ನಲ್ಮೆಯ ಕರ್ಣನಿಗೆ ದುರ್ಯೋಧನನ ಶುಭಾಶಯ

Kurukshetra Collection: ಹಿಂದೊಮ್ಮೆ ಕನ್ನಡದಲ್ಲಿ ವಿಲನ್​ ಮಕ್ಕಳು ಹೀರೋ ಆಗಲು ಮುನ್ನುಡಿ ಬರೆದಿರುವುದೇ ಅರ್ಜುನ್ ಸರ್ಜಾ ಎಂದು ದರ್ಶನ್ ಹೊಗಳಿದ್ದರು.

news18-kannada
Updated:August 15, 2019, 5:44 PM IST
ನಲ್ಮೆಯ ಕರ್ಣನಿಗೆ ದುರ್ಯೋಧನನ ಶುಭಾಶಯ
Kurukshetra
news18-kannada
Updated: August 15, 2019, 5:44 PM IST
ಕನ್ನಡದ  ಮೇರು ನಟನಿಗೆ ಆಗಸ್ಟ್​ 15 ರಂದು ಡಬಲ್ ಸಂಭ್ರಮ. ದೇಶಾದ್ಯಂತ ಆಚರಿಸುವ ಸ್ವಾತಂತ್ರೋತ್ಸವ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ಹುಟ್ಟುಹಬ್ಬದ ಖುಷಿ. ಹೌದು, ನಟ ಅರ್ಜುನ್ ಸರ್ಜಾ ಅವರಿಗೆ ಇಂದು 56ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭಕೋರಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ 'ನನ್ನ ನಲ್ಮೆಯ ಸೀನಿಯರ್ ಅರ್ಜುನ್ ಸರ್ಜಾ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ನಿಮ್ಮ ಇಷ್ಟಾರ್ಥಗಳೆಲ್ಲಾ ಈಡೇರಲಿ' ಎಂದು ಅಭಿಮಾನಿಗಳ ದಾಸ ಶುಭಾಶಯ ತಿಳಿಸಿದ್ದಾರೆ. ದರ್ಶನ್ ಅವರ ಆತ್ಮೀಯರಲ್ಲಿ ಒಬ್ಬರಾಗಿರುವ ಸರ್ಜಾ ಕುಡಿ ಈ ಹಿಂದೆ ಕೂಡ ಜತೆಯಾಗಿ ಅಭಿನಯಿಸಿದ್ದರು.ಅರ್ಜುನ್ ಸರ್ಜಾ ನಿರ್ದೇಶನದ 'ಪ್ರೇಮಬರಹ' ಚಿತ್ರದ ವಿಶೇಷ ಸಾಂಗ್​ನಲ್ಲಿ ದರ್ಶನ್ ಕುಣಿದಿದ್ದರು. ಇದೀಗ ಬಾಕ್ಸಾಫೀಸ್​ನ್ನು ಧೂಳೀಪಟಗೈಯ್ಯುತ್ತಿರುವ 'ಕುರುಕ್ಷೇತ್ರ' ಸಿನಿಮಾದಲ್ಲಿ ಕರ್ಣನಾಗಿ ಆ್ಯಕ್ಷನ್ ಕಿಂಗ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸರ್ಜಾ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ದಚ್ಚು ಮನೆ ಸಮಾರಂಭದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಾರೆ.

ಹಿಂದೊಮ್ಮೆ ಕನ್ನಡದಲ್ಲಿ ವಿಲನ್​ ಮಕ್ಕಳು ಹೀರೋ ಆಗಲು ಮುನ್ನುಡಿ ಬರೆದಿರುವುದೇ ಅರ್ಜುನ್ ಸರ್ಜಾ ಎಂದು ದರ್ಶನ್ ಹೊಗಳಿದ್ದರು. ಏಕೆಂದರೆ ಅರ್ಜುನ್ ಸರ್ಜಾ ಅವರ ತಂದೆ ಶಕ್ತಿ ಪ್ರಸಾದ್ ಕನ್ನಡದ ಚಿತ್ರರಂಗದಲ್ಲಿ ಖಳನಾಯಕನಾಗಿ ಮಿಂಚಿದ್ದರು.

First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...