• Home
  • »
  • News
  • »
  • entertainment
  • »
  • Kantara Movie: ಟ್ರೈಲರ್-ಟೀಸರ್ ಬಿಟ್ಟಿಲ್ಲಾಂದ್ರು ನಿಮ್ ಸಿನಿಮಾ ನೋಡ್ತೀವಿ! ಕಾಂತಾರಕ್ಕೆ ಪ್ರೇಕ್ಷಕರು ಫಿದಾ

Kantara Movie: ಟ್ರೈಲರ್-ಟೀಸರ್ ಬಿಟ್ಟಿಲ್ಲಾಂದ್ರು ನಿಮ್ ಸಿನಿಮಾ ನೋಡ್ತೀವಿ! ಕಾಂತಾರಕ್ಕೆ ಪ್ರೇಕ್ಷಕರು ಫಿದಾ

ಕಾಂತಾರ ಸಿನಿಮಾದ ದೈವ ರೂಪಿ ರಿಷಬ್ ಶೆಟ್ಟಿ

ಕಾಂತಾರ ಸಿನಿಮಾದ ದೈವ ರೂಪಿ ರಿಷಬ್ ಶೆಟ್ಟಿ

ಕಾಂತಾರ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜನರ ಪ್ರತಿಕ್ರಿಯೆ ಹೇಗಿದೆ?

  • Share this:

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಕಾಂತಾರ (Kantara) ಸಿನಿಮಾ ಅದ್ಧೂರಿಯಾಗಿ ಇಂದು ರಿಲೀಸ್ ಆಗಿದ್ದು ಸಕ್ಸಸ್​ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ. ಕರಾವಳಿಯ (Coastal) ಟಚ್ ಇರುವ ಸಿನಿಮಾ ರಾಜ್ಯಾದ್ಯಂತ ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದೆ. ಹೊಂಬಾಳೆ ಫಿಲ್ಮ್ಸ್ (Hombale Films) ಕಾಂತಾರಾ ಸಿನಿಮಾಗೆ ಕುಂದಾಪುರ (Kundapura) ಮಂದಿ ಕೊಟ್ಟ ರಿಯಾಕ್ಷನ್ ವಿಡಿಯೋವನ್ನು ಅಪ್​ಲೋಡ್ ಮಾಡಿದ್ದಾರೆ. ಕುಂದಾಪುರ ಪ್ರೀಮಿಯರ್ ಶೋ (Premier Show) ಎಂಬ ಟೈಟಲ್​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು ಇದರಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷರ ಪ್ರತಿಕ್ರಿಯೆಗಳನ್ನು ನಾವು ನೋಡಬಹುದು. ಪೊನ್ನಿಯಿನ್ ಸೆಲ್ವನ್ (Ponniyin Selvan) ಸಿನಿಮಾ  ಕೂಡಾ ಇಂದೇ ರಿಲೀಸ್ ಆಗಿದ್ದು ಇದು ಟಫ್ ಕಾಂಪಿಟೇಷನ್ ಕೊಡುವ ಬಗ್ಗೆ ಈ ಹಿಂದೆ ಮಾತು ಕೇಳಿ ಬಂದಿತ್ತು. ಆದರೆ ಎರಡೂ ಸಿನಿಮಾಗಳೂ ತಮ್ಮದೇ ಟ್ರ್ಯಾಕ್​​ನಲ್ಲಿ ಪ್ರೇಕ್ಷಕರನ್ನು ತಲುಪಿರುವುದು ವಿಶೇಷ.


ಏನಂದಿದ್ದಾರೆ ಪ್ರೇಕ್ಷಕರು?


ಇದೊಂದು ಕನ್ನಡ ಸಿನಿಮಾದ ಇತಿಹಾಸ. ಯಾವುದೇ ರೀತಿಯ ಓವರ್ ಆ್ಯಕ್ಟಿಂಗ್ ಇಲ್ಲ, ಕಾಮೆಡಿ ಅಲ್ಟಿಮೇಟ್ ಆಗಿತ್ತು. ಇನ್ನೊಂದು ಸಲ ನಿಮ್ಮ ಡೈರೆಕ್ಷನ್ ಇದ್ದರೆ ಟ್ರೈಲರ್ ಟೀಸರ್ ಇರದಿದ್ದರೂ ನಾವು ಸಿನಿಮಾ ನೋಡ್ತೀವಿ ಎಂದಿದ್ದಾರೆ ಜನ.ಅವಾರ್ಡ್ ಗ್ಯಾರೆಂಟಿ!


ಒಂದೊಂದು ಸೀನ್ ಕೂಡಾ ಗೂಸ್​ಬಂಪ್ಸ್ ತರ. ಇದಕ್ಕೆ ಅವಾರ್ಡ್ ಅಂತೂ ಗ್ಯಾರೆಂಟಿ. ರಿಶಭ್ ಶೆಟ್ಟಿ ಆ್ಯಕ್ಟಿಂಗ್ ಟಾಪ್​ನಲ್ಲಿತ್ತು. ಕಾಂತಾರ ನೋಡದವರು ಪ್ರೇಕ್ಷಕರೇ ಅಲ್ಲ. ಈ ಸಿನಿಮಾ ಮಾಡುವ ಧೈರ್ಯ ತೋರಿಸಿದ ಹೊಬಾಳೆ ಫಿಲ್ಮ್ಸ್​ ಹಾಗೂ ರಿಶಭ್ ಶೆಟ್ಟಿಗೆ ಹ್ಯಾಟ್ಸಾಫ್. ಕ್ಲೈಮ್ಯಾಕ್ಸ್ ಅಲ್ಟಿಮೇಟ್ ಎಂದು ಹೊಗಳಿದ್ದಾರೆ.


Kannada Kantara film Director Rishab Shetty Talk about Advance Ticket Booking
ಕಾಂತಾರ ಎಂಬ ಹೊಸ ರೀತಿಯ ಸಿನಿಮಾ


ಇದನ್ನೂ ಓದಿ: Kantara Movie Ramya Reaction: ಕಾಂತಾರ ಸಿನಿಮಾ ಬಗ್ಗೆ ರಮ್ಯಾ ಮಾತು! ಆ ದೈವ ರೂಪ ಕಂಡು ನಟಿ ರಮ್ಯಾ ಹೇಳಿದ್ದೇನು?


ದಕ್ಷಿಣ ಕನ್ನಡದ ಕಾಲ್ಪನಿಕ ಹಳ್ಳಿಯಲ್ಲಿ ನೆಲೆಗೊಂಡಿರುವ ಕಾಂತಾರವು ಕಂಬಳ ಮತ್ತು ಭೂತ ಕೋಲದ ಸಾಂಪ್ರದಾಯಿಕ ಸಂಸ್ಕೃತಿಯನ್ನು ಜೀವಂತಗೊಳಿಸುವ ದೃಶ್ಯ ವೈಭವವಾಗಿದೆ. ದೇವಮಾನವರು ರಕ್ಷಕರು ಮತ್ತು ಅವರ ಶಕ್ತಿಗಳು ಗ್ರಾಮವನ್ನು ಸುತ್ತುವರೆದಿವೆ ಎಂದು ನಂಬಲಾಗಿದೆ. ಕಥೆಯಲ್ಲಿ, ನೆಲದ ಸಂಪ್ರದಾಯ ಮತ್ತು ಸಂಸ್ಕೃತಿಯ ಉದ್ದಕ್ಕೂ ಅಹಂಕಾರದ ಕದನವು ಸುತ್ತುತ್ತಿರುವಾಗ ಏರಿಳಿತವಿದೆ.


ಇದು ಶಿವನ ಸಾಹಸದ ಕಥನ


ಕಥೆಯ ಆತ್ಮವು ಮಾನವ ಮತ್ತು ಪ್ರಕೃತಿ ಸಂಘರ್ಷದಲ್ಲಿದೆ, ಇದರಲ್ಲಿ ಶಿವ ಬಂಡಾಯ ಮತ್ತು ಪ್ರಕೃತಿಯ ವಿರುದ್ಧ ಕೆಲಸ ಮಾಡುತ್ತಾನೆ. ಅವನು ತೊಡಗಿಸಿಕೊಳ್ಳುವ ತೀವ್ರವಾದ ಘರ್ಷಣೆಗಳಿವೆ. ಕೊನೆಯಲ್ಲಿ ಹಳ್ಳಿಗರು ಮತ್ತು ದುಷ್ಟ ಶಕ್ತಿಗಳ ನಡುವಿನ ಯುದ್ಧಕ್ಕೆ ಕಾರಣವಾಗುತ್ತದೆ. ಚಿತ್ರದ ನಾಯಕ ಶಿವ ತನ್ನ ಅಸ್ತಿತ್ವವನ್ನು ಗ್ರಹಿಸುವ ಮೂಲಕ ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತದೆಯೇ? ಎಂಬುದೇ ಚಿತ್ರದ ತಿರುಳು.


ಇದನ್ನೂ ಓದಿ: Kantara Review: ಇದು ಶಿವನ ಸಂಘರ್ಷದ ದಂತಕಥೆ: ಕಾಂತಾರದಲ್ಲಿ ರಿಷಬ್ ಹೊಸ ಅವತಾರ!


ಪ್ರಿಮಿಯರ್ ಶೋ ನೋಡಿದವರು ಹೇಳಿದ್ದೇನು?


ನಿನ್ನೆಯೇ ಪ್ರಿಮಿಯರ್ ಶೋ ನಡೆದಿದ್ದು, ಸಿನಿರಂಗದ ಗಣ್ಯರ ಜೊತೆಗೆ ಅಭಿಮಾನಿಗಳೂ ಕಾಂತಾರವನ್ನು ಕಣ್ತುಂಬಿಸಿಕೊಂಡಿದ್ದಾರೆ. ಉತ್ತಮ ನಟನೆ, ಉತ್ತಮ ನಿರ್ದೇಶನ, ಉತ್ತಮ ಕಥಾಹಂದರ ಸಿನಿಮಾ ಅಂತ ಕೊಂಡಾಡುತ್ತಿದ್ದಾರೆ. ಕೆಲವರಂತೂ ಈ ಬಾರಿ ರಿಷಬ್ ಅತ್ಯುತ್ತಮ ನಟ ಪ್ರಶಸ್ತಿಗೆ ಅರ್ಹ ಅಂತ ಹೊಗಳಿದ್ದಾರೆ.

Published by:Divya D
First published: