ದರ್ಶನ್ ಯಾರಿಗೂ ಗೊತ್ತಿಲ್ಲ, ಕುರುಕ್ಷೇತ್ರ ಪೋಸ್ಟರ್​ನಲ್ಲಿ ನಿಖಿಲ್ ಇರಬೇಕಿತ್ತು; ಸಿಟ್ಟಾದ ಅಭಿಮಾನಿ!

ಸಿನಿಮಾ ರಿಲೀಸ್​ ಆದ ಬೆನ್ನಲ್ಲೇ ಸಾಲು ಸಾಲು ಸರ್ಕಾರಿ ರಜೆ ಬಂದಿದ್ದು ಬಾಕ್ಸ್​ ಆಫೀಸ್​ ಗಳಿಕೆ ಹೆಚ್ಚಲು ಪ್ರಮುಖ ಕಾರಣ. ಒಂದು ವಾರದಲ್ಲಿ ಈ ಸಿನಿಮಾ 35 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. 

Rajesh Duggumane | news18
Updated:August 16, 2019, 1:05 PM IST
ದರ್ಶನ್ ಯಾರಿಗೂ ಗೊತ್ತಿಲ್ಲ, ಕುರುಕ್ಷೇತ್ರ ಪೋಸ್ಟರ್​ನಲ್ಲಿ ನಿಖಿಲ್ ಇರಬೇಕಿತ್ತು; ಸಿಟ್ಟಾದ ಅಭಿಮಾನಿ!
ದರ್ಶನ್​-ನಿಖಿಲ್​
  • News18
  • Last Updated: August 16, 2019, 1:05 PM IST
  • Share this:
ಬಹುತಾರಾಗಣ ಹೊಂದಿರುವ 'ಕುರಕ್ಷೇತ್ರ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಚಿತ್ರವನ್ನು ಹೊಗಳಿ ಪೋಸ್ಟ್​ ಹಾಕಿದರೆ ಇನ್ನೂ ಕೆಲವರು ಸಿನಿಮಾ ಉತ್ತಮವಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನು, ಚಾಲೆಂಜಿಂಗ್​ ಸ್ಟಾರ್ ದರ್ಶನ್​​ ಅಭಿಮಾನಿಗಳಂತೂ ದುರ್ಯೋಧನನ ಪಾತ್ರವನ್ನು ಹೊಗಳುತ್ತಿದ್ದಾರೆ. ಈ ಮಧ್ಯೆ ತೆಲುಗು ನಾಡಿನ ಅಭಿಮಾನಿಯೋರ್ವ ಪೋಸ್ಟರ್​ನಲ್ಲಿ ನಿಖಿಲ್ ಕುಮಾರಸ್ವಾಮಿ ಇಲ್ಲದ್ದನ್ನುನೋಡಿ ಸಿಟ್ಟಾಗಿದ್ದಾನೆ! ಈ ವಿಡಿಯೋ ಸಖತ್​ ವೈರಲ್​ ಆಗಿದೆ.

‘ಕುರುಕ್ಷೇತ್ರ’ ತೆಲುಗಿನಲ್ಲೂ ತೆರೆಗೆ ಬಂದಿತ್ತು. ಟಾಲಿವುಡ್​ನಲ್ಲೂ ಈ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲುಗು ವ್ಯಾಲೆಟ್​ ಎನ್ನುವ ಯೂಟ್ಯೂಬ್​ ಚಾನೆಲ್​ ತೆಲುಗು ಅವತರಣಿಕೆಯಲ್ಲಿ ಈ ಸಿನಿಮಾ ವೀಕ್ಷಿಸಿದ ಅಭಿಮಾನಿಗಳ ಪ್ರತಿಕ್ರಿಯೆ ಕೇಳಿತ್ತು. ಈ ವೇಳೆ ಅಭಿಮಾನಿಯೋರ್ವ ಸಿಟ್ಟಾಗಿದ್ದ.

ಈ ಸಿನಿಮಾದ ವಿಎಫ್​ಎಕ್ಸ್​​ ಕಾರ್ಟೂನ್​ ತರಹ ಇದೆ ಎಂದು ಅಭಿಮಾನಿ ಹೇಳಿಕೊಂಡಿದ್ದಾರೆ. “ಚಿತ್ರ ಮಂದಿರದ ಹೊರ ಭಾಗದಲ್ಲಿ ‘ಕುರಕ್ಷೇತ್ರದ’ ಸಾಕಷ್ಟು ಪೋಸ್ಟರ್​ ಅಂಟಿಸಲಾಗಿದೆ. ಎಲ್ಲಾದರೂ ಕುಮಾರಸ್ವಾಮಿ ಮಗ ನಿಖಿಲ್​ ಫೋಟೋ ಅಂಟಿಸಲಾಗಿದೆಯೇ? ಈ ಸಿನಿಮಾಗೆ ನಿಖಿಲ್​ ನಿಜವಾದ ಹೀರೋ. ದರ್ಶನ್​ ಎಂದರೆ ಇಲ್ಲಿ ಯಾರಿಗೂ ಗೊತ್ತಿಲ್ಲ. ಅವರ ಬದಲಿಗೆ ನಿಖಿಲ್​ ಫೋಟೋವನ್ನು ದೊಡ್ಡದಾಗಿ ಹಾಕಿದ್ದರೆ ಇನ್ನೊಂದಷ್ಟು ಪ್ರೇಕ್ಷಕರು ಹೆಚ್ಚು ಬರುತ್ತಿದ್ದರು,” ಎಂದು ಹೇಳಿಕೊಂಡಿರುವ ಅಭಿಮಾನಿ, ನಿಖಿಲ್​ ಫೋಟೋವನ್ನು ಹಾಕದೆ ಇರುವುದಕ್ಕೆ ಬಹಳವೇ ಬೇಸರ ಮಾಡಿಕೊಂಡಿದ್ದಾರೆ.ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ‘ಕುರುಕ್ಷೇತ್ರ’ಸಿನಿಮಾ ಆ.9ರಂದು ತೆರೆಗೆ ಬಂದಿತ್ತು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ಸಿನಿಮಾ ಬಾಕ್ಸ್​​ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಸಿನಿಮಾ ರಿಲೀಸ್​ ಆದ ಬೆನ್ನಲ್ಲೇ ಸಾಲು ಸಾಲು ಸರ್ಕಾರಿ ರಜೆ ಬಂದಿದ್ದು ಬಾಕ್ಸ್​ ಆಫೀಸ್​ ಗಳಿಕೆ ಹೆಚ್ಚಲು ಪ್ರಮುಖ ಕಾರಣ. ಒಂದು ವಾರದಲ್ಲಿ ಈ ಸಿನಿಮಾ 35 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ.

(ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ)

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...