ್ಷೇತ್ರ ಸಿನಿಮಾದಲ್ಲಿ ದರ್ಶನ್​
  • News18
  • Last Updated: August 9, 2019, 10:40 AM IST
  • Share this:
ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ 'ಕುರುಕ್ಷೇತ್ರ' ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ರಾಜ್ಯದ ಹಲವೆಡೆ ಮಧ್ಯರಾತ್ರಿಯಿಂದಲೇ ಶೋಗಳು ಆರಂಭವಾಗಿವೆ. ವಿದೇಶಗಳಲ್ಲೂ 'ಕುರುಕ್ಷೇತ್ರ'ದ ಹವಾ ಜೋರಾಗಿಯೇ ಇದೆ.  '

'ಕುರುಕ್ಷೇತ್ರ', ಮಹಾಭಾರತ ಮಹಾಕಾವ್ಯದ ಮಹೋನ್ನತ ದೃಶ್ಯ ವೈಭವ. ದುರ್ಯೋಧನನಾಗಿ ಚಾಲೆಂಜಿಂಗ್‍ಸ್ಟಾರ್​ಗೆ 50ನೇ ಚಿತ್ರದ ಸಂಭ್ರಮ ಬೇರೆ, ಭೀಷ್ಮನಾಗಿ ಅಂಬಿ, ಕರ್ಣನಾಗಿ ಅರ್ಜುನ್ ಸರ್ಜಾ, ಅರ್ಜುನನಾಗಿ ಸೋನು ಸೂದ್ ಮಹೋನ್ನತ ಪಾತ್ರಗಳಾಗಿ ಮೇಳೈಸಿರೋ ಚಿತ್ರ ಇದು. 3ಡಿಯಲ್ಲಿ ತಯಾರಾಗಿರೋ ಈ ವೈಭವದ ಚಿತ್ರ ವರಮಹಾಲಕ್ಷ್ಮಿ ಹಬ್ಬದ ದಿನ ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ತೆರೆಕಾಣುತ್ತಿದೆ.

Kurukshetra movie released in foreign
ವಿದೇಶದಲ್ಲಿ 'ಕುರುಕ್ಷೇತ್ರ'


ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಬಿಡುಗಡೆಯಾಗಿರುವ 'ಕುರುಕ್ಷೇತ್ರ' ಟಿಕೆಟ್‍ಗೆ ಆನ್‍ಲೈನ್ ಬುಕ್ಕಿಂಗ್ ಭರ್ಜರಿಯಾಗಿದೆ. ಅಮೆರಿಕದಲ್ಲಿ ಲಾಸ್ ಏಂಜಲೀಸ್. ಸ್ಯಾಂಜೋಸ್, ಸಾವೋ ಪೌಲೋ, ಕೇಂಬ್ರಿಡ್ಜ್, ನ್ಯೂಯಾರ್ಕ್ ಸೇರಿದಂತೆ 40ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಒಂದು ದಿನ ಮುಂಚಿತವಾಗಿಯೇ ಅಂದರೆ ರಿಲೀಸ್ ಆಗಿದೆ.

ಇದನ್ನೂ ಓದಿ: Darshan: ಕುರುಕ್ಷೇತ್ರ ನೋಡೋಕೆ ಇಲ್ಲಿವೆ 9 ಕಾರಣಗಳು..!

ವರುಣನ ಅಬ್ಬರದ ನಡುವೆಯೂ ದೇಶದಾದ್ಯಂತ 'ಕುರುಕ್ಷೇತ್ರ' ರಿಲೀಸ್ ಆಗಿದ್ದು, ಸಿನಿಪ್ರೇಮಿಗಳ ನಿರೀಕ್ಷೆ ಒಂದೇ ರಾಜ್ಯಾದ್ಯಂತ ಮಳೆಯ ಅಬ್ಬರ ಕಡಿಮೆಯಾಗಿ, 'ಕುರುಕ್ಷೇತ್ರ'ದ ಅಬ್ಬರ ಹೆಚ್ಚಾದ್ರೆ ಚಿತ್ರಪ್ರೇಮಿಗಳು ನೆಮ್ಮದಿಯಾಗಿ ಮಹಾಭಾರತದ ದೃಶ್ಯಕಾವ್ಯವನ್ನು 3ಡಿ ಮೋಡಿಯಲ್ಲಿ ಸವಿಯಬಹುದು.

Shraddha Kapoor: ಕೆಂಪು ಗೌನ್​ನಲ್ಲಿ ಮಿಂಚಿದ ಸಾಹೋ ರಾಣಿ ಶ್ರದ್ಧಾ ಕಪೂರ್​

 
First published: August 9, 2019, 10:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading